* ಬೇಗ ಮಲಗಿ ಬೇಗ ಎದ್ದು ಹಲ್ಲು ಬಾಯಿ ಸ್ವಚ್ಛವಾಗಿ ತೊಳೆದು ಕೊಂಡು ಒಂದು ಗ್ಲಾಸ್ ನೀರು ಕುಡಿಯಿರಿ.
* ಚಹಾ ಕಾಫಿ ಬೀಡಿ ಸಿಗರೇಟು ತಂಬಾಕು ಸೇವಿಸದೇ ಸ್ವಚ್ಛವಾಗಿ ಶೌಚ ಕಾರ್ಯ ಮುಗಿಸಿ ಮಣ್ಣು ಅಥವಾ ಬೂದಿಯಿಂದ ಕೈತೊಳೆದು ಕೊಳ್ಳಿ.
* ಶೌಚಕ್ಕೆ ಕುಳಿತಾಗ ಹೆಚ್ಚು ಉಗುಳುವುದಾಗಲಿ ಹೆಚ್ಚು ಉಸಿರು ತಡೆಯುವುದಾಗಲಿ ಒಳ್ಳೆಯದಲ್ಲ.
* ಶೌಚಕ್ಕೆ ಹೋಗಿ ಬಂದ ಕೂಡಲೇ ನೀರು ಕಾಫಿ ಟೀ ತಿಂಡಿ ಊಟ ಸೇವಿಸುವುದು ಒಳ್ಳೆಯದಲ್ಲ.
* ತಮ್ಮ ಶಕ್ತಿಗನುಗುಣವಾಗಿ ಸ್ವಚ್ಛಂದ ಸ್ಥಳದಲ್ಲಿ ಸೂರ್ಯ ನಮಸ್ಕಾರ ಗಳನ್ನು ರೂಡಿಯಲ್ಲಿಡಿ.
* ದಿನಾಲೂ ಕೈ ಕಾಲು ಮುಖ ತೊಳೆದುಕೊಳ್ಳುವಾಗ ಕಣ್ಣು ತೆರೆದು ನೀರನ್ನು ಮುಖಕ್ಕೆ ಎರಚಿಕೊಳ್ಳಬೇಕು.
* ಬಾಯಿಯಲ್ಲಿ ನೀರನ್ನು ಬಹಳ ಸಲ ಮುಕ್ಕಳಿಸಬೇಕು.
ಪ್ರಯಾಣ ಮಾಡುವಾಗ ವಾಂತಿ ಯಾಕೆ ಬರುತ್ತೆ.! ಇದಕ್ಕೆ ಕಾರಣವೇನು ಪರಿಹಾರವೇನು ಸಂಪೂರ್ಣ ಮಾಹಿತಿ ಬಿಚ್ಚಿಟ್ಟ ವೈದ್ಯರು.!
* ಶರೀರ ಸ್ವಚ್ಛತೆ ಕಾಂತಿ ಮತ್ತು ಆರೋಗ್ಯಕ್ಕೆ ಕಡಲೆಹಿಟ್ಟು ಸೀಗೆಕಾಯಿ ಪುಡಿಯಲ್ಲಿ ಸ್ನಾನ ಮಾಡಬೇಕು ವರಕೊಮ್ಮೆ ಅಭ್ಯಂಗ ಸ್ನಾನ ಮಾಡುವುದು ಉತ್ತಮ.
* ಸ್ನಾನ ಮಾಡುವಾಗ ಕೈ ಕಾಲು ತೋಳು ತೊಡೆ ಕಿಬ್ಬೊಟ್ಟೆಯನ್ನು ಚೆನ್ನಾಗಿ ಹಸ್ತದಿಂದ ತಿಕ್ಕಬೇಕು.
* ಮಾದಕ ಪೇಯ ತಂಬಾಕು, ಬೀಡಿ, ಸಿಗರೇಟು, ಚಹ ಮುಂತಾದವು ಗಳು ಆರೋಗ್ಯ ಹಾಗೂ ಆರ್ಥಿಕ ದೃಷ್ಟಿಯಿಂದ ಹೆಚ್ಚು ಹಾನಿಕಾರಕವಾಗಿದೆ.
* ಸಾತ್ವಿಕ ಸಸ್ಯಆಹಾರವೇ ಸರ್ವ ಶ್ರೇಷ್ಟವಾದದ್ದು ಆಹಾರದಂತೆ ವಿಚಾರ ವಿಚಾರಣೆ ಸಾದ್ಯ.
