ಕನಸಿನ ರಾಣಿ ಮಹಾಲಕ್ಷ್ಮಿ ಅವರ ಮಗಳು ಅನನ್ಯ ರಾಮ್ ಅವರು ದರ್ಶನ್ ಅವರ 56ನೇ ಸಿನಿಮಾಗೆ ನಾಯಕ ನಟಿಯಾಗಿ ಆಯ್ಕೆಯಾಗಿರುವ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ. ಇನ್ನು ಚಿತ್ರರಂಗಕ್ಕೆ ಕಾಲಿಟ್ಟಿರುವ ಅನನ್ಯ ಅವರು ಮೊದಲ ಸಿನಿಮಾದಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಹೌದು ಮಾಲಾಶ್ರೀ ಹಾಗು ನಿರ್ಮಾಪಕ ಕೋಟಿ ರಾಮ್ ಅವರ ಮಗಳು ಅನನ್ಯ ಅವರ ಹೆಸರನ್ನು ಆರಾಧನಾ ರಾಮ್ ಎಂದು ಬದಲಾಯಿಸಲಾಗಿದೆ.
ಅಷ್ಟಕ್ಕೂ ಈ ರೀತಿ ಬದಲಾಯಿಸಿದವರು ಏಕೆ ಎಂಬುದನ್ನು ನೋಡುವುದಾದರೆ. ರ ಎಂಬ ಅಕ್ಷರಕ್ಕೂ ಸಿನಿಮಾರಂಗಕ್ಕೆ ಬಹಳ ನಂಟಿದೆ ಅಂತ ಹೇಳಬಹುದು ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ರಾ ಎಂಬ ಅಕ್ಷರದಿಂದ ಪ್ರಾರಂಭವಾದ ನಟಿಯರು ಹಿಟ್ ಆಗಿದ್ದಾರೆ. ಈ ಕಾರಣಕ್ಕಾಗಿ ಮಾಲಾಶ್ರೀ ಅವರ ಮಗಳ ಹೆಸರು ಕೂಡ ರಾಧನಾ ಎಂದು ಬದಲಾವಣೆ ಮಾಡಲಾಗಿದೆ.
ನಿಮ್ಮೆಲ್ಲರಿಗೂ ತಿಳಿದಿರುವಂತೆ ರಾಕಿಂಗ್ ಸ್ಟಾರ್ ಯಶ್ ಅವರ ಹೆಂಡತಿಯ ಹೆಸರು ರಾಧಿಕಾ ಪಂಡಿತ್ ಇವರ ಹೆಸರು ರಾ ಇಂದ ಪ್ರಾರಂಭವಾಗಿದೆ. ಇವರು ಕೂಡ ಸಿನಿಮಾ ರಂಗದಲ್ಲಿ ಬಹಳಷ್ಟು ಯಶಸ್ಸನ್ನು ಸಾಧಿಸಿದ್ದಾರೆ ಇನ್ನು ಬುಲ್ ಬುಲ್ ಸಿನಿಮಾದ ಮೂಲಕ ನಾಯಕ ನಟಿಯಾಗಿ ಪಾದರ್ಪಣೆ ಮಾಡಿದ ರಚಿತಾ ರಾಮ್ ಅವರ ಮೊದಲ ಹೆಸರು ಬಿಂದಿಯಾ ರಾಮ್ ಚಿತ್ರರಂಗಕ್ಕೆ ಬಂದ ನಂತರ ರಚಿತಾ ರಾಮ್ ಎಂದು ಹೆಸರಿಟ್ಟುಕೊಂಡರು.
ಇಲ್ಲೂ ಕೂಡ ರ ಎಂಬ ಅದೃಷ್ಟವನ್ನು ಕೊಟ್ಟಿದೆ. ಇನ್ನು ಇದನ್ನು ಹೊರತು ಪಡಿಸಿದರೆ ನಟಿ ರಮ್ಯಾ, ರಕ್ಷಿತಾ, ರಾಧಿಕಾ ಕುಮಾರಸ್ವಾಮಿ ಹೀಗೆ ಸಾಲು ಸಾಲು ನಟಿಯರ ಹೆಸರು ರ ಎಂಬ ಅಕ್ಷರದಿಂದ ಪ್ರಾರಂಭವಾಗಿದೆ. ಇನ್ನು ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ರಶ್ಮಿಕ ಅವರ ಹೆಸರು ಕೂಡ ರ ಎಂಬ ಪದದಿಂದ ಪ್ರಾರಂಭವಾಗಿದೆ ಸದ್ಯಕ್ಕೆ ಇಡೀ ಭಾರತೀಯ ಚಿತ್ರರಂಗವನ್ನು ಈಕೆ ಆಳುತ್ತಿದ್ದಾರೆ.
