Home Blog Page 114

LIC ಇಂದ ಬಂಪರ್ ಆಫರ್ ಒಂದು ಸಲ ಡೆಪೋಸಿಟ್ ಮಾಡಿದ್ರೆ ಸಾಕು ಜೀವನ ಪೂರ್ತಿ 26 ಸಾವಿರ ಪೆನ್ಷನ್ ಬರುತ್ತೆ.!

ಜೀವ ಅಕ್ಷಯ್ 7 ಹಾಗೂ ಜೀವನ್ ಶಾಂತಿ ಇವೆರಡೂ ಕೂಡ LIC ಯಲ್ಲಿ ಬರುವಂತಹ ಪಾಲಿಸಿ ಗಳಾಗಿದ್ದು ಇವೆರಡನ್ನು ನೀವೇನಾದರೂ ಮಾಡಿಸಿದರೆ ಇದರಿಂದ ಯಾವ ರೀತಿಯ ಪ್ರಯೋಜನಗಳನ್ನು ಪಡೆದು ಕೊಳ್ಳಬಹುದು ಹಾಗೂ ಈ ಪಾಲಿಸಿಯ ಲಾಭಗಳೇನು ಯಾರು ಈ ಪಾಲಿಸಿ ಮಾಡಿಸಿಕೊಳ್ಳಬಹುದು. ಹೀಗೆ ಈ ಪಾಲಿಸಿಗಳ ವಿಷಯಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಈ ಪಾಲಿಸಿ ಹೋಲ್ಡರ್ ಯಾವುದೋ ಕಾರಣದಿಂದ ಮರಣ ಹೊಂದಿ ದರೆ ಅವನು ಕಟ್ಟಿದ ಅಷ್ಟು ಹಣ ಪಾಲಿಸಿ ಹೋಲ್ಡರ್ ಯಾರನ್ನು ನಾಮಿನಿ ಕೊಟ್ಟಿರುತ್ತಾನೋ ಅವನಿಗೆ ಹಣ ಸೇರುತ್ತದೆ. ಹಾಗೂ ಅವರಿಗೆ ಲೈಫ್ ಟೈಮ್ ಪೆನ್ಶನ್ ಸಹ ಬರುತ್ತದೆ. ಹಾಗಾದರೆ ನೀವು ಈ ಎರಡು ಪಾಲಿಸಿಗಳನ್ನು ಮಾಡಿಸಬೇಕು ಎಂದರೆ ಯಾವುದೆಲ್ಲ ರೀತಿಯ ನಿಯಮಗಳನ್ನು ಪಾಲಿಸಬೇಕು ಹಾಗೂ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಹಾಗೂ ಎಷ್ಟು ವರ್ಷದವರೆಗೆ ಈ ಪಾಲಿಸಿ ಅವಧಿ ಇರುತ್ತದೆ.

ಹಾಗೂ ಇದರ ಕೊನೆಯ ಅವಧಿ ಯಾವುದು ಹೀಗೆ ಈ ಎಲ್ಲ ವಿಚಾರ ವಾಗಿ ಸಂಬಂಧಿಸಿದ ಹಲವಾರು ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.

• ಮೊದಲನೆಯದಾಗಿ ನ್ಯೂ ಜೀವನ್ ಶಾಂತಿ ಯೋಜನೆಯನ್ನು ನೀವು ಮಾಡಿಸಿಕೊಳ್ಳಬೇಕು ಎಂದರೆ ಯಾವುದೆಲ್ಲ ನಿಯಮಗಳನ್ನು ನೀವು ಅನುಸರಿಸಬೇಕು ಎನ್ನುವುದರ ಬಗ್ಗೆ ತಿಳಿಯೋಣ.
* ಈ ಪಾಲಿಸಿ ಪರ್ಚೇಸ್ ಮಾಡಿಕೊಳ್ಳುವುದಕ್ಕೆ ವಯಸ್ಸಿನ ಮಿತಿ ಕನಿಷ್ಠ 30 ವರ್ಷ ವಯಸ್ಸಾಗಿರಬೇಕು. ಹಾಗೂ ಗರಿಷ್ಟ 79 ವರ್ಷ ವಯಸ್ಸಿನ ಒಳಗಿನವರು ಈ ಪಾಲಿಸಿಯನ್ನು ಪಡೆದುಕೊಳ್ಳಬಹುದು.

* ಹಾಗೂ ನೀವು ಈ ಪಾಲಿಸಿಯನ್ನು ಎಷ್ಟು ವರ್ಷದವರೆಗೆ ಹಣ ಕಟ್ಟುತ್ತೀರಿ ಎಂದು ಆಯ್ಕೆ ಮಾಡಿಕೊಂಡಿರುತ್ತೀರೋ, ಅಷ್ಟು ದಿನ ಮುಗಿದ ನಂತರ ನಿಮಗೆ ಪೆನ್ಷನ್ ರೂಪವಾಗಿ ಹಣ ಬರಲು ಪ್ರಾರಂಭ ವಾಗುತ್ತದೆ.
* ಹಾಗೂ ನೀವು ಈ ಪಾಲಿಸಿಗೆ ಯಾರನ್ನ ಬೇಕಾದರೂ ಸೇರಿಸಿಕೊಳ್ಳ ಬಹುದು ಉದಾಹರಣೆಗೆ ನಿಮ್ಮ ಹೆಂಡತಿ ನಿಮ್ಮ ಮಕ್ಕಳು ಹೀಗೆ ಇವರಲ್ಲಿ ಒಬ್ಬರನ್ನು ಈ ಪಾಲಿಸಿಗೆ ಜಾಯಿನ್ ಮಾಡಿಕೊಳ್ಳಬಹುದು.

* ಈ ಪಾಲಿಸಿಯಲ್ಲಿ ನೀವು ಹಣ ಕಟ್ಟಲು ಪ್ರಾರಂಭವಾದ ಮೂರು ತಿಂಗಳ ಬಳಿಕ ನೀವು ಲೋನ್ ಪಡೆದುಕೊಳ್ಳಬೇಕು ಎಂದರೆ ಅರ್ಜಿ ಹಾಕಿ ಲೋನ್ ಪಡೆದುಕೊಳ್ಳಬಹುದು.
* ಹಾಗೂ ಈ ಪಾಲಿಸಿಯಲ್ಲಿ ನಿಮಗೆ ಎರಡು ರೀತಿಯ ಆಯ್ಕೆಗಳು ಇರುತ್ತದೆ ಅವೆರಡರಲ್ಲಿ ಯಾವುದು ಉತ್ತಮ ಎನಿಸುತ್ತದೆಯೋ ಅದನ್ನು ಆಯ್ಕೆ ಮಾಡಿಕೊಳ್ಳಬಹುದು ಒಮ್ಮೆ ಆಯ್ಕೆ ಮಾಡಿಕೊಂಡರೆ ಮತ್ತೆ ಬದಲಾಯಿಸುವಂತಿಲ್ಲ.

* ನೀವೇನಾದರೂ ಈ ಪಾಲಿಸಿ ನನಗೆ ಇಷ್ಟವಿಲ್ಲ ಇದನ್ನು ಕ್ಯಾನ್ಸಲ್ ಮಾಡುತ್ತೇನೆ ಎಂದರೆ ಮೂರು ತಿಂಗಳ ನಂತರ ನೀವು ಇದನ್ನು ಕ್ಯಾನ್ಸಲ್ ಮಾಡಿ ಕಟ್ಟಿದಂತಹ ಅಷ್ಟು ಹಣವನ್ನು ಪಡೆಯಬಹುದು.
• ಎರಡನೆಯದಾಗಿ ಜೀವನ್ ಅಕ್ಷಯ 7 ಯೋಜನೆಯನ್ನು ನೀವು ಮಾಡಿಸಿಕೊಳ್ಳಬೇಕು ಎಂದರೆ ಯಾವುದೆಲ್ಲ ನಿಯಮಗಳನ್ನು ನೀವು ಅನುಸರಿಸಬೇಕು ಎಂದರೆ.

* ಈ ಪಾಲಿಸಿ ಪರ್ಚೇಸ್ ಮಾಡಿಕೊಳ್ಳುವುದಕ್ಕೆ ವಯಸ್ಸಿನ ಮಿತಿ ಕನಿಷ್ಠ 30 ವರ್ಷ ವಯಸ್ಸಾಗಿರಬೇಕು. ಹಾಗೂ ಗರಿಷ್ಟ 85 ವರ್ಷ ವಯಸ್ಸಿನ ಒಳಗಿನವರು ಈ ಪಾಲಿಸಿಯನ್ನು ಪಡೆದುಕೊಳ್ಳಬಹುದು.
* ಜೀವನ್ ಅಕ್ಷಯ ಯೋಜನೆಯಲ್ಲಿ ನಿಮಗೆ ತಕ್ಷಣವೇ ಪೆನ್ಷನ್ ಹಣ ಬರುತ್ತದೆ.
* ಹಾಗೂ ನೀವು ಈ ಪಾಲಿಸಿಗೆ ಯಾರನ್ನ ಬೇಕಾದರೂ ಸೇರಿಸಿಕೊಳ್ಳ ಬಹುದು ಉದಾಹರಣೆಗೆ ನಿಮ್ಮ ಹೆಂಡತಿ ನಿಮ್ಮ ಮಕ್ಕಳು ಹೀಗೆ ಇವ ರಲ್ಲಿ ಒಬ್ಬರನ್ನು ಈ ಪಾಲಿಸಿಗೆ ಆಯ್ಕೆ ಮಾಡಿಕೊಳ್ಳಬಹುದು.
* ಇದರಲ್ಲೂ ಕೂಡ 3 ತಿಂಗಳ ನಂತರ ನೀವು ಲೋನ್ ಪಡೆಯಬಹುದು

* ಈ ಪಾಲಿಸಿಯಲ್ಲಿ 10 ಆಯ್ಕೆಗಳು ಇರುತ್ತದೆ ಇದರಲ್ಲಿ ಯಾವುದು ನಿಮಗೆ ಉತ್ತಮ ಎನಿಸುತ್ತದೆ ಅದನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು.
* ಈ ಪಾಲಿಸಿಯಲ್ಲಿಯೂ ಕೂಡ 3 ತಿಂಗಳ ನಂತರ ನೀವು ಇದನ್ನು ಕ್ಯಾನ್ಸಲ್ ಮಾಡಿಸಿ ಆನಂತರ ಹಣ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಕಣ್ಣಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರು ಈ ಟಿಪ್ಸ್ ಫಾಲೋ ಮಾಡಿ.!

ಕಣ್ಣಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರು ಈ ಟಿಪ್ಸ್ ಫಾಲೋ ಮಾಡಿ.!

ಕಣ್ಣು ಅತ್ಯಂತ ಪ್ರಮುಖ ಅಂಗ. ಹೌದು ಕಣ್ಣು ಪ್ರತಿಯೊಬ್ಬರಿಗೂ ಕೂಡ ಬಹಳ ಪ್ರಮುಖವಾದಂತಹ ಅಂಗವಾಗಿದ್ದು ಇದು ಸರಿ ಇದ್ದರೆ ಮಾತ್ರ ಆ ವ್ಯಕ್ತಿ ತನ್ನ ಜೀವನ ಪರ್ಯಂತ ಯಾವುದೇ ರೀತಿಯ ಸಮಸ್ಯೆ ಇಲ್ಲದೆ ಯಾರ ಸಹಾಯವೂ ಇಲ್ಲದೆ ಅವನು ಬದುಕಬಹುದು. ಹಾಗೇನಾದರೂ ಒಬ್ಬ ವ್ಯಕ್ತಿಯಲ್ಲಿ ಯಾವುದಾದರೂ ಕಣ್ಣಿನ ಸಮಸ್ಯೆ ಕಾಣಿಸಿಕೊಂಡರೆ ಅವನು ಜೀವನಪರ್ಯಂತ ಒಬ್ಬರ ಹಂಗಿನಲ್ಲಿ ಇರಬೇಕಾಗುತ್ತದೆ.