* ಸೊಪ್ಪು ಪಲ್ಯ ಹಸಿ ತರಕಾರಿ ನೆನೆಸಿದ ಬೇಳೆಕಾಳು ಹಣ್ಣು ಹಂಪಲು ಮುಂತಾದವುಗಳು ನಿತ್ಯ ಆಹಾರದಲ್ಲಿ ಉಪಯೋಗಿಸುವುದು ಹೆಚ್ಚು ಹಿತಕರವಾಗಿರುತ್ತದೆ.
* ಆಹಾರವನ್ನೂ ಚೆನ್ನಾಗಿ ನೀರಾಗುವಂತೆ ನುರಿಸಿ ಅಗಿದು ನುಂಗಬೇಕು
* ಊಟವಾದ ಕೂಡಲೇ ಮಲಗಬಾರದು ಕನಿಷ್ಠ ಅರ್ಧ ಒಂದು ತಾಸಿನ ನಂತರ ನೀರು ಕುಡಿದು ಮಲಗಬೇಕು.
ಸ-ತ್ತವರ ಈ 3 ವಸ್ತುಗಳನ್ನು ಅಪ್ಪಿತಪ್ಪಿಯು ಬಳಸಬೇಡಿ.!
* ಮೂಗಿನಿಂದಲೆ ಉಸಿರಾಡಬೇಕು ಶವಾಸನ ಸ್ಥಿತಿಯಲ್ಲಿ ಇದ್ದುಕೊಂಡೇ ನಿದ್ದೆ ಹೋಗಬಹುದು.
* ಸೂರ್ಯ ನಮಸ್ಕಾರ ಮತ್ತು ಯೋಗಾಸನಗಳನ್ನು ಮನರಂಜನೆ ಮತ್ತು ಪ್ರದರ್ಶನಕ್ಕಾಗಿ ಶಕ್ತಿ ಮೀರಿ ಮಾಡಬೇಡಿ.
* ಪ್ರತಿದಿನವೂ ಸೂರ್ಯ ನಮಸ್ಕಾರ ಮಾಡದೆ ಆಹಾರ ಸೇವಿಸುವು ದಿಲ್ಲ ಎಂಬ ಪ್ರತಿಜ್ಞೆ ಮಾಡಿ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಿ.
* ಬಾಯಾರಿಕೆಯನ್ನು ಶುದ್ಧ ನೀರಿನಿಂದಲೇ ನಿವಾರಿಸಿಕೊಳ್ಳಬೇಕು ಚಹಾ ಕಾಫಿ ಸೋಡಾ ಮುಂತಾದವುಗಳಿಂದ ನಿವಾರಿಸಿಕೊಳ್ಳಬಾರದು.
* ಮೇಲಿಂದ ಮೇಲೆ ಜುಲಬು ಎನಿಮಾ ತೆಗೆದುಕೊಳ್ಳಬಾರದು.
* ಮಲ ಮೂತ್ರಗಳನ್ನು ಹೆಚ್ಚು ವೇಳೆ ತಡೆಯಬಾರದು ಅದರಿಂದಲೇ ಮಲಬದ್ಧತೆ ಮೂಲವ್ಯಾಧಿ ಹೊಟ್ಟೆಯ ತೊಂದರೆ ಹೆಚ್ಚಾಗುವ ಸಂಭವ ಹೆಚ್ಚು.
* ರಾತ್ರಿ ಬೇಗ ಮಲಗಿ ಬೇಗ ಏಳಿ, ಹಗಲು ನಿದ್ದೆ ಒಳ್ಳೆಯದಲ್ಲ.
* ವಯಸ್ಸು ಏರುತ್ತಾ ಬಂದಂತೆ ಶರೀರದ ತೈಮಸ್ ಗ್ರಂಥಿಗಳು ಶಿಥಿಲವಾಗತೊಡಗುತ್ತವೆ ಸೂರ್ಯ ನಮಸ್ಕಾರ ಯೋಗಾಸನಗಳಿಂದ ಆ ಗ್ರಂಥಿಗಳಿಂದ ಚುರುಕುಗೊಳಿಸಬಹುದು ಬೇಡಿಕೆಗಳು ಕಡಿಮೆಯಾದ ಷ್ಟು ಸುಖ ಹೆಚ್ಚು.
