ನಟಿ ಮೇಘನಾ ರಾಜ್ ಪಕ್ಕ ಕನ್ನಡದ ಹುಡುಗಿ ಗ್ಲಾಮರಸ್ ರೋಲ್ ಆದರೂ ಸರಿ, ಹಳ್ಳಿ ಹುಡುಗಿಯ ಪಾತ್ರಕ್ಕಾದರು ಸರಿ ಕನ್ನಡದ ಸೊಗಡಿಗೆ ತಕ್ಕಂತೆ ಇರುವ ಈಕೆ ಕನ್ನಡ ಭಾಷೆ ಮಾತ್ರ ಅಲ್ಲದೆ ತಮಿಳು ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ತುಂಬಾ ಫೇಮಸ್ ಆಗಿದ್ದಾರೆ. ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಶಾಯ್ ಅವರ ಮುದ್ದಿನ ಮಗಳಾಗಿರುವ ಇವರಿಗೆ ತಂದೆ-ತಾಯಿ ಇಬ್ಬರೂ ಕೂಡ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಲಾವಿದರಾಗಿ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರಿಂದ ಇವರಿಗೂ ಅಭಿನಯದ ನಂಟು ಅಲ್ಲಿಂದಲೇ ಶುರುವಾಗಿದೆ. ಬಾಲ್ಯದಿಂದಲೂ ಸಿನಿಮಾ ಗೆ ಸಂಬಂಧಪಟ್ಟ ವಿಷಯದಲ್ಲಿ ಬಹಳ ಕುತೂಹಲದಿಂದ ಇದ್ದ ಇವರು ಆಗಿನಿಂದಲೇ ಅಭಿನಯದ ಬಗ್ಗೆ ಪ್ರಾಕ್ಟೀಸ್ ಕೂಡ ಮಾಡುತ್ತಿದ್ದರು. ಬಳಿಕ ಪುಂಡ ಎನ್ನುವ ಸಿನಿಮಾದಲ್ಲಿ ಇವರು ಮೊದಲ ಬಾರಿಗೆ ಕನ್ನಡದಲ್ಲಿ ನಾಯಕಿ ಆಗಿ ಕಾಣಿಸಿಕೊಂಡರು ಕೂಡ ಇವರನ್ನು ಜನ ಹೆಚ್ಚಾಗಿ ಗುರುತಿಸಿಕೊಂಡಿದ್ದು ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ರಾಜಾಹುಲಿ ಎನ್ನುವ ಸಿನಿಮಾದಲ್ಲಿ ನಾಯಕಿಯಾದ ಮೇಲೆ.
ಇದಾದ ಬಳಿಕ ಮೇಘನಾ ರಾಜ್ ಅವರು ತಿರುಗಿ ನೋಡಿದ್ದೇ ಇಲ್ಲಾ. ಬಹುಪರಾಕ್ ಆಟಗಾರ ವಂಶೋದ್ಧಾರಕ ಇರುವುದೆಲ್ಲವ ಬಿಟ್ಟು ಎಂಎಂಸಿಎಚ್ ಇನ್ನೂ ಮುಂತಾದ ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ಮೇಘನಾ ರಾಜ್ ಅವರು 2018 ರಲ್ಲಿ ಸ್ಯಾಂಡಲ್ವುಡ್ ನ ಯುವ ಸಾಮ್ರಾಟ್ ಆದ ಚಿರಂಜೀವಿ ಸರ್ಜಾ ಅವರನ್ನು ಮದುವೆಯಾಗಿ ವಿವಾಹ ಜೀವನಕ್ಕೆ ಕಾಲಿಟ್ಟರು. ಸತತ 10 ವರ್ಷದ ಪ್ರೀತಿಯ ಬಳಿಕ ಎರಡು ಕುಟುಂಬದವರ ಮನವೊಲಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ ಕನ್ನಡ ಕ್ಯೂಟ್ ಕಪಲ್ಸ್ ಎನ್ನುವ ಬಿರುದು ಪಡೆದುಕೊಂಡಿದ್ದರು. ಈ ಮುದ್ದಾದ ಜೋಡಿಯ ಮೇಲೆ ಯಾರ ಕೆಟ್ಟ ದೃಷ್ಟಿ ಬಿದ್ದಿತ್ತೋ ಗೊತ್ತಿಲ್ಲ ವಿಧಿಯಾಟಕ್ಕೆ ಸಿಕ್ಕ ಈ ಜೋಡಿ ಮದುವೆಯಾದ ಎರಡೇ ವರ್ಷದಲ್ಲಿ ಬೇರೆಯಾಗ ಬೇಕಾಯಿತು ಅರ್ಥಾತ್ ಮೇಘನಾ ರಾಜ್ ಅವರು ಐದು ತಿಂಗಳ ಗರ್ಭಿಣಿ ಆಗಿರುವಾಗ ಚಿರಂಜೀವಿ ಸರ್ಜಾ ಅವರು ಅಕಾಲಿಕ ಮರಣಕ್ಕೆ ತುತ್ತಾದರು.
ಅವರ ಆ ದಿನದ ಪರಿಸ್ಥಿತಿ ನೋಡಿ ಇಡಿ ಕರುನಾಡೇ ಕಂಬನಿ ಮಿಡಿದಿತ್ತು. ಇದಾದ ಬಳಿಕ ಸಿನಿಮಾರಂಗದಿಂದ ಬಹಳ ದಿನದವರೆಗೆ ದೂರವಿದ್ದ ಮೇಘನಾ ರಾಜ್ ಅವರು ತಮ್ಮ ಮಗನ ಲಾಲನೆ ಪಾಲನೆಯಲ್ಲಿ ಸಮಯ ಕಳೆಯುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿದ್ದ ಇವರು ಮಗನ ಕುರಿತಾದ ವಿಶೇಷ ವಿಡಿಯೋಗಳನ್ನು ಹಂಚಿಕೊಂಡು ತಮ್ಮ ನೋವನ್ನು ಮರೆಯುತ್ತಿದ್ದರು. ಜೀವನದಲ್ಲಿ ಆದ ದುರ್ಘಟನೆಯಿಂದ ಒಳಗೆ ಬಹಳ ನೋವಿದ್ದರೂ ಕೂಡ ಮೇಲೆ ಗಟ್ಟಿಗಿತ್ತಿಯಂತೆ ತೋರುವ ಈಕೆ ಮತ್ತೆ ಕ್ಯಾಮರಾ ಫೇಸ್ ಮಾಡಲು ಶುರು ಮಾಡಿದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸಿಂಗ್ ಚಾಂಪಿಯನ್ ಎನ್ನುವ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಭಾಗವಹಿಸಿದ್ದ ಇವರಿಗೆ ಮತ್ತೆ ಸಿನಿಮಾಗಳಿಂದ ಕೂಡ ಆಫರ್ಗಳು ಬರುತ್ತಿದೆಯಂತೆ. ಇದೆಲ್ಲರ ನಡುವೆ ಮತ್ತೊಂದು ಅವಾರ್ಡ್ ಮೇಘನಾ ಪಾಲಿಗೆ ಹುಡುಕಿ ಬಂದಿದೆ.
ಫೆಸ್ಟಿವಲ್ ಆಫ್ ಗ್ಲೋಬ್ ಅಂಡ್ ಫೆಡರೇಶನ್ ಆಫ್ ಅಮೆರಿಕನ್ಸ್ ಸಂಸ್ಥೆ ವತಿಯಿಂದ ಮೇಘನಾರಾಜ್ ಅವರಿಗೆ ಹೀರೋ ಪ್ರಶಸ್ತಿ ದೊರೆಯುತ್ತಿದೆ. 10 ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ ಅವರು ಗುರುತಿಸಿಕೊಂಡಿರುವುದು ಹಾಗೂ ಅವರ ವೈಯಕ್ತಿಕ ಜೀವನದಲ್ಲಿ ಆಗಿರುವ ಏಳುಬೀಳುಗಳನ್ನು ಗಮನಿಸಿ ಅವಾರ್ಡ್ ನೀಡಲಾಗುತ್ತಿದೆಯಂತೆ, ಈ ಕಾರ್ಯಕ್ರಮ ಮೂರು ದಿನಗಳವರೆಗೆ ಅಮೆರಿಕದಲ್ಲಿ ನಡೆಯಲಿದ್ದು ಮೇಘನ ಅವರು ಪಾಲ್ಗೊಳ್ಳಲಿದ್ದಾರೆ. ಈ ಹಿಂದೆ ಬಾಲಿವುಡ್ ಧರ್ಮೇಂದ್ರ ಮತ್ತು ಅಮಿತಾಬ್ ಅವರಿಗೂ ಈ ಪ್ರಶಸ್ತಿ ಬಂದಿತ್ತು. ಮೊದಲ ಬಾರಿಗೆ ಸೌತ್ ಇಂದ ಮೇಘನ ಅವರು ಈ ಅವಾರ್ಡ್ ಪಡೆಯುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ.