ನೇಹಾ ಗೌಡ ಅವರು ಕನ್ನಡದ ಫೇಮಸ್ ನಟಿ ಸೋನು ಗೌಡ ಅವರ ಸಹೋದರಿ ಆದರೂ ಕೂಡ ಕರ್ನಾಟಕದ ಜನತೆಗೆ ಸೋನು ಗೌಡ ಅವರಿಗಿಂತಲೂ ಸ್ನೇಹ ಗೌಡ ಅವರೇ ಹೆಚ್ಚು ಪರಿಚಿತರು. ಆದರೆ ನೇಹ ಗೌಡ ಎನ್ನುವ ಹೆಸರಿನಿಂದ ಹೆಚ್ಚಿನ ಜನ ಅವರನ್ನು ಗುರುತಿಸುವುದಿಲ್ಲ ಯಾಕೆಂದರೆ ಕರ್ನಾಟಕದ ಕಿರುತೆರೆ ಪ್ರೇಕ್ಷಕರಿಗೆ ಗೊಂಬೆ ಎನ್ನುವ ಹೆಸರಿನಿಂದ ನೇಹಾ ಅವರು ತುಂಬಾ ಆತ್ಮೀಯರು. ಯಾಕೆಂದರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ 2013 ರಿಂದ 2020 ರವರೆಗೆ ತೆರೆಕಂಡ ಲಕ್ಷ್ಮಿ ಬಾರಮ್ಮ ಎನ್ನುವ ಖ್ಯಾತ ಧಾರಾವಾಹಿಯಲ್ಲಿ ಗೊಂಬೆ ಎನ್ನುವ ಪಾತ್ರವನ್ನು ಅವರು ನಿರ್ವಹಿಸಿದ್ದರು. ಹೀಗಾಗಿ ಆ ಪಾತ್ರದ ಅದ್ಭುತ ಅಭಿನಯ ಎಲ್ಲರ ಮನಸಿನಲ್ಲೂ ಅಚ್ಚಳಿಯದೆ ಉಳಿದಿದೆ ಹೀಗಾಗಿ ಹೆಚ್ಚಿನ ಜನರು ಇವರನ್ನು ಗೊಂಬೆ ಎನ್ನುವ ಹೆಸರಿನಿಂದಲೇ ಗುರುತಿಸುತ್ತಾರೆ.
ಲಕ್ಷ್ಮಿ ಬಾರಮ್ಮ ಧಾರಾವಾಹಿಯು ತ್ರಿಕೋನ ಪ್ರೇಮ ಕಥೆಯಾಗಿದ್ದು ಇದರಲ್ಲಿ ಲಕ್ಷ್ಮಿ ಚಂದು ಹಾಗೂ ಚಿನ್ನು ಎನ್ನುವ ಮೂರು ಪಾತ್ರಗಳ ಸುತ್ತ ಕಥೆಯನ್ನು ಹೆಣೆಯಲಾಗಿತ್ತು. ಈ ಧಾರಾವಾಹಿಯ ಪ್ರಮುಖ ಭಾಗವೇ ಈ ಮೂರು ಪಾತ್ರಗಳು ಆಗಿತ್ತು. ತ್ರಿಕೋನ ಪ್ರೇಮ ಕಥೆಯಾಗಿದ್ದರೂ ಕೂಡ ಮೂರು ಜನರಲ್ಲಿ ಯಾರನ್ನು ಕೂಡ ವಿಲನ್ ಮಾಡದೇ ಸುಂದರವಾದ ಬಾಂಧವ್ಯ ಇರುವ, ಒಬ್ಬರಿಗೊಬ್ಬರು ಇಂತಹ ತ್ಯಾಗಕೋಸ್ಕರ ಕೂಡ ಸಿದ್ಧವಾಗುವ ಹಾಗೂ ಅಷ್ಟೇ ಪ್ರೀತಿಯನ್ನು ಉಳಿಸಿಕೊಂಡಿರುವ ಕಥೆ ಇದಾಗಿತ್ತು. ಹೀಗಾಗಿ ಹೆಚ್ಚಿನ ಜನರ ಮನಸ್ಸನ್ನು ಇದು ಮುಟ್ಟಿತ್ತು. ಈ ಧಾರಾವಾಹಿಯಲ್ಲಿ ಚಂದು ಹಾಗೂ ಚಿನ್ನು ಪಾತ್ರಕ್ಕೆ ಕವಿತಾ ಗೌಡ ಚಂದನ್ ಶೈನ್ ಶೆಟ್ಟಿ ರಶ್ಮಿ ಇನ್ನು ಮುಂತಾದ ಅನೇಕ ಕಲಾವಿದರುಗಳು ಬದಲಾಗಿದ್ದರು ಆದರೆ ಗೊಂಬೆ ಎನ್ನುವ ಪಾತ್ರಕ್ಕೆ ಮಾತ್ರ ಮೊದಲಿನಿಂದ ಕೊನೆಯವರೆಗೆ ನೇಹಾ ಗೌಡ ಅವರೇ ಉಳಿದುಕೊಂಡಿದ್ದರು.
ಅಲ್ಲದೆ ತೆಲುಗು ಧಾರಾವಾಹಿಗಳಲ್ಲೂ ಕೂಡ ಅವಕಾಶ ಪಡೆದುಕೊಂಡಿದ್ದ ನೇಹಾ ಗೌಡ ಅವರು ಲಕ್ಷ್ಮಿ ಬಾರಮ್ಮ ಧಾರವಾಹಿ ಮುಗಿಯುತ್ತಿದ್ದಂತೆ ತಮ್ಮ ಬಾಲ್ಯದ ಗೆಳೆಯನಾದ ಚಂದನ್ ಎನ್ನುವವರನ್ನು ವಿವಾಹವಾದರು. ಚಂದನ್ ಮತ್ತು ನೇಹಾ ಗೌಡ ಅವರು ಶಾಲಾ ದಿನಗಳಿಂದಲೂ ಒಳ್ಳೆಯ ಸ್ನೇಹಿತರಾಗಿದ್ದು ನಂತರ ಪ್ರೀತಿ ಮಾಡುತ್ತಿದ್ದರು. ಚಂದನ್ ಅವರು ವಿದೇಶದಲ್ಲಿ ವಾಸಿಸಿದ್ದು ಅಲ್ಲೇ ಉದ್ಯೋಗ ಮಾಡುತ್ತಿದ್ದಾರೆ ಜೊತೆಗೆ ಉತ್ತಮ ಡ್ಯಾನ್ಸರ್ ಕೂಡ ಆಗಿದ್ದಾರೆ. ಇವರಿಬ್ಬರ ವಿವಾಹದ ಬಳಿಕ ಕಲರ್ಸ್ ಕನ್ನಡ ವಾಹಿನಿಯು ರಾಜ ರಾಣಿ ಎನ್ನುವ ರಿಯಾಲಿಟಿ ಶೋ ಅಲ್ಲಿ ಭಾಗವಹಿಸಲು ಇವರಿಗೆ ಅವಕಾಶ ನೀಡಿತ್ತು. ಆ ಶೋ ಅಲ್ಲೂ ಕೂಡ ಇವರಿಬ್ಬರು ಜೋಡಿಯಾಗಿ ಬಂದು ಕಂಟೆಸ್ಟೆಂಟ್ಗಳಾಗಿ ಭಾಗವಹಿಸಿದ್ದರು. ಜೊತೆಗೆ ರಾಜ ರಾಣಿ ಸೀಸನ್ 1 ಅಲ್ಲಿ ರಾಜ ರಾಣಿ ಎನ್ನುವ ಕಿರೀಟವನ್ನು ತಮ್ಮ ಮುಡಿಕೇರಿಸಿಕೊಂಡು ತಾವಿಬ್ಬರೂ ಎಷ್ಟು ಉತ್ತಮ ಬಾಂಧವ್ಯವನ್ನು ಹೊಂದಿದ್ದೇವೆ ಎನ್ನುವುದನ್ನು ಕರ್ನಾಟಕದ ಜನತೆಗೆ ತಿಳಿಸಿಕೊಟ್ಟರು.
ಇದೇ ಕಾರ್ಯಕ್ರಮದ ಒಂದು ಎಪಿಸೋಡ್ ನಲ್ಲಿ ಇಬ್ಬರಿಗೂ ಮುಕ್ತವಾಗಿ ಮಾತನಾಡಲು ಅವಕಾಶ ಒಂದನ್ನು ಏರ್ಪಡಿಸಲಾಗಿತ್ತು. ಆ ಸಮಯದಲ್ಲಿ ಗೊಂಬೆ ಅವರು ತಾವೊಂದು ಅನಾಥ ಹೆಣ್ಣು ಮಗುವನ್ನು ದತ್ತು ತೊಡೆದುಕೊಳ್ಳುವ ಆಸೆ ಹೊಂದಿದ್ದೇನೆ ಎಂದು ಹೇಳಿದಕ್ಕೆ ಚಂದನ್ ಅವರು ತಲೆದೂಗಿಸಿ ಒಪ್ಪಿಗೆ ನೀಡಿದ್ದಾರೆ. ನಿಜಕ್ಕೂ ಇವರ ಈ ಯೋಜನೆಯನ್ನು ಎಲ್ಲರೂ ಮೆಚ್ಚಲೇಬೇಕು ಇಡೀ ಸಮಾಜಕ್ಕೆ ಮಾದರಿ ಆಗುವಂಥ ಯೋಜನೆಯನ್ನು ಈ ಜೋಡಿಗಳು ತೆಗೆದುಕೊಂಡಿವೆ. ಈಗ ಎಲ್ಲೆಡೆ ಕೂಡ ಇವರ ಈ ನಿರ್ಧಾರಕ್ಕೆ ಪ್ರಶಂಸೆಗಳ ಸುರಿಮಳೆ ಸುರಿಯುತ್ತಿದೆ. ಇವರು ತೆಗೆದಯಕೊಂಡಿರುವ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.