ಬೆಂಗಳೂರು ಮಹಾನಗರದಲ್ಲಿ ವಾಸವಿರುವ ಸ್ವಂತ ಮನೆ ಇಲ್ಲದ ನಿವಾಸಿಗಳಿಗೆ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಅದೇನೆಂದರೆ, ಮುಖ್ಯಮಂತ್ರಿ ವಸತಿ ಯೋಜನೆ 2023-24ರ ಅಡಿಯಲ್ಲಿ 1 ಲಕ್ಷ ಬಹುಮಹಡಿ ಮನೆಗಳನ್ನು ಬೆಂಗಳೂರಿನಲ್ಲಿ ನಿರ್ಮಿಸಿ ಫಲಾನುಭವಿಗಳಿಗೆ ಹಂಚುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಐದು ತಾಲೂಕುಗಳಲ್ಲಿ ಸರ್ಕಾರಿ ಜಮೀನುಗಳಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಒಂದು ಲಕ್ಷ ಬಹು ಮಹಡಿ ವಸತಿ ಬೆಂಗಳೂರು ಯೋಜನೆಯ ಮೊದಲ ಹಂತದಲ್ಲಿ 8096 2BHK ಫ್ಲಾಟ್ ಮತ್ತು ಮನೆಗಳನ್ನು ಶೆಲ್ ವಾರ್ ತಂತ್ರಜ್ಞಾನ ಅಳವಡಿಸಿಕೊಂಡು ನಿರ್ಮಿಸಲಾಗುತ್ತಿದ್ದು, ಈ ಯೋಜನೆಯ ಫಲಾನುಭವಿಗಳಾಗಲು ಇಚ್ಛಿಸುವವರಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಲು ಸರ್ಕಾರ ತಿಳಿಸಿದೆ.
ಮುಖ್ಯಮಂತ್ರಿ ವಸತಿ ಯೋಜನೆ 2023-24ರ ಫಲಾನುಭವಿಗಳಾಗಲು ಇಚ್ಛಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು. ಆಸಕ್ತಿ ಉಳ್ಳವರು ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಡಬೇಕು. ವೆಬ್ಸೈಟ್ ಓಪನ್ ಆದ ಬಳಿಕ ಮುಖ್ಯಮಂತ್ರಿ ವಸತಿ ಯೋಜನೆ 2023-24 ಎನ್ನುವ ಲಿಂಕ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ ಯೋಜನೆಗೆ ಸಂಬಂಧಪಟ್ಟ ಹಾಗೆ ಸಾಕಷ್ಟು ವಿವರಗಳು ಕಾಣುತ್ತದೆ.
ಅರ್ಜಿ ಸಲ್ಲಿಕೆ ಆಪ್ಷನ್ ಕೂಡ ಇರುತ್ತದೆ. ಇದರ ಮೂಲಕ ಇದುವರೆಗೆ ಎಷ್ಟು ಜನ ಅರ್ಜಿ ಸಲ್ಲಿಸಿದ್ದಾರೆ ಎನ್ನುವುದನ್ನು ಸಹ ನೀವು ನೋಡಬಹುದು. ಯೋಜನಾ ಸ್ಥಳಗಳು, ಮನೆಯ ನಿರ್ಮಾಣ ಸ್ಥಳಗಳು, ವಿನ್ಯಾಸದ ಯೋಜನೆ, ಘಟಕ ಯೋಜನೆ ಮತ್ತು ಅದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ನೋಡುವ ಆಪ್ಷನ್ ಕೂಡ ಇದೆ.
ಪ್ರಸ್ತುತವಾಗಿ ಲಭ್ಯವಿರುವ ಫ್ಲಾಟ್ ಗಳ ವಿವರಗಳನ್ನು ಕೂಡ ನೋಡಬಹುದು. ಅರ್ಜಿ ಸಲ್ಲಿಕೆ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ನೀವು ಯಾವ ವಿಧಾನಸಭಾ ಕ್ಷೇತ್ರಕ್ಕೆ ಸೇರಿದವರು ಎನ್ನುವ ಆಪ್ಶನ್ ಗಳನ್ನು ತೋರಿಸುತ್ತದೆ. ಅದನ್ನು ಸೆಲೆಕ್ಟ್ ಮಾಡಿ ಬೆಂಗಳೂರು ಗ್ರಾಮಾಂತರ ಅಥವಾ ನಗರ ಎನ್ನುವ ಕಡೆ ಸರಿಯಾದ ಆಯ್ಕೆ ಅನ್ನು ಕ್ಲಿಕ್ ಮಾಡಿ ನಂತರ ಅರ್ಜಿ ಸಲ್ಲಿಕೆಯನ್ನು ಪೂರ್ತಿ ಮಾಡಬಹುದು.
ಅರ್ಜಿ ಸಲ್ಲಿಕೆ ಪೂರ್ತಿ ಆಗಿ ಮುಂಗಡ ಹಣ ಪಾವತಿಸಿದ ಬಳಿಕ ನಿಮ್ಮ ನೆಚ್ಚಿನ ಫ್ಲಾಟ್ ಅನ್ನು ಸರ್ಚ್ ಮಾಡಿ ಆನ್ಲೈನ್ ಅಲ್ಲಿಯ ಬುಕ್ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ. ಒಟ್ಟು 14 ಲಕ್ಷ ಘಟಕ ವೆಚ್ಚದಲ್ಲಿ ಯೋಜನೆ ನಿರ್ಮಾಣವಾಗುತ್ತಿದ್ದು ಮೂರು ಕಂತುಗಳ ಲೆಕ್ಕದಲ್ಲಿ ಹಣ ಪಾವತಿ ಮಾಡಲು ಕೂಡ ಅನುಕೂಲತೆಯನ್ನು ಕೊಡಲಾಗುತ್ತಿದೆ. ಬ್ಯಾಂಕ್ ಸಾಲದ ಸೌಲಭ್ಯವು ಕೂಡ ಸಿಗಲಿದೆ.
ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ರಾಜೀವ್ ಗಾಂಧಿ ವಸತಿ ನಿಗಮ ನಿಯಮತದ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಅಲ್ಲಿರುವ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ಮಾಹಿತಿ ತಿಳಿದುಕೊಳ್ಳಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು:-
* ಆಧಾರ್ ಕಾರ್ಡ್ ಸಂಖ್ಯೆ
* ಜಾತಿ ಪ್ರಮಾಣ ಪತ್ರದ ಸಂಖ್ಯೆ
* ಕುಟುಂಬದ ಪಡಿತರ ಚೀಟಿ
* ಬೆಂಗಳೂರು ನಗರ ಮತ್ತು ಜಿಲ್ಲೆ ವ್ಯಾಪ್ತಿಯಲ್ಲಿ ಕನಿಷ್ಠ ಐದು ವರ್ಷಕ್ಕಿಂತ ಹೆಚ್ಚು ವಾಸವಿರುವ ಬಗ್ಗೆ ವಾಸಸ್ಥಳ ದೃಢೀಕರಣ ಪತ್ರ.
* ಬ್ಯಾಂಕ್ ಖಾತೆ ವಿವರಗಳು.
* ಅಂಗವಿಕಲರಾಗಿದ್ದರೆ ಸರ್ಕಾರದ ಅಧಿಕೃತ ಸಂಸ್ಥೆ ನೀಡುವ ದಿವ್ಯಾಂಗ ಗುರುತಿನ ಚೀಟಿ.
*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*