ತಿಂಗಳಾಯ್ತು ಅಂದ್ರೆ ಕೆಲವೊಂದು ರೂಲ್ಸ್‌ಗಳಲ್ಲಿ ಬದಲಾವಣೆಯಾಗುತ್ತಲೇ ಇರುತ್ತವೆ. ಅವುಗಳಲ್ಲಿ ಸಂಚಾರ ನಿಯಮಗಳು ಕೂಡ ಒಂದು. ಇದು ಜನಸಾಮಾನ್ಯರ ದಿನನಿತ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಕೇಂದ್ರ ಸರ್ಕಾರವು ಹಲವಾರು ಮೋಟಾರ್ ಕಾಯಿದೆ ನೀತಿಗಳನ್ನು ಜಾರಿಗೆ ತಂದಿದೆ. ಟ್ರಾಫಿಕ್ ರೂಲ್ಸ್ ಫಾಲೋ ಮಾಡ್ಲಿಲ್ಲ ಅಂದ್ರೆ ಫೈನ್ ಹಾಕೋದು ಪಕ್ಕಾ ಅಂತಾ ಎಲ್ರಿಗೂ ತಿಳಿದಿರೋ ವಿಷಯ. ಆದ್ರೆ, ನಾವಿಂದು ಹೇಳೋ ವಿಷಯದ ಬಗ್ಗೆ ನೀವು ತಿಳಿದರೆ ನೀವೂ ಶಾ.ಕ್ ಆಗ್ತೀರಾ.
ಹೌದು, ಎಲ್ಲಾ ವಾಹನ ಸವಾರರಿಗೆ ಇದು ಗುಡ್ ನ್ಯೂಸ್ ಆಗಿದೆ. ಟ್ರಾಫಿಕ್ ನಿಯಮದಲ್ಲಿ ಹೊಸ ಬದಲಾವಣೆಯಾಗಿದೆ. ಇದು ವಾಹನ ಸಂಚಾರ ನಿಯಮದಲ್ಲಿ ದೊಡ್ಡ ಬದಲಾವಣೆಯದ್ದಾಗಿದೆ. ಇನ್ನು ಮುಂದೆ ಯಾರೂ ಕೂಡ ದಂಡ ಪಾವತಿಸುವಂತಿಲ್ಲ. ಕರ್ನಾಟಕ ರಾಜ್ಯದಾದ್ಯಂತ ಹೊಸ ಟ್ರಾಫಿಕ್ ರೂಲ್ಸ್ ಜಾರಿಗೆಯಾಗಿದೆ. ಹಾಗಾದ್ರೆ, ಬದಲಾಗಿರುವ ಟ್ರಾಫಿಕ್ ರೂಲ್ಸ್ ಏನು.? ಯಾಕೆ ದಂಡ ಪಾವತಿಸುವಂತಿಲ್ಲ.? ಯಾರಿಗೆಲ್ಲಾ ಈ ಹೊಸ ನಿಯಮ? ಎನ್ನುವುದರ ಕುರಿತು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಸಂಪೂರ್ಣವಾಗಿ ನೋಡೋಣ ಬನ್ನಿ…
ಇನ್ನು ಮುಂದೆ ಟ್ರಾಫಿಕ್ ನಿಯಮದಲ್ಲಿ ಬದಲಾವಣೆಯಾಗಲಿದೆ. ಡಿಎಲ್ ಇಲ್ಲದೇ ಎಲ್ಲಿಗೆ ಬೇಕಾದರೂ ಕಾರು, ಬೈಕು ಹಾಗೂ ಸ್ಕೂಟರ್ ಅನ್ನು ಚಲಾಯಿಸಬಹುದು. ಒಬ್ಬ ವ್ಯಕ್ತಿ ವಾಹನವನ್ನ ಓಡಿಸಲು ಚಾಲನಾ ಪರವಾನಗಿಯನ್ನ ಹೊಂದಿರಬೇಕು. ಆದರೆ, ಒಬ್ಬ ವ್ಯಕ್ತಿಯು ಚಾಲನಾ ಪರವಾನಗಿಯನ್ನು ಹೊಂದಿದ್ದರೂ ಕೂಡ ವಾಹನವನ್ನ ಚಾಲನೆ ಮಾಡುವಾಗ ಅದನ್ನ ತನ್ನೊಂದಿಗೆ ಇಟ್ಟುಕೊಳ್ಳದೆ ಮರೆತರೆ, ಇಂತಹ ಸ್ಥಿತಿಯಲ್ಲಿ ಪೊಲೀಸರು ಚಲನ್ ಕಡಿತಗೊಳಿಸಬಹುದು. ಆದರೆ, ಅದನ್ನ ತಪ್ಪಿಸಲು ತಂತ್ರವಿದೆ.
