ಕರ್ನಾಟಕ ಮಾತೃಶ್ರೀ ಯೋಜನೆ ಮೂಲಕ ಮಹಿಳೆಯರು 6000ರೂ ಧನ ಸಹಾಯವನ್ನು ಸರ್ಕಾರದಿಂದ ಪಡೆಯಬಹುದು. ಈಗಾಗಲೇ ಕರ್ನಾಟಕ ಸರ್ಕಾರವು ನಾನಾ ಯೋಜನೆಗಳ ಮೂಲಕ ರಾಜ್ಯದ ಮಹಿಳೆಯರಿಗೆ ನೆರವಾಗುತ್ತಿದೆ. ಇಂತಹ ಯೋಜನೆಗಳಲ್ಲಿ ಒಂದಾದ ಮಾತೃಶ್ರೀ ಯೋಜನೆಯು ಕರ್ನಾಟಕ ರಾಜ್ಯದಲ್ಲಿರುವ ಗರ್ಭಿಣಿ ಮಹಿಳೆಯರಿಗಾಗಿ ಮಾಡಿರುವ ಹೊಸ ಯೋಜನೆ ಆಗಿದೆ. ಈ ಯೋಜನೆ ಮೂಲಕ ಕರ್ನಾಟಕ ಸರ್ಕಾರವು ಗರ್ಭಿಣಿ ಮಹಿಳೆಯರಿಗೆ ಆರ್ಥಿಕ ಸಹಾಯವನ್ನು ಮಾಡಲಿದೆ.
ಮಾತೃಶ್ರೀ ಯೋಜನೆ ಗರ್ಭಿಣಿ ಮಹಿಳೆಯರಿಗೆ ಗರ್ಭಧಾರಣೆಯ ಸಹಾಯವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಈ ಯೋಜನೆಯ ಫಲಾನುಭವಿಗಳಾಗಲು ಬೇಕಾಗಿರುವ ದಾಖಲೆಗಳು, ಯಾವ ರೀತಿ ಅರ್ಜಿ ಸಲ್ಲಿಸಬೇಕು ಎನ್ನುವ ವಿಧಾನ ಇತ್ಯಾದಿ ಸಂಪೂರ್ಣ ವಿಷಯವನ್ನು ತಿಳಿದುಕೊಳ್ಳಲು ಈ ಲೇಖನವನ್ನು ತಪ್ಪದೆ ಪೂರ್ತಿಯಾಗಿ ಓದಿ.
ಕರ್ನಾಟಕ ಮಾತೃಶ್ರೀ ಯೋಜನೆ 2023 ಕುರಿತ ಮಾಹಿತಿ ಇದಾಗಿದೆ. ಕರ್ನಾಟಕ ಮಾತೃಶ್ರೀ ಯೋಜನೆಯ ಗುರಿಯು ಗರ್ಭಿಣಿ ಸ್ತ್ರೀಯ ಆರೋಗ್ಯವನ್ನು ಉತ್ತೇಜಿಸುವುದಾಗಿದೆ. ಇದು ತಾಯಂದಿರು ಮತ್ತು ಅವರ ಮಕ್ಕಳ ಪೌಷ್ಟಿಕಾಂಶದ ಸ್ಥಿತಿಯ ಮೇಲೆ ಪರಿಣಾಮವನ್ನು ಬೀರುತ್ತದೆ. ಕಾರ್ಯಕ್ರಮದ ಯೋಜನೆ ಅಡಿ ಪ್ರತಿ ಊಟದ ಬೆಲೆ ಸುಮಾರು 21 ರೂಪಾಯಿಗಳು, ಗರ್ಭಿಣಿಯರಿಗೆ ಒಟ್ಟು 15 ತಿಂಗಳವರೆಗೆ ಊಟ ಸರಬರಾಜು ಮಾಡಲಾಗುವುದು.
ಗರ್ಭಧಾರಣೆಯ ಪ್ರಾರಂಭದಲ್ಲಿ ಮತ್ತು ಮಗುವಿನ ಜನನದ ನಂತರ ಆರು ತಿಂಗಳವರೆಗೆ ಇದು ಮುಂದುವರೆಯುತ್ತದೆ. ಗರ್ಭಿಣಿ ಸ್ತ್ರೀಗೆ ಗರ್ಭಧಾರಣೆಯ 7ನೇ 8ನೇ ಮತ್ತು 9ನೇ ತಿಂಗಳಿನಲ್ಲಿ ಪ್ರತಿ ತಿಂಗಳಿಗೆ ಒಂದು ಸಾವಿರ ಮತ್ತು ಜನಿಸಿದ ನಂತರ ಪ್ರಥಮ ಮೂರು ತಿಂಗಳಲ್ಲಿ ಪ್ರತಿ ತಿಂಗಳಿಗೆ ತಲಾ ಒಂದೊಂದು ಸಾವಿರ ಗಳನ್ನು ಮಾತೃಶ್ರೀ ಯೋಜನೆಯ ಅಡಿ ಸಹಾಯಧನ ರೂಪದ ಹಣವಾಗಿ ಸರ್ಕಾರವು ನೀಡುತ್ತದೆ.
ಗರ್ಭಿಣಿ ಸ್ತ್ರೀಯರಿಗೆ ಹೆರಿಗೆ ಪೂರ್ವದ ಮೂರು ತಿಂಗಳು ಮತ್ತು ಹಾಲುಣಿಸುವ ತಾಯಂದಿರಿಗೆ ಹೆರಿಗೆ ನಂತರದ ಮೂರು ತಿಂಗಳಲ್ಲಿ ಅವರ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಸಂಖ್ಯೆಗೆ ಒಟ್ಟು 6,000 ರೂಗಳು ಸರ್ಕಾರದ ಕಡೆಯಿಂದ ವರ್ಗಾವಣೆ ಆಗುತ್ತದೆ. ಕರ್ನಾಟಕ ರಾಜ್ಯ ಸರ್ಕಾರವು ನಿರ್ಮಿಸಿರುವ ಈ ಮಾತೃಶ್ರೀ ಯೋಜನೆಯ ಫಲಾನುಭವಿಗಳಾಗಲು ಕೆಲ ದಾಖಲೆಗಳನ್ನು ನೀಡಬೇಕಾಗಿದೆ.
ಅರ್ಜಿದಾರರುಗಳು ಕಡ್ಡಾಯವಾಗಿ ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು. ಸರ್ಕಾರದಿಂದ ಪಡೆದಿರುವ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಗರ್ಭಿಣಿ ಸ್ತ್ರೀಯರಿಗೆ ಮಾತ್ರ ಈ ಯೋಜನೆಯ ಫಲಾನುಭವಿಗಳಾಗುವ ಅವಕಾಶ ಇರುತ್ತದೆ. ಈ ಮಾತೃಶ್ರೀ ಯೋಜನೆಯ ಈ ಉಪಕ್ರಮದಿಂದ ಹಣಕಾಸಿನ ನೆರವು ಕೇವಲ ಮೊದಲ ಎರಡು ಮಕ್ಕಳಿಗೆ ಮಾತ್ರ ಸಿಗಲಿದೆ.
ಈ ಯೋಜನೆಯಿಂದ ಗ್ರಾಮೀಣ ಪ್ರದೇಶದಲ್ಲಿ ಇರುವ ಎಷ್ಟೋ ಹೆಣ್ಣು ಮಕ್ಕಳಿಗೆ ಪೌಷ್ಟಿಕಾಂಶ ಯುಕ್ತ ಆಹಾರ ಆ ಸಮಯದಲ್ಲಿ ಪಡೆದುಕೊಳ್ಳಲು ಈ ಯೋಜನೆ ಹಣ ದೊಡ್ಡ ಮಟ್ಟದಲ್ಲಿ ಸಹಾಯ ಆಗಲಿದೆ. ಜೊತೆಗೆ ಬಿಪಿಎಲ್ ಕಾರ್ಡ್ ಹೊಂದಿರುವವರು ಆರ್ಥಿಕವಾಗಿ ಹಿಂದುಳಿದಿರುವುದರಿಂದ ಆ ಸಮಯದ ಅವರ ಅನುಕೂಲತೆಗೆ ಈ ಹಣ ಉಪಯೋಗಕ್ಕೆ ಬರುತ್ತದೆ.
ಅದೇ ಉದ್ದೇಶದಿಂದ ಕೂಡ ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯದಾದ್ಯಂತ ಇರುವ ಎಲ್ಲಾ ಬಿಪಿಎಲ್ ಕಾರ್ಡ್ ಹೊಂದಿದ ಗರ್ಭಿಣಿ ಸ್ತ್ರೀಯರಿಗೆ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ.ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಂಡು ಈ ಯೋಜನೆಯ ಅನುಕೂಲತೆಯ ಮಾಹಿತಿ ಹೆಚ್ಚಿನ ಜನರಿಗೆ ತಲುಪುವಂತೆ ಮಾಡಿ.