Home Entertainment ಅಮೂಲ್ಯ ನಂತರ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಮತ್ತೋರ್ವ ಖ್ಯಾತ ನಟಿ.

ಅಮೂಲ್ಯ ನಂತರ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಮತ್ತೋರ್ವ ಖ್ಯಾತ ನಟಿ.

0
ಅಮೂಲ್ಯ ನಂತರ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಮತ್ತೋರ್ವ ಖ್ಯಾತ ನಟಿ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಬಹುಭಾಷಾ ನಟಿ ನಮಿತಾ ಅವರು ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ನೀಲಕಂಠ, ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಕೇವಲ ಇದೊಂದು ಮಾತ್ರವಲ್ಲದೆ ಕನ್ನಡದ ಹಲವಾರು ಸಿನಿಮಾದಲ್ಲಿ ನಟಿಸಿದ್ದಾರೆ, ನಮಿತಾ ಅವರು ದಕ್ಷಿಣ ಭಾರತದ ಬಹು ಬೇಡಿಕೆಯ ನಟಿ ಕನ್ನಡ ತಮಿಳು ತೆಲುಗು ಮಲಯಾಳಂ ಸೇರಿದಂತೆ ಸಾಕಷ್ಟು ಭಾಷೆಯಲ್ಲಿ ಅಭಿನಯಿಸಿದ್ದಾರೆ. ತಮ್ಮ ಗ್ಲಾಮರ್ ಲುಕ್ ನಿಂದಲೇ ಸಾಕಷ್ಟು ಸಿನೆ ರಸಿಕರ ಮನಸನ್ನು ಗೆದ್ದಿದ್ದಾರೆ. ಇನ್ನು ನಟಿ ನಮಿತಾ ಅವರು 2017ರಲ್ಲಿ ಉದ್ಯಮಿ ಆದಂತಹ ವೀರೇಂದ್ರ ಚೌಧರಿ ಅವರನ್ನು ನಮಿತಾ ಅವರು ಪ್ರೀತಿಸಿ ಮದುವೆಯಾಗುತ್ತಾರೆ. ವೀರೇಂದ್ರ ಚೌದರಿ ಅವರು ಮೂಲತಃ ಉದ್ಯಮಿಯಾಗಿದ್ದಾರೆ ನಮಿತಾ ಅವರು ಸಿನಿಮಾಗಳಲ್ಲಿ ಅಭಿನಯ ಮಾಡಬೇಕಾದರೆ ವೀರೇಂದ್ರ ಅವರಿಗೆ ನಮಿತಾ ಅವರ ಮೇಲೆ ಮನಸ್ಸು ಆಗುತ್ತದೆ. ಒಂದೆರಡು ವರ್ಷ ನಮಿತಾ ಅವರಿಗಾಗಿ ಕಾದು ತದನಂತರ ತಮ್ಮ ಪ್ರೀತಿಯನ್ನು ಅವರ ಬಳಿ ವ್ಯಕ್ತಪಡಿಸುತ್ತಾರೆ.

ಇದಾದ ಬಳಿಕ ನಮಿತಾ ಅವರು ವೀರೇಂದ್ರ ಚೌದರಿ ಅವರನ್ನು ಒಪ್ಪಿಕೊಂಡು ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ 2018ರಲ್ಲಿ ಮದುವೆಯಾಗುತ್ತಾರೆ. ಮದುವೆಯಾಗಿ ಸುಮಾರು ಐದು ವರ್ಷದ ತನಕ ಇಬ್ಬರು ಕೂಡ ಒಬ್ಬರ ನೊಬ್ಬರು ಅರಿತುಕೊಂಡು ಸುಖ ದಾಂಪತ್ಯವನ್ನು ನಡೆಸುತ್ತಿದ್ದರು. ಸಾಮಾನ್ಯವಾಗಿ ಯಾವುದೇ ಜೋಡಿ ಮದುವೆಯಾದರು ಕೂಡ ಮಗುವಿನ ನಿರೀಕ್ಷೆಯಲ್ಲಿ ಇರುತ್ತಾರೆ ಹಾಗೆಯೇ ಇದೀಗ ನಮಿತಾ ಮತ್ತು ವೀರೇಂದ್ರ ಚೌದರಿ ಅವರು ಮಗುವಿನ ನಿರೀಕ್ಷೆಯಲ್ಲಿ ಇದ್ದರು. ಕಳೆದ ತಿಂಗಳಿನಲ್ಲಷ್ಟೇ ನಮಿತಾ ಅದ್ದೂರಿಯಾಗಿ ಶ್ರೀಮಂತ ಶಾಸ್ತ್ರವನ್ನು ಮಾಡಿಸಿಕೊಂಡಿದ್ದರು. ಈ ಶ್ರೀಮಂತ ಶಾಸ್ತ್ರಕ್ಕೆ ಸಿನಿ ರಸಿಕರು ಕುಟುಂಬಸ್ಥರು ಸ್ನೇಹಿತರು ಆಪ್ತರು ಕೂಡ ಎಲ್ಲರೂ ಬಂದು ನಮಿತಾ ಅವರಿಗೆ ಶುಭಾಶಯಗಳು ಕೋರಿ ಹೋಗಿದ್ದರು. ಈ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು.

ವಿಶೇಷ ಏನೆಂದರೆ ನಮಿತಾ ಅವರಿಗೆ ಇದೀಗ 40ನೇ ವರ್ಷ 40ನೇ ವರ್ಷದಲ್ಲಿ ತಾಯಾಗುತ್ತಿರುವಂತಹ ಸಂತಸದ ವಿಚಾರವನ್ನು ಹಂಚಿಕೊಂಡಿದ್ದರು, ಕೃಷ್ಣ ಜನ್ಮಾಷ್ಟಮಿಯ ದಿನದಂದೇ ನಮಿತಾ ಅವರು ಅವಳಿ ಗಂಡು ಮಕ್ಕಳಿಗೆ ಜನ್ಮವನ್ನು ನೀಡಿದ್ದಾರೆ. ಈ ಸಂತಸದ ವಿಚಾರವನ್ನು ನಮಿತಾ ಹಾಗೂ ಅವರ ಪತಿ ಚೌದರಿ ಅವರು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದಾರೆ. ಹೌದು ಬಹುಭಾಷಾ ನಟಿ ನಮಿತಾ ಅಭಿಮಾನಿಗಳಿಗೆ ಶುಭ ಸುದ್ದಿಯನ್ನು ಕೊಟ್ಟಿದ್ದಾರೆ ಶ್ರೀಕೃಷ್ಣ ಜನ್ಮಾಷ್ಟಮಿ ದಿನವೇ ನಟಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಹರೇ ಕೃಷ್ಣ! ಈ ಶುಭ ಸಂದರ್ಭದಲ್ಲಿ ನಿಮ್ಮೆಲ್ಲರೊಂದಿಗೆ ಸಿಹಿ ಸುದ್ದಿಯನ್ನು ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ ನಾವು ಅವಳಿ ಗಂಡು ಮಕ್ಕಳನ್ನು ಸ್ವಾಗತಿಸಿದ್ದೇವೆ ನಿಮ್ಮ ಆಶೀರ್ವಾದ ಮತ್ತು ಪ್ರೀತಿ ಯಾವಾಗಲೂ ಅವರೊಂದಿಗೆ ಇರುತ್ತದೆ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.

ಒಟ್ಟಾರೆಯಾಗಿ ಯಾವಾಗಲೂ ಕೂಡ ಗ್ಲಾಮರಸ್ ಲುಕ್ ನಿಂದಲೇ ಕಾಣಿಸಿಕೊಳ್ಳುತ್ತಿದ್ದಂತಹ ನಮಿತಾ ಅವರು ಇದೀಗ ತಮ್ಮ ಎಲ್ಲಾ ಸಿನಿಮಾ ಜರ್ನಿಗೆ ಬ್ರೇಕ್ ಅನ್ನು ಹಾಕಿ ಸಂಸಾರ ಮಕ್ಕಳು ಗಂಡ ಎಂದು ಬದುಕುತ್ತಿದ್ದಾರೆ. ಅವಳಿ ಗಂಡು ಮಕ್ಕಳು ಆಗಿರುವುದರಿಂದ ಇನ್ನೂ ಕೆಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಇವರು ಕಾಣಿಸಿಕೊಳ್ಳುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ. ಮಗುವಿನ ಲಾಲನೆ ಮತ್ತು ಪಾಲನೆ ಪೋಷಣೆಯಲ್ಲಿ ನಟಿ ನಮಿತಾ ಅವರು ತೊಡಗಿ ಕೊಳ್ಳುತ್ತಾರೆ ಎಂಬುದು ಕೆಲವು ನಟಿಗರ ಅಭಿಪ್ರಾಯವಾಗಿದೆ, ಅದೇನೇ ಆಗಲಿ ಸುಮಾರು 40 ವರ್ಷವಾದ ನಂತರ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಹಾಗಾಗಿ ನಮಿತಾ ಅವರಿಗೆ ಹಾಗೂ ಅವರ ಮಕ್ಕಳಿಗೆ ಒಳ್ಳೆಯದು ಆಗಲಿ ಆರೋಗ್ಯವಾದ ಜೀವನ ಸಾಗಿಸಲಿ ಎಂಬುವುದು ಕೆಲವು ಅಭಿಮಾನಿಗಳ ಆಶಯವಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ಉತ್ತರಿಸಿ.

LEAVE A REPLY

Please enter your comment!
Please enter your name here