ಇದರಿಂದ ಇನ್ಮುಂದೆ ನೀವು ನಿಮ್ಮ ಡ್ರೈವಿಂಗ್ ಲೈಸೆನ್ಸ್ ಸಾಫ್ಟ್ ಕಾಪಿಯನ್ನು ಈ ಡಿಜಿಟಲ್ ಲಾಕರ್‌ನಲ್ಲಿ ಇಟ್ಟುಕೊಂಡರೆ ನಿಮ್ಮನ್ನು ಪೊಲೀಸರು ತಪಾಸಣೆ ಮಾಡುವ ವೇಳೆ ಅದನ್ನೇ ತೋರಿಸಿ ನೀವು ಮುಂದೆ ಸಾಗಬಹುದು. ನೀವು ನಿಮ್ಮ ಡ್ರೈವಿಂಗ್ ಲೈಸೆನ್ಸ್ ಅನ್ನು ಮನೆಯಲ್ಲೇ ಇಟ್ಟು ಬಂದಿದ್ದರು ಕೂಡ ಯಾವುದೇ ರೀತಿಯ ತೊಂದರೆ ಆಗೋದಿಲ್ಲ.
ನೀವೇನಾದರೂ ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಂಡಿದ್ದರೆ, ನೀವು ಅದನ್ನ ಮನೆಯಲ್ಲಿಯೇ ಇಟ್ಟುಕೊಂಡು ಚಾಲನೆ ಮಾಡಬಹುದು. ಹೌದು, ಆದರೆ ಇದಕ್ಕಾಗಿ ನೀವು ಈ ಒಂದು ಕೆಲಸವನ್ನು ಮಾಡಬೇಕು. ವಾಸ್ತವವಾಗಿ ಡಿಜಿಟಲ್ ಇಂಡಿಯಾವನ್ನ ಉತ್ತೇಜಿಸಲು ಸರ್ಕಾರವು ಬಹಳ ಹಿಂದೆಯೇ ಡಿಜಿಟಲ್ ಲಾಕರ್ ಹೆಸರಿನ ಮೊಬೈಲ್ ಅಪ್ಲಿಕೇಶನ್ ಪ್ರಾರಂಭಿಸಿದೆ.
ಈ ಮೊಬೈಲ್ ಅಪ್ಲಿಕೇಶನ್ ನಲ್ಲಿ ಭಾರತದ ಯಾವುದೇ ನಾಗರಿಕರು ತಮ್ಮ ಪ್ರಮುಖ ದಾಖಲಾತಿಗಳನ್ನ ಸಾಫ್ಟ್ ಕಾಪಿ ರೂಪದಲ್ಲಿ ಇರಿಸಬಹುದು. ಈ ಅಪ್ಲಿಕೇಶನ್ ನಲ್ಲಿರುವಂತಹ ನಿಮ್ಮ ಡಾಕ್ಯುಮೆಂಟ್ ನ ಸಾಫ್ಟ್ ಕಾಪಿಯು ಎಲ್ಲೆಡೆ ಮಾನ್ಯವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಡ್ರೈವಿಂಗ್ ಲೈಸೆನ್ಸ್ ನ್ನು ನಿಮ್ಮ ಬಳಿ ಇಟ್ಟುಕೊಳ್ಳಲು ನೀವು ಬಯಸದೆ ಇದ್ದರೆ, ನೀವು ಅದರ ಸಾಫ್ಟ್ ಕಾಪಿಯನ್ನ ಡಿಜಿಟಲ್ ಲಾಕರ್ ನಲ್ಲಿ ಇರಿಸಿಕೊಳ್ಳಬಹುದು.
ಅದಾದ ನಂತರ ನೀವು ಕಾರು, ಬೈಕು, ಸ್ಕೂಟರ್ ಇತ್ಯಾದಿಗಳನ್ನ ಆರಾಮವಾಗಿ ಓಡಿಸಬಹುದು. ಈ ಆಪ್‌ನಲ್ಲಿ ಒಬ್ಬ ನಾಗರಿಕನು ತನಗೆ ಅತ್ಯಗತವಾಗಿ ಬೇಕಾಗಿರುವ ಎಲ್ಲಾ ದಾಖಲೆಗಳ ಸಾಫ್ಟ್ ಕಾಪಿಯನ್ನು ನಿಮ್ಮ ಬಳಿ ಸಂಗ್ರಹಿಸಿ ಇಟ್ಟುಕೊಳ್ಳಬಹುದು. ಇದರ ಅವಶ್ಯಕತೆ ಬಂದಾಗ ಅದನ್ನು ಡಿಜಿಟಲ್ ಲಾಕರ್ ಆಪ್‌ನಲ್ಲಿಯೇ ತೋರಿಸಬಹುದು. ಈ ರೀತಿ ಡಿಜಿಟಲ್ ಲಾಕರ್‌ನಲ್ಲಿ ಹೊಂದಿರುವ ಸಾಫ್ಟ್ ಕಾಪಿಗಳು ಎಲ್ಲಾ ಕಡೆ ಮಾನ್ಯವಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಜುಲೈ 1 ರಿಂದಲೇ ಈ ನಿಯಮ ಜಾರಿಗೆ ಬರುವ ಸಾಧ್ಯತೆ ಇದ್ದು, ಸರ್ಕಾರದಿಂದಲೇ ಅಧಿಕೃತವಾಗಿ ಘೋಷಣೆಯಾಗಲಿದೆ.