ಉತ್ತಮ ಆರೋಗ್ಯಕ್ಕಾಗಿ ಈ ರೀತಿಯ ಆರೋಗ್ಯ ಸಲಹೆಗಳನ್ನು ಪಾಲಿಸಿ.!
* ಸುಖ ಮತ್ತು ನಿದ್ದೆಯನ್ನು ಚೆನ್ನಾಗಿ ಹಂಚಿಕೊಂಡರೆ ಅವು ಹೆಚ್ಚಾಗಿ ವೃದ್ಧಿಯಾಗುವವು.
* ಮಾಡಿದ್ದನ್ನು ಮರೆ, ಪಡೆದುದ್ದನು ನೆನೆ, ನಗು ಮುಖವೇ ನೋವಿನ ಮದ್ದು.
* ಲಾಭ ನಷ್ಟದ ಭಾವನೆ ಬಿಟ್ಟು ಸರಳ ಶುದ್ಧ ಭಾವನೆಯಿಂದ ಕಾರ್ಯ ಮಾಡು ಯಶಸ್ಸು ಖಂಡಿತ.
* ಒಳ್ಳೆಯ ಉಸಿರಾಟ ಇಚ್ಛಾ ಪ್ರವೃತ್ತಿ ವ್ಯಾಯಾಮ ಆರೋಗ್ಯಕ್ಕೆ ಬುನಾದಿ.
* ಅರೋಗ್ಯ ಮತ್ತು ಆಯುಷ್ಯವಿಲ್ಲದಿದ್ದರೆ ಆರ್ಥಿಕವಾಗಿ ಶ್ರೀಮಂತನಾಗಿ ದ್ದರು ವ್ಯರ್ಥ
* ಇರುವಷ್ಟು ಕಾಲ ಆರೋಗ್ಯವಂತರಾಗಿದ್ದು ಹೆತ್ತವರಿಗೆ ಹೊರೆಯಾಗದೆ ಬದುಕುವುದೇ ನಮ್ಮ ಗುರಿಯಾಗಿರಲಿ.
* ಚೆನ್ನಾಗಿ ಬದುಕಿ ಬದುಕಿಸಿರಿ ಅದೇ ಯೋಗದ ಹಿನ್ನಲೆ.
* ತನುವಿನ ಅಲಸ್ಯತನ ಮನದ ಚಂಚಲತೆ ಪ್ರಾಣದಾಸೆಯನ್ನು ನಿಯಂತ್ರಿಸುವುದೇ ಸೂರ್ಯ ನಮಸ್ಕಾರ, ಯೋಗದ ಗುರಿಯಾಗಿದೆ.
ಉತ್ತಮ ಆರೋಗ್ಯಕ್ಕಾಗಿ ಈ ರೀತಿಯ ಆರೋಗ್ಯ ಸಲಹೆಗಳನ್ನು ಪಾಲಿಸಿ.!
* ಮುಗುಳುನಗೆಯೊಂದಿಗೆ ಶಾರೀರಿಕ ಚಟುವಟಿಕೆಯನ್ನು ಪ್ರಸನ್ನತೆ ಯಿಂದ ಬರಿ ಹೊಟ್ಟೆಯಿಂದ ಸೂರ್ಯ ನಮಸ್ಕಾರ ಪ್ರಾರಂಭಿಸಿ.
* ಊಟ ಬಲ್ಲವನಿಗೆ ರೋಗವಿಲ್ಲ ನಿದ್ರೆ ಬಲ್ಲವನಿಗೆ ದಣಿವು ಇಲ್ಲ. ಮಾತು ಬಲ್ಲವನಿಗೆ ಜಗಳವಿಲ್ಲ, ದುಡಿಯುವವನಿಗೆ ಬಡತನವಿಲ್ಲ. ಕೋಪವೇ ತಾಪದ ಮೂಲ, ಸ್ನೇಹ ಸಂಜೀವಿನಿ.
* ದೇಹ ಮನಸ್ಸುಗಳಿಗೆ ತಕ್ಕ ಒಳ್ಳೆಯ ಕೆಲಸ ಕೊಟ್ಟು ಆಯಾಸ ಪಡೆದರೆ ಮಾತ್ರವೇ ಒಳ್ಳೆಯ ನಿದ್ರೆ ಮತ್ತು ಹಸಿವು ಚೆನ್ನಾಗಿರುತ್ತದೆ ಇಂದಿನ ಕೆಲ ಜನರಿಗೆ ಇದು ದುರ್ಲಭ.