ಕೃಷಿ ಜಮೀನಿನಲ್ಲಿ ಫಾರ್ಮ್ ಹೌಸ್ ಅಥವಾ ಮನೆ ಕಟ್ಟುವವರಿಗೆ ರಾಜ್ಯ ಸರ್ಕಾರದಿಂದ ಹೊಸ ರೂಲ್ಸ್ ಜಾರಿ. ಕೃಷಿ ಭೂಮಿಯಲ್ಲಿ ಮನೆ ಅಥವಾ ಫಾರ್ಮ್ ಹೌಸ್ ಕಟ್ಟುವವರಿಗೆ ರಾಜ್ಯ ಸರ್ಕಾರವು ಬಂಪರ್ ಗುಡ್ ನ್ಯೂಸ್ ನೀಡಿದ್ದು ಅದರ ಜೊತೆ ರಾಜ್ಯ ಸರ್ಕಾರದಿಂದ ಹೊಸ ರೂಲ್ಸ್ ಸಹ ಹೊರಡಿಸಲಾಗಿದೆ.
ಕರ್ನಾಟಕ ರಾಜ್ಯ ಹೈಕೋರ್ಟ್ ನಿಂದ ರಾಜ್ಯದ ಎಲ್ಲಾ ಕೃಷಿ ಭೂಮಿ ಹೊಂದಿರುವ ಎಲ್ಲಾ ಕೃಷಿ ಭೂಮಿ ಮಾಲೀಕರಿಗೆ ಜಮೀನುಗಳಲ್ಲಿ ಮನೆ ಅಥವಾ ಕಟ್ಟಡ ಹೀಗೆ ಯಾವುದನ್ನೇ ನಿರ್ಮಾಣ ಮಾಡಿದವರಿಗೆ ಅಥವಾ ಯಾವುದೇ ಹೊಸ ಮನೆ ಅಥವಾ ಕಟ್ಟಡ ನಿರ್ಮಿಸಲು ಬಯಸುವವರಿಗೆ ಕರ್ನಾಟಕ ರಾಜ್ಯ ಹೈಕೋರ್ಟ್ ನಿಂದ ರಾಜ್ಯದ ಎಲ್ಲ ಜಮೀನು ಮಾಲೀಕರಿಗೆ ಫಾರ್ಮ್ ಹೌಸ್ ಕಟ್ಟಿಕೊಳ್ಳಲು ಹೊಸ ರೂಲ್ಸ್ ಜಾರಿಗೊಳಿಸಿದೆ ಅಥವಾ ಮನೆ ಕಟ್ಟಿಕೊಳ್ಳಲು ಹೊಸ ರೂಲ್ಸ್ ಜಾರಿಗೊಳಿಸಿದೆ.
ಜೊತೆಗೆ ಸರ್ಕಾರವು ಜಮೀನಿನಲ್ಲಿ ಮನೆ ಕಟ್ಟಿಕೊಳ್ಳುವವರಿಗೆ ಭಾರಿ ದೊಡ್ಡ ಬಂಪರ್ ಗುಡ್ ನ್ಯೂಸ್ ನೀಡಿದೆ. ಈಗಾಗಲೇ ಇರುವಂತಹ ಜಮೀನನ್ನು ಪರಿವರ್ತಿಸಿ ಆ ಜಮೀನಿನಲ್ಲಿ ಕಟ್ಟಡ ನಿರ್ಮಾಣ ಮಾಡುವ ವಿಷಯದ ಬಗ್ಗೆ ಸರ್ಕಾರ ಕೆಲವು ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ.
ಇತ್ತೀಚಿನ ದಿನದಲ್ಲಿ ಜಮೀನು ಖರೀದಿ ಅಥವಾ ಇರುವ ಜಮೀನನ್ನು ಪರಿವರ್ತಿಸಿ ಆ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡುವ ವಿಷಯದ ಬಗ್ಗೆ ಸರ್ಕಾರ ಕೆಲವು ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ. ಭೂಕಬಳಿಕೆ ಹಾಗೂ ಭೂ ಪರಿವರ್ತನೆ ಬಗ್ಗೆ ರಾಜ್ಯ ಪ್ರಾಧಿಕಾರದಲ್ಲಿ ಹೆಚ್ಚು ಚರ್ಚೆ ನಡೆಯುತ್ತಿದ್ದು. ಹೈಕೋರ್ಟ್ ಒಂದು ಹೊಸ ಕೇಸ್ ವಿಚಾರವಾಗಿ ಮಹತ್ವದ ತೀರ್ಪನ್ನು ನೀಡಿದೆ.
ಹಾಗಾಗಿ ಈ ಹೈಕೋರ್ಟ್ ನ ತೀರ್ಪು ನಿಮಗೂ ಕೂಡ ಅನ್ವಯವಾಗಬಹುದು. ಹಾಗಾಗಿ ನೀವು ಜಮೀನನ್ನು ಹೊಂದಿದ್ದು ಅದರಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ನೀವು ಮಾಡಲು ಹೊರಟಿದ್ದರೆ ತಪ್ಪದೆ ಈಗ ನಾವು ಹೇಳುವ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳಿ.
ಮಾಸ್ಟರ್ ಪ್ಲಾನ್ ವ್ಯಾಪ್ತಿಗೆ ಒಳಪಡು ವಂತಹ ಭೂಮಿಯನ್ನು ಪರಿವರ್ತಿಸುವ ವಿಚಾರವಾಗಿ ಹೈಕೋರ್ಟ್ ಗೆ ಹೋಗಿರುವಂತಹ ಕೇಸ್ ಒಂದಕ್ಕೆ ಈಗ ತೀರ್ಪನ್ನು ನೀಡಲಾಗಿದೆ. ಗೃಹ ನಿರ್ಮಾಣ ಸಹಕಾರ ಸಂಘ ಮಂಡ್ಯ ಅಭಿವೃದ್ಧಿ ಯೋಜನೆ ಅಧಿಕಾರದ ವಿರುದ್ಧ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಕೇಸ್ ನಾ ಹಿನ್ನೆಲೆ ನೋಡುವುದಾದರೆ ಲೇಔಟ್ ಪ್ಲಾನಿಂಗ್ ಬಗ್ಗೆ ಅಪ್ರುವಲ್ ಸಿಗದೇ ಇದ್ದ ಕಾರಣ
ಕರ್ನಾಟಕ ರಾಜ್ಯ ಮಂಡ್ಯ ಗೃಹ ನಿರ್ಮಾಣ ಸಹಕಾರ ಸಂಘ ಮಂಡ್ಯ ಅಭಿವೃದ್ಧಿ ಯೋಜನೆ ಅಧಿಕಾರದ ವಿರುದ್ಧ ಹೈ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಇದೀಗ ಹೈಕೋರ್ಟ್ ಯೋಜನಾ ಪ್ರಾಧಿಕಾರವನ್ನು ಪ್ರಶ್ನಿಸಿದ್ದು ಕೃಷಿಯೇತರ ಭೂಮಿಯನ್ನಾಗಿ ಕೃಷಿ ಭೂಮಿಯನ್ನು ಪರಿವರ್ತನೆ ಮಾಡುವುದಿದ್ದರೆ ಭೂಕಂದಾಯ ಕಾಯಿದೆ 1965 ಸೆಕ್ಷನ್ 95ರ ಅಡಿಯಲ್ಲಿ ಜಿಲ್ಲಾಧಿಕಾರಿಗಳ ಅನುಮತಿ ಪಡೆದುಕೊಳ್ಳಬೇಕು.
ಜೊತೆಗೆ ಸೆಕ್ಷನ್ 14A ಅಡಿಯಲ್ಲಿ KTCP ಖಾಯ್ದೆಯ ನಿಯಮಗಳನ್ನು ಕೂಡ ಪಾಲಿಸಬೇಕು ಎಂದು ತೀರ್ಮಾನ ನೀಡಿದೆ. ಸಾಮಾನ್ಯವಾಗಿ ಕೃಷಿ ಭೂಮಿಯನ್ನು ಲೇಔಟ್ ಅಥವಾ ಮನೆಯನ್ನು ನಿರ್ಮಾಣ ಮಾಡುವುದಕ್ಕೆ ಒಪ್ಪಿಗೆ ನೀಡಲಾಗುವುದಿಲ್ಲ ಒಂದು ವೇಳೆ ಹಾಗೇನಾದರೂ ನಿರ್ಮಾಣ ಮಾಡಬೇಕು ಎಂದರೆ ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯಾಗಿ ಪರಿವರ್ತನೆ ಮಾಡಿಕೊಳ್ಳಬೇಕು. ಇದಕ್ಕಾಗಿ ಜಿಲ್ಲಾಧಿಕಾರಿ ಗಳ ಬಳಿ ಅನುಮತಿ ಪಡೆದು ನಂತರ ಸೆಕ್ಷನ್ 14ರ ಅಡಿಯಲ್ಲಿ ಭೂಕಬಳಿಕೆ ಬಗ್ಗೆ ಪ್ರಾಧಿಕಾರದ ಅನುಮತಿ ಪಡೆದುಕೊಳ್ಳುವುದು ಕಡ್ಡಾಯ.