ಅಂದರೆ ಒಬ್ಬರ ಸಹಾಯವನ್ನು ಪಡೆದುಕೊಳ್ಳಲೇಬೇಕಾಗುತ್ತದೆ ಅಂತಹ ಪರಿಸ್ಥಿತಿ ನಮಗೆ ಈ ಕಣ್ಣಿನಿಂದ ಬರುತ್ತದೆ. ಆದ್ದರಿಂದ ಪ್ರತಿಯೊಬ್ಬರಿಗೂ ಕೂಡ ಕಣ್ಣು ಆರೋಗ್ಯವಾಗಿ ಇರುವುದು ಬಹಳ ಮುಖ್ಯವಾಗಿರುತ್ತದೆ. ಇದರ ಜೊತೆ ನಮ್ಮ ಕಣ್ಣು ಸರಿಯಾಗಿದ್ದು ಅದನ್ನು ನಾವು ಸರಿಯಾದ ರೀತಿಯಲ್ಲಿ ಕಾಪಾಡಿಕೊಳ್ಳಲಿಲ್ಲ ಎಂದರು ಕೂಡ ಅದರಿಂದ ಹಲವಾರು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.

ಹೌದು ನಾವು ನಮ್ಮ ಪ್ರತಿನಿತ್ಯದ ಜೀವನದಲ್ಲಿ ನಾವು ಪ್ರತಿಯೊಂದು ಕೆಲಸ ಕಾರ್ಯವನ್ನು ಹೇಗೆ ಮಾಡಬೇಕು ಎಂದು ಆಲೋಚನೆ ಮಾಡಿ ಮಾಡುತ್ತೇವೋ ಅದೇ ವಿಧವಾಗಿ ನಾವು ನಮ್ಮ ಕಣ್ಣಿನ ಆರೋಗ್ಯ ಚೆನ್ನಾಗಿರಲಿ ಅದು ಕ್ರಿಯಾ ಶೀಲವಾಗಿ ಇರಲಿ ಎನ್ನುವ ಉದ್ದೇಶದಿಂದ ಈಗ ನಾವು ಹೇಳುವಂತ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ.

ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಣ್ಣಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಯಾವ ಕೆಲವು ಉತ್ತಮ ವಿಧಾನಗಳನ್ನು ಅನುಸರಿಸಬೇಕು ಎಂದು ಈ ಕೆಳಗೆ ತಿಳಿಯೋಣ.

ಕಣ್ಣಿಗೆ ಹಲವು ಖಾಯಿಲೆಗಳ ಪರಿಹಾರಕ್ಕೆ ಅನುಸರಿಸಿರಿ ನಿಸರ್ಗ ಕ್ರಮ ಹಾಗೂ ಮನೆ ಮದ್ದು.
* ಕಣ್ಣನ್ನು ದಿನಾಲು ತಣ್ಣೀರಿನಲ್ಲಿ ಅದ್ದಿ ಪಿಳುಕಿಸುವುದು. ಅಂದರೆ ನಿಮ್ಮ ಅಂಗೈಯನ್ನು ಸ್ವಚ್ಛವಾಗಿ ತೊಳೆದು ಅಲ್ಲಿ ನೀರನ್ನು ಇಟ್ಟು ಅದರ ಒಳಗೆ ನಿಮ್ಮ ಕಣ್ಣುಗಳನ್ನು ಅದ್ದಿದರೆ ಕಣ್ಣಿನಲ್ಲಿ ಯಾವುದೇ ರೀತಿಯ ಸಣ್ಣ ಕ್ರಿಮಿ ಧೂಳು ಇದ್ದರೂ ಕೂಡ ಅದು ಆಚೆ ಬರುತ್ತದೆ. ಆದ್ದರಿಂದ ಈ ವಿಧಾನವನ್ನು ಪ್ರತಿಯೊಬ್ಬರು ಅನುಸರಿಸುವುದು ತುಂಬಾ ಒಳ್ಳೆಯದು.

* ದಿನಾಲು ತಲೆ ಸ್ನಾನವನ್ನು ಮಾಡಬೇಕು ನೀರು ತುಂಬಾ ಬಿಸಿ ಬೇಡಾ. ಇದು ಕಣ್ಣಿನ ಮೇಲೆ ಪರಿಣಾಮ ಬೀರುತ್ತದೆ.
* ಕಣ್ಣಿನ ಬಹುತೇಕ ತೊಂದರೆಗಳಿಗೆ ಸರ್ವಾಂಗಾಸನ, ಶಿರ್ಷಾಸನ ತುಂಬಾ ಒಳ್ಳೆಯದು. ಈ ಆಸನಗಳನ್ನು ಮಾಡುವುದರಿಂದ ಕಣ್ಣಿಗೆ ಸಂಬಂಧಿಸಿದ ನರಗಳು ಕ್ರಿಯಾಶೀಲವಾಗುತ್ತದೆ ಹಾಗೂ ರಕ್ತ ಸಂಚಾರವು ಸುಲಭವಾಗಿ ಹರಿಯುತ್ತದೆ ಇದರಿಂದ ಕಣ್ಣಿಗೆ ಸಂಬಂಧಿಸಿದೆ ಯಾವುದೇ ಸಮಸ್ಯೆಗಳು ಕೂಡ ಬರುವುದಿಲ್ಲ ಹಾಗೇನಾದರೂ ಸ್ವಲ್ಪ ಪ್ರಮಾಣದಲ್ಲಿ ಇದ್ದರೆ ಅದು ದಿನೇ ದಿನೇ ಸರಿಹೋಗುತ್ತಾ ಬರುತ್ತದೆ.

* ಬೆಳಗಿನ ಜಾವ ಸೂರ್ಯೋದಯ ನೋಡುವುದು ಒಳ್ಳೆಯದು. ಹೌದು ಸೂರ್ಯನ ಬೆಳಕಿನಲ್ಲಿ ನಮಗೆ ವಿಟಮಿನ್ ಡಿ ಅಂಶ ಸಿಗುವುದರಿಂದ ಬೆಳಗಿನ ಜಾವದ ಎಳೆ ಬಿಸಿಲನ್ನು ನೋಡುವುದರಿಂದ ಕಣ್ಣಿಗೆ ತುಂಬಾ ಒಳ್ಳೆಯದು.
* ಕಣ್ಣು ಮಂದವಾಗದಂತೆ ತಡೆಯಲು ಹಾಗೂ ದೃಷ್ಟಿ ಸುಧಾರಿಸಿ ಕೊಳ್ಳಲು ಬೇವಿನ ಮರದಲ್ಲಿ ಇಟ್ಟ ಜೇನು ತುಪ್ಪವನ್ನು ದಿನಾಲು ಕಣ್ಣಿ ನಲ್ಲಿ ತಲಾ ಒಂದು ಹನಿ ಹಾಕಿಕೊಳ್ಳುವುದು.

* ಕಣ್ಣಿನಲ್ಲಿ ಉರಿ ಹಾಗೂ ಕಣ್ಣು ಕೆಂಪಾಗಿದ್ದರೆ ದಿನ ಮೂರು ಹನಿ ಎಳನೀರು ಹಾಕುವುದು.
* ಕಣ್ಣಿನಲ್ಲಿ ಕಸ ಬಿದ್ದರೆ ಔಡಲ ಎಣ್ಣೆಯನ್ನು ಹಾಕಬೇಕು.
* ಕಣ್ಣಿನ ದೃಷ್ಟಿ ಚೆನ್ನಾಗಿರಲು ಹಸಿರು ತರಕಾರಿ, ಗಜ್ಜರಿ, (ಕ್ಯಾರೆಟ್) ನೆಲ್ಲಿಕಾಯಿ, ವಿಶೇಷವಾಗಿ ಹೊನ್ನೆಗೊನೆ ಸೊಪ್ಪು ಹಾಗೂ ಕಿರುತಸಾಲಿ ಸೊಪ್ಪು ಒಳ್ಳೆಯದು.
* ಇರುಳು ಗಣ್ಣು ತಡೆಯಲು ದಿನಾಲು 2 ತಿಂಗಳು ಕೃಷ್ಣ ತುಳಸಿ ರಸ ಎರಡು ಕಣ್ಣಿಗೆ ತಲಾ 1 ಹನಿ ಹಾಕಬೇಕು.

ಕಪ್ಪು ಕಲೆ, ಭಂಗು ಮುಖದಲ್ಲಿ ಎಷ್ಟೇ ಮೊಡವೆ ಇದ್ದರೂ 100% ವಾಸಿಯಾಗುತ್ತೆ.!

 

ಸಾಮಾನ್ಯವಾಗಿ ಕೆಲವೊಂದಷ್ಟು ಜನರ ಮುಖದ ಮೇಲೆ ಕೈಕಾಲುಗಳಲ್ಲಿ ಬಂಗು ಕಾಣಿಸಿಕೊಳ್ಳುತ್ತದೆ ಹೌದು ಈ ರೀತಿಯ ಸಮಸ್ಯೆಯಿಂದ ಹಲ ವಾರು ಜನ ಸಮಸ್ಯೆಯನ್ನು ಅನುಭವಿಸುತ್ತಿದ್ದು ಅದನ್ನು ಗುಣಪಡಿಸಿ ಕೊಳ್ಳುವುದಕ್ಕೆ ಹೆಚ್ಚಿನ ಹಣವನ್ನು ಖರ್ಚು ಮಾಡುತ್ತಿರುತ್ತಾರೆ. ಆದರೆ ಅವರು ಎಷ್ಟೇ ಖರ್ಚು ಮಾಡಿದರೂ ಕೂಡ ಅದು ವಾಸಿಯಾಗುತ್ತಿರುವುದಿಲ್ಲ.

ಆದ್ದರಿಂದ ಈ ಸಮಸ್ಯೆ ಬರುವುದಕ್ಕೆ ಪ್ರಧಾನವಾಗಿರುವಂತಹ ಕಾರಣ ಏನು ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಹೌದು ಅದಕ್ಕೆ ಕಾರಣ ಏನು ಎಂದು ತಿಳಿದು ಅದನ್ನು ಸರಿಪಡಿಸಿಕೊಳ್ಳುವುದರ ಮೂಲಕ ನೀವು ಈ ತೊಂದರೆಯನ್ನು ಸಂಪೂರ್ಣವಾಗಿ ದೂರ ಮಾಡಿ ಕೊಳ್ಳಬಹುದು. ಹಾಗಾದರೆ ಈ ದಿನ ಮುಖದ ಮೇಲೆ ಕಾಣಿಸಿ ಕೊಳ್ಳುವ ಕಪ್ಪು ಕಲೆ, ಬಂಗು ಈ ರೀತಿಯ ಎಷ್ಟೇ ಸಮಸ್ಯೆಗಳಿದ್ದರೂ.

ಅದನ್ನು ಹೇಗೆ ದೂರ ಮಾಡಿಕೊಳ್ಳುವುದು ಯಾವ ಮನೆ ಮದ್ದುಗಳನ್ನು ನಾವು ಉಪಯೋಗಿಸುವುದರಿಂದ ಈ ಸಮಸ್ಯೆ ದೂರವಾಗುತ್ತದೆ ಎನ್ನುವ ಮಾಹಿತಿಯನ್ನು ತಿಳಿಯೋಣ. ಹಾಗಾದರೆ ಈ ಸಮಸ್ಯೆಗೆ ಬಹಳ ಪ್ರಮುಖವಾದಂತಹ ಕಾರಣ ಏನು ಎಂದು ನೋಡುವುದಾದರೆ.

* ನಾವು ಮೊದಲನೆಯದಾಗಿ ಬೇಕರಿ ಪದಾರ್ಥಗಳು ಎಣ್ಣೆ ಯಲ್ಲಿ ಕರಿದ ಪದಾರ್ಥಗಳು ಬೀದಿ ಬದಿಯಲ್ಲಿ ಮಾರಾಟ ಮಾಡುವ ಆಹಾರ ಪದಾರ್ಥಗಳು ಇಂತಹ ಅನಾರೋಗ್ಯ ಹೆಚ್ಚಿಸುವ ಆಹಾರ ಪದಾರ್ಥಗಳನ್ನು ನಾವು ಸಂಪೂರ್ಣವಾಗಿ ತ್ಯಜಿಸಬೇಕು.

