ಬಣ್ಣದ ಪ್ರಪಂಚಕ್ಕೆ ಕಾಲಿಡುವ ನಟಿಮಣಿಯರು ಅನುಭವಿಸುವ ಕಷ್ಟಗಳು ಒಂದೆರಡಲ್ಲ, ಸಾಮಾನ್ಯವಾಗಿ ಬಹುತೇಕ ಹೆಣ್ಣು ಮಕ್ಕಳಿಗೆ ತೆರೆಮೇಲೆ ಸುಂದರವಾಗಿ ಕಾಣಿಸಿಕೊಳ್ಳಬೇಕು ಮತ್ತು ಎಲ್ಲರೂ ಮೆಚ್ಚುವ ರೀತಿ ಅಭಿನಯ ಮಾಡಿ ಫೇಮಸ್ ಹಾಕಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಅದರಲ್ಲೂ ಈ ಕಾಲದಲ್ಲಿ ಬೆಳೆಯುವ ಹೆಣ್ಣುಮಕ್ಕಳಿಗೆ ಬಹುತೇಕರಿಗೆ ಈ ಬಣ್ಣದ ಗೀಳು ಅಂಟಿಕೊಂಡಿರುತ್ತದೆ. ಆದರೆ ಇಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದು ಹೇಳುವಷ್ಟು ಸುಲಭವಲ್ಲ. ಹಾಗೂ ಅದೃಷ್ಟದಲ್ಲಿ ಮೊದಲ ಎರಡು ಬಾರಿ ಗೆದ್ದರೂ ಕೊನೆವರೆಗೂ ತಾವು ಅದೇ ಫೇಮ್ ಉಳಿಸಿಕೊಳ್ಳಬೇಕು ಎಂದರೆ ಅಷ್ಟೇ ಹರಸಾಹಸ ಪಡಬೇಕು. ಆದರೂ ಕೂಡ ಈಗಿನ ಕಾಲದ ಯುವತಿಯರಿಗೆ ಸಿನಿಮಾರಂಗದ ಬಗ್ಗೆ ಆಕರ್ಷಣೆ ಕಡಿಮೆಯಾಗಿಲ್ಲ. ಎಷ್ಟೋ ಜನರು ಇದಕ್ಕಾಗಿಯೇ ಆಕ್ಟಿಂಗ್ ಕ್ಲಾಸ್, ಡ್ಯಾನ್ಸು, ಜಿಮ್ಮು ಹೀಗೆ ಹಲವಾರು ಕಸರತ್ತುಗಳನ್ನು ನಡೆಸಿ ವರ್ಷಗಳಿಂದಲೇ ನಟನೆಗೆ ಇಳಿಯಲು ತಯಾರಿ ಶುರು ಮಾಡಿರುತ್ತಾರೆ. ಯಾಕೆಂದರೆ ಹಿಂದಿನ ಕಾಲದಿಂದ ಇಲ್ಲಿಯವರೆಗೂ ಸಿನಿಮಾಗಳಲ್ಲಿ ನಟಿಸುವವರು ಎಂದರೆ ಜನರಿಗೆ ಅವರ ಮೇಲೆ ಒಂದು ರೀತಿಯಲ್ಲಿ ನಿರೀಕ್ಷೆ ಇದ್ದೇ ಇರುತ್ತದೆ. ತೆರೆಮೇಲೆ ನಾಯಕಿಯಾಗಿ ಮಿಂಚಬೇಕು ಎಂದರೆ ತೆಳ್ಳಗೆ, ಬೆಳ್ಳಗೆ ನೋಡಲು ಆಕರ್ಷಕ ಮೈ ಮಾಟ ಹೊಂದಿರಬೇಕು. ಸಾಮಾನ್ಯವಾಗಿ ಅವಕಾಶ ಅರಸಿ ಬರುವ ಎಲ್ಲಾ ಹೊಸ ಪ್ರತಿಭೆಗಳಲ್ಲೂ ಅವಕಾಶಗಳನ್ನು ನೀಡುವವರು ಗಮನಿಸುವುದು ಇದನ್ನೇ ಎಂದರೆ ತಪ್ಪಾಗುವುದಿಲ್ಲ ಹಾಗಾಗಿ ಹೀರೋಯಿನ್ ಆಗಲು ಕನಸು ಹೊಂದಿರುವವರು ಅದಕ್ಕೆ ತಕ್ಕ ಹಾಗೆ ಬಾಡಿ ಮೇಂಟೇನ್ ಮಾಡುತ್ತಿರುತ್ತಾರೆ.

ಆದರೆ ಕೆಲವೊಮ್ಮೆ ಕೆಲವು ನಟಿಮಣಿಯರು ಮಾತ್ರ ಮೊದಲೆಲ್ಲಾ ಈ ರೀತಿಯ ಎಲ್ಲವನ್ನು ಕಟ್ಟುನಿಟ್ಟಾಗಿ ಫಾಲೋ ಮಾಡಿದರೂ ನಂತರದ ದಿನಗಳಲ್ಲಿ ಅವರ ದೇಹವು ಮೊದಲಿದ್ದ ರೂಪವನ್ನು ಕಳೆದುಕೊಂಡು ಬಿಡುತ್ತದೆ. ಇದಕ್ಕೆ ಕಾರಣ ಹಲವಾರು ಇರಬಹುದು ಆದರೆ ಈ ರೀತಿ ಆದಾಗ ಇದೇ ಮುಖ್ಯ ಕಾರಣವಾಗಿ ಅನೇಕ ನಟಿಮಣಿಯರು ಅವಕಾಶಗಳನ್ನು ಕಳೆದುಕೊಂಡು ಕ್ರಮೇಣ ಚಿತ್ರರಂಗದಿಂದ ಕಣ್ಮರೆಯಾಗಿ ಬಿಡುತ್ತಾರೆ. ಇದರ ಜೊತೆಯಲ್ಲಿ ಚಿತ್ರರಂಗದಲ್ಲಿ ಈಗಾಗಲೇ ಇರುವ ನೆಪೊಟಿಸಂ, ಮೀಟೂ, ಕಾಸ್ಟಿಂಗ್ ಕೌಚ್ ಇನ್ನಿತರ ಆರೋಪಗಳ ಜೊತೆಯಲ್ಲಿ ಅತಿ ಹೆಚ್ಚಾಗಿ ಕೇಳಿಬರುವುದು ಈ ಬಾಡಿ ಶೇಮಿಂಗ್ ಕೂಡ. ಅದರಲ್ಲೂ ಇದಕ್ಕೆ ಹೆಚ್ಚಾಗಿ ಒಳಗಾಗುವುದು ನಟಿಮಣಿಯರೇ ಎನ್ನುವುದು ಗಮನಿಸಲೇ ಬೇಕಾದ ಅಂಶವಾಗಿದೆ. ಸಾಮಾನ್ಯವಾಗಿ ತೆರೆಮೇಲೆ ಹೀರೋ ಆಗಿ ಮಿಂಚುವವರು ಸಿನಿಮಾ ಕಥೆಗೆ ತಕ್ಕ ಹಾಗೆ ತಮ್ಮ ಬಾಡಿ ಲಾಂಗ್ವೇಜ್ ಅನ್ನು ಬದಲಾಯಿಸಿಕೊಳ್ಳುತ್ತಾರೆ. ಇದು ಡೈರೆಕ್ಟರ್ ಗಳ ನಿರೀಕ್ಷೆಯಂತೆ ಹಾಗೂ ಅವರು ಮಾಡುವ ಸಿನಿಮಾ ಕಥೆಗೆ ಅನಿವಾರ್ಯವಾಗಿರುತ್ತದೆ ಆದರೆ ಈ ರೀತಿಯ ಬದಲಾವಣೆ ಸಿನಿಮಾಗಳಲ್ಲಿ ನಾಯಕಿ ಆಗುವವರಿಗೆ ಇರುವುದಿಲ್ಲ ಎಲ್ಲಾ ಸಿನಿಮಾಗಳಲ್ಲೂ ನಾಯಕಿಯರು ಸ್ಲಿಮ್ ಆಗಿಯೇ ಇರುತ್ತಾರೆ.

ಹೆಚ್ಚೆಂದರೆ ಅವರ ಲುಕ್ ಬದಲಾಗಬಹುದು ಅಷ್ಟೇ ಹಳ್ಳಿ ಪಾತ್ರಗಳಲ್ಲಿ ನಟಿಸುವವರೇ ಆಗಲಿ ಗ್ಲಾಮರ್ ಪಾತ್ರದಲ್ಲಿ ನಟಿಸುವವರೇ ಆಗಲಿ ಈ ರೀತಿ ಸ್ಲಿಮ್ ಆಗಿರುವುದು ಬಹಳ ಮುಖ್ಯ ನಮ್ಮ ನಟಿಮಣಿಯರು ಕೆಲವು ಸಿನಿಮಾಗಳು ಆದ ಬಳಿಕ ಅವರೇನಾದರೂ ದಪ್ಪವಾಗಿ ಹೋದರೆ ಸಿನಿಮಾರಂಗದಲ್ಲಿ ಅವಕಾಶಗಳ ಕೊರತೆಯಿಂದ ಬೀಳುವ ಹೊಡೆತದ ಜೊತೆಗೆ ಸಿನಿಮಾ ರಂಗದವರಿಂದ ಮತ್ತು ಜನಸಾಮಾನ್ಯರಿಂದ ಬಾಡಿಶೇಮಿಂಗೆ ಒಳಗಾಗುತ್ತಾರೆ. ಇತ್ತೀಚೆಗಂತೂ ಸೋಶಿಯಲ್ ಮೀಡಿಯಾ ಗಳ ಬಳಕೆ ಹೆಚ್ಚಾದ ಮೇಲೆ ಜನರು ಮಾಡುವ ಕಮೆಂಟ್ ಗಳಿಗೆ ಕಡಿವಾಣವೇ ಇಲ್ಲದಂತಾಗಿದೆ. ಹೀರೋಯಿನ್ ಗಳ ಯಾವುದಾದರೂ ಹೊಸ ಲುಕ್ ಅಥವಾ ಹೊಸ ಫೋಟೋ ಅಪ್ಡೇಟ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್ ಸೆಕ್ಷನ್ ನಲ್ಲಿ ಹಿಂದೂ ಮುಂದೂ ಏನು ಯೋಚಿಸದೆ ತಮ್ಮ ಮನಸ್ಸಿಗೆ ಬಂದ ಹಾಗೆ ಕಮೆಂಟ್ ಮಾಡಿರುತ್ತಾರೆ. ಇದಕ್ಕೆ ಹೆದರುವ ಹಲವಾರು ನಟಿಯರು ಈ ಸಮಸ್ಯೆಯನ್ನು ಸರಿಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಹೆಚ್ಚಾಗಿರುವ ದೇಹ ತೂಕವೇ ಆಗಲಿ, ಅಥವಾ ಇನ್ನಾವುದೇ ಸೌಂದರ್ಯಕ್ಕೆ ಸಂಬಂಧಪಟ್ಟ ಸಮಸ್ಯೆ ಆಗಲಿ ಅದನ್ನು ನೈಸರ್ಗಿಕವಾಗಿ ಸಮಯ ತೆಗೆದುಕೊಂಡು ಸರಿ ಮಾಡಿಕೊಂಡರೆ ಒಳ್ಳೆಯದು.

ಆದರೆ ಕೆಲವೊಂದು ನಟಿಮಣಿಯರು ಆತುರಕ್ಕೆ ಬಿದ್ದು ಅತಿ ಬೇಗ ಇದರಿಂದ ಪರಿಹಾರ ಕಂಡುಕೊಳ್ಳಲು ಸರ್ಜರಿ ಅಂತಹ ಶಾರ್ಟ್ಕಟ್ ಹುಡುಕುತ್ತಾರೆ. ಹಾಗೂ ಇದರಿಂದ ಅಡ್ಡಪರಿಣಾಮಗಳನ್ನು ಎದುರಿಸಿ ಇನ್ನಷ್ಟು ಸಮಸ್ಯೆಗೆ ಸಿಲುಕುತ್ತಾರೆ. ಇತ್ತೀಚೆಗೆ ಇಂತಹ ಟೀಕೆಗಳಿಗೆ ಹೆದರಿ ಕಿರುತೆರೆ ನಟಿ ಚೇತನ ರಾಜ್ ಅವರು ಸರ್ಜರಿ ಮಾಡಿಸಿಕೊಳ್ಳಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ತಾಜಾ ಉದಾಹರಣೆ ನಮ್ಮ ಕಣ್ಣೆದುರಿಗೇ ಇದೆ. ಆದರೆ ಇವರೇ ಮೊದಲೇನಲ್ಲ ಈ ಹಿಂದೆ ಆರತಿ ಅಗರವಾಲ್ ಎನ್ನುವ ಬಹು ಪ್ರಖ್ಯಾತ ತೆಲುಗು ನಟಿ ಕೂಡ ಇದೇ ರೀತಿ ಸರ್ಜರಿ ಮಾಡಿಸಿಕೊಳ್ಳಲು ಹೋಗಿ ಪ್ರಾಣವನ್ನು ಕಳೆದುಕೊಂಡಿದ್ದರು. ಈಗ ಕನ್ನಡವೂ ಸೇರಿದಂತೆ ಪಂಚ ಭಾಷೆಗಳಲ್ಲಿ ನಟಿಸಿ ಫೇಮಸ್ ಆಗಿರುವ ನಟಿ ನಿತ್ಯ ಮೆನನ್ ಕೂಡ ಈ ರೀತಿ ಟೀಕೆಗೆ ಒಳಗಾಗಿದ್ದಾರೆ ಅದು ಕೂಡ ಸಾಮಾಜಿಕ ಜಾಲತಾಣದಲ್ಲಿ. ಇವರ ದೇಹದ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿರುವವರಿಗೆ ಹೆದರದೆ ನಟಿ ಖಡಕ್ ಆಗಿ ಉತ್ತರ ಕೂಡ ಕೊಟ್ಟಿದ್ದಾರೆ. ಇವರ ದೇಹದ ತೂಕ ಹೆಚ್ಚಾಗಿರುವ ಬಗ್ಗೆ ಮತ್ತು ಇವರ ಅಂಗಗಳ ಬಗ್ಗೆ ಕಮೆಂಟ್ ಹಾಕಿದ್ದವರಿಗೆ ನಟಿಯು ನಾನು ಮನೆಯಲ್ಲೇ ಇದ್ದು ತಿಂದು ದಪ್ಪ ವಾಗಿಲ್ಲ ಈ ರೀತಿ ಆಗುವುದರ ಹಿಂದೆ ಹಲವಾರು ಕಾರಣಗಳಿವೆ ಎಂದು ತಿರಗಿಸಿ ಉತ್ತರಕೊಟ್ಟು ಪ್ರಶ್ನೆ ಕೇಳಿದವರು ನಾಚಿಕೆಪಡುವ ಹಾಗೆ ಮಾಡಿದ್ದಾರೆ. ಮತ್ತು ನಟಿ ನಿತ್ಯ ಮೆನನ್ ಅವರ ಈ ನಡವಳಿಕೆ ಬಗ್ಗೆ ಹಲವಾರು ಜನರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಈ ಮಾಹಿತಿ ಇಷ್ಟ ಆದರೆ ಶೇರ್ & ಲೈಕ್ ಮಾಡಿ.