ಜನ ಮೆಚ್ಚಿದ ನಾಯಕಿ ಅವಾರ್ಡ್ ಪಡೆದ ನಿವೇದಿತಾ ಗೌಡ, ಅವಾರ್ಡ್ ಪಡೆದ ನಂತರ ವೇದಿಕೆಯ ಮೇಲೆ ಕಣ್ಣೀರು ಹಾಕಿದ್ದಾರೆ ಯಾಕೆ ಗೊತ್ತಾ.?

ಪ್ರತಿ ವರ್ಷವೂ ಕೂಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅನುಬಂಧ ಅವಾರ್ಡ್ ಅನ್ನು ನೀಡಲಾಗುತ್ತದೆ ಅಂದರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುವಂತಹ ಧಾರವಾಹಿ ಆಗಿರಬಹುದು ಕಿರುತೆರೆ ಆಗಿರಬಹುದು ಅಥವಾ ರಿಯಲಿಟಿ ಶೋ ಆಗಿರಬಹುದು ಇನ್ನಿತರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಹ ನಟ ನಟಿಯರ ಪ್ರತಿಭೆಯನ್ನು ಗುರುತಿಸಿ ಅವರಿಗೆ ಗೌರವಾನ್ವಿತವಾದಂತಹ ಉಡುಗೊರೆ ಹಾಗೂ ಅವಾರ್ಡನ್ನು ನೀಡಲಾಗುತ್ತದೆ. ಪ್ರತಿ ವರ್ಷವೂ ಕೂಡ ಈ ಒಂದು ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತದೆ ಹಾಗೆಯೇ ಈ ಬಾರಿಯೂ ಕೂಡ ಅನುಬಂಧ ಅವಾರ್ಡ್ ಅನ್ನು ಏರ್ಪಡಿಸಲಾಗಿತ್ತು.

ಈ ಬಾರಿಯ ಅನುಬಂಧ ಅವಾರ್ಡ್ಸ್ ನಲ್ಲಿ ಜನ ಮೆಚ್ಚಿದ ಎಂಟರ್ ಟೈನರ್ ನಾಯಕಿ ಅವಾರ್ಡ್ ಅನ್ನು ನಿವೇದಿತಾ ಗೌಡ ಅವರು ಪಡೆದುಕೊಂಡಿದ್ದಾರೆ. ಅನುಬಂಧ ಅವಾರ್ಡ್ ನಲ್ಲಿ ಎರಡು ರೀತಿಯ ಅವಾರ್ಡ್ ಗಳನ್ನು ವಿತರಿಸಲಾಗುತ್ತದೆ ಒಂದು ಜನ ಮೆಚ್ಚಿದ ಅವಾರ್ಡ್ ಮತ್ತೊಂದು ಮನೆ ಮೆಚ್ಚಿದ ಅವಾರ್ಡ್ ಇವೆರಡಕ್ಕೂ ಇರುವ ವ್ಯತ್ಯಾಸ ಏನೆಂದರೆ. ಮನೆ ಮೆಚ್ಚಿದ ಅವಾರ್ಡ್ ಅಂದರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪಾಲ್ಗೊಳ್ಳುವಂತಹ ನಟ ನಟಿಯರು ಬೇರೆ ಬೇರೆ ಧಾರಾವಾಹಿಯಲ್ಲಿ ಅಭಿನಯಿಸುವಂತಹ ನಟ ನಟಿಯರಿಗೆ ವೋಟ್ ಮಾಡುವ ಮೂಲಕ ಅವರನ್ನು ಆಯ್ಕೆ ಮಾಡಲಾಗುತ್ತದೆ ಇದನ್ನು ಮನೆ ಮೆಚ್ಚಿದ ಅವಾರ್ಡ್ ಎಂದು ಕರೆಯಲಾಗುತ್ತದೆ.

ಇದನ್ನು ಹೊರತುಪಡಿಸಿ ಜನ ಮೆಚ್ಚಿದ ಅವಾರ್ಡ್ ಅಂದರೆ ಇದನ್ನು ಸಂಪೂರ್ಣವಾಗಿ ಸಾರ್ವಜನಿಕರಿಗೆ ಮತ್ತು ಪ್ರೇಕ್ಷಕರಿಗೆ ಬಿಡಲಾಗುತ್ತದೆ ಈ ಒಂದು ಅವಾರ್ಡ್ ನಲ್ಲಿ ಪಾಲ್ಗೊಳ್ಳುವಂತಹ ನಾಯಕ ನಟಿಯರು ಮತ್ತು ನಾಯಕ ನಟರನ್ನು ಜನರೇ ಆಯ್ಕೆ ಮಾಡಬೇಕಾಗುತ್ತದೆ. ಈ ಒಂದು ಜನ ಮೆಚ್ಚಿದ ಎಂಟರ್ ಟೈನರ್ ಕೋಟದಲ್ಲಿ ನಿವೇದಿತ ಗೌಡ ಅವರು ಆಯ್ಕೆಯಾಗಿದ್ದರೆ. ಇದರಿಂದಲೇ ತಿಳಿಯುತ್ತದೆ ನಿವೇದಿತಾ ಗೌಡ ಅವರು ಜನರಿಗೆ ಎಷ್ಟು ಮನರಂಜನೆಯನ್ನು ನೀಡುತ್ತಿದ್ದರು ಅಂತ ಹೌದು ನಿವೇದಿತಾ ಗೌಡ ಅವರು ಬೆಸ್ಟ್ ಎಂಟರ್ಟೈನ್ಮೆಂಟ್ ಆಫ್ ದಿ ಲೇಡಿ ಎಂಬ ಅವಾರ್ಡನ್ನು ತಮ್ಮ ಮುಡುಗೇರಿಸಿಕೊಂಡಿದ್ದಾರೆ.

ಈ ಒಂದು ಅವಾರ್ಡನ್ನು ಮಾಲಾಶ್ರೀಯವರಿಂದ ಪಡೆದಿದ್ದಾರೆ ಸದ್ಯಕ್ಕೆ ನಿವೇದಿತಾ ಗೌಡ ಅವರು ಮಾಲಾಶ್ರೀ ಅವರಿಂದ ಅವಾರ್ಡ್ ಪಡೆದಂತಹ ಫೋಟೋಸ್ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ನಿವೇದಿತ ಗೌಡ ಅವರು ರಾಜ ರಾಣಿ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಇದಾದ ನಂತರ ಗಿಚ್ಚಿ ಗಿಲಿಗಿಲಿ ಎಂಬ ಕಾಮಿಡಿ ಶೋನಲ್ಲಿ ಕೂಡ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದ ಮೂಲಕ ಜನರನ್ನು ರಂಜಿಸುವಂತಹ ಕಾರ್ಯವನ್ನು ಮಾಡಿದ್ದರು ಈ ಕಾರಣಕ್ಕಾಗಿಯೇ ಇದೀಗ ಬೆಸ್ಟ್ ಎಂಟರ್ಟೈನ್ಮೆಂಟ್ ಆಫ್ ದಿ ಲೇಡಿ ಎಂಬ ಅವಾರ್ಡ್ ಅನ್ನು ಜನರೇ ನಿವೇದಿತ ಗೌಡ ಅವರಿಗೆ ಕೊಟ್ಟಿದ್ದಾರೆ.

ನಿಜ ಹೇಳಬೇಕು ಅಂದರೆ ಇದು ನಿವೇದಿತಾ ಗೌಡ ಅವರಿಗೆ ಒಂದು ವರದಾನ ಹಾಗೂ ಬಯಸದೆ ಬಂದ ಭಾಗ್ಯ ಅಂತಾನೆ ಹೇಳಬಹುದು ಇನ್ನು ವೇದಿಕೆಯ ಮೇಲೆ ಮಾಲಾಶ್ರೀ ಅವರಿಂದ ಅವಾರ್ಡ್ ಸ್ವೀಕರಿಸುವಂತಹ ಸಂದರ್ಭದಲ್ಲಿ ಮಾತನಾಡಿದಂತಹ ನಿವೇದಿತ ಗೌಡ ಅವರು ಇದು ನನಗೆ ಕಿರುತೆರೆಯಲ್ಲಿ ಸಿಕ್ಕ ಮೊದಲ ಅವಾರ್ಡ್ ಎಂದು ಖುಷಿಯಿಂದ ಕಣ್ಣೀರು ಇಟ್ಟು ಅವಾರ್ಡ್ ಅನ್ನು ಸ್ವೀಕರಿಸಿದ್ದಾರೆ. ಅಷ್ಟೇ ಅಲ್ಲದೆ ಇನ್ನು ಮುಂದೆ ನಾನು ಇದಕ್ಕಿಂತಲೂ ಬೆಸ್ಟ್ ಎಂಟರ್ಟೈನ್ಮೆಂಟ್ ಕೊಡುವುದಕ್ಕೆ ಪ್ರಯತ್ನಪಡುತ್ತೇನೆ ಎಂದು ಹೇಳಿದ್ದಾರೆ.

ಸದ್ಯಕ್ಕೆ ಕಿರುತೆರೆಯಲ್ಲಿ ನಿವೇದಿತಾ ಗೌಡ ಅವರದೇ ಹವಾ ಏಕೆಂದರೆ ಕಳೆದ ತಿಂಗಳಷ್ಟೇ ಮಿಸಸ್ ಇಂಡಿಯಾ ಕಾಂಪಿಟೇಶನ್ ನಲ್ಲಿ ಪೀಪಲ್ ಚಾಯ್ಸ್ ಆಫ್ ದಿ ಕೋಟದಲ್ಲಿಯೂ ಕೂಡ ಪ್ರಶಸ್ತಿಯನ್ನು ಪಡೆದಿದ್ದರು. ಅದಾದ ನಂತರ ಇದೀಗ ಬೆಸ್ಟ್ ಎಂಟರ್ಟೈನ್ಮೆಂಟ್ ಅವಾರ್ಡ್ ಅನ್ನು ಕೂಡ ಪಡೆದುಕೊಂಡಿದ್ದಾರೆ. ಇನ್ನು ಮುಂದಿನ ದಿನದಲ್ಲಿ ನಿವೇದಿತಾ ಗೌಡ ಅವರಿಗೆ ಇನ್ನಷ್ಟು ಅವಕಾಶಗಳು ಮತ್ತು ಅವಾರ್ಡ್ಗಳು ದೊರೆಯಲಿ ಎಂದು ಅಭಿಮಾನಿಗಳು ತಮ್ಮ ಶುಭಾಶಯವನ್ನು ನಿವೇದಿತ ಗೌಡ ಅವರಿಗೆ ತಿಳಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ

 

Leave a Comment

WhatsApp Group Join Now
Telegram Group Join Now