ಇದೆಲ್ಲದರಿಂದಲೇ ತಿಳಿಯುತ್ತದೆ ರ ಎಂಬ ಅಕ್ಷರಕ್ಕೂ ಸಿನಿಮ ರಂಗಕ್ಕೂ ಅವಿನಭಾವನ ಸಂಬಂಧ ಇದೆ ಅಂತ. ಈ ಕಾರಣಕ್ಕಾಗಿ ಮಾಲಶ್ರೀ ಅವರು ತಮ್ಮ ಮಗಳ ಅದೃಷ್ಟವನ್ನು ಬದಲಾಯಿಸುವ ಸಲುವಾಗಿ ಅನನ್ಯ ಎಂಬ ಹೆಸರನ್ನು ಬದಲಾಯಿಸಿ ಆ ಜಾಗಕ್ಕೆ ರಾಧನಾ ಎಂಬ ಹೆಸರನ್ನು ನಾಮಕರಣ ಮಾಡಿದ್ದಾರೆ. ಇನ್ನು ಮಾಲಾಶ್ರೀ ಹಾಗೂ ರಾಮು ಅವರು ತಮ್ಮ ಮಗಳನ್ನು ಚಿತ್ರರಂಗಕ್ಕೆ ಕರೆತರುವ ಮುನ್ನವೇ ಹೆಸರನ್ನು ಬದಲಾಯಿಸಬೇಕು ಎಂದು ನಿರ್ಧಾರ ಮಾಡಿದ್ದರಂತೆ.
ಆದರೆ ಕೋವಿಡ್ ಸಮಯದಲ್ಲಿ ರಾಮು ಅವರು ಇಹಲೋಕವನ್ನು ತ್ಯಜಿಸಿದರು ಈ ಕಾರಣಕ್ಕಾಗಿ ಹೆಸರನ್ನು ಬದಲಾವಣೆ ಮಾಡುವ ಕೆಲಸ ಅರ್ಧಕ್ಕೆ ನಿಂತಿತು. ಇದೇ ಸಮಯದಲ್ಲಿ ದರ್ಶನ ಅವರ ಹೊಸ ಸಿನಿಮಾಗೆ ನಾಯಕ ನಟಿಯಾಗಿ ಪಾದರ್ಪಣೆ ಮಾಡಿದ ಬೆನ್ನೆಲೆ ಈ ಸಿನಿಮಾದಲ್ಲಿ ಅಭಿನಯ ಮಾಡುವುದಕ್ಕಿಂತ ಮುಂಚೆ ಈಕೆಯ ಹೆಸರನ್ನು ಬದಲಾವಣೆ ಮಾಡಬೇಕು ಎಂದು ನಿರ್ಧರಿಸಿ ರಾಧನಾ ರಾಮ್ ಎಂದು ಹೆಸರನ್ನು ಇಟ್ಟಿದ್ದಾರೆ.
ಮಾಲಾಶ್ರೀ ಮಗಳು ಅಭಿನಯ ಮಾಡುವ ಮೊದಲ ಸಿನಿಮಾ ಹಿಟ್ ಆಗುತ್ತದೆ ಎಂಬುದು ಎಲ್ಲರ ಕಲ್ಪನೆಯಾಗಿದೆ ಏಕೆಂದರೆ ರ ಹೆಸರಿನಂದ ಪ್ರಾರಂಭವಾದ ಎಲ್ಲಾ ನಟಿಯರ ಸಿನಿಮಾ ಈಗಾಗಲೇ ಬಾಕ್ಸಾಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದ್ದು ಉತ್ತಮ ಹೆಸರನ್ನು ಕೂಡ ಪಡೆದುಕೊಂಡಿದೆ ಹಾಗಾಗಿ ಮಾಲಾಶ್ರೀ ಮಗಳ ಅದೃಷ್ಟವೂ ಕೂಡ ರ ಎಂಬ ಅಕ್ಷರದಿಂದ ಬದಲಾವಣೆಯಾಗುತ್ತದೆ ಎಂಬುದು ಕೆಲವರ ಅಭಿಪ್ರಾಯವಾಗಿದೆ.
ಇನ್ನು ಕೆಲವು ನೆಟ್ಟಿಗರು ಹೆಸರಿನಲ್ಲಿ ಏನಿಲ್ಲ ಪ್ರತಿಭೆ ಮತ್ತು ಕಲೆ ಇದ್ದರೆ ಸಾಕು ಚಿತ್ರರಂಗವನ್ನು ಆಳಬಹುದು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ರ ಎಂಬ ಅಕ್ಷರದಲ್ಲಿ ಸಾಕಷ್ಟು ಸೀಕ್ರೆಟ್ ಇದೆ ಎಂಬುದು ಮಾತ್ರ ಅರ್ಥವಾಗಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ.