* ಹಸಿವು :- ಹಸಿವೆಯಾದಾಗ ಆಹಾರವನ್ನು ತೆಗೆದುಕೊಳ್ಳದಿದ್ದರೆ ಉಂಟಾಗುವ ರೋಗಗಳು: ಬಳಲಿಕೆ, ಬಲಹೀನತೆ, ಬಾಯಿ ರುಚಿ ಕಳೆದುಕೊಳ್ಳುವುದು, ಕಣ್ಣುಗಳು ತಿರುಗುವುದು, ಕರುಳು ಕೂಗುವುದು, ಸುಸ್ತಾಗುವುದು ಮತ್ತು ಶರೀರವು ತನ್ನ ಸಹಜ ಕಾಂತಿಯನ್ನು ಕಳೆದು ಕೊಳ್ಳುವುದು.
* ಮೂತ್ರ :- ಮೂತ್ರವನ್ನು ತಡೆ ಹಿಡಿದರೆ ಬರುವ ರೋಗಗಳು : ತಲೆನೋವು, ಮೂತ್ರಾಶಯ, ಜನನೇಂದ್ರಿಯಗಳು, ವೃಷಣಗಳ ಬಳಿ ಹಿಡಿದು ಕೊಂಡಂತಹ ಭಾವ ಉಂಟಾಗುವುದು, ಮೂತ್ರ ವಿಸರ್ಜಿಸು ವಾಗ ನೋವು ಕಾಣಿಸುವುದು ಮತ್ತು ಮೂತ್ರಾಶಯದಲ್ಲಿ ಕಲ್ಲುಗಳು ಉಂಟಾಗುವುದು. ಈ ಒಂದು ಸಮಸ್ಯೆ ಉಂಟಾದರೆ ಹಲವಾರು ರೀತಿಯ ನೋವನ್ನು ಅನುಭವಿಸಬೇಕಾಗುತ್ತದೆ ಆದ್ದರಿಂದ ಆದಷ್ಟು ಮೂತ್ರವನ್ನು ತಡೆಯದೆ ಇರುವುದು ತುಂಬಾ ಒಳ್ಳೆಯದು.
ಈ ಲೆಟರ್ ನಿಮ್ಮ ಹೆಸರಲ್ಲಿ ಇದ್ದರೆ ನೀವು ಅದೃಷ್ಟವಂತರು.!
* ಮಲ :- ಮಲವನ್ನು ತಡೆ ಹಿಡಿದರೆ ಉಂಟಾಗುವ ರೋಗಗಳು : ನೋವು, ಎದೆ ಹಿಡಿದಂತೆ ಕರುಳಿನಲ್ಲಿ ಆಗುವುದು, ಅಪಾನವಾತ ಅಡ್ಡ ಬಂದು ಹೊಟ್ಟೆ ಉಬ್ಬರ ಬರುವುದು, ಕಾಲುಗಳು ಎಳೆದಂತೆ ಆಗುವುದು, ಬಾಯಿ ದುರ್ವಾಸನೆ ಮತ್ತು ತಲೆ ನೋವು ಬರುವುದು.
* ಅಪಾನವಾಯು :- ಅಪಾನವಾಯುವನ್ನು ತಡೆ ಹಿಡಿದರೆ ಉಂಟಾಗು ವ ರೋಗಗಳು : ವಾತ, ಮೂತ್ರ, ಹೊಟ್ಟೆ ಉಬ್ಬರ ಬರುವುದು, ಹಸಿವು ಕಡಿಮೆಯಾಗುವುದು, ಗುಲ್ಮ ರೋಗ ಬರುವುದು, ಕಣ್ಣು ಮಸುಕಾಗು ವುದು ಮತ್ತು ಮಲವು ಬಿಗಿ ಹಿಡಿದಂತೆ ಆಗುವುದು.
ಗೃಹಿಣಿಯರಿಗಾಗಿ ಸೀಕ್ರೆಟ್ ಟಿಪ್ಸ್ ಗಳು.! ಚಪಾತಿ ಮೃದುವಾಗಿ ಬೇಕು ಎಂದರೆ ಈ ಟಿಪ್ಸ್ ಗಳನ್ನು ಫಾಲೋ ಮಾಡಿ.!
* ವಾಂತಿ :- ವಾಂತಿಯನ್ನು ತಡೆ ಹಿಡಿದರೆ ಉಂಟಾಗುವ ರೋಗಗಳು : ಕೆಮ್ಮು, ವಾಕರಿಕೆ, ಬಿಕ್ಕಳಿಕೆ, ಚರ್ಮ ರೋಗಗಳು, ಕಣ್ಣುಗಳ ಬಳಿ ನವೆ, ಬಾಯಿ ರುಚಿ ಇಲ್ಲದೇ ಇರುವುದು ಮತ್ತು ಮುಖದ ಮೇಲೆ ಮಚ್ಚೆ ಉಂಟಾಗುತ್ತವೆ.
* ತೇಗು :- ತೇಗನ್ನು ತಡೆ ಹಿಡಿದಾಗ ಉಂಟಾಗುವ ರೋಗಗಳು : ಹೊಟ್ಟೆ ಉಬ್ಬರ, ಬಿಕ್ಕಳಿಕೆ, ಅರುಚಿ, ಹೃದಯ, ವಕ್ಷ ಸ್ಥಳ ತಡೆ ಹಿಡಿದಂತೆ ಭಾಸ ವಾಗುವುದು ಮತ್ತು ಆಯಾಸ ಸಹ ಉಂಟಾಗುವುದು.
