Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

3 ಮದುವೆಯಾಗಿರುವ 63 ವರ್ಷದ ನರೇಶ್ ಅನ್ನು 42 ವರ್ಷದ ಪವಿತ್ರ ಲೋಕೇಶ್ ಪ್ರೀತಿಸಿ 4ನೇ ಮದುವೆಗೆ ಒಪ್ಪಿಗೆ ಕೊಟ್ಟಿದ್ದು ಯಾಕೆ ಗೊತ್ತ.?

Posted on January 2, 2023 By Kannada Trend News No Comments on 3 ಮದುವೆಯಾಗಿರುವ 63 ವರ್ಷದ ನರೇಶ್ ಅನ್ನು 42 ವರ್ಷದ ಪವಿತ್ರ ಲೋಕೇಶ್ ಪ್ರೀತಿಸಿ 4ನೇ ಮದುವೆಗೆ ಒಪ್ಪಿಗೆ ಕೊಟ್ಟಿದ್ದು ಯಾಕೆ ಗೊತ್ತ.?

ಪವಿತ್ರ ಲೋಕೇಶ್ ಗೆ ನರೇಶ್ ಮೇಲೆ ಪ್ರೀತಿ ಆಗಿದ್ದು ಯಾಕೆ ಗೊತ್ತಾ.?

ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಹಳ ಬೇಡಿಕೆ ಪೋಷಕ ನಟಿ ಆಗಿರುವ ಪವಿತ್ರ ಲೋಕೇಶ್ ಅವರು ಮೂಲತಃ ಕನ್ನಡದವರೇ, ಆದರೆ ಇದೀಗ ಅವರಿಗೆ ಕನ್ನಡಕ್ಕಿಂತ ತೆಲುಗಿನಲ್ಲಿ ಒಳ್ಳೊಳ್ಳೆ ಆಫರ್ ಗಳು ಬರುತ್ತಿವೆ. ತೆಲುಗಿನ ಸ್ಟಾರ್ ಹೀರೋಗಳಿಗೆ ತಾಯಿಯಾಗಿ ಮತ್ತು ಆ ಸಿನಿಮಾಗಳು ಮುಖ್ಯವಾದ ಪಾತ್ರವಾಗಿ ಹೆಸರು ಮಾಡುತಿದ್ದ ಪವಿತ್ರ ಲೋಕೇಶ್(Pavithra Lokesh) ಅವರು ಕಳೆದ ವರ್ಷ ವಿವಾದದಲ್ಲಿ ಸಿಲುಕಿಕೊಂಡಿದ್ದರು.

ತೆಲುಗಿನ ಖ್ಯಾತ ನಿರ್ಮಾಪಕ ಮತ್ತು ಆಕ್ಟರ್ ಕೂಡ ಆದ ನರೇಶ್ ನಡುವಿನ ಸಂಬಂಧದ ಕುರಿತು ಕನ್ನಡ ಮತ್ತು ತೆಲುಗು ಎರಡು ಬಾಷೆ ಸುದ್ದಿ ಮಾಧ್ಯಮಗಳಲ್ಲಿ ವಿಷಯ ಪ್ರಸಾರವಾಗಿತ್ತು. ಅಲ್ಲದೆ ನರೇಶ್(Naresh) ಅವರ ಕೌಟುಂಬಿಕ ಜಗಳ ಬೀದಿಗೆ ಬಿದ್ದು ಮೈಸೂರಿನ ಹೋಟೆಲ್ ಒಂದರ ಬಳಿ ಹೈಡ್ರಾಮವೇ ನಡೆದಿತ್ತು.

ಇದಾದ ಮೇಲೆ ಪವಿತ್ರ ಲೋಕೇಶ್, ಸುಚೇಂದ್ರ ಪ್ರಸಾದ್, ನರೇಶ್ ಹೀಗೆ ಎಲ್ಲರೂ ಸಹ ಮಾಧ್ಯಮಗಳಲ್ಲಿ ಸುದ್ದಿಗೋಷ್ಠಿ ನಡೆಸಿ ಕೆಲ ಮಾಹಿತಿಗಳನ್ನು ನೀಡಿದ್ದರು. ಈಗ ವಿಡಿಯೋ ಒಂದೊಂದು ರಿಲೀಸ್ ಮಾಡಿ ಇಬ್ಬರು ಮದುವೆ ಆಗುತ್ತಿರುವ ಬಗ್ಗೆ ಘೋಷಣೆ ಮಾಡಿದ್ದಾರೆ. ಹೊಸ ವರ್ಷದ ಪ್ರಯುಕ್ತ ಮಾಡಲಾಗಿರುವ ವಿಡಿಯೋ ಇದಾಗಿದ್ದು ಹೊಸ ಜೀವನಕ್ಕೆ ಇಬ್ಬರು ಕಾಲಿಡುವ ಸೂಚನೆ ಕೊಡುವ ರೀತಿ ಇದೆ. ಈಗಾಗಲೇ ನರೇಶ್ ಅವರಿಗೆ ಎರಡು ವಿವಾಹವಾಗಿದ್ದು ಮಕ್ಕಳು ಸಹ ಇದ್ದಾರೆ.

ಪವಿತ್ರಾ ಅವರೂ ಸಹ ಕನ್ನಡದ ಹೆಮ್ಮೆಯ ಕಲಾವಿದ ಸುಚೇಂದ್ರ ಪ್ರಸಾದ್ ಅವರನ್ನು ಕೈ ಹಿಡಿದಿದ್ದರು, ಅವರಿಗೂ ಸಹ ಇಬ್ಬರು ಮಕ್ಕಳಿದ್ದಾರೆ. ಆದರೆ ಇಬ್ಬರು ಹಿಂದಿನ ಸಂಬಂಧಗಳನ್ನು ಮುರಿದುಕೊಂಡು ಹೊಸ ಜೀವನ ಆರಂಭಿಸುವ ಕಾತುರದಲ್ಲಿದ್ದಾರೆ. ವಿಡಿಯೋದಲ್ಲಿ ಕೇಕ್ ಕಟ್ ಮಾಡಿ ಲಿಪ್ ಕಿಸ್ ಕೂಡ ಮಾಡಿಕೊಂಡಿದ್ದಾರೆ.

ನರೇಶ್ ಅವರಿಗೆ ಬಹಳ ವಯಸ್ಸಾಗಿದೆ ಆದರೂ ಕೂಡ ಪವಿತ್ರ ಲೋಕೇಶ್ ಅವರಿಗೆ ಅವರ ಮೇಲೆ ಪ್ರೀತಿ ಹೇಗಾಯಿತು ಎನ್ನುವುದು ಎಲ್ಲರ ಪ್ರಶ್ನೆ. ಅಪ್ರತಿಮ ಸುಂದರಿ ಹಾಗೂ ಅಷ್ಟೇ ಪ್ರಬುದ್ಧ ಕಲಾವಿದೆ ಆಗಿರುವ ಪವಿತ್ರ ಅವರು ನರೇಶ್ ಅವರನ್ನು ಒಪ್ಪಿಕೊಳ್ಳುವುದಕ್ಕೆ ಕಾರಣ ಇದೆಯಂತೆ. ತೆಲುಗಿನ ಹಲವು ಸಿನಿಮಾಗಳಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡಿದ್ದಾರೆ, ಸಾಕಷ್ಟು ಸಿನಿಮಾಗಳಲ್ಲಿ ಇಬ್ಬರು ಜೋಡಿಯು ಸಹ ಆಗಿದ್ದಾರೆ.

ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಭಾಗಿಯಾಗಿದ್ದಾರೆ ಆದರೆ ಎಲ್ಲೂ ಸಹ ಇವರಿಗೆ ಸಂಬಂಧದ ಬಗ್ಗೆ ಸುದ್ದಿ ಇರಲಿಲ್ಲ. ಇದ್ದಕ್ಕಿದ್ದ ಹಾಗೆ ಕಳೆದ ವರ್ಷ ಭುಗಿಲೆದ್ದ ವಿವಾದ ಈ ಸಂಬಂಧದ ಮೂಲ ಹುಡುಕುವಂತೆ ಮಾಡಿದೆ. ಪವಿತ್ರ ಲೋಕೇಶ್ ಅವರು ಹೇಳಿಕೊಳ್ಳುವಂತೆ ಅವರಿಗೆ ಶಿವ ಎಂದರೆ ತುಂಬಾ ಭಕ್ತಿಯಂತೆ. ಹಾಗಾಗಿ ಮಹದೇವನ ಕುರಿತು ಒಂದು ಕಥೆ ರೆಡಿ ಮಾಡಿಕೊಂಡು ಸಿನಿಮಾ ಮಾಡಲು ನರೇಶ್ ಅವರ ಬಳಿ ಸಹಾಯ ಕೇಳಿದ್ದರಂತೆ.

ನರೇಶ್ ಸಿನಿಮಾ ಮಾಡುವುದಾಗಿ ಭರವಸೆ ನೀಡಿದ್ದು ಮಾತ್ರವಲ್ಲದೆ ಒಂದು ಈಶ್ವರ ದೇವಸ್ಥಾನವನ್ನು ಪವಿತ್ರ ಅವರಿಗೆ ಗಿಫ್ಟ್ ನೀಡಿದ್ದರಂತೆ. ಇದರಿಂದ ಇಬ್ಬರಿಗೂ ಸ್ನೇಹ ಶುರುವಾಗಿ ನಂತರ ಪ್ರೀತಿಯಾಗಿ ಬದಲಾಗಿ ಈಗ ಇಬ್ಬರೂ ಹಸೆಮಣೆ ಏರುವ ತನಕ ಬಂದು ನಿಂತಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಇಬ್ಬರ ಜೋಡಿ ಬಗ್ಗೆ ಬೇರೆ ಬೇರೆ ರೀತಿ ಮಾತು ಕೇಳಿ ಬರುತ್ತಿದ್ದು ನರೇಶ್ ಅವರ ಬಳಿ ಇರುವ ಹಣದ ಆಸೆಯಿಂದ ಪವಿತ್ರ ಲೋಕೇಶ್ ಅವರು ಬಲೆಗೆ ಬಿದ್ದಿದ್ದಾರೆ ಎಂದು ಹೆಚ್ಚಿನ ಜನರು ಮಾತನಾಡುತ್ತಿದ್ದಾರೆ.

Entertainment Tags:Naresh pavithra, Naresh vijay krishna, Pavithra lokesh
WhatsApp Group Join Now
Telegram Group Join Now

Post navigation

Previous Post: ಜನರ ಮಾತಿಗೆ ಮನನೊಂದು ವೇದಿಕೆಯ ಮೇಲೆ ಕಣ್ಣೀರು ಹಾಕಿದ ಮಾಸ್ಟರ್ ಆನಂದ್. ವಂಶಿಕಾ ಬೆಳವಣಿಗೆಯೇ ಈ ನೋವಿಗೆ ಕಾರಣವಾಗ್ತಿದಿಯಾ.?
Next Post: ಕ್ರಾಂತಿ ಸಿನಿಮಾವನ್ನು ವೇದ ಸಿನಿಮಾಗೆ ಹೋಲಿಕೆ ಮಾಡಿ ದರ್ಶನ್ ವಿರುದ್ಧ ಚಾಟಿ ಬೀಸಿದ ಅಹೋರಾತ್ರ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore