ಕಸ ಪೊರಕೆಯನ್ನು ಮಹಾಲಕ್ಷ್ಮಿಯ ಸ್ವರೂಪ ಎಂದು ಹೇಳಲು ಒಂದು ರಹಸ್ಯ ಕೂಡ ಇದೆ. ಹೌದು ಹಾಗಾಗಿ ಕಸಪೊರಕೆ ಬಗ್ಗೆ ಪ್ರತಿಯೊಬ್ಬರೂ ಕೂಡ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಒಳ್ಳೆಯದು. ಇಲ್ಲವಾದರೆ ನೀವು ಅದನ್ನು ನಿರ್ಲಕ್ಷಿಸಿದರೆ ಅದರಿಂದ ಬಹಳಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಹಾಗಾಗಿ ಕಸ ಪೊರಕೆ ಬಗ್ಗೆ ಯಾವೆಲ್ಲ ಒಳ್ಳೆಯ ಮಾಹಿತಿಗಳು ಇವೆಯೋ ಅವೆಲ್ಲವನ್ನು ಕೂಡ ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.
* ವೈಕುಂಠಕ್ಕೆ ಮೊಟ್ಟಮೊದಲನೆ ಬಾರಿಗೆ ತಾಯಿ ಮಹಾಲಕ್ಷ್ಮಿದೇವಿಯು ಕಾಲಿಟ್ಟಾಗ ಪೊರಕೆಯಿಂದ ಆ ಸ್ಥಳವನ್ನು ಶುದ್ದೀಕರಣ ಮಾಡಲಾಗಿತ್ತು ಎನ್ನುವ ನಂಬಿಕೆ ಇದೆ.
* ಹಾಗಾಗಿ ಪೊರಕೆಯನ್ನು ಲಕ್ಷ್ಮಿ ದೇವಿಗೆ ಪ್ರಿಯವಾದ ವಸ್ತು, ಅದು ಲಕ್ಷ್ಮೀ ಸ್ವರೂಪ ಎಂದು ಶಾಸ್ತ್ರ ಗ್ರಂಥಗಳಲ್ಲಿ ಉಲ್ಲೇಖಿಸಿದೆ.
* ಯಾವಾಗಲೂ ಪೊರಕೆಯನ್ನು ಬೇರೆಯವರ ಕಣ್ಣಿಗೆ ಕಾಣಿಸದ ರೀತಿಯಲ್ಲಿ ಇಡಬೇಕು. ನಿಮ್ಮ ಮನೆಯ ಇತರ ಸದಸ್ಯರ ಕಣ್ಣಿಗೆ ಕೂಡ ಕಾಣಿಸದ ರೀತಿ ಇಡಬೇಕು.
ಮಹಿಳೆಯರು ಕಡ್ಡಾಯವಾಗಿ ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ ಇದು.!
* ಪೊರಕೆಯನ್ನು ನೀವು ಹಣ ಬಚ್ಚಿಡುವ ರೀತಿ, ಅಂದರೆ ಹಣವನ್ನು ಜೋಪಾನ ಮಾಡುವ ರೀತಿ ಜೋಪಾನ ಮಾಡಬೇಕು. ಇದರಿಂದ ಮಹಾಲಕ್ಷ್ಮಿ ನಿಮ್ಮ ಮನೆಯನ್ನು ಬಿಟ್ಟು ಹೋಗುವುದಿಲ್ಲ.
* ಆದರೆ ರಾತ್ರಿ ವೇಳೆ ಮನೆಯ ಬಾಗಿಲ ಬಳಿ ಇಡಿ, ಇದರಿಂದ ದುಷ್ಟ ಶಕ್ತಿ ಪ್ರವೇಶ ಆಗುವುದಿಲ್ಲ. ಮನೆಯಲ್ಲಿ ಕಷ್ಟ ನಷ್ಟ ಕಡಿಮೆಯಾಗುತ್ತದೆ. ನೆಮ್ಮದಿ ಲಭಿಸುತ್ತದೆ, ಪೊರಕೆಯ ಮುಂಬಾಗ ಬಾಗಿಲ ಕಡೆ ನೋಡಬೇಕು.
* ಎಚ್ಚರ ಪೊರಕೆಯನ್ನು ಯಾವಾಗಲೂ ನೇರವಾಗಿ ಇಡಲೇಬಾರದು. ಮಲಗಿಸಿಯೇ ಇಡಬೇಕು ನೇರವಾಗಿ ಯಾವಾಗ ಇಡುತ್ತೀರಾ ಆರ್ಥಿಕ ಸಂಕಷ್ಟಗಳು ಬರುತ್ತದೆ. ಕಷ್ಟಗಳು ತಪ್ಪೋದಿಲ್ಲ.
* ಮನೆಯ ಅಟ್ಟದ ಮೇಲೆ ಅಥವಾ ಮಹಡಿ ಮೇಲೆ ಪೊರಕೆಯನ್ನು ಇಡುವ ರೂಡಿ ಕೆಲವರಲ್ಲಿ ಇರುತ್ತದೆ. ಆದರೆ ಇದು ತಪ್ಪು ಆ ಜಾಗದಲ್ಲಿ ಇಟ್ಟರೆ ಮನೆಯಲ್ಲಿ ಸದಾ ಕಲಹಗಳು ಜಗಳಗಳು ಭಿನ್ನಾಭಿಪ್ರಾಯಗಳು ಹಣಕಾಸಿಗೆ ಕೊರತೆ ತಪ್ಪೋದಿಲ್ಲ. ಇವಾಗಲೇ ಅಲ್ಲಿಂದ ತೆಗೆದುಬಿಡಿ ಗಂಡ ಹೆಂಡತಿ ನಡುವೆ ಭಿನ್ನಾಭಿಪ್ರಾಯ ಜಗಳ ಕಲಹ ಸತತವಾಗಿ ಇರುತ್ತದೆ. ಅವರ ಮಧ್ಯೆ ಭಿನ್ನಾಭಿಪ್ರಾಯ ತಪ್ಪುವುದಿಲ್ಲ.
* ಎಚ್ಚರ ಬಾಡಿಗೆ ಮನೆಯಲ್ಲಿ ವಾಸ ಮಾಡುವವರು ಮನೆ ಬದಲಾವಣೆ ಮಾಡುವ ಸಮಯದಲ್ಲಿ ಹಳೆಯ ವಸ್ತು ಬಿಟ್ಟು ಬರುವ ರೂಢಿ ಇರುತ್ತೆ. ಆದರೆ ಯಾವತ್ತಿಗೂ ಪೊರಕೆ ಬಿಟ್ಟು ಬರಲೇಬಾರದು.
* ನೀವು ಹಳೆಯ ಮನೆಯನ್ನು ಬಿಟ್ಟು ಬರುವಾಗ ಯಾವ ಒಂದು ಕಾರಣಕ್ಕೂ ಪೊರಕೆಯನ್ನು ಅಲ್ಲಿ ಬಿಟ್ಟು ಬರಬಾರದು ಇದರಿಂದ ನಿಮ್ಮ ಸಂಪತ್ತು ಅದೃಷ್ಟವನ್ನು ಅಲ್ಲೇ ಬಿಟ್ಟ ಹಾಗೆ ನೆನಪಿಡಿ. ಪೊರಕೆ ಇನ್ನು ಅಳೆಯದಾಗಲಿಲ್ಲ ಅಂತ ತುಂಬಾ ದಿನ ಆದರೂ ಅದನ್ನೇ ಬಳಸುತ್ತಾ ಇರುವುದು ಬಹಳ ತಪ್ಪು.
* ಒಂದು ಪೊರಕೆಯನ್ನು ಮೂರು ಅಥವಾ ನಾಲ್ಕು ತಿಂಗಳು ಅದಕ್ಕಿಂತ ಹೆಚ್ಚು ದಿನ ಬಳಸುವುದು ಮಾಡಲೇಬಾರದು. ಪೊರಕೆ ಎಷ್ಟೇ ಚೆನ್ನಾಗಿ ದ್ದರೂ ಪರವಾಗಿಲ್ಲ ಅದನ್ನು ಬಳಸಬಾರದು ಎಸೆದುಬಿಡಿ ಅದರಲ್ಲಿ ಸಾಕಷ್ಟು ನೆಗೆಟಿವಿಟಿ ಸೇರಿರುತ್ತದೆ.
* ಅದು ನಿಮಗೆ ಮನೆಯಲ್ಲಿ ನೆಗೆಟಿವಿಟಿ ಹರಡುತ್ತದೆ ಇದರಿಂದ ಕಷ್ಟಗಳು ಬರುತ್ತಾ ಹೋಗುತ್ತದೆ.
* ಪೊರಕೆಗೆ ಯಾವುದೇ ಕಾರಣಕ್ಕೂ ಕಾಲನ್ನು ತಾಕಿಸಬಾರದು ಇದರಿಂದ ಲಕ್ಷ್ಮಿದೇವಿಗೆ ಅವಮಾನ ಮಾಡಿದಂತಾಗುತ್ತದೆ.
* ಪೊರಕೆಯಿಂದ ಪ್ರಾಣಿಗಳಾಗಲಿ, ಒಡೆಯುವುದನ್ನು ಮಾಡಬಾರದು ಇದು ಸಿರಿ ಸಂಪತ್ತಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
* ಆಹಾರ ಪದಾರ್ಥಗಳು ದಿನಸಿ ಪದಾರ್ಥಗಳು ನೆಲದಲ್ಲಿ ಬಿದ್ದಿದ್ದರೆ ಬಟ್ಟೆಯಲ್ಲಿ ಸ್ವಚ್ಛ ಮಾಡಿ ನಂತರ ಆ ಜಾಗವನ್ನು ಕಸ ಪೊರಕೆಯಿಂದ ಗುಡಿಸಬೇಕು. ಇಲ್ಲದಿದ್ದರೆ ಅನ್ನಕ್ಕೆ ಕೊರತೆ ಉಂಟಾಗುತ್ತದೆ ಮನೆಯಲ್ಲಿ ದಿನಸಿ ಪದಾರ್ಥಗಳು ತುಂಬಿರುವುದಿಲ್ಲ.
* ಮಲಗಿಸಿ ಇಟ್ಟು ನೋಡಿ ನಿಮ್ಮ ಅದೃಷ್ಟದ ದಿನಗಳು ಶುರುವಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಎರಡು ಪೊರಕೆಗಳನ್ನು ಜೊತೆಯಲ್ಲಿ ಇಡಲೇಬಾರದು ಜಗಳ ಕಲಹ ಮನೆಯಲ್ಲಿ ಸದಾ ಕಿರಿಕಿರಿ ಉಂಟಾಗುತ್ತದೆ.