* ಕಣ್ಣೀರು :- ಕಣ್ಣೀರನ್ನು ತಡೆ ಹಿಡಿದರೆ ಉಂಟಾಗುವ ರೋಗಗಳು :
ನೇತ್ರದ ರೋಗಗಳು, ನೆಗಡಿ, ಅರುಚಿ, ಹೃದಯದ ರೋಗಗಳು, ತಲೆಗೆ ಸಂಬಂಧಿಸಿದ ರೋಗಗಳು ಮತ್ತು ಕುತ್ತಿಗೆಯ ನರಗಳು ಬಿಗಿ ಹಿಡಿದಂತೆ ಆಗುವುದು.
* ಬಾಯಾರಿಕೆ :- ಬಾಯಾರಿಕೆಯಾದಾಗ ನೀರು ಕುಡಿಯದೇ ಇದರೆ ಬರುವ ರೋಗಗಳು : ಬಳಲಿಕೆ, ತಲೆ ತಿರುಗುವುದು, ಬಾಯಿ, ಗಂಟಲು ಒಣಗುವುದು, ಕಿವಿಗಳು ಮುಚ್ಚಿಕೊಂಡಂತಹ ಅನುಭವ, ಶರೀರ ಸುಸ್ತು ಮತ್ತು ಹೃದಯದಲ್ಲಿ ನೋವು ಕಾಣಿಸುವುದು.
ಪ್ರತಿಯೊಂದು ಹೆಣ್ಣಿನ ಬಯಕೆ ಇಷ್ಟೆ.!
* ಆಕಲಿಕೆ :- ಆಕಳಿಕೆಯನ್ನು ನಿರೋಧಿಸಿದಾಗ ಬರುವ ರೋಗಗಳು : ಹೊಟ್ಟೆಯಲ್ಲಿ ಗೊಂದಲ ಉಂಟಾಗುವುದು, ಶರೀರ ನಡುಗುವುದು, ಕೆಮ್ಮು ತರಿಸುವ ನಾಡಿಗಳಲ್ಲಿ ತೊಂದರೆ ಮತ್ತು ಸ್ಪರ್ಶ ಜ್ಞಾನ ನಶಿಸುವುದು.
* ನಿದ್ರೆ :- ನಿದ್ರೆಯನ್ನು ತಡೆ ಹಿಡಿದರೆ ಉಂಟಾಗುವ ರೋಗಗಳು : ಆಕಳಿಕೆ, ತೂಕಡಿಕೆ, ಕಣ್ಣುಗಳ ಭಾರ, ಮೈ ಕೈ ನೋವು, ಕಣ್ಣುಗಳು ತಿರುಗುವುದು ಮತ್ತು ಸೋಮಾರಿತನ ಉಂಟಾಗುವುದು.
* ಕೆಮ್ಮು :- ಕೆಮ್ಮು ತಡೆಹಿಡಿಯುವುದರಿಂದ ಬರುವ ರೋಗಗಳು : ತಲೆ ನೋವು, ತಲೆ ಸಂಬಂಧಿ ರೋಗಗಳು, ಪಾರ್ಶ್ವವಾಯು, ಕುತ್ತಿಗೆಯ ನರಗಳು ಹಿಡಿಯುವುದು, ಬಾಯಿ ರುಚಿ ಇಲ್ಲದೆ ಇರುವುದು, ಬಳಲಿಕೆ ಮತ್ತು ಊತ ಕಾಣಿಸುವುದು.
* ನಿಟ್ಟುಸಿರು :- ದೀರ್ಘವಾದ ನಿಟ್ಟುಸಿರನ್ನು ತಡೆ ಹಿಡಿಯುವುದರಿಂದ ಉಂಟಾಗುವ ರೋಗಗಳು : ಗುಲ್ಮ, ಹೃದಯದ ರೋಗಗಳು ಕಾಣಿಸಿಕೊಳ್ಳುತ್ತದೆ.
* ಅವಶ್ಯಕತೆ ಇಲ್ಲದಿದ್ದರೂ ಮಾಡುವ ಕೆಲಸಗಳಿಂದ ಆಗುವ ದುಷ್ಪರಿಣಾಮಗಳು : ಮಲ, ಮೂತ್ರಗಳನ್ನು ವಿಸರ್ಜಿಸುವ ಅವಶ್ಯಕತೆ ಇಲ್ಲದಿದ್ದರೂ ಸಹ ಬಲವಂತವಾಗಿ ವಿಸರ್ಜನೆ ಮಾಡುವುದು ಮತ್ತು ಹಸಿವೆ ಇಲ್ಲದೇ ಇದ್ದರೂ ಸಹ ಆಹಾರವನ್ನು ಸೇವಿಸುವುದು. ಈ ರೀತಿ ಮಾಡುವುದರಿಂದ ಸಹ ದೇಹವು ಅನೇಕ ರೋಗಕ್ಕೆ ಈಡಾಗುವುದು. ಆದ್ದರಿಂದ ನಾವು ತಿನ್ನುವಂತಹ ಆಹಾರ ಮಲಗುವಂತಹ ಸಮಯ ಎಲ್ಲವು ಕೂಡ ಸಮ ಪ್ರಮಾಣದಲ್ಲಿ ಇರುವುದು ಒಳ್ಳೆಯದು.