ಪ್ರೀತಿ ಹುಟ್ಟುವುದಕ್ಕೆ ವಯಸ್ಸು ಒಂದು ಲೆಕ್ಕವೇ ಅಲ್ಲ. ಆಡುವ ವಯಸಲಿ ಪ್ರೀತಿ ಮಾಡಿ ಅದನ್ನು ಕಡೆತನಕ ಉಳಿಸಿಕೊಂಡವರು ಇದ್ದಾರೆ. ಹಾಗೆ ಬದುಕಿನ ಎಲ್ಲಾ ಆಯಾಮಗಳನ್ನು ಕಂಡು ಜೀವನವೇ ಮುಗಿದು ಹೋಗಿದೆ ಎಂದುಕೊಂಡವರು ಕೂಡ ಜೋಡಿಯಾಗಿ ಹೊಸ ಜೀವನ ಕಂಡ ಉದಾಹರಣೆಯು ಇದೆ. ಇಂತಹದೇ ಒಂದು ಮತ್ತೊಂದು ಉದಾಹರಣೆ ಸೃಷ್ಟಿಸಿದ್ದಾರೆ ಮಹಾರಾಷ್ಟ್ರದ ಈ ಜೋಡಿ. ಇದುವರೆಗೂ ಸಾಕಷ್ಟು ರೀತಿಯ ಮದುವೆಗಳ ಬಗ್ಗೆ ಕೇಳಿದ್ದೇವೆ. ಆದರೆ ಈ ಮದುವೆ ಇಷ್ಟು ದಿನ ಕೇಳಿದ ಎಲ್ಲಾ ಮದುವೆಗಳಿಗಿಂತಲೂ ಕೂಡ ಬಹಳ ವಿಶೇಷ ಎನಿಸಿದೆ. ಯಾಕೆಂದರೆ ಇದು ವೃದ್ಧಾಶ್ರಮದಲ್ಲಿ ನಡೆದ ಮದುವೆ ಆಗಿದೆ.
ಮಹಾರಾಷ್ಟ್ರದ ವೃದ್ಧಾಶ್ರಮ ಒಂದರಲ್ಲಿ 75ರ ವರನ ಜೊತೆ 70 ವರ್ಷದ ವಧು ಮದುವೆ ಆಗಿದ್ದಾರೆ. ಈ ಮದುವೆಗೆ ಸಂಬಂಧಪಟ್ಟ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಈಗ ದೇಶದಾದ್ಯಂತ ಇದೇ ಸುದ್ದಿ. ಪ್ರೀತಿ ಹುಟ್ಟುವುದಕ್ಕೆ ಎರಡು ಶುದ್ಧ ಮನಸ್ಸುಗಳು ಸಾಕು, ಇನ್ಯಾವುದರ ಹಂಗೇ ಇಲ್ಲ. ಪ್ರೀತಿ ಬಯಸುವುದು ಕೇವಲ ಸಾನಿಧ್ಯ ಮತ್ತು ಪ್ರಾಮಾಣಿಕ ಭಾವನೆ ಅಷ್ಟೇ. ಇಷ್ಟು ಇದ್ದರೆ ಅದು ಯಾವ ವಯಸ್ಸಿನಲ್ಲಿ ಆಗಲಿ, ಯಾವ ಪರಿಸ್ಥಿತಿಯಲ್ಲಿ ಆಗಲಿ ಖಂಡಿತವಾಗಿಯೂ ಪ್ರೀತಿ ಮೂಡುತ್ತದೆ.
ಈಗ ವೃದ್ದಾಶ್ರಮದಲ್ಲಿ ಅಂತಹ ಪ್ರೀತಿ ಇಬ್ಬರು ವೃದ್ಧರ ನಡುವೆ ಮೂಡಿದ. 75 ವರ್ಷದ ಒಬ್ಬ ವೃದ್ಧ ಮತ್ತು 70 ವೃದ್ಧೆ ಇಬ್ಬರು ಕೂಡ ಬಹಳ ದಿನಗಳಿಂದ ಬದುಕಿನ ಸುಖ ದುಃಖ ಎಲ್ಲವನ್ನು ಹಂಚಿಕೊಳ್ಳುತ್ತಾ ಆತ್ಮೀಯರಾಗಿದ್ದರು. ನಂತರ ಅದು ಸ್ನೇಹವಾಗಿ ಈಗ ಸ್ನೇಹ ಪ್ರೀತಿಯಾಗಿ ಬದಲಾಗಿದ್ದು ಮಾತ್ರ ಅಲ್ಲದೆ ದಾಂಪತ್ಯಕ್ಕೆ ಕೂಡ ಕಾಲಿಟ್ಟು ಒಟ್ಟಿಗೆ ಬದುಕುವ ನಿರ್ಧಾರ ತನಕ ತಂದಿದೆ ಮೊದಲಿಗೆ ತಮ್ಮ ಇಚ್ಛೆಯನ್ನು ವೃದ್ದಾಶ್ರಮದಲ್ಲಿ ಇವರ ಜೊತೆ ಇದ್ದ ಇತರರಿಗೂ ಸಹ ತಿಳಿಸಿದ್ದಾರೆ.
ಅವರೆಲ್ಲರೂ ಇವರಿಬ್ಬರ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ ಮತ್ತು ವೃದ್ದಾಶ್ರಮ ನಡೆಸುವಂತಹ ಸಿಬ್ಬಂದಿ ಕೂಡ ಇದಕ್ಕೆ ಕೈಜೋಡಿಸಿದ್ದು ಸಕಲ ಸಿದ್ಧತೆ ಜೊತೆ ಇಬ್ಬರಿಗೂ ಖುಷಿ ಆಗುವ ರೀತಿ ಅಚ್ಚುಕಟ್ಟಾಗಿ ಮದುವೆ ಕಾರ್ಯ ಮಾಡಿ ಮುಗಿಸಿದ್ದಾರೆ. ಇನ್ನು ಮುಂದೆ ಒಬ್ಬರಿಗೊಬ್ಬರು ಕೈ ಹಿಡಿದು ಇರುವ ಕೆಲವೇ ದಿನಗಳನ್ನು ಸಂತೋಷವಾಗಿ ಕಳೆಯಲಿ ಎಂದು ಇವರ ಆಸೆಗೆ ನೀರಿರೆದಿದ್ದಾರೆ. ಒಂದು ರೀತಿಯಲ್ಲಿ ಇದು ನಾವೆಲ್ಲಾ ಚಿಕ್ಕ ವಯಸ್ಸಿನಲ್ಲಿ ಇದ್ದಾಗ ಆಡಿದ್ದ ಮಕ್ಕಳ ಮದುವೆ ಆಟವನ್ನು ನೆನಪಿಸಿದರೂ ಕೂಡ ಒಂದು ರೀತಿಯಲ್ಲಿ ಈ ವಿಷಯ ಗ್ರೇಟ್ ಎನಿಸುತ್ತದೆ.
ಇನ್ನು ಅವರಿಗೆ ಉಳಿದಿರುವುದು ಬೆರಳೆಣಿಕೆ ಅಷ್ಟು ದಿನಗಳು ಮಾತ್ರ. ಈಗಾಗಲೇ ಒಂದು ಬೃಹತ್ ಬದುಕಿನ ಘಟ್ಟವನ್ನು ಅವರು ಮೀರಿದ್ದಾರೆ, ಇನ್ನೇನು ಸಾವಿನೂರ ಪ್ರಯಾಣದಲ್ಲಿ ಸಮೀಪಕ್ಕೆ ಇರುವ ಇವರು ಈ ನಿರ್ಧಾರಕ್ಕೆ ಬಂದಿರುವುದರಿಂದ ಯಾರಿಗೂ ಹೆಚ್ಚಿನ ಆಕ್ಷೇಪವಿಲ್ಲ. ಈ ವಿಷಯ ವೈರಲ್ ಆಗಿರುವುದು ಒಂದು ರೀತಿ ಒಳ್ಳೆಯ ಸುದ್ದಿ ಆಗಿದೆ. ಯಾಕೆಂದರೆ ಇವರನ್ನು ನೋಡಿ ಇನ್ನಷ್ಟು ಜನ ಬುದ್ಧಿ ಕಲಿಯಬೇಕಾಗಿದೆ.
ಯಾವುದೋ ಒಂದು ಕ್ಷುಲ್ಲಕ ನೆಪ ಇಟ್ಟುಕೊಂಡು ಪ್ರೀತಿಯನ್ನು ಮರಿದುಕೊಳ್ಳುವವರು, ದೂರ ಮಾಡಿಕೊಳ್ಳುವರು ಬದುಕಿನಲ್ಲಿ ಎಲ್ಲಕ್ಕಿಂತ ಹೆಚ್ಚಿಗೆ ಭರವಸೆ ಕೊಡುವುದು ಪ್ರೀತಿ ಎನ್ನುವುದನ್ನು ಅರ್ಥೈಸುವುದಕ್ಕೆ ಈ ಮದುವೆ ಉದಾಹರಣೆ ಆಗಿದೆ ಎಂದೇ ಹೇಳಬಹುದು. ಇಷ್ಟೆಲ್ಲಾ ತಿಳಿದ ಮೇಲೆ ಈ ಮದುವೆ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.