ದಕ್ಷಿಣ ಭಾರತದಲ್ಲಿ ಸೂಪರ್ ಸ್ಟಾರ್ ನಯನತಾರಾ ಅವರು ತಮ್ಮ ಬಹುಕಾಲದ ಗೆಳೆಯ ವಿಘ್ನೇಶ್ ಶಿವನ್ ಅವರನ್ನು ಪ್ರೀತಿಸಿ ಕಳೆದ ಐದು ತಿಂಗಳ ಹಿಂದೆಯಷ್ಟೆ ಮದುವೆಯಾಗಿದ್ದರು. ಮದುವೆಯಾದ ನಂತರ ಈ ದಂಪತಿಗಳು ಹನಿಮೂನ್ ಗಾಗಿ ದೇಶ ವಿದೇಶವನ್ನು ಸುತ್ತುತ್ತಿದ್ದರು ಸುಮಾರು ಎರಡು ತಿಂಗಳಿನಿಂದಲೂ ಕೂಡ ವಿದೇಶದಲ್ಲಿ ವಾಸವಾಗಿದ್ದರು. ತಮ್ಮ ಎಲ್ಲಾ ಸಿನಿಮಾ ಕಾರ್ಯಗಳನ್ನು ಪಕ್ಕಕ್ಕೆ ಇಟ್ಟು ಸದ್ಯಕ್ಕೆ ಗಂಡ ಹೆಂಡತಿ ಇಬ್ಬರೂ ಕೂಡ ಜಾಲಿ ಮೂಡ್ ನಲ್ಲಿ ಕಾಲ ಕಳೆಯುತ್ತಿದ್ದರು. ಈ ಫೋಟೋಸ್ ಮತ್ತು ವೀಡಿಯೋಸ್ಗಳನ್ನು ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಪ್ಲೋಡ್ ಮಾಡುತ್ತಿದ್ದರು.
ಈ ದಂಪತಿಗಳನ್ನು ನೋಡಿದಂತಹ ಅಭಿಮಾನಿಗಳು ಈ ಜೋಡಿ ಕೊನೆಯವರೆಗೂ ಹೀಗೆ ಇರಲಿ ಕೆಟ್ಟ ದೃಷ್ಟಿಯು ಕೂಡ ಇವರ ಮೇಲೆ ಬೀಳದಿರಲಿ ಎಂದು ಹೇಳುತ್ತಿದ್ದರು. ಆದರೆ ಇದ್ದಕ್ಕಿದ್ದ ಹಾಗೆ ಇದೀಗ ನಯನತಾರಾ ಅವರು ಶಾ-ಕಿಂ-ಗ್ ವಿಚಾರ ಒಂದನ್ನು ಹೊರ ಹಾಕಿದ್ದಾರೆ ಹೌದು ಈ ವಿಚಾರ ಕೇಳುತ್ತಿದ್ದ ಹಾಗೆ ಅಭಿಮಾನಿಗಳು ನಿಜಕ್ಕೂ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಈ ವಿಚಾರ ಕೇಳಿದ್ರೆ ನಿಮಗೂ ಕೂಡ ಶಾ-ಕ್ ಆಗುತ್ತೆ ಏಕೆಂದರೆ ನಯನತಾರಾ ಇದೀಗ ಅವಳಿ ಮಕ್ಕಳ ತಾಯಿಯಾಗಿದ್ದಾರೆ. ಹೌದು ಮದುವೆಯಾದ ಕೇವಲ ಐದೇ ತಿಂಗಳಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡುವುದಾದರೂ ಹೇಗೆ ಎಂಬ ಸಂದೇಹ ಎಲ್ಲರಲ್ಲೂ ಮೂಡುವುದು ಸಹಜ ಆದರೆ ಇಲ್ಲೇ ಇರೋದು ನೋಡಿ ಅಸಲಿ ವಿಚಾರ.
ನಯನತಾರಾ ಅವರು ತಾಯಿಯಾಗುತ್ತಿಲ್ಲ ಬದಲಿಗೆ ಬಾಡಿಗೆ ತಾಯ್ತನದ ಮೂಲಕ ಎರಡು ಅವಳಿ ಗಂಡು ಮಕ್ಕಳನ್ನು ದತ್ತು ಪಡೆದಿದ್ದಾರೆ. ಹೌದು ನಯನತಾರಾ ಅವರು ತಮ್ಮ ಮದುವೆಯಾಗುವುದಕ್ಕಿಂತ ಮುಂಚೆಯೇ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯಬೇಕು ಎಂಬ ಕನಸನ್ನು ಹೊಂದಿದ್ದರು. ಈ ಒಂದು ನಿರ್ಧಾರಕ್ಕೆ ತಮ್ಮ ಪತಿ ವಿಘ್ನೇಶ್ ಶಿವನ್ ಅವರ ಅನುಮತಿಯು ಕೂಡ ಇತ್ತು ಈ ವಿಚಾರವನ್ನು ಗೌಪ್ಯವಾಗಿಯೇ ಇಟ್ಟಿದ್ದರು. ಇದೀಗ ನಯನತಾರ ಹಾಗೂ ವಿಘ್ನೇಶ್ ಶಿವನ್ ಇಬ್ಬರೂ ಕೂಡ ಅಧಿಕೃತವಾಗಿ ತಮ್ಮ ಟ್ವಿಟರ್ ಖಾತೆಯಲ್ಲಿ ಮುದ್ದು ಎರಡು ಅವಳಿ ಗಂಡು ಮಕ್ಕಳ ಫೋಟೋವನ್ನು ಶೇರ್ ಮಾಡುವುದರ ಮೂಲಕ ನಾವಿಬ್ಬರು ತಂದೆ ಮತ್ತು ತಾಯಿಯಾಗಿ ಬಡ್ತಿ ಪಡೆದಿದ್ದೇವೆ ಎಂದು ಬರೆದುಕೊಂಡಿದ್ದಾರೆ.
Nayan & Me have become Amma & Appa❤️
We are blessed with
twin baby Boys❤️❤️
All Our prayers,our ancestors’ blessings combined wit all the good manifestations made, have come 2gethr in the form Of 2 blessed babies for us❤️😇
Need all ur blessings for our
Uyir😇❤️& Ulagam😇❤️ pic.twitter.com/G3NWvVTwo9— VigneshShivan (@VigneshShivN) October 9, 2022
ಅಷ್ಟೇ ಅಲ್ಲದೆ ವಿಘ್ನೇಶ್ ನಯನ ಮತ್ತು ನಾನು ಅಮ್ಮ ಮತ್ತು ಅಪ್ಪ ಆಗಿದ್ದೇವೆ ನಮಗೆ ಅವಳಿ ಗಂಡು ಮಕ್ಕಳಾಗಿವೆ. ನಮ್ಮ ಎಲ್ಲಾ ಪ್ರಾರ್ಥನೆ, ನಮ್ಮ ಪೂರ್ವಜರ ಆಶೀರ್ವಾದ ಎಲ್ಲಾ ಒಳ್ಳೆಯ ಅಭಿವ್ಯಕ್ತಿಗಳ ಹಾರೈಕೆಯ ಫಲವಾಗಿ ನಮಗೆ ಈ ಮಕ್ಕಳಾಗಿವೆ. ನಿಮ್ಮೆಲ್ಲರ ಆಶೀರ್ವಾದ ನಮಗೆ ಬೇಕು ಎಂದಿದ್ದಾರೆ. ಈ ವಿಚಾರ ಹೊರ ಬರುತ್ತಿದ್ದ ಹಾಗೆ ಕೆಲವು ಅಭಿಮಾನಿಗಳು ಶುಭಾಶಯವನ್ನು ಕೋರಿದರೆ ಇನ್ನು ಕೆಲವು ಅಭಿಮಾನಿಗಳು ನಯನತಾರಾ ಅವರಿಗೆ ಬಾಯಿಗೆ ಬಂದ ಹಾಗೆ ಬೈಯುತ್ತಿದ್ದಾರೆ.
ಬಾಡಿಗೆ ತಾಯ್ತನ ಎಂಬುದು ಇತ್ತೀಚಿನ ದಿನದಲ್ಲಿ ಟ್ರೆಂಡ್ ಆಗಿದೆ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದುಕೊಂಡರೆ ನೀವು ತಾಯ್ತನದ ಸುಖವನ್ನು ಅನುಭವಿಸಲು ಸಾಧ್ಯವಿಲ್ಲ ಇದು ಒಂದು ಕೃತಕ ಸಂತೋಷವಷ್ಟೇ. ನೈಸರ್ಗಿಕ ಸಂತೋಷವನ್ನು ನೀವು ಪಡೆಯಬೇಕಾದರೆ ನೀವೇ ಮಗುವನ್ನು ಎತ್ತು ಹೊರಬೇಕು ಆಗಲೇ ಅದರ ಸುಖ ದೊರೆಯುವುದು ಎಂದು ಟೀಕೆ ಮಾಡಿದ್ದಾರೆ. ಅದೇನೇ ಆಗಲಿ ಸದ್ಯಕ್ಕಂತೂ ತಮ್ಮ ಅವಳಿ ಮಕ್ಕಳನ್ನು ಮನೆಗೆ ಬರ ಮಾಡಿಕೊಂಡ ಖುಷಿಯಲ್ಲಿ ವಿಜ್ಞೇಶ್ ಶಿವನ್ ಮತ್ತು ನಯನತಾರಾ ಅವರು ಇದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.