ಏಪ್ರಿಲ್ 17ನೇ ತಾರೀಖು ಅಂದರೆ ಬುಧವಾರ ವಿಶೇಷವಾದಂತಹ ಶ್ರೀ ರಾಮನವಮಿ ಇರುವಂತದ್ದು ಆ ದಿನ ನಾವು ಮನೆಯಲ್ಲಿ 5 ದೀಪ ಗಳನ್ನು ಹಚ್ಚಬೇಕು ಆನಂತರ ಒಂದು ರೂಪಾಯಿ ನಾಣ್ಯದಿಂದ ಈಗ ನಾವು ಹೇಳುವಂತಹ ಈ ಸಣ್ಣ ಕೆಲಸ ಮಾಡಿದರೆ ವರ್ಷಪೂರ್ತಿ ಇರುವಂತಹ ನಿಮ್ಮ ಎಲ್ಲಾ ಕಷ್ಟಗಳು ಸಹ ಕಳೆದು ಹೋಗುತ್ತದೆ.
ಜೊತೆಗೆ ಶ್ರೀ ರಾಮ ಹಾಗೂ ತಾಯಿ ಸೀತಾಮಾತೆಯ ಅನುಗ್ರಹ ಎನ್ನುವುದು ಲಭಿಸುತ್ತದೆ. ಸಾಕ್ಷಾತ್ ಶ್ರೀರಾಮಚಂದ್ರನ ಅನುಗ್ರಹದಿಂದಾಗಿ ಬಹಳ ವಿಶೇಷವಾಗಿ ಕುಟುಂಬದ ಏಳಿಗೆ ಎನ್ನುವುದು ಆಗುತ್ತದೆ ಅಖಂಡ ಪುಣ್ಯಫಲ ಎನ್ನುವುದು ಪ್ರಾಪ್ತಿಯಾಗುತ್ತದೆ. ಭಗವಾನ್ ಶ್ರೀರಾಮನಿಗೆ ಈ ವರ್ಷ ಬಹಳ ವಿಶೇಷ ಎಂದೇ ಹೇಳಬಹುದು.
ಈ ಸುದ್ದಿ ಓದಿ:- ರೇಷ್ಮೆ ಸೀರೆ ಮೇಲೆ ಎಣ್ಣೆ ಕಲೆ ತೆಗೆಯುವ ಸುಲಭ ವಿಧಾನ.!
ಯಾಕೆಂದರೆ ವರ್ಷದ ಆರಂಭದಲ್ಲಿ ಅಯೋಧ್ಯೆಯ ರಾಮಮಂದಿರದಲ್ಲಿ ಜನವರಿ 22ರಂದು ಭಗವಾನ್ ಶ್ರೀರಾಮ ಅಂದರೆ ಬಾಲರಾಮನ ಪವಿತ್ರಿಕರಣ ನಡೆಯಿತು ಮತ್ತು ಈಗ ರಾಮನ ಜನ್ಮದಿನವನ್ನು ರಾಮ ನವಮಿಯ ದಿನದಂದು ಆಚರಿಸಲಾಗುತ್ತದೆ. ಭಗವಾನ್ ಶ್ರೀರಾಮ ಚಂದ್ರರು ತ್ರೇತಾಯುಗದ ಚೈತ್ರ ಮಾಸದ ಶುಕ್ಲ ಪಕ್ಷದ 9ನೇ ತಾರೀಖಿ ನಂದು ಜನಿಸಿದ್ದು ಚೈತ್ರ ಶುಕ್ಲ ನವಮಿ ಯಂದು ಜನಿಸಿದ್ದರಿಂದ ಈ ದಿನಾಂಕವನ್ನು ರಾಮನವಮಿ ಎಂದೇ ಕರೆಯುತ್ತೇವೆ.
ಇನ್ನು 2024ರಲ್ಲಿ ರಾಮನವಮಿಯನ್ನು ಯಾವಾಗ ಆಚರಿಸಬೇಕು, ಹಾಗೂ ಯಾವ ದಿನದಂದು ಆಚರಿಸಬೇಕು ಹಾಗೂ ಈ ದಿನದ ಮತ್ತಷ್ಟು ಬಹಳ ವಿಶೇಷಕರವಾಗಿರುವಂತಹ ಪ್ರಯೋಜನ ಏನು ಹಾಗೂ ಮೇಲೆ ಹೇಳಿದಂತೆ ಐದು ದೀಪಗಳನ್ನು ನಾವು ಯಾವ ಸಮಯದಲ್ಲಿ ಎಲ್ಲಿ ಬೆಳಗಬೇಕು ಎನ್ನುವಂತಹ ವಿಚಾರಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.
ಈ ಸುದ್ದಿ ಓದಿ:-ಹಳೆ ಬಟ್ಟೆಯಿಂದ ಮಾಪ್ ಮಾಡುವ ಸುಲಭ ವಿಧಾನ.!
ಹಿಂದೂ ಪಂಚಾಂಗದ ಪ್ರಕಾರ ಈ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯು ಏಪ್ರಿಲ್ 16ನೇ ತಾರೀಖು ಮಂಗಳವಾರ ಮಧ್ಯಾನ 1 ಗಂಟೆ 23 ರಿಂದ ಪ್ರಾರಂಭವಾಗಿ ನವಮಿ ತಿಥಿ ಜನವರಿ 17ರಂದು ಬುಧವಾರ ಮಧ್ಯಾಹ್ನ 3 ಗಂಟೆ 14 ನಿಮಿಷಕ್ಕೆ ಮುಕ್ತಾಯ ಆಗುತ್ತದೆ. ಆದ್ದರಿಂದ ನಾವು ಪ್ರಾರಂಭ ಮಾಡಬೇಕಾಗಿರುವುದು.
ಸೂರ್ಯೋದಯವನ್ನು ಗಣನೆಗೆ ತೆಗೆದುಕೊಂಡು 17ನೇ ತಾರೀಖು ಬುಧವಾರದಂದು ನಾವು ಶ್ರೀ ರಾಮನವಮಿಯನ್ನು ಆಚರಣೆ ಮಾಡ ಬೇಕಾಗುತ್ತದೆ. ಈ ಒಂದು ದಿನ ಮುಂಜಾನೆ ಬೇಗ ಎದ್ದು ಮನೆಯಲ್ಲ ಸ್ವಚ್ಛ ಮಾಡಿ ದೇವರ ಮನೆ ಸ್ವಚ್ಛ ಮಾಡಿ ಶ್ರೀರಾಮನ ಫೋಟೋ ಅಥವಾ ವಿಗ್ರಹವನ್ನು ಇಟ್ಟು ತುಳಸಿಯನ್ನು ಅರ್ಪಿಸಬೇಕಾಗುತ್ತದೆ.
ಈ ಸುದ್ದಿ ಓದಿ:-ಫಂಕ್ಷನ್ ಪಾರ್ಟಿಗೆ ಹೋಗುವ ಮೊದಲು ಇದನ್ನು ಹಚ್ಚಿ ಹಲ್ಲು ಬೆಳ್ಳಗಾಗಿ ಹೊಳೆಯುತ್ತೆ ಹಲ್ಲಿನ ಎಲ್ಲಾ ಸಮಸ್ಯೆಗೂ ರಾಮಾಬಾಣ.!
ಪ್ರಸಾದವಾಗಿ ಕೋಸಂಬರಿ ಪಾನಕ ಮಜ್ಜಿಗೆಯನ್ನು ಇಟ್ಟು ನಾವು ಪೂಜೆಯನ್ನು ಮಾಡಬೇಕು. ಹಾಗೂ ಈ ದಿನ ನಮಗೆ ಎಷ್ಟು ಸಾಧ್ಯವೋ ಅಷ್ಟು ಜನರಿಗೆ ಇವೆಲ್ಲವನ್ನೂ ಸಹ ಕೊಡುವುದರಿಂದ ನಮಗೆ ಒಳ್ಳೆಯ ದಾಗುತ್ತದೆ ಎನ್ನುವ ನಂಬಿಕೆ ಇದೆ. ಬುಧವಾರದ ಸಾಯಂಕಾಲ ಅಂದರೆ ನೀವು 5 ರಿಂದ 8 ಗಂಟೆಯ ಒಳಗಾಗಿ ನೀವು ಮನೆಯಲ್ಲಿ ಐದು ಕಡೆ ದೀಪವನ್ನು ಹಚ್ಚಬೇಕಾಗುತ್ತದೆ.
ಎಲ್ಲೆಲ್ಲಿ ಎಂದರೆ ದೇವರ ಮನೆಯಲ್ಲಿ ಎರಡು ದೀಪವನ್ನು ಹಚ್ಚಬೇಕು ಹಾಗೂ ಮುಖ್ಯ ದ್ವಾರದ ಮುಂದೆ ಎರಡು ದೀಪವನ್ನು ಹಚ್ಚಬೇಕು ಹಾಗೂ ಒಂದು ದೀಪವನ್ನು ತುಳಸಿ ಕಟ್ಟೆಯ ಮುಂಭಾಗದಲ್ಲಿ ಹಚ್ಚಬೇಕು. ಆನಂತರ ಒಂದು ರೂಪಾಯಿ ನಾಣ್ಯವನ್ನು ತೆಗೆದುಕೊಂಡು ಅದನ್ನು ದೇವರ ಮನೆಯಲ್ಲಿ ಅರಿಶಿನದ ನೀರಿನಲ್ಲಿ ತೊಳೆದು ಪಂಚಾಮೃತದ ಅಭಿಷೇಕ ಮಾಡಬೇಕು.
ಈ ಸುದ್ದಿ ಓದಿ:-ಹೀಗೆ ಮಾಡಿದರೆ ಒಂದು ಇರುವೆ ಕೂಡ ನಿಮ್ಮ ಮನೆಯಲ್ಲಿ ಬರಲ್ಲ.!
ಆನಂತರ ಅದನ್ನು ಶುದ್ಧವಾದ ನೀರಿನಲ್ಲಿ ತೊಳೆದು ಅದಕ್ಕೆ ಅರಿಶಿನ ಕುಂಕುಮ ಹಾಕಿ ಪೂಜೆಯನ್ನು ಮಾಡುತ್ತ ಶ್ರೀ ರಾಮನನ್ನು ನೆನೆದು ನನ್ನ ಜೀವನದಲ್ಲಿ ಇರುವಂತಹ ಎಲ್ಲಾ ಆರ್ಥಿಕ ಪರಿಸ್ಥಿತಿಗಳನ್ನು ಸರಿಪಡಿಸಿ ಎಂದು ಕೇಳುತ್ತಾ, ಅದಕ್ಕೆ ಪೂಜೆ ಮಾಡಬೇಕು ಆನಂತರ ಪೂಜೆ ಆದಮೇಲೆ ಅದನ್ನು ನಿಮ್ಮ ಮನೆಯಲ್ಲಿ ಹಣ ಇಡುವಂತಹ ಪೆಟ್ಟಿಗೆ ಯಲ್ಲಿ ಇಡುವುದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸರಿ ಹೋಗುತ್ತದೆ. ನಿಮ್ಮ ಹಣಕಾಸಿನ ಒಳಹರಿವು ಹೆಚ್ಚಾಗುತ್ತದೆ.