ಮನುಷ್ಯನಿಗೆ ದಿನನಿತ್ಯದ ಜಂಜಾಟಗಳು ಸಾಮಾನ್ಯವೇ, ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ಸಮಸ್ಯೆಗಳನ್ನು ಎದುರಿಸುತ್ತಾ ಅವುಗಳನ್ನು ಬಗೆಹರಿಸುತ್ತಾ ಸರಿದೂಗಿಸಿಕೊಂಡು ಜೀವಿಸುವುದನ್ನು ಕಲಿಯಲೇಬೇಕು. ಭಗವಂತನ ಕೃಪೆ ಇದ್ದರೆ ಬೆಟ್ಟದಂತೆ ಬಂದ ಕಷ್ಟಗಳು ಕೂಡ ಮಂಜಿನಂತೆ ಕರಗಿ ಹೋಗುತ್ತವೆ.
ಒಣಗಿದ ಹುಲ್ಲಿನಲ್ಲೂ ಚಿಗುರು ಚಿಗುರುವಂತೆ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎನ್ನುವುದು ನಮ್ಮ ನಂಬಿಕೆ. ಹೀಗಾಗಿ ನಮ್ಮ ಕೈಲಾದಷ್ಟು ಎಲ್ಲಾ ಪ್ರಯತ್ನ ಮಾಡಿ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಸಾಧ್ಯವಾಗದ ವೇಳೆ ನಾವು ನೇರವಾಗಿ ಭಗವಂತನ ಮೊರೆ ಹೋಗುತ್ತದೆ. ವಿಶೇಷವಾದ ವ್ರತ, ಪೂಜೆ, ಪುನಸ್ಕಾರ ಮಾಡಿ ಭಗವಂತನ ಕೃಪೆಕಟಾಕ್ಷಕ್ಕಾಗಿ ಪ್ರಾರ್ಥಿಸುತ್ತೇನೆ.
ದಿನನಿತ್ಯವೂ ಮನೆಗಳಲ್ಲಿ ಪೂಜೆಮಾಡುವಾಗಲೂ ಸಮಸ್ಯೆಗಳು ಬಾರದಂತೆ ಕಾಪಾಡು ಎಂದು ಕೇಳಿಕೊಳ್ಳುತ್ತೇವೆ. ಆದರೂ ಸಮಸ್ಯೆಗಳು ತಪ್ಪಿದ್ದಲ್ಲ ಇದಕ್ಕೆಲ್ಲ ಕಾರಣ ಏನಿರಬಹುದು ಎನ್ನುವ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇನೆ.
● ಯಾವುದೇ ಕೆಲಸ ಮಾಡಿದರು ಅದಕ್ಕೆ ಗುರುಗಳ ಮಾರ್ಗದರ್ಶನ ಮುಖ್ಯ, ಹಾಗೆ ಮನೆಯಲ್ಲಿ ಮಾಡುವ ವ್ರತ ಆಚರಣೆ, ಹೋಮ, ಹವನ, ಪೂಜೆ, ಪುನಸ್ಕಾರ ಇವುಗಳ ಆಚರಣೆಗೂ ಕೂಡ ಹಿರಿಯರ ಮತ್ತು ಗುರುಗಳ ಆಶೀರ್ವಾದ ಇಲ್ಲದೆ ಮಾರ್ಗದರ್ಶನ ಇಲ್ಲದೇ ನೆರವೆರಿದರೆ ಆ ಪೂಜೆಗಳು ಫಲ ಕೊಡುವುದಿಲ್ಲ ಎಂದು ಹೇಳುತ್ತದೆ ಶಾಸ್ತ್ರ.
● ಯಾವುದಾದರೂ ಪೂಜೆ ಹೋಮ ಹವನ ಮಾಡಿಸುವುದು ಅಥವಾ ವ್ರತಗಳ ಆಚರಣೆ ಮಾಡುವುದು ಮಾತ್ರ ಮುಖ್ಯವಲ್ಲ ಅದಕ್ಕೆ ಇರುವ ನೀತಿ ನಿಯಮಗಳನ್ನು ತಪ್ಪದೇ ಪಾಲನೆ ಮಾಡುವುದು ಕೂಡ ಬಹಳ ಮುಖ್ಯವಾದ ವಿಷಯ ಆಗಿರುತ್ತದೆ. ಹೀಗಾಗಿ ಸರಿಯಾದ ಅನುಷ್ಠಾನ ಇಲ್ಲದೆ ಯಾವುದೇ ರೀತಿ ಪೂಜೆ ಮಾಡಿದರೆ ಕೂಡ ಪ್ರಯೋಜನವಿಲ್ಲ.
● ನೀವು ದೇವರ ಕೊಣೆಯಲ್ಲಿ ಇಟ್ಟಿರುವ ಫೋಟೋಗಳು ಅಥವಾ ದೇವರ ವಿಗ್ರಹಗಳು ಚೆನ್ನಾಗಿರಬೇಕು. ಭಿನ್ನವಾದ ವಿಗ್ರಹಗಳು, ಒಡೆದ ಫೋಟೋಗಳು ಬೆಸುಗೆ ಹಾಕಿಸಿರುವ ವಿಗ್ರಹಗಳನ್ನು ಇಟ್ಟುಕೊಂಡು ಅದಕ್ಕೆ ಪೂಜೆ ಮಾಡಿದರೆ ನೀವು ಮಾಡಿರುವಂತಹ ಪೂಜೆ ಆ ದೇವರಿಗೆ ಸಲ್ಲುವುದಿಲ್ಲ ಆದ್ದರಿಂದ ನಿಮಗೆ ಅದರ ಫಲ ಸಿಗುವುದಿಲ್ಲ. ಶಾಸ್ತ್ರಗಳಲ್ಲಿ ಅವುಗಳಿಗೆ ಪೂಜೆ ಮಾಡುವುದು ನಿಶಿದ್ಧ ಎಂದು ಸೂಚಿಸಲಾಗಿದೆ.
● ಮನೆದೇವರ ಪೂಜೆ ಎಂದಿಗೂ ಮರೆಯಬಾರದು, ಇಷ್ಟದೈವ ಯಾವುದೇ ಇದ್ದರೂ ಮನೆ ದೇವರಿಗೆ ಪೂಜೆ ಮಾಡುವುದನ್ನು ತಪ್ಪಿಸಬಾರದು. ಈ ರೀತಿ ಮನೆದೇವರನ್ನು ನೆನೆಯದೆ ಪೂಜೆ ಮಾಡಿದರೆ ಕಷ್ಟಗಳು ಇನ್ನೂ ಹೆಚ್ಚಾಗುತ್ತದೆ.
● ನಾವು ವಿಗ್ರಹದಲ್ಲಿ ಅಥವಾ ಫೋಟೋಗಳಲ್ಲಿ ದೇವರನ್ನು ಪೂಜಿಸುತ್ತಿದ್ದರು. ನಾವು ಪೂಜಿಸಿರುವ ದೇವರ ಮುಖದಲ್ಲಿ ಮಂದಹಾಸ ಇರಬೇಕು, ನಗುಮುಖವಿರಬೇಕು, ಖರೀದಿಸುವಾಗಲೇ ಅದನ್ನು ನೋಡಿ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಕಳೆಯಿಲ್ಲದ ಫೋಟೋಗಳು ಅಥವಾ ವಿಗ್ರಹಗಳನ್ನು ಪೂಜೆ ಮಾಡುವುದರಿಂದ ಪ್ರಯೋಜನವಾಗುವುದಿಲ್ಲ.
● ನಾವು ಯಾರನ್ನಾದರೂ ಮೆಚ್ಚಿಸಲು ಅವರಿಗೆ ಇಷ್ಟ ಆಗಿದ್ದನ್ನು ಕೊಡುತ್ತೇವೆ ಹಾಗೆ ಭಗವಂತನಿಗೆ ಕೂಡ ಪ್ರಿಯವಾದ ಹೂವುಗಳಿರುತ್ತದೆ ಹಾಗೆ ಇಷ್ಟವಾದ ತಿನಿಸುಗಳು ಇರುತ್ತವೆ. ಅವುಗಳನ್ನು ಮಾಡಿ ನೈವೇದ್ಯ ಮಾಡುವುದರಿಂದ ಭಗವಂತ ಒಲಿಯುತ್ತಾನೆ ಹಾಗೆಯೇ ನೈವೇದ್ಯ ಮಾಡದೆ ಪೂಜೆ ಮಾಡುವುದರಿಂದ ಪೂಜೆ ಪೂರ್ತಿಗೊಳ್ಳುವುದಿಲ್ಲ.
● ಮನೆಯಲ್ಲಿ ದೊಡ್ಡ ವಿಗ್ರಹಗಳನ್ನು ಇಟ್ಟುಕೊಂಡಿದ್ದರೆ ನಿತ್ಯ ಎರಡು ಬಾರಿ ಅವುಗಳಿಗೆ ಅಭಿಷೇಕ ಎರಡು ಬಾರಿ ನೈವೇದ್ಯ ಹಾಗೂ ಎರಡು ಬಾರಿ ಧೂಪ ದೀಪ ಹಚ್ಚಿ ಪೂಜೆ ಮಾಡಬೇಕು ಇಲ್ಲವಾದಲ್ಲಿ ದೋಷ ಉಂಟಾಗುತ್ತದೆ. ಹಾಗಾಗಿ ಸಾಧ್ಯವಾದಷ್ಟು ಅಂಗೈ ಮುಷ್ಟಿಗಿಂತ ಚಿಕ್ಕದಾದ ವಿಗ್ರಹಗಳನ್ನು ಇಟ್ಟು ಸರಿಯಾದ ನಿಯಮಗಳನ್ನು ಪಾಲಿಸಿದರೆ ಒಳ್ಳೆಯದು.
● ಹೆಣ್ಣು ಮಕ್ಕಳು ಮುಟ್ಟಾದ 5 ದಿನಗಳ ನಂತರ ತಲೆಗೆ ಎಣ್ಣೆ ಸ್ನಾನ ಮಾಡಿ ಮನೆಯಲ್ಲಿ ಶುದ್ಧೀಕರಣ ಮಾಡಿ ಪೂಜೆ ಮಾಡಬೇಕು ಇಲ್ಲವಾದಲ್ಲಿ ಮನೆಯಲ್ಲಿ ಮಾಡುವ ಪೂಜೆಗಳು ಫಲ ಕೊಡುವುದಿಲ್ಲ.
● ಪೂಜೆಗಳಲ್ಲಿ ಮಂತ್ರೋಚ್ಛಾರಣೆ ಕೂಡ ಮುಖ್ಯ, ಸರಿಯಾಗಿ ಮಂತ್ರೋಚ್ಛಾರಣೆ ಇಲ್ಲದಿದ್ದರೆ ಆ ಪೂಜೆಗೂ ಫಲ ಸಿಗುವುದಿಲ್ಲ.
● ಹಾಗೆಯೇ ಸದಾ ಒಳ್ಳೆಯದನ್ನು ಮಾಡುತ್ತಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಾ ಒಳ್ಳೆಯವರಾಗಿ ನಡೆದುಕೊಂಡರೆ ಕೂಡ ದೇವರಿಗೆ ಪ್ರಿಯರಾಗುತ್ತೇವೆ. ಈ ರೀತಿ ಯಾವುದೇ ಪೂಜೆ ಮಾಡಬೇಕಾದರೂ ಭಕ್ತಿಯಿಂದ, ನಂಬಿಕೆಯಿಂದ ಮೇಲೆ ತಿಳಿಸಿದ ನಿಯಮಗಳನ್ನು ಫಾಲೋ ಮಾಡಿ ಪೂಜೆ ಮಾಡಿ ಸಮಸ್ಯೆಯಿಂದ ಪಾರಾಗಿ.
https://youtu.be/N7bd4mGrvr8