ಬಿಗ್ ಬಾಸ್ ಸೀಸನ್ 5ರ ಸ್ಪರ್ಧಿ ಆದಂತಹ ಚಂದನ್ ಶೆಟ್ಟಿ ಅವರು ಬಿಗ್ ಬಾಸ್ ಮನೆಯ ಕಂಟೆಸ್ಟೆಂಟ್ ಆಗಿದ್ದಂತಹ ನಿವೇದಿತಾ ಗೌಡ ಅವರನ್ನು ಪ್ರೀತಿಸಿ ಮದುವೆಯಾಗಿರುವ ವಿಚಾರ ನಿಮಗೆ ತಿಳಿದೆ ಇದೆ. ಕಳೆದ ಮೂರು ವರ್ಷದ ಹಿಂದೆ ಮೈಸೂರಿನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಇಬ್ಬರು ಕೂಡ ಅದ್ದೂರಿಯಾಗಿ ಮದುವೆಯಾಗಿದ್ದರು. ಇವರನ್ನು ಸೋಶಿಯಲ್ ಮೀಡಿಯಾದ ಸೆಲೆಬ್ರಿಟಿ ದಂಪತಿಗಳು ಅಂತಾನೆ ಕರೆಯಬಹುದು.
ಚಂದನ್ ಶೆಟ್ಟಿ ಅವರು ಮ್ಯೂಸಿಕ್ ನಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ ಅತ್ತ ಕಡೆ ನಿವೇದಿತಾ ಗೌಡ ಅವರು ಕೂಡ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡರು. ತದನಂತರ ರಾಜ ರಾಣಿ ಎಂಬ ರಿಯಾಲಿಟಿ ಶೋನಲ್ಲಿಯೂ ಕೂಡ ಕಾಣಿಸಿಕೊಂಡರು ಒಟ್ಟಾರೆಯಾಗಿ ಹೇಳುವುದಾದರೆ ಗಂಡ ಹೆಂಡತಿ ಇಬ್ಬರೂ ಕೂಡ ಮನರಂಜನೆ ವಿಚಾರದಲ್ಲಿ ಎತ್ತಿದ ಕೈ ಜನರಿಗೆ ಮನರಂಜನೆ ನೀಡುವುದಕ್ಕಾಗಿ ಸದಾ ಕಾಲ ಸಿದ್ದರಾಗಿರುತ್ತಾರೆ.
ಇನ್ನು ವಯಕ್ತಿಕ ವಿಚಾರಕ್ಕೆ ಬರುವುದಾದರೆ ಚಂದನ್ ಹಾಗೂ ನಿವೇದಿತಾ ಗೌಡ ಮದುವೆಯಾಗಿ ಮೂರು ವರ್ಷವಾಗಿದ್ದರು ಕೂಡ ಇನ್ನೂ ಕೂಡ ಗುಡ್ ನ್ಯೂಸ್ ಕೊಟ್ಟಿರಲಿಲ್ಲ. ಸಾಕಷ್ಟು ಅಭಿಮಾನಿಗಳು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರಿಗೆ ಮಗುವಿನ ಬಗ್ಗೆಯೇ ಹೆಚ್ಚಿನ ಪ್ರಶ್ನೆಗಳನ್ನು ನೀಡುತ್ತಿದ್ದರು. ಆದರೆ ನಿವೇದಿತಾ ಗೌಡ ಒಮ್ಮೆ ಸಂದರ್ಶನದಲ್ಲಿ ಎಲ್ಲರೂ ಕೂಡ ಮಗುವಿನ ವಿಚಾರವನ್ನು ಮಾತನಾಡುತ್ತಾರೆ.
ಇದು ನಮ್ಮ ವೈಯಕ್ತಿಕ ವಿಚಾರಕ್ಕೆ ಬಿಟ್ಟದ್ದು ಈಗಲೇ ನಾವು ಮಕ್ಕಳು ಮಾಡಿಕೊಳ್ಳುವುದಿಲ್ಲ ಚಂದನ್ ಶೆಟ್ಟಿಗೆ ಸಾಧಿಸಬೇಕಾದಂತಹ ಸಾಕಷ್ಟು ವಿಚಾರಗಳಿದೆ. ಹಾಗೂ ನಾನು ಕೂಡ ನನ್ನ ಲೈಫ್ ನಲ್ಲಿ ಸೆಟಲ್ ಆಗಬೇಕು ನಾವಿಬ್ಬರು ಲೈಫ್ನಲ್ಲಿ ಒಂದೊಳ್ಳೆ ಗೋಲ್ ತಲುಪಿದ ನಂತರವಷ್ಟೇ ಪ್ಲಾನ್ ಮಾಡುತ್ತೇವೆ ಆಗ ನಮ್ಮ ಮಗು ಬರುತ್ತದೆ ಎಂದು ಹೇಳಿದ್ದರು.
ಅದರಂತೆ ಚಂದನ್ ಶೆಟ್ಟಿ ಅವರು ಕೂಡ ಇದೀಗ ತಮ್ಮದೇ ಆದಂತಹ ಸ್ವಂತ ಸ್ಟುಡಿಯೋ ಒಂದನ್ನು ನಿರ್ಮಾಣ ಮಾಡಿದ್ದಾರೆ ಜೊತೆಗೆ ಸೂತ್ರದಾರ ಎಂಬ ಸಿನಿಮಾಗೆ ನಾಯಕ ನಟ ಆಗಿಯೂ ಕೂಡ ಆಯ್ಕೆಯಾಗಿದ್ದಾರೆ. ಮತ್ತೊಂದು ಕಡೆ ನಿವೇದಿತಾ ಗೌಡ ಅವರು ಸ್ವಂತ ಯುಟ್ಯೂಬ್ ಚಾನೆಲ್ ಮುಖಾಂತರ ಹೊಸ ಉದ್ಯಮವನ್ನು ಪ್ರಾರಂಭಿಸಿದ್ದಾರೆ. ಇಬ್ಬರೂ ಕೂಡ ತಾವು ಅಂದುಕೊಂಡ ರೀತಿಯಲ್ಲಿ ಲೈಫ್ ನಲ್ಲಿ ಸೆಟಲ್ ಆಗಿದ್ದಾರೆ ಹಾಗಾಗಿ ಇದೀಗ ಮೊದಲನೇ ಮಗುವಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.
ಹೌದು ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಇಬ್ಬರೂ ಕೂಡ ಸೋಶಿಯಲ್ ಮೀಡಿಯಾ ಕಥೆಯಲ್ಲಿ ಲೈವ್ ಬಂದು ಮಗುವಿನ ಬಗ್ಗೆ ಸುಳಿ ಒಂದನ್ನು ಕೊಟ್ಟಿದ್ದಾರೆ. ಚಂದನ್ ಶೆಟ್ಟಿ ತಂದೆಯಾಗುತ್ತಿರುವ ವಿಚಾರ ಅಂದರೆ ಫಾದರ್ ಆಗುತ್ತಿರುವಂತಹ ವಿಚಾರವನ್ನು ವಿಶೇಷವಾಗಿ ಅಭಿಮಾನಿಗಳಿಗೆ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಈ ವಿಡಿಯೋದಲ್ಲಿ ಚಂದನ್ ಶೆಟ್ಟಿ ಫಾದರ್ ಆಗುತ್ತಿರುವಂತಹ ವಿಚಾರವನ್ನು ರಿವೀಲ್ ಮಾಡಿದ್ದಾರೆ.
ಈ ವಿಡಿಯೋ ನೋಡುತ್ತಿದ್ದ ಹಾಗೆ ಅಭಿಮಾನಿಗಳೆಲ್ಲರೂ ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ಸದ್ಯ ಈಗಲಾದರೂ ಫ್ಯೂಚರ್ ಪ್ಲಾನ್ ಮಾಡಿದ್ದೀರಲ್ಲ ಎಂದು ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಈ ವರ್ಷದ ಕೊನೆಯಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರ ಮುದ್ದಾದ ಮಗು ಬರಲಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.