ಇದರ ಜೊತೆ ತಡವಾಗಿ ಆಹಾರ ಸೇವನೆ ಮಾಡುವುದು ತಡವಾಗಿ ಮಲಗುವುದು, ತಡವಾಗಿ ಏಳುವುದು, ಧೂಮಪಾನ ಮಧ್ಯಪಾನ ಬೀಡಿ ಸಿಗರೇಟು ಇಂತಹ ದುಶ್ಚಟಗಳಿಂದ ಆದಷ್ಟು ದೂರ ಇರಬೇಕು. ಹೀಗೆ ಇಷ್ಟು ಕೂಡ ಈ ಸಮಸ್ಯೆಗಳು ಬರುವುದಕ್ಕೆ ಪ್ರಧಾನವಾದಂತಹ ಕಾರಣಗಳು.

ಇದರ ಜೊತೆ ನಾವು ಯಾವ ಕೆಲವು ಉತ್ತಮವಾದ ವಿಧಾನ ಅನುಸರಿಸ ಬೇಕು ಎಂದು ನೋಡುವುದಾದರೆ.
* ಆಹಾರ ಸೇವನೆ ಮಾಡಬೇಕು ಎಂದಾರೆ ಆಹಾರದಲ್ಲಿ ಹೆಚ್ಚಿನ ಖಾರ ಉಪ್ಪು ಹುಳಿ ಅಂಶ ಇರಬಾರದು. ಹಾಗೂ ಹೆಚ್ಚು ಮಸಾಲೆ ಭರಿತ ಆಹಾರ ಪದಾರ್ಥ ಸೇವನೆ ನಿಲ್ಲಿಸಬೇಕು.
* ಕಾಫಿ ಚಹಾ ಇವುಗಳನ್ನು ಕಡ್ಡಾಯವಾಗಿ ಬಿಡಬೇಕು.
* ವಾತ ಪಿತ್ತ ಕಫ ಸಮಸ್ಯೆಗಳನ್ನು ಉಂಟುಮಾಡುವಂತಹ ಆಲೂಗಡ್ಡೆ ಬದನೆಕಾಯಿ ಹಸಿಮೆಣಸಿನಕಾಯಿ ಇವುಗಳೆಲ್ಲವನ್ನು ಸಹ ನಾವು ಸಂಪೂರ್ಣವಾಗಿ ಬಿಡಬೇಕು.

* ಆದಷ್ಟು ನಮ್ಮ ಆಹಾರ ಸೇವನೆ ಮಾಡುವ ಸಮಯವನ್ನು ಕ್ರಮಬದ್ಧ ವಾಗಿ ಅನುಸರಿಸಬೇಕು. ಈ ಎಲ್ಲಾ ವಿಧಾನಗಳನ್ನು ಅನುಸರಿಸುವುದ ರಿಂದ ಮೇಲೆ ಹೇಳಿದ ಸಮಸ್ಯೆಗಳು ಬರುವುದೇ ಇಲ್ಲ. ಹಾಗಾದರೆ ಮೇಲೆ ಹೇಳಿದಂತೆ ಮುಖದ ಮೇಲೆ ಕಾಣಿಸಿಕೊಳ್ಳುವಂತಹ ಬಂಗು ಇಂತಹ ಸಮಸ್ಯೆಗಳನ್ನು ನಾವು ದೂರ ಮಾಡಿಕೊಳ್ಳುವುದಕ್ಕೆ ಯಾವ ಕೆಲವು ಪರಿಹಾರ ಮಾರ್ಗಗಳನ್ನು ಮಾಡಿಕೊಳ್ಳಬೇಕು ಎಂದು ನೋಡುವುದಾದರೆ.

* ಕಕ್ಕೆ ಮರದ ಹೂವುಗಳನ್ನು ತಂದು ಅದನ್ನು ಸಂಪೂರ್ಣವಾಗಿ ನೆರಳಿನಲ್ಲಿ ಒಣಗಿಸಿ ಕೊಳ್ಳಬೇಕು ಆನಂತರ ಅದನ್ನು ಚೆನ್ನಾಗಿ ಪುಡಿ ಮಾಡಿ ಅದನ್ನು ಕೊಬ್ಬರಿ ಎಣ್ಣೆಯ ಜೊತೆ ಮಿಶ್ರಣ ಮಾಡಿ ಬಂಗು ಇರುವ ಜಾಗಕ್ಕೆ ಹಚ್ಚುತ್ತಾ ಬಂದರೆ ಎಷ್ಟೇ ಬಂಗು ಇದ್ದರೂ 7 ದಿನದಲ್ಲಿ ಗುಣಮುಖವಾಗುತ್ತದೆ. ಕೆಲವೊಂದಷ್ಟು ಜನರಿಗೆ 7 ದಿನದಲ್ಲಿ ಗುಣಮುಖವಾಗಲಿಲ್ಲ ಎಂದರೆ ಕಡ್ಡಾಯವಾಗಿ 21 ದಿನ ಹಚ್ಚುತ್ತಾ ಬನ್ನಿ.

* ಕೆಲವೊಂದಷ್ಟು ಜನರಿಗೆ ಈ ವಿಧಾನ ಸರಿಯಾದ ಫಲಿತಾಂಶ ಕೊಡಲಿಲ್ಲ ಎಂದರೆ ಅಂಥವರು ಪಂಚಕರ್ಮ ಚಿಕಿತ್ಸಾ ವಿಧಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಹೌದು ನಿಮ್ಮ ಹತ್ತಿರದ ಆಯುರ್ವೇದದ ಆಸ್ಪತ್ರೆಗಳಿಗೆ ಹೋಗಿ ಅಲ್ಲಿ ನೀವು ಈ ಚಿಕಿತ್ಸೆ ಪಡೆಯುವುದು ಉತ್ತಮ. ಹಾಗಾಗಿ ಈ ಸಮಸ್ಯೆ ಇದ್ದವರು ಮೇಲೆ ಹೇಳಿದ ಈ ವಿಧಾನಗಳನ್ನು ಅನುಸರಿಸುವುದರ ಮೂಲಕ ಈ ಸಮಸ್ಯೆಯನ್ನು ನೀವು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದಾಗಿದೆ.

https://youtu.be/pxIEg15CkCs?si=AREjwk9pw3vEBNC8

ಗೃಹಿಣಿಯರಿಗೆ ಉಪಯುಕ್ತವಾದ ಒಂದಿಷ್ಟು ಸಲಹೆಗಳು.!

 

* ಈರುಳ್ಳಿಯನ್ನು ಫ್ರಿಡ್ಜ್ ನಲ್ಲಿ ಎಂದಿಗೂ ಶೇಖರಣೆ ಮಾಡಬಾರದು ಇಟ್ಟರೆ ಬೇಗ ಕೆಡುತ್ತದೆ ಮತ್ತು ಆರೋಗ್ಯಕ್ಕೂ ಒಳ್ಳೆಯದಲ್ಲ. ಹಾಗೂ ಈರುಳ್ಳಿ ಸಿಪ್ಪೆಯನ್ನು ತೆಗೆದು ಸ್ವಲ್ಪ ಸಮಯ ಬಿಟ್ಟು ಆನಂತರ ಕತ್ತರಿಸಿದರೆ ಈರುಳ್ಳಿಯನ್ನು ಕತ್ತರಿಸಿದರೆ ಕಣ್ಣೀರು ಬರುವುದಿಲ್ಲ.

* ಶುಂಠಿಯನ್ನು ಮನೆಗೆ ತಂದಾಗ ಜಾಸ್ತಿ ಉಳಿದಿದ್ದರೆ ಅದನ್ನು ಬಿಸಿಲಿ ನಲ್ಲಿ ಒಣಗಿಸಿ ತುಂಬಾ ದಿನಗಳವರೆಗೂ ಉಪಯೋಗಿಸಬಹುದು.
* ಯಾವುದೇ ಕಾರಣಕ್ಕೂ ಉಪ್ಪನ್ನು ಪ್ಲಾಸ್ಟಿಕ್ ಡಬ್ಬಿಯಲ್ಲಿ ಇಡಬಾರದು
* ಉಪ್ಪನ್ನು ಸ್ಟೀಲ್ ಪಾತ್ರೆಯಲ್ಲಿ ಇಟ್ಟರೆ ಅದು ತೂತು ಮಾಡುತ್ತದೆ
* ದವಸ ಧಾನ್ಯಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ನಂತರ ಡಬ್ಬಿಯೊಳಗಿಟ್ಟರೆ ಅವು ತೇವವಾಗುವುದಿಲ್ಲ ಹಾಗೂ ಹಾಳಾಗುವುದಿಲ್ಲ.

* ಹುಣಸೆ ಹಣ್ಣನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಇಟ್ಟರೆ ಹುಳು ಬೀಳುವುದಿಲ್ಲ ಹಾಗೂ ಹುಣಸೆಹಣ್ಣು ಕೆಡುವುದಿಲ್ಲ.
* ಹುಣಸೆ ಹಣ್ಣನ್ನು ತಂದು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ನಂತರ ಅದರ ಒಳಗಿರುವ ಬೀಜವನ್ನು ತೆಗೆದು ಮತ್ತೊಮ್ಮೆ ಒಣಗಿಸಿ ಶೇಖರಣೆ ಮಾಡಿದರೆ ಮೂರು ವರ್ಷಗಳವರೆಗೆ ಇಟ್ಟರು ಹಾಳಾಗುವುದಿಲ್ಲ.
* ಈರುಳ್ಳಿಯನ್ನು ಗಾಳಿ ಆಡುವಂತಹ ಸ್ಥಳದಲ್ಲಿ ಇಡಬೇಕು ಅಂದರೆ ತಂತಿಯ ಬುಟ್ಟಿಯಲ್ಲಿ ಅಥವಾ ತಂತಿಯ ಮರದ ಬುಟ್ಟಿಯಲ್ಲಿ ಹಾಕಿ ಇಟ್ಟರೆ ಅವು ಬೇಗ ಕೊಳೆಯುವುದಿಲ್ಲ.

* ಅಕ್ಕಿ ರವೆ ಅಕ್ಕಿ ನುಚ್ಚು ಕಡಲೆಕಾಯಿ ಬೀಜ ಇದನ್ನು ಸಮಯವಿದ್ದಾಗ ಚೆನ್ನಾಗಿ ಉರಿದಿಟ್ಟರೇ ತಂದು ತಿಂಗಳಾದರೂ ಹಾಳಾಗುವುದಿಲ್ಲ ನಿಮಗೆ ಬೇಕಾದ ಸಮಯದಲ್ಲಿ ತೆಗೆದು ಉಪಯೋಗಿಸಬಹುದು.
* ಹೆಸರು ಕಾಳು ಮಡಕೆ ಕಾಳು ಇತ್ಯಾದಿಗಳನ್ನು ನೀರಿನಲ್ಲಿ ಎಂಟು ಗಂಟೆ ನೆನೆಸಿ ನೀರನ್ನು ತೂತಿನ ಬೋಸಿಯ ಸಹಾಯದಿಂದ ಬಸಿದು ಕಾಳು ಗಳನ್ನು ಉದ್ದವಾಗಿ ಮೊಳಕೆ ಬರಲು ಬಿಡಬಾರದು ಸ್ವಲ್ಪ ಮೊಳಕೆ ಬಂದರೆ ಸಾಕು ಅದನ್ನೇ ಉಪಯೋಗಿಸಬೇಕು.

* ಶುಂಠಿಯನ್ನು ಮಣ್ಣಿನೊಳಗೆ ಹೂತಿಟ್ಟು ಬೇಕಾದ ಸಮಯದಲ್ಲಿ ತೆಗೆದುಕೊಂಡರೆ ಹೆಚ್ಚು ಕಾಲದವರೆಗೂ ಅದು ಹಾಳಾಗಿರುವುದಿಲ್ಲ ಫೆಶ್ ಆಗಿ ಇರುತ್ತದೆ.
* ಖಾರದ ಪುಡಿ ಹಾಗೂ ಉಡಿ ಡಬ್ಬಿಗಳಲ್ಲಿ ಒಂದು ಹಿಡಿಯುಪ್ಪು ಮತ್ತು ಸ್ವಲ್ಪ ಇಂಗನ್ನು ಬಟ್ಟೆಗೆ ಕಟ್ಟಿ ಹಾಕಿದರೆ ವರ್ಷವಿಟ್ಟರು ಕೆಡುವುದಿಲ್ಲ.

* ಸಾಸಿವೆ, ಕಡಲೆ ಕಾಯಿ ಬೀಜ, ಜೀರಿಗೆ, ಎಳ್ಳು ಮುಂತಾದ ದಾನ್ಯ ಗಳನ್ನು ಸಮಯವಿದ್ದಾಗ ಉರಿದು ಹಾರಿಸಿ ಡಬ್ಬಿಯಲ್ಲಿ ತುಂಬಿಟ್ಟರೆ ಬಹಳ ದಿನದವರೆಗೂ ಕೆಡುವುದಿಲ್ಲ ಸಮಯವಿದ್ದಾಗ ನಾವು ಅದನ್ನು ಉಪಯೋಗಿಸಬಹುದು. ಇದರಿಂದ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು.

ಇಂತಹ ಕೆಲವು ವಿಧಾನಗಳನ್ನು ಅನುಸರಿಸುವುದರಿಂದ ಕೆಲವೊಂದಷ್ಟು ಆಹಾರ ಪದಾರ್ಥಗಳನ್ನು ಹೇಗೆ ಎಷ್ಟು ದಿನದವರೆಗೆ ಇಡಬಹುದು ಎನ್ನುವಂತಹ ಮಾಹಿತಿ ತಿಳಿಯುತ್ತದೆ. ಹಾಗೂ ಅದು ಹಾಳಾಗದಂತೆ ಇಂತಹ ವಿಧಾನಗಳನ್ನು ಅನುಸರಿಸುವುದು ಕೂಡ ಅಷ್ಟೇ ಮುಖ್ಯ ವಾಗಿರುತ್ತದೆ.

ಹೌದು ಮನೆಯಲ್ಲಿರುವಂತಹ ಮಹಿಳೆಯರು ಅಡುಗೆ ಮನೆಯ ವಿಚಾರವಾಗಿ ಅಡುಗೆ ಮನೆಯಲ್ಲಿ ಉಪಯೋಗಿಸುವ ಸಾಮಾನುಗಳ ವಿಚಾರವಾಗಿ ಅವುಗಳನ್ನು ಹೇಗೆ ಚೆನ್ನಾಗಿರುವಂತೆ ನೋಡಿಕೊಳ್ಳುವುದು ಅದು ಹಾಳಾಗದಂತೆ ನಾವು ಯಾವ ಕೆಲವು ವಿಧಾನಗಳನ್ನು ಅನುಸರಿಸ ಬೇಕು ಎನ್ನುವ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಇಲ್ಲವಾದರೆ ಅವೆಲ್ಲವೂ ಕೂಡ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಮೇಲೆ ಹೇಳಿದ ಅಷ್ಟು ವಿಧಾನಗಳನ್ನು ಕೂಡ ನೀವು ಅನುಸರಿಸುವುದರಿಂದ ಯಾವುದೇ ಪದಾರ್ಥಗಳನ್ನು ಹಾಳು ಮಾಡುವ ಅವಶ್ಯಕತೆ ಬರುವುದಿಲ್ಲ ಹಾಗು ಅದನ್ನು ಹೆಚ್ಚು ದಿನಗಳ ವರೆಗೆ ಶೇಖರಣೆ ಮಾಡಿಕೊಳ್ಳಬಹುದು. ಈ ಮಾಹಿತಿ ಮನೆಯಲ್ಲಿರು ವಂತಹ ಪ್ರತಿಯೊಬ್ಬರಿಗೂ ಕೂಡ ತುಂಬಾ ಅನುಕೂಲವಾಗಿದ್ದು ಎಲ್ಲರೂ ಕೂಡ ಈ ವಿಧಾನ ಅನುಸರಿಸುವುದು ಕೂಡ ಅಷ್ಟೇ ಬಹಳ ಮುಖ್ಯವಾಗಿರುತ್ತದೆ.

ಮನೆಯಲ್ಲಿ ಕೋಪದಲ್ಲಿ ಅಪ್ಪಿತಪ್ಪಿಯೂ ಈ ಪದಗಳನ್ನು ಬಳಸಬೇಡಿ.!

 

ಈ ಪದಗಳನ್ನು ಉಚ್ಚರಿಸಿದರೂ ಸಾಕು ದುರದೃಷ್ಟ ನಿಮ್ಮನ್ನು ಬೆನ್ನಟ್ಟುತ್ತದೆ. ಮಾತು ಆಡಿದರೆ ಹೋಯ್ತು, ಮುತ್ತು ಹೊಡೆದರೆ ಹೋಯ್ತು ಎಂಬ ಗಾದೆ ಮಾತಿನಂತೆ ಬೈಗುಳ ಮಾತುಗಳನ್ನು ಆಡಿದರೆ ಆಡಿದವನಿಗೂ ಕೇಡು ಆಡಿಸಿಕೊಂಡವನಿಗೂ ಕೇಡು ಯಾಕೆಂದರೆ ಅವು ಜಗಳವನ್ನೇ ಸೃಷ್ಟಿಸುತ್ತವೆ.

ಆದರೆ ಕೆಲವೊಮ್ಮೆ ನಾವು ಕೆಲವು ಪದ ಮಾತುಗಳನ್ನು ನಮ್ಮನಮ್ಮಲ್ಲೇ ಉಚ್ಚರಿಸುತ್ತಾ ಇರುತ್ತೇವೆ ಅವು ಹಾಗೆ ಮಾತಾಡುವವನಿಗೇ ಸ್ವತಃ ಹಾನಿ. ಅವುಗಳನ್ನು ನಾವು ಗಟ್ಟಿ ಯಾಗಿ ಉಚ್ಚರಿಸಲೂಬಾರದು ಕೆಲವು ಪದಗಳನ್ನು ಹೇಳಲೂಬಾರದು. ಹಾಗೆ ಹೇಳುವಾಗ ಆಕಾಶದಲ್ಲಿ ಸಂಚರಿಸುವ ತಥಾಸ್ತು ದೇವತೆಗಳು ತಥಾಸ್ತು ಎಂದರೆ ಹಾಗೇ ಆಗಿಬಿಡುತ್ತವೆ ಎಂಬ ನಂಬಿಕೆಯಿದೆ. ಇದು ಸುಳ್ಳಲ್ಲ ಎಂದು ಚಾಣಕ್ಯನೂ ಸಮರ್ಥಿಸುತ್ತಾನೆ. ಹಾಗಿದ್ದರೆ ಬನ್ನಿ ಆ ಮಾತುಗಳಾವುವು ಎಂದು ನೋಡೋಣ.

* ಥೂ ದರಿದ್ರ :-
ನಾವು ಕೆಲವೊಮ್ಮೆ ನಮಗೆ ಏನಾದರೂ ಕೆಟ್ಟದಾದರೆ ನಮಗೆ ಇಷ್ಟವಾಗ ದವರು ಯಾರಾದರೂ ಬಂದರೇ ನಮಗೆ ಬೇಡದೇ ಇದ್ದದ್ದು ದೊರೆತರೆ ಬೇಕಿದ್ದದ್ದು ಸಿಕ್ಕದೇ ಹೋದರೆ ಹೀಗೆ ಬೈದುಕೊಳ್ಳುತ್ತೇವೆ. ದರಿದ್ರ ಎಂಬ ಪದದ ಅರ್ಥ ಬಡತನ ಎಂದು. ದರಿದ್ರ ಎಂದು ಬೈದುಕೊಳ್ಳುವವನ ಮೇಲೇ ಬಡತನಕ್ಕೆ ಪ್ರೀತಿ ಉಂಟಾಗುತ್ತದಂತೆ. ಆದ್ದರಿಂದ ತಪ್ಪಿಯೂ ಇದನ್ನು ಹೇಳಬೇಡಿ.

* ಗ್ರಹಚಾರ : –
ಜಾತಕದಲ್ಲಿ ಗ್ರಹಗಳು ತಮ್ಮ ತಮ್ಮ ಮನೆಯಲ್ಲಿ ನಡೆಯುವುದನ್ನು ಗ್ರಹಚಾರ ಎನ್ನುತ್ತಾರೆ. ಆದರೆ ನಾವು ಗ್ರಹಚಾರ ಎಂದು ಉದ್ಧರಿಸು ವುದು ನಮಗೆ ಏನಾದರೂ ಕೆಟ್ಟದು ಸಂಭವಿಸಿದಾಗ ನಾವು ಆಡುವ ಮಾತಿನ ಧ್ವನಿಯಲ್ಲಿ ಕೆಟ್ಟದು ಎಂಬುದು ಹೊರಸೂಸುತ್ತಾ ಇರುತ್ತದೆ. ಇದು ನಿಮ್ಮ ಜಾತಕದಲ್ಲಿರುವ ಕೆಲವು ಗ್ರಹಗಳಿಗೆ ಇಷ್ಟವಾಗದು. ಹೀಗಾಗಿ ಗ್ರಹಗಳಿಗೆ ಕೋಪ ತರಿಸಬೇಡಿ.

* ಅನಿಷ್ಟ :-
ಅನಿಷ್ಟ ಎಂಬ ಪದದ ಅರ್ಥ ಇಷ್ಟವಲ್ಲದ್ದು ಎಂಬುದು ಮಾತ್ರ. ಆದರೆ ಅನಿಷ್ಠ ಎಂದು ಉದ್ಧರಿಸುವಾಗ ನೀವು ಕೋಪದಿಂದ ದುಃಖದಿಂದ ವ್ಯಾಕುಲರಾಗಿರುತ್ತೀರಿ. ಇನ್ನೊಬ್ಬರಿಗೆ ಬಯ್ಯುತ್ತಿರುತ್ತೀರಿ. ಇದು ಸಲ್ಲದು. ಕೆಲವೊಮ್ಮೆ ನಿಮ್ಮ ಬಂಧುಗಳಿಗೇ (ಸಾಮಾನ್ಯವಾಗಿ ಗಂಡ ಹೆಂಡತಿಗೆ, ತಂದೆ ತಾಯಿ ಮಕ್ಕಳಿಗೆ) ಬಯ್ಯುವುದು ಸಾಮಾನ್ಯ. ಇದು ಅನಿಷ್ಟವನ್ನೇ ಉಂಟುಮಾಡೀತು ಜಾಗ್ರತೆ.

* ಎಲಾ ಶನಿ :-
ಕೆಲವೊಮ್ಮೆ ನಮ್ಮನ್ನು ನಕ್ಷತ್ರಿಕನಂತೆ ಕಾಡುವ ಕೆಲವರನ್ನು ಇದ್ದಕ್ಕಿದ್ದಂತೆ ಕಂಡಾಗ ಎಲಾ ಶನಿ ಎಂದು ಉದ್ಧರಿಸುವುದುಂಟು. ಅಂದರೆ ಆತ/ ಆಕೆ ಕಾಟ ಕೊಡಲು ಬಂದಿದ್ದಾನೆ/ಳೆ ಎಂಬ ಅರ್ಥ ಧ್ವನಿಸುತ್ತದೆ. ಆದರೆ ಈ ಮಾತು ಶನಿಗೆ ಇಷ್ಟವಾಗುವುದಿಲ್ಲ. ಶನಿ ಎಂದರೆ ಬರೀ ಕಷ್ಟ ಕೊಡುವುದಕ್ಕಿರುವವನಲ್ಲ ಆತ ಸುಯೋಗ ಉಂಟುಮಾಡುವವನೂ ಕೂಡ. ಹೀಗಾಗಿ ಈ ಪದಪ್ರಯೋಗ ಬೇಡ.

* ಶಾಪ :-
ಇದೊಂದು ಶಾಪ ಎಂದು ಸಿಟ್ಟಿನಿಂದ ಯಾರಾದರೂ ಅರಚಾಡುವುದನ್ನು ನೀವು ನೋಡಬಹುದು. ನಿಜಕ್ಕೂ ಆತನಿಗೆ ಯಾರದೂ ಶಾಪ ಇದ್ದಿರ ಲಾರದು. ಆದರೆ ಗಾಳಿಯಲ್ಲಿ ತೇಲಾಡುತ್ತಾ ಇರುವ ಯಾರ್ಯಾರದೋ ಶಾಪಗಳು ದುಃಖಗಳು ಆತನನ್ನು ಬಂದು ಅಂಟಿಕೊಳ್ಳುವುದು ಖಂಡಿತ.

* ಹಾಳಾಗಿ ಹೋಗು, ಸರ್ವನಾಶವಾಗು : –
ಜಗಳವಾಗುವಾಗ ಯಾರಾದರ ಮೇಲಾದರೂ ತುಂಬ ಸಿಟ್ಟು ಬಂದರೆ ಹೀಗೆ ಹೇಳಿಹೋಗುವುದು ಸಹಜ. ಆದರೆ ಇಂಥ ಮಾತುಗಳು ಆಡಿದ ವರ ಬದುಕಿನ ಮೇಲೂ ಪ್ರಭಾವ ಬೀರುತ್ತವೆ. ಆದ್ದರಿಂದ ಎಚ್ಚರಿಕೆ ಯಿಂದಿರಿ. ಇನ್ನು ಕೆಲವೊಮ್ಮೆ ನೀವು ಆ ಅರ್ಥದಲ್ಲಿ ಉದ್ದೇಶಿಸರದೇ ಇದ್ದರೂ ದೇವತೆಗಳು ತಥಾಸ್ತು ಎಂದುಬಿಡಬಹುದು. ಹೀಗಾಗಿ ಪ್ರೀತಿಪಾತ್ರರ ಜತೆ ಜಗಳವಾಡುವಾಗ ಇವನ್ನು ಬಳಸಬೇಡಿ. ಹೌದು ಈ ಪದಗಳು ತುಂಬಾ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ ಆದ್ದರಿಂದ ನಾವು ಮಾತನಾಡುವಾಗ ಪ್ರತಿಯೊಂದು ಪದದ ಮೇಲೆ ನಿಗಾ ಇಡುವುದು ಒಳ್ಳೆಯದು.

ಜಮೀನಿನಲ್ಲಿ ಮನೆ, ಫಾರ್ಮ್ ಹೌಸ್, ಗುಡಿಸಲು, ಕೊಟ್ಟಿಗೆ, ಕಟ್ಟಿಕೊಂಡವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ.!

 

ಕೃಷಿ ಜಮೀನಿನಲ್ಲಿ ಫಾರ್ಮ್ ಹೌಸ್ ಅಥವಾ ಮನೆ ಕಟ್ಟುವವರಿಗೆ ರಾಜ್ಯ ಸರ್ಕಾರದಿಂದ ಹೊಸ ರೂಲ್ಸ್ ಜಾರಿ. ಕೃಷಿ ಭೂಮಿಯಲ್ಲಿ ಮನೆ ಅಥವಾ ಫಾರ್ಮ್ ಹೌಸ್ ಕಟ್ಟುವವರಿಗೆ ರಾಜ್ಯ ಸರ್ಕಾರವು ಬಂಪರ್ ಗುಡ್ ನ್ಯೂಸ್ ನೀಡಿದ್ದು ಅದರ ಜೊತೆ ರಾಜ್ಯ ಸರ್ಕಾರದಿಂದ ಹೊಸ ರೂಲ್ಸ್ ಸಹ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯ ಹೈಕೋರ್ಟ್ ನಿಂದ ರಾಜ್ಯದ ಎಲ್ಲಾ ಕೃಷಿ ಭೂಮಿ ಹೊಂದಿರುವ ಎಲ್ಲಾ ಕೃಷಿ ಭೂಮಿ ಮಾಲೀಕರಿಗೆ ಜಮೀನುಗಳಲ್ಲಿ ಮನೆ ಅಥವಾ ಕಟ್ಟಡ ಹೀಗೆ ಯಾವುದನ್ನೇ ನಿರ್ಮಾಣ ಮಾಡಿದವರಿಗೆ ಅಥವಾ ಯಾವುದೇ ಹೊಸ ಮನೆ ಅಥವಾ ಕಟ್ಟಡ ನಿರ್ಮಿಸಲು ಬಯಸುವವರಿಗೆ ಕರ್ನಾಟಕ ರಾಜ್ಯ ಹೈಕೋರ್ಟ್ ನಿಂದ ರಾಜ್ಯದ ಎಲ್ಲ ಜಮೀನು ಮಾಲೀಕರಿಗೆ ಫಾರ್ಮ್ ಹೌಸ್ ಕಟ್ಟಿಕೊಳ್ಳಲು ಹೊಸ ರೂಲ್ಸ್ ಜಾರಿಗೊಳಿಸಿದೆ ಅಥವಾ ಮನೆ ಕಟ್ಟಿಕೊಳ್ಳಲು ಹೊಸ ರೂಲ್ಸ್ ಜಾರಿಗೊಳಿಸಿದೆ.

ಜೊತೆಗೆ ಸರ್ಕಾರವು ಜಮೀನಿನಲ್ಲಿ ಮನೆ ಕಟ್ಟಿಕೊಳ್ಳುವವರಿಗೆ ಭಾರಿ ದೊಡ್ಡ ಬಂಪರ್ ಗುಡ್ ನ್ಯೂಸ್ ನೀಡಿದೆ. ಈಗಾಗಲೇ ಇರುವಂತಹ ಜಮೀನನ್ನು ಪರಿವರ್ತಿಸಿ ಆ ಜಮೀನಿನಲ್ಲಿ ಕಟ್ಟಡ ನಿರ್ಮಾಣ ಮಾಡುವ ವಿಷಯದ ಬಗ್ಗೆ ಸರ್ಕಾರ ಕೆಲವು ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ.

ಇತ್ತೀಚಿನ ದಿನದಲ್ಲಿ ಜಮೀನು ಖರೀದಿ ಅಥವಾ ಇರುವ ಜಮೀನನ್ನು ಪರಿವರ್ತಿಸಿ ಆ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡುವ ವಿಷಯದ ಬಗ್ಗೆ ಸರ್ಕಾರ ಕೆಲವು ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ. ಭೂಕಬಳಿಕೆ ಹಾಗೂ ಭೂ ಪರಿವರ್ತನೆ ಬಗ್ಗೆ ರಾಜ್ಯ ಪ್ರಾಧಿಕಾರದಲ್ಲಿ ಹೆಚ್ಚು ಚರ್ಚೆ ನಡೆಯುತ್ತಿದ್ದು. ಹೈಕೋರ್ಟ್ ಒಂದು ಹೊಸ ಕೇಸ್ ವಿಚಾರವಾಗಿ ಮಹತ್ವದ ತೀರ್ಪನ್ನು ನೀಡಿದೆ.

ಹಾಗಾಗಿ ಈ ಹೈಕೋರ್ಟ್ ನ ತೀರ್ಪು ನಿಮಗೂ ಕೂಡ ಅನ್ವಯವಾಗಬಹುದು. ಹಾಗಾಗಿ ನೀವು ಜಮೀನನ್ನು ಹೊಂದಿದ್ದು ಅದರಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ನೀವು ಮಾಡಲು ಹೊರಟಿದ್ದರೆ ತಪ್ಪದೆ ಈಗ ನಾವು ಹೇಳುವ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳಿ.

ಮಾಸ್ಟರ್ ಪ್ಲಾನ್ ವ್ಯಾಪ್ತಿಗೆ ಒಳಪಡು ವಂತಹ ಭೂಮಿಯನ್ನು ಪರಿವರ್ತಿಸುವ ವಿಚಾರವಾಗಿ ಹೈಕೋರ್ಟ್ ಗೆ ಹೋಗಿರುವಂತಹ ಕೇಸ್ ಒಂದಕ್ಕೆ ಈಗ ತೀರ್ಪನ್ನು ನೀಡಲಾಗಿದೆ. ಗೃಹ ನಿರ್ಮಾಣ ಸಹಕಾರ ಸಂಘ ಮಂಡ್ಯ ಅಭಿವೃದ್ಧಿ ಯೋಜನೆ ಅಧಿಕಾರದ ವಿರುದ್ಧ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಕೇಸ್ ನಾ ಹಿನ್ನೆಲೆ ನೋಡುವುದಾದರೆ ಲೇಔಟ್ ಪ್ಲಾನಿಂಗ್ ಬಗ್ಗೆ ಅಪ್ರುವಲ್ ಸಿಗದೇ ಇದ್ದ ಕಾರಣ

ಕರ್ನಾಟಕ ರಾಜ್ಯ ಮಂಡ್ಯ ಗೃಹ ನಿರ್ಮಾಣ ಸಹಕಾರ ಸಂಘ ಮಂಡ್ಯ ಅಭಿವೃದ್ಧಿ ಯೋಜನೆ ಅಧಿಕಾರದ ವಿರುದ್ಧ ಹೈ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಇದೀಗ ಹೈಕೋರ್ಟ್ ಯೋಜನಾ ಪ್ರಾಧಿಕಾರವನ್ನು ಪ್ರಶ್ನಿಸಿದ್ದು ಕೃಷಿಯೇತರ ಭೂಮಿಯನ್ನಾಗಿ ಕೃಷಿ ಭೂಮಿಯನ್ನು ಪರಿವರ್ತನೆ ಮಾಡುವುದಿದ್ದರೆ ಭೂಕಂದಾಯ ಕಾಯಿದೆ 1965 ಸೆಕ್ಷನ್ 95ರ ಅಡಿಯಲ್ಲಿ ಜಿಲ್ಲಾಧಿಕಾರಿಗಳ ಅನುಮತಿ ಪಡೆದುಕೊಳ್ಳಬೇಕು.

ಜೊತೆಗೆ ಸೆಕ್ಷನ್ 14A ಅಡಿಯಲ್ಲಿ KTCP ಖಾಯ್ದೆಯ ನಿಯಮಗಳನ್ನು ಕೂಡ ಪಾಲಿಸಬೇಕು ಎಂದು ತೀರ್ಮಾನ ನೀಡಿದೆ. ಸಾಮಾನ್ಯವಾಗಿ ಕೃಷಿ ಭೂಮಿಯನ್ನು ಲೇಔಟ್ ಅಥವಾ ಮನೆಯನ್ನು ನಿರ್ಮಾಣ ಮಾಡುವುದಕ್ಕೆ ಒಪ್ಪಿಗೆ ನೀಡಲಾಗುವುದಿಲ್ಲ ಒಂದು ವೇಳೆ ಹಾಗೇನಾದರೂ ನಿರ್ಮಾಣ ಮಾಡಬೇಕು ಎಂದರೆ ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯಾಗಿ ಪರಿವರ್ತನೆ ಮಾಡಿಕೊಳ್ಳಬೇಕು. ಇದಕ್ಕಾಗಿ ಜಿಲ್ಲಾಧಿಕಾರಿ ಗಳ ಬಳಿ ಅನುಮತಿ ಪಡೆದು ನಂತರ ಸೆಕ್ಷನ್ 14ರ ಅಡಿಯಲ್ಲಿ ಭೂಕಬಳಿಕೆ ಬಗ್ಗೆ ಪ್ರಾಧಿಕಾರದ ಅನುಮತಿ ಪಡೆದುಕೊಳ್ಳುವುದು ಕಡ್ಡಾಯ.

ಧರೆಗಿಳಿದ ಅಮೃತ ಈ ಗಿಡ.! ಈ ಎಲೆಯಲ್ಲಿ ಎಷ್ಟೆಲ್ಲಾ ಔಷಧೀಯ ಗುಣಗಳಿವೆ ನೋಡಿ.!

 

ಈ ದಿನ ನಾವು ಹೇಳಲು ಹೊರಟಿರುವ ಅಮೃತಬಳ್ಳಿ ಎಲೆ ಮತ್ತು ಕಾಂಡ ನಮ್ಮ ಆರೋಗ್ಯದ ಮೇಲೆ ಎಂತಹ ಅದ್ಭುತವಾದಂತಹ ಪರಿಣಾಮ ಬೀರುತ್ತದೆ ಎಂದರೆ ಇದು ಒಂದು ಅಮೃತ ಸಮಾನವೇ ಎಂದೇ ಅನಿಸು ತ್ತದೆ. ಒಟ್ಟಾರೆಯಾಗಿ ಅಮೃತ ಬಳ್ಳಿಯ ಪ್ರಯೋಜನ ನೋಡುವುದಾ ದರೆ ಈ ಗಿಡದ ಎಲೆ ಕಾಂಡ ಬೇರು ಪ್ರತಿಯೊಂದು ಭಾಗವು ಕೂಡ ಅಷ್ಟೇ ಆರೋಗ್ಯಕಾರಿಗುಣವನ್ನು ಹೊಂದಿರುವಂಥದ್ದು.

ಆದ್ದರಿಂದ ಈ ಒಂದು ಗಿಡವನ್ನು ಅಮೃತಕ್ಕೆ ಸಮಾನ ಎಂದು ಆಯುರ್ವೇದದಲ್ಲಿ ತಿಳಿಸಲಾ ಗಿದೆ. ಈ ಅಮೃತಬಳ್ಳಿ ಯಾಕೆ ಅಮೃತಕ್ಕೆ ಸಮ ಎಂದು ನೋಡುವುದಾ ದರೆ ಕೆಲವೊಂದಷ್ಟು ಔಷಧಿಗಳು ವಾತರೋಗಳನ್ನು ದೂರ ಮಾಡಿದರೆ ಕೆಲವೊಂದಷ್ಟು ಔಷಧಿಗಳು ಪಿತ್ತ ರೋಗಗಳನ್ನು ದೂರಮಾಡುತ್ತದೆ.

ಕೆಲವೊಂದಷ್ಟು ಔಷಧಿಗಳು ಕಫ ರೋಗಗಳನ್ನು ದೂರ ಮಾಡುತ್ತದೆ ಆದರೆ ಈ ಅಮೃತಬಳ್ಳಿ ವಾತ ಪಿತ್ತ ಕಫ ಈ ಮೂರು ರೋಗಗಳನ್ನು ದೂರ ಮಾಡುವಂತಹ ಶಕ್ತಿಯನ್ನು ಹೊಂದಿದೆ. ಇದರ ಒಂದು ಗುಣ ಧರ್ಮವನ್ನು ನಾವು ನೋಡುವುದಾದರೆ ಶೀತ ವೀರ್ಯ ಗುಣ ಧರ್ಮವನ್ನು ಹೊಂದಿರುವಂಥದ್ದು, ಕಟು ಮತ್ತು ಕಷಾಯ ಒಂದು ರಸಗುಣವನ್ನು ಹೊಂದಿರುವಂಥದ್ದು.

ಹಾಗಾಗಿ ಈ ಅಮೃತಬಳ್ಳಿ ಸರ್ವ ರೋಗವನ್ನು ನಿವಾರಿಸುವುದರ ಜೊತೆಗೆ ನಮ್ಮ ಆಯಸ್ಸನ್ನು ವೃದ್ಧಿ ಮಾಡುತ್ತದೆ. ಆದ್ದರಿಂದ ಅದನ್ನು ನಾವು ಅಮೃತಕ್ಕೆ ಸಮಾನ ಎಂದು ಕರೆಯಲಾಗುತ್ತದೆ. ಕೆಲವು ಸಾಧನೆಗಳನ್ನು ಮಾಡುತ್ತಾ ಯೋಗಗಳನ್ನು ಮಾಡುತ್ತಾ ಇದರ ಸೇವನೆಯನ್ನು ಮಾಡಿದರೆ ಚಿರಂಜೀವಿಗಳಾದ ಬಹಳಷ್ಟು ಜನರನ್ನು ನಾವು ಕಾಣಬಹುದು.

ಒಟ್ಟಾರೆಯಾಗಿ ಅಮೃತ ಎಂದರೆ ಸಾವಿಲ್ಲದ ಸಾವನ್ನು ದೂರ ಮಾಡುವಂತಹ ಎಂಬ ಅರ್ಥ ಬರುತ್ತದೆ. ಈ ಅಮೃತಬಳ್ಳಿಯನ್ನು ಪಂಚ ವಿಧ ಕಷಾಯದ ರೂಪದಲ್ಲಿ ಸೇವನೆ ಮಾಡಬಹುದು. ಆಯುರ್ವೇದದಲ್ಲಿ ಸ್ವರಸ, ಕಲ್ಕ, ಕ್ವಾತ, ಹಿಮ ಮತ್ತು ಪಾಂಠ ಎಂದು ಹೇಳಿ ಐದು ರೀತಿಯ ಕಷಾಯ ವಿಧಾನವನ್ನು ಹೇಳಲಾ ಗುತ್ತದೆ. ಈ 5 ರೀತಿಯಲ್ಲಿ ನಾವು ಅಮೃತಬಳ್ಳಿಯ ಕಷಾಯವನ್ನು ಸೇವನೆ ಮಾಡಬಹುದು.

ಹಾಗಾದರೆ ಅಮೃತಬಳ್ಳಿಯ ಕಷಾಯವನ್ನು ಸೇವನೆ ಮಾಡುವುದರಿಂದ ಯಾವುದೆಲ್ಲ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಹಾಗೂ ಎಲೆಯನ್ನು ಮತ್ತು ಕಾಂಡವನ್ನು ಹೇಗೆ ಕಷಾಯ ಮಾಡಿ ಇದರ ಪ್ರಯೋಜನಗಳನ್ನು ಪಡೆದುಕೊಳ್ಳ ಬಹುದು ಎಂಬ ಮಾಹಿತಿಯನ್ನು ಈ ದಿನ ತಿಳಿಯೋಣ.

* ವಾತ ಜನ್ಯವಾಗಿ ಬರುವಂತಹ ರೋಗಗಳು ಅಂದರೆ ಸಂಧಿವಾತ ಆಮವಾತ ಆಗಿರಬಹುದು ಹಾಗೂ ಹೃದಯದ ಸಮಸ್ಯೆ ಆಗಿರಬಹುದು ಕರುಳಿನ ತೊಂದರೆ ಅಜೀರ್ಣ, ಮಲಬದ್ಧತೆಯ ಸಮಸ್ಯೆಗಳು ಆಗಿರಬಹುದು ಚರ್ಮವ್ಯಾಧಿಗಳು ಹೀಗೆ ಈ ಎಲ್ಲಾ ರೀತಿಯ ಸಮಸ್ಯೆಗಳನ್ನು ಸಹ ದೂರ ಮಾಡುವುದಕ್ಕೆ ನಾವು ಈ ಅಮೃತಬಳ್ಳಿಯ ಕಷಾಯವನ್ನು ಸೇವನೆ ಮಾಡುವುದು ಬಹಳ ಮುಖ್ಯ.

* ಕಫ ಜನ್ಯವಾಗಿ ಬರುವಂತಹ ಕಾಯಿಲೆಗಳಿಗೆ ಇದರ ಸ್ವರಸ ಅಥವಾ ಪೌಡರ್ ಕಷಾಯವನ್ನು ನೀವು ಜೇನುತುಪ್ಪದ ಜೊತೆ ಸೇವನೆ ಮಾಡ ಬಹುದು. ಹೀಗೆ ಮಾಡುತ್ತಾ ಬಂದರೆ ಸಂಪೂರ್ಣವಾಗಿ ಕಫಜ ವಿಕಾರಗಳು ದೂರವಾಗುತ್ತಾ ಬರುತ್ತದೆ.

* ಹಾಗೆಯೇ ಪಿತ್ತ ವಿಕಾರವಾಗಿ ಬರುವಂತಹ ರೋಗಗಳು ಅಂದರೆ ಚರ್ಮ ವ್ಯಾಧಿಗಳು, ನರ ದೌರ್ಬಲ್ಯತೆ, ಕಣ್ಣಿನ ಸಮಸ್ಯೆ, ಕೂದಲು ಉದುರುವುದು, ಕಿವಿ ಕೇಳಿಸದೆ ಇರುವುದು, ಬಿಪಿ ಹೆಚ್ಚಾಗುವುದು ಇವೆಲ್ಲವೂ ಕೂಡ ಪಿತ್ತವಿಕಾರದಿಂದ ಬರುತ್ತದೆ ಇಂಥವರು ಅಮೃತ ಬಳ್ಳಿಯ ಕಷಾಯ ಮತ್ತು ಸ್ವರಸವನ್ನು ಸೇವನೆ ಮಾಡಬಹುದು.

ಈ ಕಷಾಯವನ್ನು ಹೇಗೆ ತಯಾರಿಸುವುದು ಎಂದು ನೋಡುವುದಾದರೆ 10 ಗ್ರಾಂ ನಷ್ಟು ಈ ಕಾಂಡವನ್ನು ಜಜ್ಜಿ ರಾತ್ರಿ ನೀರಿನಲ್ಲಿ ನೆನೆ ಹಾಕಬೇಕು ಬೆಳಿಗ್ಗೆ ಅದನ್ನು 200 ml ನೀರಿನಲ್ಲಿ ಕುದಿಸಿ 100 ml ಇಳಿಸಿ ಸೇವನೆ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

https://youtu.be/P_FkLtFMA_U?si=gHcGQXD5ia4pBGtc

ಬರ ಪರಿಹಾರ ಹಣ ಪಡೆಯಲು ಎಲ್ಲ ರೈತರಿಗೆ ಈ ಕೆಲಸ ಮಾಡುವುದು ಕಡ್ಡಾಯ ಇಲ್ಲ ಅಂದ್ರೆ ನಿಮ್ಮ ಖಾತೆಗೆ ಹಣ ಬರಲ್ಲ.!

 

ಕರ್ನಾಟಕ ರಾಜ್ಯದಾದ್ಯಂತ ಇರುವ ರಾಜ್ಯದ ಎಲ್ಲಾ ರೈತರಿಗೆ ರಾಜ್ಯದ ಕಂದಾಯ ಸಚಿವರಾಗಿರುವಂತಹ ಕೃಷ್ಣ ಭೈರೇಗೌಡ ಅವರು ಬರ ಪೀಡಿತ ಜಿಲ್ಲೆಗಳ ಹಾಗೂ ತಾಲೂಕುಗಳ ರೈತರಿಗೆ ಮುಂದಿನ 15 ದಿನಗಳ ಒಳಗಾಗಿ ಈ ಕೆಲಸ ಮಾಡಿಕೊಳ್ಳಲು ಕಡ್ಡಾಯವೆಂದು ಸೂಚಿಸಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರದಿಂದ ಬರ ಪರಿಹಾರ ಹಣ ಬಿಡುಗಡೆ ಮಾಡಲಾಗಿದ್ದು ಬರಪೀಡಿತ ಜಿಲ್ಲೆಗಳ ರೈತರು ಹಾಗೂ ಆಯಾ ಬರಪೀಡಿತ ತಾಲೂಕುಗಳು ಸೇರಿದಂತಹ ಪ್ರತಿಯೊಬ್ಬ ರೈತನಿಗೂ ಕೂಡ ನಿಯಮ ಹಾಗೂ ಈ ಕೆಲಸ ಕಡ್ಡಾಯವಾಗಿ ಮಾಡಲೇಬೇಕು ಇಲ್ಲವಾದರೆ ನಿಮ್ಮ ಖಾತೆಗೆ ಹಣ ಬರುವುದಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದ್ದು ರೈತರು ಮಳೆ ಇಲ್ಲದೆ ಕಂಗಾಲಾಗಿದ್ದಾರೆ ಹಾಗಾಗಿ ಪ್ರತಿಯೊಬ್ಬ ರೈತರ ಖಾತೆಗಳಿಗೆ ಸರ್ಕಾರ ದಿಂದ ಬರ ಪರಿಹಾರ ಹಣವನ್ನು ಹಾಕಲು ನಿರ್ಧರಿಸಲಾಗಿದ್ದು ಆಯಾ ಜಿಲ್ಲಾಧಿಕಾರಿಗಳಿಗೆ ಮತ್ತು ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೇರಿದಂತೆ ಕಂದಾಯ ನಿರೀಕ್ಷಕರಿಗೂ ಸಹ ರಾಜ್ಯ ಸರ್ಕಾರದಿಂದ ಅಧಿಕೃತವಾದ ಆದೇಶವನ್ನು ಹೊರಡಿಸಲಾಗಿದ್ದು.

ರೈತರಿಗೆ ಈ ಕೆಲಸ ಕಡ್ಡಾಯವಾಗಿ ಮಾಡಿಸಿಕೊಳ್ಳಲು ಈ ಮೇಲೆ ಹೇಳಿದ ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ. ಅದಕ್ಕಾಗಿ ಪ್ರತಿಯೊಬ್ಬ ರೈತರು ಸಹ ಇದೆ ಮುಂದಿನ 15 ದಿನಗಳ ಒಳಗಾಗಿ ಕಡ್ಡಾಯವಾಗಿ ರೈತರು ಈ ಕೆಲಸ ಮಾಡಿದರೆ ಮಾತ್ರ ನಿಮ್ಮ ಖಾತೆಗೆ ರಾಜ್ಯ ಸರ್ಕಾರದಿಂದ ಬರುವಂತಹ ಬರ ಪರಿಹಾರ ಹಣ ಜಮಾ ಆಗುತ್ತದೆ.

ಇಲ್ಲವಾದರೆ ನಿಮಗೆ ಯಾವುದೇ ರೀತಿಯ ಹಣ ಬರುವುದಿಲ್ಲ. ಬರ ಪರಿಹಾರ ಹಣ ಹಾಕುತ್ತಿರುವ ಕಂದಾಯ ಸಚಿವರಾಗಿರುವಂತಹ ಕೃಷ್ಣ ಭೈರೇಗೌಡ ಅವರು ರೈತರಿಗೆ ಇದು ತುಂಬಾ ಅನುಕೂಲವಾಗಬೇಕು, ಹಾಗೂ ಯಾರೆಲ್ಲ ರೈತರು ಬರಗಾಲದಿಂದ ತಮ್ಮ ಬೆಳೆಗಳಲ್ಲಿ ನಷ್ಟ ಅನುಭವಿಸಿರುತ್ತಾರೋ ಅವರೆಲ್ಲರೂ ಕೂಡ ಈ ಒಂದು ಯೋಜನೆಯನ್ನು ಪಡೆದುಕೊಳ್ಳಬೇಕು ಎನ್ನುವುದರ ಮೂಲ ಉದ್ದೇಶ ಇದಾಗಿದೆ.

ಆದ್ದರಿಂದ ಪ್ರತಿಯೊಬ್ಬ ರೈತರು ಅಂದರೆ ಬರಪೀಡಿತ ರೈತರು 15 ದಿನಗಳ ಒಳಗಾಗಿ ಈ ಕೆಲಸ ಮಾಡುವುದು ಬಹಳ ಮುಖ್ಯವಾಗಿರುತ್ತದೆ ಹಾಗಾದರೆ 15 ದಿನಗಳ ಒಳಗಾಗಿ ಯಾವ ಕೆಲವು ಪ್ರಮುಖವಾದಂತಹ ವಿಧಾನ ಅನುಸರಿಸಿ ಹಣ ಬರುವ ರೀತಿ ಮಾಡಿಕೊಳ್ಳಬೇಕಾಗುತ್ತದೆ ಎಂದು ನೋಡುವುದಾದರೆ.

ಹೌದು ಬರಪೀಡಿತ ರೈತರು ಎನ್ನುವಂತಹ ಮಾಹಿತಿಯು ಪ್ರೂಫ್ ಐಡಿಯಲ್ಲಿ ದಾಖಲಾಗಿರುವoತಹ ಜಮೀನಿನ ಮಾಹಿತಿ ಆಧಾರದ ಮೇಲೆ ಪರಿಹಾರ ಪಾವತಿ ಮಾಡಲಾಗುತ್ತದೆ ಎಂದು ಕಂದಾಯ ಸಚಿವರಾಗಿರು ವಂತಹ ಕೃಷ್ಣ ಭೈರೇಗೌಡ ಅವರು ಹೇಳಿದ್ದರು.

ಸುದ್ದಿ ಗಾರರ ಜೊತೆ ಮಾತನಾಡಿದಂತಹ ಸಚಿವ ಕೃಷ್ಣಭೈರೇಗೌಡ ಅವರು ರೈತರಿಗೆ ಪರಿಹಾರ ಪಾವತಿ ಮಾಡುವ ವೇಳೆ ಪ್ರೂಫ್ ಐಡಿಯಲ್ಲಿ ದಾಖಲಾಗಿರುವ ಜಮೀನಿನ ಮಾಹಿತಿಯ ಆಧಾರದ ಮೇಲೆ ಅಂದರೆ ಅ ಜಮೀನು ಅವರ ಹೆಸರಿನಲ್ಲಿಯೇ ಇದೆಯಾ ಅದು ಭರ ಪೀಡಿತ ಭೂಮಿಯ ಹೀಗೆ ಎಲ್ಲಾ ದಾಖಲಾತಿಗಳನ್ನು ನೋಡಿದ ಮೇಲೆ ಅದರ ಆಧಾರದ ಮೇಲೆ ಮಾಡ ಲಾಗುತ್ತದೆ ಎಂದರು.

ಹಾಗಾಗಿ ಈ ರೀತಿ ದಾಖಲಾತಿಗಳನ್ನು ಹೊಂದಿರು ವಂತಹ ರೈತರು ಮುಂದಿನ 15 ದಿನಗಳ ಒಳಗಾಗಿ ಪ್ರೂಫ್ ದತ್ತಾಂಶದಲ್ಲಿ ಭರ್ತಿ ಮಾಡಿಸಿ ಅಧಿಕಾರಿಗಳ ಲಾಭದ ಹಿತಾಸಕ್ತಿ ಹಾಗೂ ಅಕ್ರಮದ ಹಿನ್ನೆಲೆ ನೈಜ ಫಲಾನುಭವಿಗಳಿಗೆ ಪರಿಹಾರದ ಹಣ ತಲುಪುವಂತಾಗು ತ್ತದೆ. ಹಾಗಾಗಿ ಈ ಎಲ್ಲಾ ದಾಖಲಾತಿಗಳನ್ನು ಸರಿಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಸ್ಥಳೀಯ ಆಡಳಿತಕ್ಕೆ ಸೂಚನೆಯನ್ನು ನೀಡಲಾಗಿದೆ.

 

10th, ITI ಪಾಸ್ ಆಗಿರುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್.! ರೈಲ್ವೇ ಇಲಾಖೆಯಲ್ಲಿ ನೇರ ನೇಮಕಾತಿ ಆಸಕ್ತರು ಅರ್ಜಿ ಸಲ್ಲಿಸಿ.

0

10ನೇ ತರಗತಿ ಹಾಗೂ ಐ ಟಿ ಐ ಪಾಸ್ ಆದಂತಹ ಅಭ್ಯರ್ಥಿಗಳಿಗೆ 2023ರಲ್ಲಿ ಹೊಸ ನೇಮಕಾತಿಗೆ ಅರ್ಜಿ ಪ್ರಾರಂಭ ಮಾಡಿದ್ದು ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಈ ನೇಮಕಾತಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈಸ್ಟ್ ಸೆಂಟ್ರಲ್ ರೈಲ್ವೆ ನೇಮಕಾತಿ 2023 ಹೊಸ ನೇಮಕಾತಿಗೆ ಅರ್ಜಿ ಪ್ರಾರಂಭ ಮಾಡಿದ್ದಾರೆ.

ಹಾಗಾದರೆ ಈ ಅರ್ಜಿ ಹಾಕುವುದಕ್ಕೆ ಯಾರೆಲ್ಲ ಅರ್ಹರು ಹಾಗೂ ಈ ಅರ್ಜಿ ಹಾಕುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಅರ್ಜಿ ಹಾಕಲು ಪ್ರಾರಂಭ ದಿನಾಂಕ ಯಾವುದು ಹಾಗೂ ಕೊನೆಯ ದಿನಾಂಕ ಯಾವುದು ಹಾಗೂ ಯಾರೆಲ್ಲ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಮೊದಲನೆಯದಾಗಿ ಈ ಅರ್ಜಿ ಹಾಕುವುದಕ್ಕೆ ವಯೋಮಿತಿ ಎಷ್ಟಿರಬೇಕಾಗುತ್ತದೆ ಎಂದು ನೋಡುವುದಾದರೆ. ಕನಿಷ್ಠ 14 ವರ್ಷ ವಯಸ್ಸಾಗಿರಬೇಕು ಹಾಗೂ ಗರಿಷ್ಠ 24 ವರ್ಷ ವಯಸ್ಸಿನ ಒಳಗಿನವರು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ಇರುವಂತದ್ದು ಹಾಗೂ ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಹಾಗೆಯೇ PWD ಅಭ್ಯರ್ಥಿಗಳಿಗೆ ಸರಿಸುಮಾರು 10 ವರ್ಷ ಸಡಿಲಿಕೆ ಇದೆ.

ಆಯ್ಕೆಯ ವಿಧಾನ ನೋಡುವುದಾದರೆ :-
ಅಭ್ಯರ್ಥಿಗಳು ವಿದ್ಯಾರ್ಹತೆಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಸಿದ್ಧಪಡಿಸಲಾಗುತ್ತದೆ. ಮೆರಿಟ್ ಲಿಸ್ಟ್ ನಲ್ಲಿ ಬಂದ ಅಭ್ಯರ್ಥಿಗಳನ್ನು ದಾಖಲೆಗಳ ಪರಿಶೀಲನೆ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ :-
ಮಹಿಳಾ / ಎಸ್ ಸಿ / ಎಸ್ ಟಿ / PWD ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಉಳಿದ ಅಭ್ಯರ್ಥಿಗಳು 100 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಶುಲ್ಕ ಪಾವತಿಸುವ ವಿಧಾನ : –
ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.

ಅರ್ಜಿ ಸಲ್ಲಿಸುವ ವಿಧಾನ : –
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ ವಿಳಾಸಕ್ಕೆ ಭೇಟಿ ನೀಡಿ ಆನ್‌ಲೈನ್‌ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು.

ಹುದ್ದೆಗಳ ಸಂಖ್ಯೆ :-
ಒಟ್ಟಾರೆಯಾಗಿ 1832 ಹುದ್ದೆಗಳಿಗೆ ಈಗ ಅರ್ಜಿ ಪ್ರಾರಂಭ ಮಾಡಿದ್ದಾರೆ.

ವಿದ್ಯಾರ್ಹತೆ : –
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಶೇಕಡಾ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಜೊತೆಗೆ ಆಯಾ ಟ್ರೇಡ್ ಗಳಲ್ಲಿ ಐಟಿಐ ಕೋರ್ಸ್ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ದಿನಾಂಕ : –
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 10/11/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 09/12/2023

ಇತರೆ ಮಾಹಿತಿ : –
ಈಸ್ಟ್ ಸೆಂಟ್ರಲ್ ರೈಲ್ವೆ ಅಪ್ರೆಂಟಿಸ್ ಹುದ್ದೆಗಳನ್ನು ಫಿಟ್ಟರ್, ವೆಲ್ಡರ್, ಮೆಕ್ಯಾನಿಕ್ (ಡೀಸೆಲ್ ), ರೆಫ್ರಿಜರೇಷನ್ & ಎಸಿ ಮೆಕ್ಯಾನಿಕ್, ಕಾರ್ಪೆಂಟರ್, ಇಲೆಕ್ಟ್ರಾನಿಕ್ ಮೆಕ್ಯಾನಿಕ್, ಪೇಂಟರ್ (ಜನರಲ್), ಇಸ್ಟ್ರಿಷಿಯನ್, ವಯ‌ ಮನ್, ಟರ್ನರ್, ಮಶಿನಿಸ್ಟ್, ಬ್ಲಾಕ್ ಸ್ಮಿತ್, ಲ್ಯಾಬೋರೇಟರಿ ಅಸಿಸ್ಟೆಂಟ್ ಟ್ರೇಡ್‌ಗಳಲ್ಲಿ ನೇಮಕ ಮಾಡಲಾಗುತ್ತದೆ.

ಈ ಮೇಲೆ ಹೇಳಿದೆ ಇಷ್ಟು ಮಾಹಿತಿಗಳನ್ನು ತಿಳಿದ ನಂತರ ಪ್ರತಿಯೊಬ್ಬರೂ ಕೂಡ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವುದರ ಮೂಲಕ ನೀವು ಕೂಡ ಈ ಹುದ್ದೆಯನ್ನು ಪಡೆದುಕೊಳ್ಳಬಹುದಾಗಿದೆ. ಅದರಲ್ಲೂ ಮೊದಲೇ ಹೇಳಿದಂತೆ ಯಾರು ಅತಿ ಹೆಚ್ಚು ಅಂಕಗಳನ್ನು ಪಡೆದುಕೊಂಡಿರುತ್ತಾರೋ ಅವರಿಗೆ ಮೊದಲ ಆದ್ಯತೆ ಇರುತ್ತದೆ.

ವಯಸ್ಸಾಗುತ್ತಿದೆ ಮದುವೆ ಆಗ್ತಿಲ್ಲ ಅಂತ ಚಿಂತೆ ಮಾಡ್ತಿದ್ದೀರಾ.? ಮದುವೆಗೆ ಶಾಶ್ವತ ಪರಿಹಾರ ಇಲ್ಲಿದೆ ನೋಡಿ.!

 

ಇತ್ತೀಚಿನ ದಿನದಲ್ಲಿ ಬಹಳಷ್ಟು ಜನ ಮದುವೆಯ ವಿಚಾರವಾಗಿ ಬಹಳ ಷ್ಟು ಸಮಸ್ಯೆಗಳನ್ನು ಯುವಕ ಯುವತಿಯರು ಅನುಭವಿಸುತ್ತಿದ್ದಾರೆ. ಆದರೆ ಇದಕ್ಕೆ ಬಹಳ ಪ್ರಮುಖವಾದಂತಹ ಕಾರಣ ಏನು ಎನ್ನುವುದರ ಬಗ್ಗೆ ಯಾರು ಕೂಡ ಹೆಚ್ಚು ಆಲೋಚನೆ ಮಾಡುವುದಿಲ್ಲ. ಬದಲಿಗೆ ಅವರು ನಾನು ನನ್ನ ಜೀವನದಲ್ಲಿ ಹೆಚ್ಚಿನ ಬೆಳವಣಿಗೆಯನ್ನು ಹೊಂದ ಬೇಕು ಎಲ್ಲರಂತೆ ನಾನು ಕೂಡ ನನ್ನ ಕಾಲ ಮೇಲೆ ನಿಂತುಕೊಳ್ಳಬೇಕು ಎಂದು ತಮ್ಮ ಅಭಿವೃದ್ಧಿಯತ್ತ ಗಮನ ಹರಿಸುತ್ತಿರುತ್ತಾರೆ.

ಆದರೆ ಆ ಸಂದರ್ಭದಲ್ಲಿ ಅವರ ಮದುವೆಯ ವಿಚಾರವಾಗಿ ಯಾವುದೇ ಆಲೋಚನೆಯನ್ನು ಸಹ ಮಾಡುವುದಿಲ್ಲ ಅವರು ಒಂದು ಹಂತಕ್ಕೆ ಬರುವತನಕ ಅವರಿಗೆ 35 ರಿಂದ 40 ವರ್ಷ ವಯಸ್ಸಾಗಿರುತ್ತದೆ. ಆ ವಯಸ್ಸಿಗೆ ಯಾರು ಕೂಡ ಹೆಣ್ಣನ್ನು ಮತ್ತು ಗಂಡನ್ನು ಕೊಡುವುದಕ್ಕೆ ಇಷ್ಟಪಡುವುದಿಲ್ಲ. ಹೌದು ಯಾವುದೇ ಹುಡುಗಿ ಆಗಲಿ ಹುಡುಗನಾಗಲಿ ಮದುವೆಯಾಗ ಬೇಕು ಎಂದರೆ ಅದಕ್ಕೆ ಆದ ಇಂತಿಷ್ಟು ವಯಸ್ಸು ಇರುತ್ತದೆ ಆ ವಯಸ್ಸಿನಲ್ಲಿ ಮದುವೆಯಾದರೆ ಅದು ಸುಸೂತ್ರವಾಗಿ ಚೆನ್ನಾಗಿರುತ್ತದೆ ಎಂದೇ ಹೇಳಬಹುದು.

ಆದರೆ ಇತ್ತೀಚಿನ ದಿನದಲ್ಲಿ ಹುಡುಗಿಗೆ 30 ವರ್ಷ 35 ವರ್ಷದ ದಾಟಿದರು ಮದುವೆಯಾಗುವುದಿಲ್ಲ ಹಾಗೂ ಹುಡುಗರಿಗೆ 40 ವರ್ಷ ಆದರೂ ಕೂಡ ಮದುವೆಯಾಗುವುದಿಲ್ಲ. ಆದ್ದರಿಂದಲೇ ಹೆಚ್ಚಿನ ಜನರು ಒಬ್ಬಂಟಿಯಾಗಿಯೇ ಇದ್ದಾರೆ ಎಂದು ಹೇಳಬಹುದು. ನಾವೆಲ್ಲರೂ ಕೂಡ ಗಮನಿಸಿದ್ದಂತೆ ಬಹಳ ಹಿಂದಿನ ದಿನದಲ್ಲಿ ಅತಿ ಚಿಕ್ಕ ವಯಸ್ಸಿಗೆ ಮದುವೆ ಮಾಡುತ್ತಿದ್ದರು ಹೌದು ಅವನಿಗೆ ಒಂದು ಮದುವೆ ಮಾಡಿದರೆ ಅವಳಿಗೆ ಒಂದು ಮದುವೆ ಮಾಡಿದರೆ ಅವಳು ಹೆಚ್ಚು ಹಠ ಮಾಡುವುದಿಲ್ಲ ಅವಳು ಸರಿ ಹೋಗುತ್ತಾಳೆ ಎನ್ನುವ ಉದ್ದೇಶದಿಂದ.

ಬೇಗ ಮದುವೆ ಮಾಡುತ್ತಿದ್ದರು ಆಗ ಅವರ ತಂದೆ ತಾಯಿಗಳು ಅವರ ಭವಿಷ್ಯದ ವಿಚಾರವಾಗಿ ಸಂಬಂಧಿಸಿದಂತೆ ನನ್ನ ಮಗ ಅಥವಾ ಮಗಳು ಒಳ್ಳೆಯ ಮನೆ ಸೇರಲಿ ಎಂಬ ಕಾರಣದಿಂದ ಈ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಆದರೆ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ನನ್ನ ಮಗ ಅಥವಾ ಮಗಳು ಹೆಚ್ಚು ಓದಿ ದೊಡ್ಡ ಕೆಲಸ ಪಡೆದು ಕೊಳ್ಳಲಿ ಎನ್ನುವ ಆಲೋಚನೆಯಲ್ಲಿ ಇರುತ್ತಾರೆ.

ಆದರೆ ಅವರು ಅವರ ಮದುವೆಯ ವಿಚಾರವಾಗಿ ಯಾವುದೇ ಯೋಚನೆಯನ್ನು ಮಾಡುವು ದಿಲ್ಲ ಆದ್ದರಿಂದಲೇ ಹೆಚ್ಚು ವಯಸ್ಸಾಗಿದ್ದರು ಮದುವೆಯಾಗದೆ ಹಾಗೆ ಇದ್ದರೆ ಆದರೆ ಇದೇ ರೀತಿಯಾಗಿ ಇದ್ದರೆ ಅವರು ಜೀವನ ಪರ್ಯಂತ ಒಬ್ಬಂಟಿಯಾಗಿ ಇರಬೇಕಾಗುತ್ತದೆ. ಹಾಗಾಗಿ ಇಂತಹ ಯಾವುದೇ ಸಮಸ್ಯೆ ಅನುಭವಿಸುತ್ತಿರುವಂತಹ ಪ್ರತಿಯೊಬ್ಬರು.

ಈ ದಿನ ನಾವು ಹೇಳುವಂತಹ ಈ ಒಂದು ಶಾಶ್ವತ ಪರಿಹಾರ ಮಾರ್ಗವನ್ನು ಮಾಡಿಕೊಂಡರೆ ನಿಮಗೆ ತಕ್ಷಣವೇ ಮದುವೆ ಯೋಗ ಕೂಡಿ ಬರುತ್ತದೆ. ನಿಮಗೆ ಪರಿಚಯ ಇರುವಂತಹ ವ್ಯಕ್ತಿಯ ಮದುವೆಯಾಗುತ್ತಿದ್ದರೆ ಅವರಿಗೆ ನೀವು ಹಳದಿ ಬಣ್ಣದ ವಸ್ತ್ರವನ್ನು ಉಡುಗೊರೆಯಾಗಿ ಕೊಡುವುದರಿಂದ ನೀವು ಗುರುವಿನ ಕೃಪೆಗೆ ಪಾತ್ರರಾಗಬಹುದು ಗುರು ನಿಮ್ಮ ಮದುವೆಯ ವಿಚಾರವಾಗಿ ಕೆಲವೊಂದಷ್ಟು ಪರಿಹಾರವನ್ನು ಮಾಡುತ್ತಾನೆ ಆದ್ದರಿಂದ ಹಳದಿ ಬಣ್ಣದ ವಸ್ತ್ರವನ್ನು ಉಡುಗೊರೆಯಾಗಿ ಕೊಡುವುದು ಮೊದಲ ಪರಿಹಾರ ಮಾರ್ಗ.

ಹಾಗೂ ಮದುವೆಯಾಗಿಲ್ಲದೆ ಇರುವಂತಹ ಜನರು ಮನೆಯ ಮುಂದೆ ಕೃಷ್ಣ ತುಳಸಿಯನ್ನು ಬೆಳೆಸಿ. ಹಾಗೂ ಪ್ರತಿನಿತ್ಯ ಶುದ್ಧವಾದ ದೇಸಿ ಹಸುವಿನ ತುಪ್ಪದಿಂದ ದೀಪವನ್ನು ಹಚ್ಚಬೇಕು ಹೀಗೆ ಮಾಡುವುದರಿಂದ ನಿಮ್ಮ ಮದುವೆಯ ವಿಚಾರವಾಗಿ ಇರುವಂತಹ ಯಾವುದೇ ದೋಷಗಳು ಸಹ ದೂರವಾಗುತ್ತಾ ಬರುತ್ತದೆ. ಇದನ್ನು ಯಾರಾದರೂ ಸಹ ಮಾಡಬಹುದು. ಹಾಗೂ ಇದರ ಜೊತೆ ಬಹಳ ಮುಖ್ಯವಾಗಿ ನಿಮ್ಮ ಜಾತಕವನ್ನು ನುರಿತ ಜ್ಯೋತಿಷ್ಯರ ಬಳಿ ತೋರಿಸಿ ಅವರು ಹೇಳುವಂತಹ ಕೆಲವೊಂದು ಪರಿಹಾರವನ್ನು ಮಾಡಿಕೊಳ್ಳುವುದು ಕೂಡ ಬಹಳ ಒಳ್ಳೆಯದು.