ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಕಳೆದ ಎರಡು ವರ್ಷಗಳಿಂದ ಸಾಕಷ್ಟು ದಿಗ್ಗಜ ನಟ ನಟಿಯರನ್ನು ಹಾಗೂ ಹಿರಿಯ ಕಲಾವಿದರನ್ನು ಕಳೆದುಕೊಂಡಿದ್ದೇವೆ. ಇದೀಗ 2023ರಲ್ಲಿ ಮತ್ತೋರ್ವ ದಿಗ್ಗಜ ನಟನನ್ನು ಕಳೆದುಕೊಂಡು ಚಿತ್ರರಂಗ ಕಂಗಾಲಾಗಿದೆ ಅಂತಾನೆ ಹೇಳಬಹುದು. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಮನ್ ದೀಪ್ ರಾಯ್ ಅವರು ಕನ್ನಡದಲ್ಲಿ ಸುಮಾರು 500ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ್ದಾರೆ. ಹಾಸ್ಯ ಕಲಾವಿದರಾಗಿ ಪೋಷಕ ಕಲಾವಿದರಾಗಿ ಕನ್ನಡ ಸಿನಿ ರಸಿಕರಿಗೆ ಮನರಂಜನೆಯನ್ನು ನೀಡಿದ್ದಾರೆ.
ಕೇವಲ ಬೆಳ್ಳಿತರೆ ಮಾತ್ರವಲ್ಲದೆ ಕಿರುತೆರೆಯಲ್ಲೂ ಕೂಡ ತಮ್ಮದೇ ಚಾಪನ್ನು ಮೂಡಿಸಿದ್ದರು ಹಲವಾರು ಧಾರವಾಹಿಗಳಲ್ಲೂ ಕೂಡ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. ಕಳೆದ ಒಂದು ವರ್ಷದಿಂದ ವಯೋ ಸಹಜ ಅನಾರೋಗ್ಯ ಕಾಯಿಲೆಯಿಂದ ಬಳಲುತ್ತಿದ್ದಂತಹ ಮನ್ ದೀಪ್ ರಾಯ್ ಅವರು ಇಂದು ತಡೆರಾತ್ರಿ 1 ಗಂಟೆ 45 ನಿಮಿಷದಲ್ಲಿ ತಮ್ಮ ಸ್ವಂತ ನಿವಾಸದಲ್ಲಿ ಹೃ.ದ.ಯ.ಘಾ.ತ.ದಿಂದ ವಿ.ಧಿ.ವ.ಶ.ರಾಗಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ. ಈ ವಿಚಾರ ಕೇಳುತ್ತಿದ್ದ ಹಾಗೆ ಚಿತ್ರರಂಗದವರು ಹಾಗೂ ಕಿರುತೆರೆಗೆ ಸೇರಿದಂತಹ ಎಲ್ಲಾ ನಟ ನಟಿಯರು ಕೂಡ ಸಂತಾಪವನ್ನು ಸೂಚಿಸಿದ್ದಾರೆ.
ತಮ್ಮ 73ನೇ ವಯಸ್ಸಿನಲ್ಲಿ ವಿ.ಧಿ.ವ.ಶ.ರಾಗಿರುವಂತಹ ಮನ್ ದೀಪ್ ರಾಯ್ ಅವರು ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದರು. ಮೂಲತಃ ಮುಂಬೈನವರು ಆದರೂ ಕೂಡ ಇವರು ಬಣ್ಣ ಹಚ್ಚಿದ್ದು ಕನ್ನಡದಲ್ಲಿ 1980ರಲ್ಲಿ ಶಂಕರ್ ನಾಗ್ ಹಾಗೂ ಅನಂತನಾಗ್ ಅಭಿನಯದ ಮಿಂಚಿನ ಓಟ ಎಂಬ ಸಿನಿಮಾದಲ್ಲಿ ಮೊಟ್ಟಮೊದಲ ಬಾರಿಗೆ ಅಭಿನಯ ಮಾಡುವುದರ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು ಅಲ್ಲಿಂದ ಪ್ರಾರಂಭವಾದಂತ ಇವರ ಸಿನಿ ಜರ್ನಿ ಕಳೆದ ವರ್ಷದವರೆಗೂ ಕೂಡ ಸಕ್ರಿಯವಾಗಿತ್ತು.
ಆದರೆ ಕಳೆದ ಡಿಸೆಂಬರ್ ನಲ್ಲಿ ಮನ್ ದೀಪ್ ಅವರಿಗೆ ಹೃ.ದ.ಯ.ಘಾ.ತವಾಗುತ್ತದೆ ಕೂಡಲೇ ಇವರನ್ನು ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತದೆ. ಚಿಕಿತ್ಸೆಗೆ ಸ್ಪಂದಿಸಿದಂತಹ ಇವರು ಆರೋಗ್ಯವನ್ನು ಚೇತರಿಸಿಕೊಂಡಿದ್ದರು ಎಲ್ಲವೂ ಸರಿ ಹೋಯಿತು ಎಂದು ತಮ್ಮ ಕುಟುಂಬದವರು ಮನೆಗೆ ವಾಪಸ್ ಮರಳಿ ಕರೆದುಕೊಂಡು ಬಂದ ನಂತರ 20 ದಿನಗಳ ಕಾಲ ಲವಲವಿಕೆಯಿಂದ ಇದ್ದರೂ. ಆದರೆ ದುರಾದೃಷ್ಟವೋ ಏನೋ ತಿಳಿದಿಲ್ಲ ಕಳೆದ ರಾತ್ರಿ ಇವರು ಹೃ.ದ.ಯ.ಘಾ.ತದಿಂದ ಇಹಲೋಕವನ್ನು ತ್ಯಜಿಸಿದ್ದಾರೆ.
ಇನ್ನು 80ರ ಕಾಲಘಟ್ಟದಿಂದ ಹಿಡಿದು 22ರ ಕಾಲಘಟ್ಟದವರೆಗೂ ಕೂಡ ಎಲ್ಲಾ ನಟರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ ಇವರು ಅಣ್ಣಾವ್ರು ಸೇರಿದಂತೆ ವಿಷ್ಣುವರ್ಧನ್, ಅಂಬರೀಶ, ರವಿಚಂದ್ರನ್, ರಮೇಶ್ ಅರವಿಂದ್, ದರ್ಶನ್, ಸುದೀಪ್, ಯಶ್, ಪುನೀತ್ ಹೀಗೆ ಸಾಕಷ್ಟು ನಟರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ. ಮನ್ ದೀಪ್ ಸಿಂಗ್ ಅವರು ಚಿತ್ರದಲ್ಲಿ ಇದ್ದಾರೆ ಎಂದರೆ ಅಲ್ಲಿ ಎಂಟರ್ಟೈನ್ಮೆಂಟ್ ಇರುವುದಂತೂ ಪಕ್ಕ ಜನರನ್ನು ನಕ್ಕು ನಲಿಸುವಂತಹ ಹಾಸ್ಯ ಮನೋ ಪ್ರಜ್ಞೆಯನ್ನು ಒಳಗೊಂಡಿದ್ದರು.
ಈಗ ಮನ್ ದೀಪ್ ಅವರು ಇಲ್ಲದೇ ಇರುವುದು ನಿಜಕ್ಕೂ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಅಂತಾನೆ ಹೇಳಬಹುದು ಏಕೆಂದರೆ ಕಳೆದೆರಡು ವರ್ಷಗಳಿಂದ ಹಲವಾರು ನಟ ನಟಿಯರನ್ನು ಚಿತ್ರರಂಗ ಕಳೆದುಕೊಂಡಿದೆ. ಅದರಲ್ಲಿಯೂ ಕೂಡ ಹಾಸ್ಯ ಪ್ರಧಾನ ಪಾತ್ರದಲ್ಲಿ ಮಿಂಚಿದ್ದಂತಹ ಮೋಹನ್ ಜೂನೇಜ ಆಗಿರಬಹುದು ಬುಲೆಟ್ ಪ್ರಕಾಶ್ ಆಗಿರಬಹುದು ಕರಿಬಸಯ್ಯ ಆಗಿರಬಹುದು ಹೀಗೆ ಒಬ್ಬೊಬ್ಬರಾಗಿ ಹಿರಿಯ ಕಲಾವಿದರು ವಿ.ಧಿ.ವ.ಶ.ರಾಗುತ್ತಿರುವುದು ನಿಜಕ್ಕೂ ಕೂಡ ಸಂತಪದ ವಿಚಾರವೇ. ಅದೇನೆ ಆಗಲಿ ಈ ಹಿರಿಯ ಕಲಾವಿದರಿಗೆ ಗೌರವ ಪೂರ್ವಕವಾಗಿ ಶ್ರದ್ದಾಂಜಲಿಯನ್ನು ಸಲ್ಲಿಸೋಣ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ ಹಾಗೂ ಮನ್ ದೀಪ್ ರಾಯ್ ಅವರಿಗೆ ಕೊನೆಯದಾಗಿ ಅಂತಿಮ ನಮನ ಸಲ್ಲಿಸಿ ಓಂ ಶಾಂತಿ ಎಂದು ಕಾಮೆಂಟ್ ಮಾಡಿ.