Home Blog Page 321

ಗಣೇಶ ಹಬ್ಬದಲ್ಲು ಕ್ರಾಂತಿ ಅಬ್ಬರ, ಡಿ ಬಾಸ್ ಅಭಿಮಾನಿಗಳು ಗಣೇಶನಿಂದ ಕ್ರಾಂತಿ ಸಿನಿಮಾ ಪ್ರೋಮೋಷನ್ ಮಾಡಿಸುತ್ತಿರುವ ಈ ವಿಡಿಯೋ ನೋಡಿ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 55ನೇ ಸಿನಿಮಾ ಕ್ರಾಂತಿ ಸಿನಿಮಾ ಈಗಾಗಲೇ ಚಿತ್ರೀಕರಣ ಸಂಪೂರ್ಣವಾಗಿ ಇನ್ನೇನು ಬಿಡುಗಡೆಗೆ ಸಜ್ಜಾಗಿದೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ ಅವರು ಕ್ರಾಂತಿ ಸಿನಿಮಾದಲ್ಲಿ ತುಂಬಾ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಸರ್ಕಾರಿ ಶಾಲೆಯನ್ನು ಉಳಿಸುವಂತಹ ಮತ್ತು ವಿದ್ಯೆಗೆ ಇರುವಂತಹ ಪ್ರಾಮುಖ್ಯತೆಯನ್ನು ಈ ಸಿನಿಮಾದಲ್ಲಿ ಎತ್ತಿ ತೋರಿಸಲಾಗಿದೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ ಅವರನ್ನು ಬ್ಯಾನ್ ಮಾಡಿ ಆರು ತಿಂಗಳಿಗೆ ಕಳೆದು ಹೋಗಿದೆ ಎಲ್ಲಾ ಮಾಧ್ಯಮದಿಂದಲೂ ಕೂಡ ದರ್ಶನ್ ಅವರನ್ನು ಬ್ಯಾನ್ ಮಾಡಲಾಗಿದೆ. ಈ ಕಾರಣಕ್ಕಾಗಿ ದರ್ಶನ್ ಅವರ ಸಿನಿಮಾದ ಅಪ್ಡೇಟ್ಸ್ ಗಳು ಎಲ್ಲಿಯೂ ಕೂಡ ದೊರೆಯುತ್ತಿಲ್ಲ. ಆದರೂ ಕೂಡ ಅಭಿಮಾನಿಗಳು ಒಂದು ಹೆಜ್ಜೆ ಮುಂದೆ ಹೋಗಿ ಮಾಧ್ಯಮಗಳು ನಮ್ಮ ನೆಚ್ಚಿನ ನಟನ ಬಗ್ಗೆ ಪ್ರಚಾರ ಮಾಡದಿದ್ದರೂ ಪರವಾಗಿಲ್ಲ ನಾವೇ ನಮ್ಮ ದರ್ಶನವರ ಸಿನಿಮಾವನ್ನು ಪ್ರಚಾರ ಮಾಡುತ್ತಿವೆ ಅಂತ ಪ್ರತಿನಿತ್ಯವೂ ಕೂಡ ಕ್ರಾಂತಿ ಸಿನಿಮಾದ ಬಗ್ಗೆ ಪ್ರಚಾರ ಕಾರ್ಯವನ್ನು ಕೈಗೊಳ್ಳುತ್ತಿದ್ದರೆ.

ವಿಶೇಷ ಏನೆಂದರೆ ನಮ್ಮ ಸಿನಿಮಾವನ್ನು ಪ್ರಚಾರ ಮಾಡಿ ಅಂತ ದರ್ಶನ್ ಆಗಲಿ ಅಥವಾ ಚಿತ್ರತಂಡದವರು ಎಲ್ಲಿಯೂ ಕೂಡ ಹೇಳಿಕೊಂಡಿಲ್ಲ. ಆದರೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮೇಲೆ ಇರುವಂತಹ ಅಭಿಮಾನಕ್ಕಾಗಿ ತಮ್ಮ ಸ್ವಂತ ದುಡ್ಡಿನಲ್ಲಿ ಖರ್ಚು ಮಾಡಿ ಪ್ರತಿನಿತ್ಯವೂ ಕೂಡ ವಿಭಿನ್ನ ರೀತಿಯಾದಂತಹ ವಿಶೇಷವಾದಂತಹ ರೀತಿಯಲ್ಲಿ ಸಿನಿಮಾದ ಪ್ರಮೋಷನ್ ಕಾರ್ಯವನ್ನು ಮಾಡುತ್ತಿದ್ದಾರೆ. ಹೌದು ಹಬ್ಬ ಹರಿದಿನ ಜಾತ್ರೆ ಬಸ್ ಸ್ಟ್ಯಾಂಡ್ ಸಾರ್ವಜನಿಕ ಸ್ಥಳ ಇನ್ನು ಮುಂತಾದ ಕಡೆಯಲ್ಲಿ ಕ್ರಾಂತಿ ಸಿನಿಮಾದ ಪೋಸ್ಟರ್ ಅನ್ನು ಹಿಡಿದು ಎಲ್ಲಾ ಕಡೆ ಕ್ಯಾನ್ವಾಸ್ ಮಾಡುತ್ತಿದ್ದಾರೆ. ಇನ್ನೇನು ಗಣೇಶ ಒಬ್ಬ ಬರುತ್ತಿದೆ ಗಣೇಶ ಹಬ್ಬಕ್ಕೆ ಇನ್ನೂ ಕೇವಲ ಒಂದೇ ಒಂದು ವಾರ ಬಾಕಿ ಉಳಿದಿದೆ ಹಾಗಾಗಿ ಗಣೇಶನ ಮೂರ್ತಿಯಲ್ಲೂ ಕೂಡ ಇದೀಗ ಕ್ರಾಂತಿ ಸಿನಿಮಾದ ಪೋಸ್ಟರ್ ಕಾಣಿಸಿಕೊಂಡಿದೆ.

ಹೌದು ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ತಮ್ಮ ನೆಚ್ಚಿನ ನಟನಾ ಸಿನಿಮಾವನ್ನು ಪ್ರಚಾರಗೊಳಿಸಬೇಕು ಎಂಬ ಕಾರಣಕ್ಕಾಗಿ ಗಣೇಶ ಮೂರ್ತಿ ಇರುವಂತಹ ಪಕ್ಕದಲ್ಲಿಯೇ ದರ್ಶನ ಅವರ ಮೂರ್ತಿಯನ್ನು ತಯಾರಿಸಿ ಗಣೇಶನ ಕೈನಲ್ಲಿ ಕ್ರಾಂತಿ ಪೋಸ್ಟರ್ ಒಂದನ್ನು ಕೊಟ್ಟಿದ್ದಾರೆ. ಈ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರ ಗಮನವನ್ನು ಸೆಳೆದಿದೆ. ಅಷ್ಟೇ ಅಲ್ಲದೆ ದರ್ಶನ್ ಅಭಿಮಾನಿಗಳು ಈ ಒಂದು ವಿಗ್ರಹವನ್ನು ನೋಡಿ ತುಂಬಾನೇ ಖುಷಿ ಪಟ್ಟಿದ್ದಾರೆ. ಇದೇ ರೀತಿಯಾದಂತಹ ವಿಗ್ರಹವನ್ನು ಎಲ್ಲಾ ಕಡೆ ತಯಾರಿಸಬೇಕು ಎಂಬ ಕಾರಣಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆರ್ಡರ್ ಕೂಡ ಬಂದಿದೆ. ಹಾಗಾಗಿ ಗಣೇಶ ಹಬ್ಬಕ್ಕೆ ಕೇವಲ ಗಣೇಶ ಮಾತ್ರವಲ್ಲದೆ ಗಣೇಶನ ಕೈನಲ್ಲಿ ಕ್ರಾಂತಿ ಸಿನಿಮ ಇರುವಂತ ಪೋಸ್ಟರ್ ಮತ್ತು ದರ್ಶನ್ ಇರುವುದು ಈ ಮೂರು ಮೂರ್ತಿ ಕೂಡ ನಿಮಗೆ ಕಾಣಿಸುತ್ತದೆ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ವಾರವಷ್ಟೇ ಗಣೇಶನ ಮೂರ್ತಿಯ ಪಕ್ಕ ಅಪ್ಪು ಮೂರ್ತಿ ಇದ್ದದ್ದನ್ನು ನೀವು ನೋಡೇ ಇದ್ದೀರಿ ಅಪ್ಪು ಇರುವಂತಹ ಗಣೇಶ ಮೂರ್ತಿಗೆ ಎಷ್ಟು ಬೇಡಿಕೆ ಇತ್ತೋ ಅಷ್ಟೇ ಬೇಡಿಕೆ ಇದೀಗ ದರ್ಶನ್ ಇರುವಂತಹ ಗಣೇಶ ಮೂರ್ತಿಗೂ ಕೂಡ ಇದೆ. ಇದೆಲ್ಲವನ್ನು ನೋಡುತ್ತಿದ್ದರೆ ಅಭಿಮಾನಿಗಳು ಎಷ್ಟು ತಮ್ಮ ನಟರನ್ನು ಪ್ರೀತಿಸುತ್ತಾರೆ ಎಂಬುದು ಅರ್ಥವಾಗುತ್ತದೆ ಇನ್ನು ಕೆಲವು ನೆಟ್ಟಿಗರು ಅಪ್ಪು ಅಭಿಮಾನಿಗಳು ಮಾಡುತ್ತಿದ್ದಂತಹ ಕೆಲಸವನ್ನೇ ಇದೀಗ ದರ್ಶನ್ ಅಭಿಮಾನಿಗಳು ಕೂಡ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಆದರೆ ಎಲ್ಲ ನಟರಿಗೂ ಕೂಡ ಅವರದೇ ಆದಂತಹ ಅಭಿಮಾನಿ ಬಳಗ ಇರುತ್ತದೆ ಹಾಗಾಗಿ ತಮಗೆ ಬೇಕಾದರೆ ರೀತಿಯಲ್ಲಿ ಪ್ರಚಾರ ಕಾರ್ಯವನ್ನು ಕೈಗೊಳ್ಳುತ್ತಾರೆ ಇದು ಸರಿ ಅಥವಾ ಇದು ತಪ್ಪು ಎಂಬುದನ್ನು ಹೇಳುವುದಕ್ಕೆ ಯಾರಿಗೂ ಕೂಡ ಮಾನ್ಯತೆ ಇರುವುದಿಲ್ಲ. ಹಾಗಾಗಿ ತಮ್ಮ ಖುಷಿಗೆ ತಮ್ಮ ಸಂತೋಷಕ್ಕೆ ಅಭಿಮಾನಿಗಳು ಏನು ಮಾಡಿದರು ಕೂಡ ಅದೆಲ್ಲವನ್ನು ನಾವು ನೋಡಬೇಕಿದೆ.

ಸದ್ಯಕ್ಕೆ ಗಣೇಶ ಹಬ್ಬಕ್ಕೆ ಕ್ರಾಂತಿ ಸಿನಿಮಾದ ಪೋಸ್ಟರ್ ಇರುವಂತಹ ಹಾಗೂ ದರ್ಶನ್ ಇರುವಂತ ವಿಗ್ರಹಗಳು ಮಾರುಕಟ್ಟೆಗೆ ಬರುವುದಂತೂ ಖಚಿತ ಇದರ ಜೊತೆಗೆ ಅಭಿಮಾನಿಗಳು ಗಣೇಶ ಹಬ್ಬಕ್ಕೆ ಕ್ರಾಂತಿ ಸಿನಿಮಾದ ಯಾವುದಾದರೂ ಒಂದು ಹಾಡನ್ನು ಬಿಡುಗಡೆ ಮಾಡಲೇಬೇಕು ಎಂದು ಪಟ್ಟು ಹಿಡಿದು ಕುಳಿತುಕೊಂಡಿದ್ದಾರೆ. ದರ್ಶನ್ ಗೆ ಮತ್ತು ಸಿನಿಮಾದ ನಿರ್ಮಾಪಕ ನಿರ್ದೇಶಕರಿಗೆ ಒತ್ತಾಯ ಮಾಡಿದ್ದಾರೆ. ಹಾಗಾಗಿ ಈ ಗಣೇಶ ಹಬ್ಬಕ್ಕೆ ಕ್ರಾಂತಿ ಸಿನಿಮಾದ ಹಾಡು ಬಿಡುಗಡೆಯಾಗುತ್ತದೆ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ. ಸದ್ಯಕ್ಕಂತೂ ಮಾರುಕಟ್ಟೆಯಲ್ಲಿ ಎಲೆ ನೋಡಿದರೂ ಒಂದು ಕಡೆ ಕಪ್ಪು ಇರುವಂತಹ ವಿಗ್ರಹಗಳು ಕಾಣ ಸಿಗುತ್ತಿದ್ದರೆ ಮತ್ತೊಂದು ಕಡೆ ದರ್ಶನ್ ಹಾಗೂ ಕ್ರಾಂತಿ ಸಿನಿಮಾದ ಪೋಸ್ಟರ್ ಇರುವಂತಹ ಗಣೇಶಗಳು ಕಾಣಸಿಗುತ್ತಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಶ್ರಾವ್ಯ ನಟಿಯಾಗಿ ಯಶಸ್ಸನ್ನೇ ಕಾಣಲಿಲ್ಲ ಯಾಕೆ ಗೊತ್ತಾ.? ಬಹುದಿನದ ನಂತರ ಸತ್ಯ ತೆರೆದಿಟ್ಟ ಓಂ ಪ್ರಕಾಶ್ ರಾವ್.

ಓಂ ಪ್ರಕಾಶ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಹುಚ್ಚ, ಕಲಸಿಪಾಳ್ಯ, ಎಕೆ 47 ಹೀಗೆ ಕನ್ನಡದ ಬಹುತೇಕ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ ಅಷ್ಟೇ ಅಲ್ಲದೆ ಕೆಲವು ಸಿನಿಮಾಗಳಿಗೆ ಬಂಡವಾಳವನ್ನು ಕೂಡ ಹೂಡಿಕೆ ಮಾಡಿದ್ದಾರೆ. ನಿರ್ಮಾಪಕ ನಿರ್ದೇಶಕ ಮಾತ್ರವಲ್ಲದೆ ಅದ್ಭುತ ಹಾಸ್ಯಗಾರ ಕೂಡ ಹೌದು ಹಲವಾರು ಸಿನಿಮಾದಲ್ಲಿ ಹಾಸ್ಯ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಹಾಗೂ ಪೋಷಕ ಪಾತ್ರದಲ್ಲಿಯೂ ಕೂಡ ಕಾಣಿಸಿಕೊಂಡಿದ್ದಾರೆ. ಇನ್ನು ಓಂ ಪ್ರಕಾಶ್ ರಾವ್ ಅವರ ತಂದೆ ಎನ್.ಎಸ್. ರಾವ್ ಹೆಸರಾಂತ ಅದ್ಭುತ ಕಲಾವಿದ ಬಹುತೇಕ ಹಳೆಯ ಸಿನಿಮಾ ಎಲ್ಲದರಲ್ಲೂ ಕೂಡ ನಟಿಸಿದ್ದಾರೆ. ತಂದೆಯ ಪ್ರತಿಭೆಯನ್ನೇ ಮಗನು ಕೂಡ ಹೊಂದಿದ್ದಾರೆ ಎಂದು ಹೇಳಿದರು ಕೂಡ ತಪ್ಪಾಗಲಾರದು. ಇನ್ನು ನಿಮ್ಮೆಲ್ಲರಿಗೂ ತಿಳಿದಿರುವಂತೆ ಓಂ ಪ್ರಕಾಶ್ ರಾವ್ ಅವರು ರೇಖಾದಾಸ್ ಎಂಬುವರನ್ನು ಪ್ರೀತಿಸಿ ಮದುವೆಯಾಗುತ್ತಾರೆ ರೇಖಾದಾಸ್ ಮೂಲತಃ ಪಶ್ಚಿಮ ಬಂಗಾಳದವರು.

ರೇಖಾ ದಾಸ್ ಅವರ ತಂದೆ ತಾಯಿ ಇಬ್ಬರು ಕೂಡ ಕೆಲಸವನ್ನು ಅರಸಿ ಬೆಂಗಳೂರಿಗೆ ಬರುತ್ತಾರೆ ನಟನೆಯಲ್ಲಿ ಹೆಚ್ಚಿನ ಆಸಕ್ತಿ ಇದ್ದ ಕಾರಣ ರೇಖಾದಾಸ್ ಅವರು ಸಿನಿಮಾ ಕ್ಷೇತ್ರದತ್ತ ಬಂದು ಕಾಡಿಬೇಡಿ ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತಾರೆ. ಕನ್ನಡ ಬರದೆ ಇದ್ದರೂ ಕೂಡ ಕನ್ನಡವನ್ನು ಅಚ್ಚುಕಟ್ಟಾಗಿ ಮಾತನಾಡಲು ಕಲಿತುಕೊಂಡು ನಟನೆಯನ್ನು ಪ್ರಾರಂಭ ಮಾಡುತ್ತಾರೆ. ಇಲ್ಲಿಯವರೆಗೂ ರೇಖಾದಾಸ್ ಅವರು ಸುಮಾರು 600ಕ್ಕೂ ಹೆಚ್ಚು ಸಿನಿಮಾ ಹಾಗೂ ಐವತ್ತಕ್ಕೂ ಅಧಿಕ ಧಾರಾವಾಹಿ ಮತ್ತು 400 ಹೆಚ್ಚು ನಾಟಕಗಳಲ್ಲಿ ಭಾಗವಹಿಸಿದ್ದಾರೆ. ರೇಖಾದಾಸ್ ಹಾಗೂ ಓಂ ಪ್ರಕಾಶ್ ರಾವ್ ಇಬ್ಬರೂ ಕೂಡ ಪರಸ್ಪರ ಪ್ರೀತಿಸಿ ಮದುವೆಯಾಗುತ್ತಾರೆ ಆದರೆ ಮದುವೆಯಾದ ನಂತರ ಓಂ ಪ್ರಕಾಶ್ ರಾವ್ ಸಾಕಷ್ಟು ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತದೆ.

ಅವಕಾಶಗಳು ಸಿಗದೇ ಸಿನಿಮಾರಂಗದಿಂದ ದೂರ ಉಳಿಯುತ್ತಾರೆ ಈ ಸಮಯದಲ್ಲಿ ರೇಖಾದಾಸ್ ಅವರನ್ನು ಬಿಟ್ಟು ಹೋಗುತ್ತಾರೆ ಇದಾಗಲೇ ರೇಖಾದಾಸ್ ಅವರಿಗೆ ಶ್ರಾವ್ಯ ಎಂಬ ಹೆಣ್ಣು ಮಗಳು ಕೂಡ ಇರುತ್ತಾಳೆ. ರೇಖಾ ದಾಸ್ ಅವರನ್ನು ಓಂ ಪ್ರಕಾಶ್ ರಾವ್ ಕೈಬಿಟ್ಟರು ಕೂಡ ರೇಖದಾಸ್ ತಮ್ಮ ಮಗಳನ್ನು ಕಷ್ಟಪಟ್ಟು ಹೇಗೆ ಸಾಕುತ್ತಾರೆ. ತದನಂತರ ಹುಚ್ಚ ಕಲಾಸಿಪಾಳ್ಯ ಸುಂಟರಗಾಳಿ ಮುಂತಾದ ಸಿನಿಮಾವನ್ನು ನಿರ್ದೇಶನ ಮಾಡಿದ ನಂತರ ಓಂ ಪ್ರಕಾಶ್ ರಾವ್ ಅವರಿಗೆ ಮತ್ತೆ ಹಣ ಆಸ್ತಿ ಸಿರಿ ಸಂಪತ್ತು ಎಲ್ಲವೂ ಕೂಡ ಲಭಿಸುತ್ತದೆ. ತದನಂತರ ಇವರು 2002ನೇ ಇಸ್ವಿಯಲ್ಲಿ ಮತ್ತೊಂದು ಮದುವೆಯಾಗುತ್ತಾರೆ ಆದರೆ ಕೆಲವು ಕಾರಣಾಂತರಗಳಿಂದ ಆಕೆಗೂ ವಿ.ಚ್ಛೇ.ದ.ನ ನೀಡಿ 2009ರಲ್ಲಿ ಮೂರನೇ ಮದುವೆಯಾಗುತ್ತಾರೆ.

ಸದ್ಯಕ್ಕೆ ಓಂ ಪ್ರಕಾಶ್ ರವರು ತಮ್ಮ ಮೂರನೇ ಪತ್ನಿಯ ಜೊತೆ ಇದ್ದಾರೆ, ಆದರೂ ಕೂಡ ರೇಖಾದಾಸ್ ಹಾಗೂ ಓಂ ಪ್ರಕಾಶ್ ರಾವ್ ಅವರ ಮಗಳಾದಂತಹ ಶ್ರಾವ್ಯ ಅವರನ್ನು ಕಂಡರೆ ಇವರಿಗೆ ಬಹಳನೇ ಪ್ರೀತಿ ಹೀಗಾಗಿ ಸಿನಿಮಾರಂಗಕ್ಕೆ ತನ್ನ ಮಗಳನ್ನು ಕರೆದುಕೊಂಡು ಬರಬೇಕು ಖ್ಯಾತ ನಟಿಯನ್ನಾಗಿ ಮಾಡಬೇಕು ಎಂಬ ಆಸೆ ಕನಸನ್ನು ಹೊಂದಿರುತ್ತಾರೆ. ಇದಕ್ಕೆ ಪೂರಕವಾಗುವಂತೆ ಅಜಯ್ ರಾವ್ ಅಭಿನಯದ ರೋಜ್ ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸುತ್ತಾರೆ. ಈ ಸಿನಿಮಾದ ಅದ್ಭುತವಾಗಿ ನಟನೆ ಮಾಡಿದ ಕಾರಣ ಶ್ರಾವ್ಯ ಅವರನ್ನು ಎಲ್ಲರೂ ಕೂಡ ಮೆಚ್ಚಿಕೊಳ್ಳುತ್ತಾರೆ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಕೂಡ ಮಾಡುತ್ತದೆ. ಈ ಸಿನಿಮಾದ ನಂತರ ಡಾರ್ಲಿಂಗ್ ಕೃಷ್ಣ ಅಭಿನಯದ ಹುಚ್ಚ ಪಾರ್ಟ್ 2 ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸುತ್ತಾರೆ ಇದು ಕೂಡ ಅದ್ಭುತವಾದಂತಹ ಚಿತ್ರಕಥೆಯನ್ನು ಹೊಂದಿರುತ್ತದೆ.

ಎರಡು ದೊಡ್ಡ ಸಕ್ಸಸ್ ಸಿನಿಮಾ ನೀಡಿದರು ಕೂಡ ಶ್ರಾವ್ಯ ಅವರಿಗೆ ಯಾವುದೇ ಅವಕಾಶಗಳು ದೊರೆಯುವುದಿಲ್ಲ ಬೇರೆ ನಟನ ಜೊತೆ ಅಭಿನಯಿಸುವುದಕ್ಕೆ ಇವರಿಗೆ ಬೇಡಿಕೆ ಎಂಬುದು ದೊರೆಯುವುದಿಲ್ಲ. ಅದ್ಭುತ ಪ್ರತಿಭೆ ಕಲಾವಿದೆ ಆದರೂ ಕೂಡ ಶ್ರಾವ್ಯ ಅವರು ಯಾಕೆ ಚಿತ್ರರಂಗದಲ್ಲಿ ಯಶಸ್ಸನ್ನು ಕಾಣಲಿಲ್ಲ ಎಂಬುದು ಹಲವು ಸಿನಿ ರಸಿಕರ ಪ್ರಶ್ನೆಯಾಗಿತ್ತು. ಓಂ ಪ್ರಕಾಶ್ ರಾವ್ ಅವರನ್ನು ಒಂದು ಬಾರಿ ಸಂದರ್ಶನದಲ್ಲಿ ಕೇಳಿದಾಗ ಅವರು ಕೊಟ್ಟ ಉತ್ತರ ಕೇಳಿ ನಿಜಕ್ಕೂ ಕೂಡ ಎಲ್ಲರೂ ಒಂದು ಕ್ಷಣ ದಂಗಾಗಿ ಹೋದರು. ಹೌದು ನಟ ಓಂ ಪ್ರಕಾಶ್ ರಾವ್ ಅವರು ಹೇಳುವಂತೆ ಓಂ ಪ್ರಕಾಶ್ ರಾವ್ ಅವರಿಗೆ ತಮ್ಮ ಮಗಳನ್ನು ಗ್ಲಾಮರಸ್ ಲುಕ್ ನಲ್ಲಿ ನೋಡಲು ಇಷ್ಟವಿಲ್ಲವಂತೆ ಅಷ್ಟೇ ಅಲ್ಲದೆ ಗ್ಲಾಮರಸ್ ಪಾತ್ರದಲ್ಲಿ ಅಭಿನಯಿಸುವುದಕ್ಕೆ ಅವರು ಒಪ್ಪುವುದಿಲ್ಲವಂತೆ.

ಈ ಕಾರಣಕ್ಕಾಗಿ ಶ್ರಾವ್ಯ ಚಿತ್ರರಂಗದಲ್ಲಿ ಯಶಸ್ಸನ್ನು ಕಂಡಿಲ್ಲ ಹಾಗೂ ಆಕೆಗೆ ಬೇಡಿಕೆಯು ಕೂಡ ಇಲ್ಲ ಎಂಬ ರೋಚಕ ಮಾಹಿತಿಯನ್ನು ಹೊರಹಾಕಿದ್ದಾರೆ. ಈ ವಿಚಾರ ಹೊರ ಬರುತ್ತಿದ್ದ ಹಾಗೆ ನೆಟ್ಟಿಗರು ಹಲವಾರು ರೀತಿಯಾಗಿ ಕಾಮೆಂಟನ್ನು ಹಾಕುತ್ತಿದ್ದಾರೆ ಏಕೆಂದರೆ ಒಬ್ಬ ನಿರ್ಮಾಪಕ ಮತ್ತು ನಿರ್ದೇಶಕ ಆಗಿರುವಂತಹ ಓಂ ಪ್ರಕಾಶ್ ರಾವ್ ಅವರು ಬೇರೆ ಹೆಣ್ಣುಮಕ್ಕಳನ್ನು ಗ್ಲಾಮರಸ್ ಪಾತ್ರದಲ್ಲಿ ತೋರಿಸುತ್ತಾರೆ. ಆದರೆ ತಮ್ಮ ಮನೆಯ ಹೆಣ್ಣು ಮಕ್ಕಳ ವಿಚಾರಕ್ಕೆ ಬಂದರೆ ಈ ರೀತಿ ನಾ ಕಟ್ಟುಪಾಡಿನ ನಿಯಮವನ್ನು ಹಾಕುತ್ತಾರೆ. ಒಬ್ಬರಿಗೆ ಒಂದೊಂದು ರೀತಿಯಾದಂತಹ ನ್ಯಾಯವನ್ನು ಒದಗಿಸುವುದು ಎಷ್ಟು ಸರಿ ಎಂದು ಪ್ರಶ್ನೆಯನ್ನು ಕೇಳಿದ್ದಾರೆ.

ಅಷ್ಟೇ ಅಲ್ಲದೆ ಸಿನಿಮಾ ಎಂಬುದು ಮನರಂಜನ ದೃಷ್ಟಿಯಿಂದ ತೆಗೆಯುವಂತಹದ್ದು ಹಾಗಾಗಿ ಇಲ್ಲಿ ಗ್ಲಾಮರಸ್ ಪಾತ್ರವೂ ಕೂಡ ಕೇವಲ ಒಂದು ಭಾಗವಾಗಿರುತ್ತದೆ. ಇದನ್ನು ಪಾತ್ರದಂತೆ ನೋಡಬೇಕು ಹೊರತು ತಮ್ಮ ಜೀವನಕ್ಕೆ ಅತಿಯಾಗಿ ಅಳವಡಿಸಿಕೊಳ್ಳಬಾರದು ಈ ರೀತಿ ಮಾಡಿದ್ದರಿಂದಲೇ ಶ್ರಾವ್ಯವರಿಗೆ ಇದೀಗ ಯಾವುದೇ ಅವಕಾಶ ಎಂಬುದು ದೊರೆಯದೆ ಮನೆಯಲ್ಲಿ ಕುಳಿತುಕೊಳ್ಳುವಂತಹ ಸಂದರ್ಭ ಎದುರಾಗಿದೆ ಎಂದು ಓಂ ಪ್ರಕಾಶ್ ರಾವ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಮತ್ತೆ ಜೊತೆ ಜೊತೆಯಲಿ ಧಾರವಾಹಿಯಲ್ಲಿ ನಟಿಸುತ್ತೆನೆ ಅಂತ ಅನಿರುಧ್ ಹೇಳಿದರು ನೀವು ಬೇಡವೇ ಬೇಡ ಅನ್ನುತ್ತಿದ್ದಾರೆ ಡೈರೆಕ್ಟರ್.

ಕಳೆದ ಎರಡು ದಿನಗಳಿಂದ ಎಲ್ಲರೂ ಬಹಳ ಆಶ್ಚರ್ಯ ಪಡುವ ರೀತಿಯಲ್ಲಿ ನಟ ಅನಿರುದ್ಧ್ ಅವರ ಮೇಲೆ ಗಂಭೀರ ಆರೋಪ ಕೇಳಿ ಬರುತ್ತಿದೆ. ಸಿನಿಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ ಅನಿರುದ್ಧ ಅವರು ಕಳೆದ ಕೆಲವು ವರ್ಷಗಳು ಸಂಪೂರ್ಣವಾಗಿ ಇಂಡಸ್ಟ್ರಿ ಯಿಂದ ಮಾಯ ಆಗಿಬಿಟ್ಟಿದ್ದರು ಎನ್ನಬಹುದು. ಮತ್ತೆ ಅವರನ್ನು ಕನ್ನಡದ ಜನರೆದುರು ಕರೆತರುವ ಪ್ರಯತ್ನವನ್ನು ಜೊತೆಜೊತೆಯಲಿ ಎನ್ನುವ ಧಾರಾವಾಹಿ ಟೀಮ್ ಮಾಡಿತ್ತು. ಇದು ಅವರ ಪಾಲಿಗೆ ದೊರೆತ ಎರಡನೇ ಅವಕಾಶ ಎನ್ನಬಹುದು ಅಲ್ಲದೆ ಈ ಧಾರಾವಾಹಿಯು ಶುರುವಾದ ಸಮಯದಿಂದ ಅನಿರುದ್ಧ್ ಅವರ ಮೇಲೆ ಕರ್ನಾಟಕದ ಜನತೆಗೆ ಅಪಾರ ಅಭಿಮಾನ ಪ್ರೀತಿ ಬೆಳೆದಿತ್.ತು ಅದರಲ್ಲೂ ಕಿರುತರೆ ಪ್ರೇಕ್ಷಕರಂತೂ ಅನಿರುಧ್ ಅವರನ್ನು ತಮ್ಮ ಮನೆಯ ಮಗ ಎನ್ನುವಷ್ಟು ಪ್ರೀತಿಸುತ್ತಿದ್ದರು. ಇದಕ್ಕೆಲ್ಲ ಕಾರಣ ಜೊತೆ ಜೊತೆಯಲಿ ದಾರವಾಹಿಯಲ್ಲಿ ಅವರು ನಟಿಸಿದ್ದ ಆರ್ಯವರ್ಧನ್ ಎನ್ನುವ ಪಾತ್ರ.

ಒಂದು ಒಳ್ಳೆಯ ನೇಮ್ ಫೇಮ್ ಎಲ್ಲವನ್ನು ತಂದುಕೊಟ್ಟಿದ್ದ ಜೊತೆಜೊತೆಯಲಿ ಧಾರಾವಾಹಿ ತಂಡದಲ್ಲಿ ಅನಿರುದ್ಧ್ ಅವರು ಕಿರಿಕ್ ಮಾಡಿಕೊಂಡಿದ್ದಾರಂತೆ. ಈ ಬಗ್ಗೆ ಜೊತೆಯಲಿ ಧಾರಾವಾಹಿಯ ನಿರ್ಮಾಪಕರ ಮತ್ತು ನಿರ್ದೇಶಕರು ಆದ ಆರೂರು ಜಗದೀಶ್ ಅವರು ಆರೋಪ ಮಾಡಿದ್ದಾರೆ. ಜೊತೆಗೆ ಪ್ರೆಸ್ ಮೀಟ್ ನಡೆಸಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ ಹಾಗೆಯೇ ಈಗಾಗಲೇ ಚಾನೆಲ್ ಅವರಿಗೆ ತಮ್ಮ ತೊಂದರೆಗಳನ್ನೆಲ್ಲ ತಿಳಿಸಿ ಆರ್ಯವರ್ಧನ್ ಅವರನ್ನು ಧಾರವಾಹಿಯಿಂದ ಕೈ ಬಿಡುವ ನಿರ್ಧಾರ ಮಾಡಿದ್ದೇನೆ ಎನ್ನುವುದನ್ನು ಸಹ ಹೇಳಿದ್ದಾರೆ. ಇತ್ತ ಅನಿರುದ್ಧ್ ಅವರು ಆ ಆರೋಪಗಳಿಗೆ ಪ್ರತ್ಯಾರೋಪಗಳನ್ನು ಮಾಡಿ ತಮ್ಮ ನಿಲುವು ಏನು ಎನ್ನುವುದನ್ನು ಸಹ ತಿಳಿಸಿದ್ದಾರೆ. ಅಂತಿಮವಾಗಿ ಅನಿರುದ್ಧ್ ಅವರು ಇಷ್ಟೆಲ್ಲಾ ಭಿನ್ನಾಭಿಪ್ರಾಯಗಳು ಇದ್ದರೂ ಕೂಡ ಈ ಧಾರವಾಹಿ ನನಗೆ ತುಂಬಾ ತಂದು ಕೊಟ್ಟಿದ್ದೆ ಆ ಧಾರಾವಾಹಿಯಲ್ಲಿ ನಾನು ಈಗಲೂ ಕೂಡ ಅಭಿನಯಿಸಲು ರೆಡಿ ಇದ್ದೇನೆ ಎಂದಿದ್ದಾರೆ.

ಆದರೆ ಆರೂರು ಜಗದೀಶ್ ಅವರು ಮಾತ್ರ ಈಗಾಗಲೇ ನಾನು ಸಾಕಷ್ಟು ಅವರಿಂದ ನೊಂದು ಹೋಗಿದ್ದೇನೆ, ಅವರಿಂದ ಧಾರವಾಹಿಯಲ್ಲಿ ಇತರ ಕಲಾವಿದರ ನಡವಡಿಕೆಗಳು ಕೂಡ ಬದಲಾಗುತ್ತಿದೆ. ಮತ್ತು ನಾನು ವೈಯುಕ್ತಿಕವಾಗಿ ಬಹಳ ನೊಂದು ನಾನು ನನ್ನ ಕುಟುಂಬಸ್ಥರು ದಿನ ಕಣ್ಣೀರು ಇಡುತ್ತಿದ್ದೇವೆ. ಇದಕ್ಕೆಲ್ಲ ಕಾರಣ ಇವರೇ ನಾನು ಇವರನ್ನು ಬಹಳ ಪ್ರೀತಿಯಿಂದ ನೋಡಿದ್ದೆ ತೆರೆ ಮೇಲೆ ಇವರನ್ನು ಹೇಗೆ ತರಬೇಕು ಎನ್ನುವುದು ನನ್ನ ಕನಸು ಆದರೆ ನನಗೆ ಅಷ್ಟೇ ಪ್ರಮಾಣದ ಪ್ರೀತಿ ಅವರಿಂದ ದೊರೆತಿಲ್ಲ ಅಲ್ಲದೆ ಈಗಾಗಲೇ ಅವರಿಂದ ಸಾಕಷ್ಟು ನಷ್ಟ ಕೂಡ ಆಗಿದೆ ಹಾಗಾಗಿ ನನಗೆ ಇವರ ಸಹವಾಸವೇ ಬೇಡ ಎನ್ನುವಷ್ಟು ಬೇಸತ್ತು ಹೋಗಿದ್ದಾರಂತೆ ನಿರ್ದೇಶಕರು. ಇತ್ತೀಚೆಗೆ ಅನಿರುದ್ಧ ಅವರಿಗೆ ಅಹಂ ಜಾಸ್ತಿಯಾಗಿದ್ದೆ ಯಾವಾಗಲೂ ಸೆಟ್ಟಿಂಗ್ ಅಲ್ಲಿ ಜಗಳ ಆಡುತ್ತಾರೆ, ಅನವಶ್ಯಕ ಚರ್ಚೆಗಳು ನಡೆಯುತ್ತಾ ಇರುತ್ತವೆ.

ಇದರಿಂದ ಬಹಳ ಟೈಮ್ ವೇಸ್ಟ್ ಆಗುವುದರ ಜೊತೆಗೆ ನಿರ್ಮಾಪಕನಾಗಿ ನನಗೆ ಬಹಳ ನಷ್ಟ ಆಗುತ್ತಿದೆ. ಅವರ ವರ್ತನೆ ನನಗೆ ಇಷ್ಟ ಆಗುತ್ತಿಲ್ಲ. ಪಾತ್ರದಲ್ಲಿ ಹಾಗೂ ಕಥೆಯಲ್ಲಿ ಅನವಶ್ಯಕವಾಗಿ ಹಸ್ತಕ್ಷೇಪ ಮಾಡುತ್ತಾರೆ ಹೀಗಾಗಿ ನನ್ನ ಕಷ್ಟವನ್ನು ಚಾನೆಲ್ ಜೊತೆ ಹೇಳಿಕೊಂಡು ಅವರು ಬೇಡ ಎನ್ನುವ ನಿರ್ಧಾರ ಮಾಡಿದ್ದೇನೆ ಎಂದು ಆರೂರು ಜಗದೀಶ್ ಅವರು ಹೇಳಿಕೊಂಡಿದ್ದಾರೆ. ಆದರೆ ನಿರ್ಮಾಪಕರ ಸಂಘದ ಎಲ್ಲರೂ ಚರ್ಚೆ ಮಾಡಿ ಎರಡು ವರ್ಷಗಳವರೆಗೆ ಅನಿರುದ್ಧ್ ಅವರನ್ನು ಕಿರುತೆರೆಯಿಂದ ಕೈಬಿಡುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವ ಮಾತುಗಳು ಕೂಡ ಹರಿದಾಡುತ್ತಿವೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ಸಾಹಸಿಂಹ ವಿಷ್ಣುವರ್ಧನ್ ಅವರಿಗೆ ಸಿನಿಮಾ ಇಂಡಸ್ಟ್ರಿಯ ಯಾವ ನಟನನ್ನು ಕಂಡರೆ ಬಹಳ ಪ್ರೀತಿ ಇತ್ತು ಗೊತ್ತಾ.?

ಸಾಹಸಸಿಂಹ ವಿಷ್ಣುವರ್ಧನ್ 200 ಸಿನಿಮಾಗಳಿಗಿಂತಲೂ ಹೆಚ್ಚಿನ ಕನ್ನಡ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರಿಗೆ ಬರಪೂರ ಮನೋರಂಜನೆಯನ್ನು ನೀಡಿ ಒಂದು ಮಾದರಿ ಜೀವನವನ್ನು ಜೀವಿಸಿ ಕೋಟ್ಯಾಂತರ ಹೃದಯಗಳನ್ನು ಮುಟ್ಟಿ ಅಭಿಮಾನಿಗಳ ಹೃದಯದಲ್ಲಿ ಎಂದಿಗೂ ಮರೆಯಲಾಗದ ಮಾಣಿಕ್ಯ ಆಗಿರುವ ವ್ಯಕ್ತಿ. ಇಂದು ವಿಷ್ಣುವರ್ಧನ್ ಅವರು ದೈಹಿಕವಾಗಿ ನಮ್ಮ ಜೊತೆ ಇಲ್ಲದೆ ಇದ್ದರೂ ಕೂಡ ಅವರ ನೆನಪುಗಳು ಕರ್ನಾಟಕದ ಎಲ್ಲಾ ಮನೆಗಳನ್ನು ತುಂಬಿಕೊಂಡಿವೆ. ನಿಜವಾಗಿಯೂ ಇಂತಹ ಒಬ್ಬ ಅದ್ಭುತ ಕಲಾವಿದ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದಿದ್ದು ಕನ್ನಡಿಗರಾದ ನಮಗೆಲ್ಲ ಹೆಮ್ಮೆಯ ವಿಷಯ. ಒಂದು ಅರ್ಥದಲ್ಲಿ ಡಾಕ್ಟರ್ ರಾಜಕುಮಾರ್ ಅವರನ್ನು ಬಿಟ್ಟರೆ ವಿಷ್ಣುವರ್ಧನ್ ಅವರೇ ಕನ್ನಡ ಇಂಡಸ್ಟ್ರಿಯನ್ನು ಈ ಮಟ್ಟಕ್ಕೆ ಹೆಸರುವಾಸಿ ಮಾಡಿದ ಕಲಾವಿದ ಎನ್ನಬಹುದು.

ಇವರು ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಹಿಂದಿ ಮತ್ತು ಮಲಯಾಳಂ ಸಿನಿಮಾಗಳಲ್ಲೂ ಕೂಡ ನಟಿಸಿದ್ದಾರೆ ಬಾಲನಟನಾಗಿ ಮೊದಲು ಸಂಪತ್ ಕುಮಾರ್ ಆಗಿದ್ದ ಇವರು ಸಿನಿಮಾ ಇಂಡಸ್ಟ್ರಿಯನ್ನು ಪಾದರ್ಪಣೆ ಮಾಡಿದರು. ಪುಟ್ಟಣ್ಣ ಕಣಗಲ್ ಅವರ ನಿರ್ದೇಶನದ ನಾಗರಹಾವು ಸಿನಿಮಾ ಇವರು ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಂಡ ಸಿನಿಮಾ ಈ ಸಿನಿಮಾದ ನಂತರ ಇವರ ಹೆಸರನ್ನು ವಿಷ್ಣುವರ್ಧನ್ ಎಂದು ಬದಲಾಯಿಸಲಾಯಿತು. ನಂತರ ಸಾಲು ಸಾಲು ಸೂಪರ್ ಹಿಟ್ ಸಿನಿಮಾ ಗಳನ್ನು ಕೊಟ್ಟ ಡಾಕ್ಟರ್ ವಿಷ್ಣುವರ್ಧನ್ ಅವರು ಹಲವು ಶತಮಾನಗಳವರೆಗೆ ಕನ್ನಡ ಇಂಡಸ್ಟ್ರಿಯನ್ನು ಆಳಿದರು ಎಂದು ಹೇಳಬಹುದು. ಇಂದಿಗೂ ವಿಷ್ಣುವರ್ಧನ್ ಅವರು ಅಭಿನಯಿಸಿದ ಬಹುತೇಕ ಸಿನಿಮಾಗಳು ಕನ್ನಡ ಜನರಿಗೆ ಬಹಳ ಇಷ್ಟ.

ಪ್ರಮುಖವಾಗಿ ಅವರ ನಾಗ ಕಾಳ ಭೈರವ, ರಾಯರು ಬಂದರು ಮಾವನ ಮನೆಗೆ, ಮಹಾ ಕ್ಷತ್ರಿಯ, ಸಾಮ್ರಾಟ, ಧಣಿ, ಜಯಸಿಂಹ, ಮೋಜುಗಾರ ಸೊಗಸುಗಾರ, ಮದುವೆ ಮಾಡು ತಮಾಷೆ ನೋಡು, ಸೊಸೆ ತಂದ ಸೌಭಾಗ್ಯ, ಕೋಟಿಗೊಬ್ಬ, ಯಜಮಾನ, ಸಿಂಹಾದ್ರಿಯ ಸಿಂಹ, ಸೂರಪ್ಪ, ಸೂರ್ಯವಂಶ ಆಪ್ತಮಿತ್ರ, ವಿಷ್ಣು ಸೇನಾ ಎಂದಿಗೂ ಎವರ್ಗ್ರೀನ್ ಸಿನಿಮಾಗಳು ಎನ್ನಬಹುದು. ಕನ್ನಡದಲ್ಲಿ ಮಾತ್ರವಲ್ಲದೆ ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ದ್ವಿಪಾತ್ರದಲ್ಲಿ ನಟಿಸಿದ ನಟ ಎಂದರೆ ವಿಷ್ಣುವರ್ಧನ್ ಅವರೇ. ವಿಷ್ಣುವರ್ಧನ್ ಅವರು ತೆರೆ ಮೇಲೆ ಅಬ್ಬರಿಸುತ್ತಿದ್ದರೆ ಅವರ ಮುಖದಲ್ಲಿ ಸಿಂಹದ ತೇಜಸ್ಸು ಕಾಣುತ್ತಿತ್ತು ಇದರಿಂದಲೇ ಅಭಿಮಾನಿಗಳ ಅವರನ್ನು ಸಾಹಸ ಸಿಂಹ ಎಂದು ಕರೆದರು ವಿಷ್ಣುವರ್ಧನ್ ಅವರನ್ನು ಸಿನಿಮಾ ಇಂಡಸ್ಟ್ರಿ ಯ ಎಲ್ಲರೂ ಬಹಳ ಇಷ್ಟಪಡುತ್ತಿದ್ದರು.

ಆದರೆ ವಿಷ್ಣುವರ್ಧನ್ ಅವರಿಗೆ ಇವರೆಲ್ಲರನ್ನು ಕಂಡರೆ ಅಷ್ಟೇ ಪ್ರೀತಿ ಗೌರವ ಇದ್ದರೂ ಈ ಒಬ್ಬ ವ್ಯಕ್ತಿಯ ಮೇಲೆ ಅದಕ್ಕಿಂತ ಜಾಸ್ತಿ ಇತ್ತು. ಅವರು ಬೇರೆ ಯಾರು ಇಲ್ಲ ರಮೇಶ್ ಅರವಿಂದ್. ಅವರು ರಮೇಶ ಅವರ ಜೊತೆ ವಿಷ್ಣುವರ್ಧನ್ ಅವರಿಗೆ ವಿಶೇಷ ಒಡನಾಟ ಇತ್ತು ಅವರಿಬ್ಬರು ಒಟ್ಟಿಗೆ ಸಿನಿಮಾದಲ್ಲಿ ನಟಿಸಬೇಕು ಎನ್ನುವ ಆಸೆ ಕೂಡ ಇತ್ತು. ದೀಪಾವಳಿ ಎನ್ನುವ ಸಿನಿಮಾದಲ್ಲಿ ಇದು ಪೂರ್ತಿಗೊಂಡಿತು. ನಂತರ ಅವರು ವಿಷ್ಣು ಸೇನಾ, ವರ್ಷ, ಆಪ್ತಮಿತ್ರ, ಏಕದಂತ ಈ ಸಿನಿಮಾಗಳಲ್ಲೂ ಕೂಡ ಒಟ್ಟಿಗೆ ಕಾಣಿಸಿಕೊಂಡಿದ್ದರು. ಸ್ವತಃ ವಿಷ್ಣುವರ್ಧನ್ ಅವರೇ ತಮ್ಮ ಸಿನಿಮಾಗಳ ಕಥೆ ಕೇಳುವಾಗ ರಮೇಶ್ ಅರವಿಂದ್ ಅವರಿಗೆ ಒಪ್ಪುವ ಯಾವುದಾದರು ಪಾತ್ರವಿದೆಯೇ ಎಂದು ಕೇಳುತ್ತಿದ್ದರಂತೆ ಅಷ್ಟು ರಮೇಶ ಅರವಿಂದ್ ಎಂದರೆ ವಿಷ್ಣುವರ್ಧನ್ ಅವರಿಗೆ ಪ್ರೀತಿ ಗೌರವ ಮತ್ತು ನಂಬಿಕೆ ಇತ್ತು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ಉತ್ತರಿಸಿ.

ಅಮೂಲ್ಯ ನಂತರ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಮತ್ತೋರ್ವ ಖ್ಯಾತ ನಟಿ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಬಹುಭಾಷಾ ನಟಿ ನಮಿತಾ ಅವರು ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ನೀಲಕಂಠ, ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಕೇವಲ ಇದೊಂದು ಮಾತ್ರವಲ್ಲದೆ ಕನ್ನಡದ ಹಲವಾರು ಸಿನಿಮಾದಲ್ಲಿ ನಟಿಸಿದ್ದಾರೆ, ನಮಿತಾ ಅವರು ದಕ್ಷಿಣ ಭಾರತದ ಬಹು ಬೇಡಿಕೆಯ ನಟಿ ಕನ್ನಡ ತಮಿಳು ತೆಲುಗು ಮಲಯಾಳಂ ಸೇರಿದಂತೆ ಸಾಕಷ್ಟು ಭಾಷೆಯಲ್ಲಿ ಅಭಿನಯಿಸಿದ್ದಾರೆ. ತಮ್ಮ ಗ್ಲಾಮರ್ ಲುಕ್ ನಿಂದಲೇ ಸಾಕಷ್ಟು ಸಿನೆ ರಸಿಕರ ಮನಸನ್ನು ಗೆದ್ದಿದ್ದಾರೆ. ಇನ್ನು ನಟಿ ನಮಿತಾ ಅವರು 2017ರಲ್ಲಿ ಉದ್ಯಮಿ ಆದಂತಹ ವೀರೇಂದ್ರ ಚೌಧರಿ ಅವರನ್ನು ನಮಿತಾ ಅವರು ಪ್ರೀತಿಸಿ ಮದುವೆಯಾಗುತ್ತಾರೆ. ವೀರೇಂದ್ರ ಚೌದರಿ ಅವರು ಮೂಲತಃ ಉದ್ಯಮಿಯಾಗಿದ್ದಾರೆ ನಮಿತಾ ಅವರು ಸಿನಿಮಾಗಳಲ್ಲಿ ಅಭಿನಯ ಮಾಡಬೇಕಾದರೆ ವೀರೇಂದ್ರ ಅವರಿಗೆ ನಮಿತಾ ಅವರ ಮೇಲೆ ಮನಸ್ಸು ಆಗುತ್ತದೆ. ಒಂದೆರಡು ವರ್ಷ ನಮಿತಾ ಅವರಿಗಾಗಿ ಕಾದು ತದನಂತರ ತಮ್ಮ ಪ್ರೀತಿಯನ್ನು ಅವರ ಬಳಿ ವ್ಯಕ್ತಪಡಿಸುತ್ತಾರೆ.

ಇದಾದ ಬಳಿಕ ನಮಿತಾ ಅವರು ವೀರೇಂದ್ರ ಚೌದರಿ ಅವರನ್ನು ಒಪ್ಪಿಕೊಂಡು ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ 2018ರಲ್ಲಿ ಮದುವೆಯಾಗುತ್ತಾರೆ. ಮದುವೆಯಾಗಿ ಸುಮಾರು ಐದು ವರ್ಷದ ತನಕ ಇಬ್ಬರು ಕೂಡ ಒಬ್ಬರ ನೊಬ್ಬರು ಅರಿತುಕೊಂಡು ಸುಖ ದಾಂಪತ್ಯವನ್ನು ನಡೆಸುತ್ತಿದ್ದರು. ಸಾಮಾನ್ಯವಾಗಿ ಯಾವುದೇ ಜೋಡಿ ಮದುವೆಯಾದರು ಕೂಡ ಮಗುವಿನ ನಿರೀಕ್ಷೆಯಲ್ಲಿ ಇರುತ್ತಾರೆ ಹಾಗೆಯೇ ಇದೀಗ ನಮಿತಾ ಮತ್ತು ವೀರೇಂದ್ರ ಚೌದರಿ ಅವರು ಮಗುವಿನ ನಿರೀಕ್ಷೆಯಲ್ಲಿ ಇದ್ದರು. ಕಳೆದ ತಿಂಗಳಿನಲ್ಲಷ್ಟೇ ನಮಿತಾ ಅದ್ದೂರಿಯಾಗಿ ಶ್ರೀಮಂತ ಶಾಸ್ತ್ರವನ್ನು ಮಾಡಿಸಿಕೊಂಡಿದ್ದರು. ಈ ಶ್ರೀಮಂತ ಶಾಸ್ತ್ರಕ್ಕೆ ಸಿನಿ ರಸಿಕರು ಕುಟುಂಬಸ್ಥರು ಸ್ನೇಹಿತರು ಆಪ್ತರು ಕೂಡ ಎಲ್ಲರೂ ಬಂದು ನಮಿತಾ ಅವರಿಗೆ ಶುಭಾಶಯಗಳು ಕೋರಿ ಹೋಗಿದ್ದರು. ಈ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು.

ವಿಶೇಷ ಏನೆಂದರೆ ನಮಿತಾ ಅವರಿಗೆ ಇದೀಗ 40ನೇ ವರ್ಷ 40ನೇ ವರ್ಷದಲ್ಲಿ ತಾಯಾಗುತ್ತಿರುವಂತಹ ಸಂತಸದ ವಿಚಾರವನ್ನು ಹಂಚಿಕೊಂಡಿದ್ದರು, ಕೃಷ್ಣ ಜನ್ಮಾಷ್ಟಮಿಯ ದಿನದಂದೇ ನಮಿತಾ ಅವರು ಅವಳಿ ಗಂಡು ಮಕ್ಕಳಿಗೆ ಜನ್ಮವನ್ನು ನೀಡಿದ್ದಾರೆ. ಈ ಸಂತಸದ ವಿಚಾರವನ್ನು ನಮಿತಾ ಹಾಗೂ ಅವರ ಪತಿ ಚೌದರಿ ಅವರು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದಾರೆ. ಹೌದು ಬಹುಭಾಷಾ ನಟಿ ನಮಿತಾ ಅಭಿಮಾನಿಗಳಿಗೆ ಶುಭ ಸುದ್ದಿಯನ್ನು ಕೊಟ್ಟಿದ್ದಾರೆ ಶ್ರೀಕೃಷ್ಣ ಜನ್ಮಾಷ್ಟಮಿ ದಿನವೇ ನಟಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಹರೇ ಕೃಷ್ಣ! ಈ ಶುಭ ಸಂದರ್ಭದಲ್ಲಿ ನಿಮ್ಮೆಲ್ಲರೊಂದಿಗೆ ಸಿಹಿ ಸುದ್ದಿಯನ್ನು ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ ನಾವು ಅವಳಿ ಗಂಡು ಮಕ್ಕಳನ್ನು ಸ್ವಾಗತಿಸಿದ್ದೇವೆ ನಿಮ್ಮ ಆಶೀರ್ವಾದ ಮತ್ತು ಪ್ರೀತಿ ಯಾವಾಗಲೂ ಅವರೊಂದಿಗೆ ಇರುತ್ತದೆ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.

ಒಟ್ಟಾರೆಯಾಗಿ ಯಾವಾಗಲೂ ಕೂಡ ಗ್ಲಾಮರಸ್ ಲುಕ್ ನಿಂದಲೇ ಕಾಣಿಸಿಕೊಳ್ಳುತ್ತಿದ್ದಂತಹ ನಮಿತಾ ಅವರು ಇದೀಗ ತಮ್ಮ ಎಲ್ಲಾ ಸಿನಿಮಾ ಜರ್ನಿಗೆ ಬ್ರೇಕ್ ಅನ್ನು ಹಾಕಿ ಸಂಸಾರ ಮಕ್ಕಳು ಗಂಡ ಎಂದು ಬದುಕುತ್ತಿದ್ದಾರೆ. ಅವಳಿ ಗಂಡು ಮಕ್ಕಳು ಆಗಿರುವುದರಿಂದ ಇನ್ನೂ ಕೆಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಇವರು ಕಾಣಿಸಿಕೊಳ್ಳುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ. ಮಗುವಿನ ಲಾಲನೆ ಮತ್ತು ಪಾಲನೆ ಪೋಷಣೆಯಲ್ಲಿ ನಟಿ ನಮಿತಾ ಅವರು ತೊಡಗಿ ಕೊಳ್ಳುತ್ತಾರೆ ಎಂಬುದು ಕೆಲವು ನಟಿಗರ ಅಭಿಪ್ರಾಯವಾಗಿದೆ, ಅದೇನೇ ಆಗಲಿ ಸುಮಾರು 40 ವರ್ಷವಾದ ನಂತರ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಹಾಗಾಗಿ ನಮಿತಾ ಅವರಿಗೆ ಹಾಗೂ ಅವರ ಮಕ್ಕಳಿಗೆ ಒಳ್ಳೆಯದು ಆಗಲಿ ಆರೋಗ್ಯವಾದ ಜೀವನ ಸಾಗಿಸಲಿ ಎಂಬುವುದು ಕೆಲವು ಅಭಿಮಾನಿಗಳ ಆಶಯವಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ಉತ್ತರಿಸಿ.

ಜೊತೆ ಜೊತೆಯಲಿ ಆರ್ಯವರ್ಧನ್ ಪಾತ್ರಕ್ಕೆ ಹೊಸದಾಗಿ ಆಯ್ಕೆಯಾದ ಮತ್ತೊಬ್ಬ ನಟ ಯಾರು ಗೊತ್ತ.? ನಿಜಕ್ಕೂ ಆಶ್ಚರ್ಯ ಪಡ್ತೀರ.

ಕಳೆದ ನಾಲ್ಕು ವರ್ಷದ ಹಿಂದೆ ತೆರೆಕಂಡಂತಹ ಜೊತೆ ಜೊತೆಯಲಿ ಧಾರಾವಾಹಿ ಕಿರಿತರ ಲೋಕದಲ್ಲಿ ಒಂದು ಸಂಚಲನವನ್ನೇ ಸೃಷ್ಟಿ ಮಾಡಿದ್ದು ಧಾರಾವಾಹಿ ಅಂದರೆ ಹೇಗಿರಬೇಕು ಎನ್ನುವುದನ್ನು ಎತ್ತಿ ತೋರಿಸಿತು. ಒಂದು ರೀತಿಯಲ್ಲಿ ಹೇಳಬೇಕಾದರೆ ಜೊತೆಯಲ್ಲಿ ಧಾರವಾಹಿ ಬಂದ ನಂತರವಷ್ಟೇ ಕಿರುತೆರೆಗೆ ಒಂದು ಸ್ಥಾನ ಮಾನ ಬೆಲೆ ಎಂಬುದು ದೊರೆತದ್ದು. ಏಕೆಂದರೆ ಇಲ್ಲಿಯವರೆಗೂ ಕೂಡ ಯಾವುದೇ ಧಾರವಾಹಿಯು ಕೂಡ ಇಷ್ಟು ಅದ್ದೂರಿಯಾಗಿ ಮೇಕಿಂಗ್ ಮಾಡಿರಲಿಲ್ಲ ಇದೇ ಮೊದಲ ಬಾರಿಗೆ ಎಲ್ಲಾ ರೀತಿಯಾದಂತಹ ಅದ್ದೂರಿ ತನವನ್ನು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ತೋರಿಸಿಕೊಟ್ಟರು. ಇನ್ನು ಈ ಒಂದು ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಂತಹ ಅನಿರುದ್ಧವರು ಆರ್ಯವರ್ಧನ್ ಎಂಬ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದರು.

ಅಷ್ಟೇ ಅಲ್ಲದೆ ಈ ಒಂದು ಧಾರಾವಾಹಿಗೆ ರಿಯಲ್ ಹೀರೋ ಮತ್ತು ಮುಖ್ಯ ಕಥೆಗಾರ ಪಾತ್ರಗಾರ ಅಂದರೆ ಅದು ಅನಿರುಧ್ ಅಂತಾನೇ ಹೇಳಬಹುದು. ಅನಿರುಧ್ ಅವರಿಗೆ ಬೆಳ್ಳಿತೆರೆಯಲಿ ಯಾವುದೇ ರೀತಿಯಾದಂತಹ ಯಶಸ್ಸು ಮತ್ತು ಬೇಡಿಕೆ ಇಲ್ಲದೆ ಮನೆಯಲ್ಲಿ ಕುಳಿತಿದಂತಹ ಸಂದರ್ಭದಲ್ಲಿ ಕೈಬೀಸಿ ಕರೆದದ್ದು ಕಿರುತೆರೆ. ಈ ಒಂದು ಧಾರಾವಾಹಿಯಿಂದ ಅನಿರುಧ್ ಅವರ ಬದುಕೆ ಬದಲಾಯಿತು ಅಂತ ಹೇಳಬಹುದು ಇದೊಂದು ಟರ್ನಿಂಗ್ ಪಾಯಿಂಟ್. ಕಿರುತೆರೆಯಲ್ಲಿ ನಟನೆ ಮಾಡುವುದರ ಮೂಲಕ ಮತ್ತಷ್ಟು ಅಭಿಮಾನಿಗಳನ್ನು ಅನಿರುಧ್ ಅವರು ಪಡೆದುಕೊಂಡರು ಈ ಧಾರಾವಾಹಿಯ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡರು‌.

ಇನ್ನು ಸಾಕಷ್ಟು ಜನ ಅನಿರುಧ್ ಅವರಿಗಾಗಿ ಈ ಧಾರವಾಹಿ ನೋಡುತ್ತಿದ್ದರು ಎಂಬುವುದು ಕೂಡ ಅಷ್ಟೇ ಸತ್ಯ ಆದರೆ ಕಳೆದ ಎರಡು ದಿನದಿಂದ ಅನಿರುಧ್ ಅವರ ಬಗ್ಗೆ ಸಾಕಷ್ಟು ವದಂತಿಗಳು ಕೇಳಿ ಬರುತ್ತಿದೆ. ಧಾರವಾಹಿ ಟೆಕ್ನಿಕಲ್ ಟೀಮ್ ನೊಂದಿಗೆ ಕಿರಿಕ್ ಮಾಡಿಕೊಂಡು ಧಾರಾವಾಹಿಯಿಂದ ಹೊರ ನಡೆದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈಗಾಗಲೇ ಅನಿರುಧ್ ಮತ್ತು ಜೊತೆ ಜೊತೆಯಲಿ ಧಾರಾವಾಹಿ ನಿರ್ಮಾಪಕ ಹಾಗೂ ನಿರ್ದೇಶಕ ಆರೋರು ಜಗದೀಶ್ ಅವರು ಕೂಡ ಪತ್ರಿಕ ಮಾಧ್ಯಮದಲ್ಲಿ ಸುದ್ದಿ ