ಕ್ರಾಂತಿ ಸಿನಿಮಾವು ಜನವರಿ 26ರಂದು ರಿಲೀಸ್ ಆಗುತ್ತಿದೆ. ಚಿತ್ರದ ಹಾಡುಗಳನ್ನು ಈಗಾಗಲೇ ಕರ್ನಾಟಕದ ಪ್ರಮುಖ ನಗರಗಳಲ್ಲಿ ಬಿಡುಗಡೆ ಮಾಡಿ, ಟ್ರೈಲರ್ ರಿಲೀಸ್ ಅನ್ನು ಕೂಡ ವಿಭಿನ್ನವಾಗಿ ಮಾಡಲು ನಿರ್ಧರಿಸಿದ ಚಿತ್ರ ತಂಡ ಥಿಯೇಟರ್ ಒಂದರಲ್ಲಿ ಇವೆಂಟ್ ಆಯೋಜಿಸಿ ಎಲ್ಲರನ್ನು ಆಹ್ವಾನಿಸಿದೆ.
ಅಭಿಮಾನಿಗಳು, ಮಾಧ್ಯಮದವರ ಮತ್ತು ಚಿತ್ರದ ಕಲಾವಿದರುಗಳು ಹಾಗೂ ಇನ್ನಿತರ ಅತಿಥಿಗಳ ಸಮ್ಮುಖದಲ್ಲಿ ಕ್ರಾಂತಿ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಈಗಾಗಲೇ ದರ್ಶನ್ ಅವರು ಮತ್ತು ಚಿತ್ರತಂಡ ಕೊಡುತ್ತಿದ್ದ ಸಂದರ್ಶನಗಳಿಂದ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿಸಿಕೊಂಡಿದ್ದ ಜನತೆ ಇದು ಶಿಕ್ಷಣದ ಕುರಿತು ಕ್ರಾಂತಿ ಮಾಡಲು ಬಂದಿರುವ ಸಿನಿಮಾ ಎಂದು ಈಗಾಗಲೇ ಸುಳಿವು ಕಂಡುಕೊಂಡಿದೆ.
ಇದೀಗ ಟ್ರೈಲರ್ ನೋಡಿದ ಮೇಲೆ ಇನ್ನು ಹೆಚ್ಚಿನ ವಿಷಯ ಸಿನಿಮಾದಲ್ಲಿ ಇದೆ ಎನ್ನುವುದು ಕ್ರಾಂತಿ ಕುರಿತ ಆಸಕ್ತಿಯನ್ನು ಹೆಚ್ಚು ಮಾಡಿದೆ. ಈ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಸಿನಿಮಾ ಎಲ್ಲಾ ಕಲಾವಿದರೂ ಕೂಡ ಬಂದು ಮಾತನಾಡಿದ್ದಾರೆ. ಅದೇ ರೀತಿ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ನಿರ್ವಹಿಸಿರುವ ಮುಖ್ಯಮಂತ್ರಿ ಚಂದ್ರು ಅವರು ಸಹ ವೇದಿಕೆ ಮೇಲೆ ಬಂದು ದರ್ಶನ್ ಅವರನ್ನು ಕುರಿತಂತೆ ಮತ್ತು ಚಿತ್ರತಂಡದ ಕುರಿತಂತೆ ಹಾಗೂ ಕ್ರಾಂತಿ ಸಿನಿಮಾದ ವಿಷಯವನ್ನು ಸ್ವಲ್ಪ ಹೇಳಿದ್ದಾರೆ.
ಮುಖ್ಯಮಂತ್ರಿ ಚಂದ್ರು ಅವರು ಮಾತು ಶುರು ಮಾಡಿ ಈ ವಿಷಯಗಳನ್ನು ಹಂಚಿಕೊಂಡರು. ನಾನು ದರ್ಶನ್ ಅವರನ್ನು ಬಹಳ ವರ್ಷಗಳಿಂದ ನೋಡಿಕೊಂಡು ಬಂದಿದ್ದೇನೆ, ದರ್ಶನ್ ಅವರ ತಂದೆಯ ಜೊತೆ ಹಲವು ಸಿನಿಮಾಗಳನ್ನು ಮಾಡಿದ್ದೇನೆ. ಆಗಿನ ದಿನಗಳಿಂದಲೂ ಕೂಡ ದರ್ಶನ್ ನನಗೆ ಗೊತ್ತು. ಈಗಿನ ಇಕ್ಕಟ್ಟು ಮತ್ತು ಬಿಕ್ಕಟ್ಟು ಪರಿಸ್ಥಿತಿಗಳ ನಡುವೆ ಎಲ್ಲವನ್ನು ಸಂಭಾಳಿಸಿಕೊಂಡು, ತನಗೆ ಇರುವ ಕ್ರೇಜ್ ಹಾಗೂ ತನ್ನ ಮೇಲೆ ಅಭಿಮಾನಿಗಳು ಹೊಂದಿರುವ ಹುಚ್ಚು ಅಭಿಮಾನವನ್ನು ನಿಭಾಯಿಸಿಕೊಂಡು ಕನ್ನಡ ಚಿತ್ರರಂಗಕ್ಕೆ ಸೇವೆ ಮಾಡುತ್ತಿರುವ ಒಬ್ಬ ಶ್ರೇಷ್ಠ ನಟ ಈತ.
ದರ್ಶನ್ ಬಗ್ಗೆ ನಾನು ಹೇಳುವುದಕ್ಕಿಂತ ಹೆಚ್ಚಿನ ವಿಷಯ ಈಗಾಗಲೇ ಇಡೀ ಕರ್ನಾಟಕಕ್ಕೆ ಗೊತ್ತಿದೆ. ಆದರೆ ಈ ಬಾರಿ ಅವರು ಮಾಡಿರುವ ಸಿನಿಮಾ ಬಗ್ಗೆ ಖಂಡಿತವಾಗಿಯೂ ಮಾತನಾಡಲೇಬೇಕು. ಸಿನಿಮಾ ಹೆಸರು ಕ್ರಾಂತಿ ಎನ್ನುವುದು ಎಲ್ಲರಿಗೂ ತಿಳಿದಿದೆ ಮತ್ತು ಇದು ಶಿಕ್ಷಣದ ಕ್ರಾಂತಿ ಕುರಿತ ವಿಷಯ ಎನ್ನುವುದು ಸಹ ಜನರಿಗೆ ತಿಳಿದಿದೆ. ಈಗಿನ ಸಮಾಜದ ಆಗುಹೋಗುಗಳ ಮತ್ತು ಹೀಗಿರುವ ವ್ಯವಸ್ಥೆಯ ಕುರಿತಾಗಿ ಕಟುವಾಗಿ ಟೀಕಿಸುವ ಸಿನಿಮಾ ಇದಾಗಿದ್ದು.
ಈ ಸಿನಿಮಾ ನೋಡಿದ ಮೇಲೆ ಬಡ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಎಲ್ಲರ ಮನವು ಯೋಚಿಸುವಂತಾಗುತ್ತದೆ. ಒಂದು ಸಮಸ್ಯೆಯ ಮೂಲ ಹುಡುಕುದರ ಜೊತೆಗೆ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಆದರೆ ಪರಿಹಾರ ಸಿಗದೇ ಹೋದರೆ ಅದು ಹೇಗೆ ಪರಿವರ್ತನೆಗೆ ಕಾರಣವಾಗುತ್ತದೆ ಎನ್ನುವದನ್ನು ಹೇಳುವ ಸಿನಿಮಾ ಇದಾಗಿದೆ. ಇಡೀ ಭಾರತದಾದ್ಯಂತ ಇದು ಒಂದು ರೆವಲ್ಯೂಷನ್ ತರುವ ಪ್ರಯತ್ನವೂ ಆಗಿದೆ.
ಇಲ್ಲಿ ಯಾರನ್ನು ಕೂಡ ಉದ್ದೇಶಪೂರ್ವಕವಾಗಿ ಟೀಕಿಸಿಲ್ಲ, ವ್ಯಕ್ತಿ ಹೆಸರು ಹೇಳಿಕೊಂಡು ನಿಂದಿಸಿಲ್ಲ. ಯಾವ ಸಂದೇಶ ತಲುಪಿಸಬೇಕು ಅದನ್ನೆಲ್ಲ ಸಿನಿಮಾ ಮೂಲಕ ಮನೋರಂಜನ ಜೊತೆ ಸಂದೇಶವನ್ನು ಕೊಟ್ಟು ದಾಟಿಸಲಾಗಿದೆ. ಸಿನಿಮಾದಲ್ಲಿ ನಾನು ದರ್ಶನ್ ಅವರ ತಾತ ಅಂದರೆ ರವಿಚಂದ್ರನ್ ಅವರ ಅಪ್ಪನ ಪಾತ್ರ ಮಾಡಿದ್ದೇನೆ ಕುಡುಕನ ಪಾತ್ರ ಆಗಿದ್ದರೂ ಕೂಡ ನಾನು ಕೂಡ ಸಿನಿಮಾದ ಭಾಗವಾಗಿ ಒಂದೊಳ್ಳೆ ಸಾರಾಂಶ ಸಾರಿದ್ದೇನೆ ಎನ್ನುವ ತೃಪ್ತಿ ನನಗಿದೆ. ದರ್ಶನ್ ಅವರ ಈ ಸಿನಿಮಾ ನೂರು ದಿನಗಳಿಗಿಂತ ಹೆಚ್ಚು ದಿನ ಭರ್ಜರಿಯಾಗಿ ಪ್ರದರ್ಶನ ಕಾಣಲಿ, ಇನ್ನು ಇದೇ ರೀತಿಯ ಹತ್ತು ಹಲವು ಅವಕಾಶಗಳನ್ನು ದರ್ಶನ್ ಪಡೆಯಲಿ ಎಂದು ಹರಿಸುತ್ತೇನೆ ಎಂದಿದ್ದಾರೆ.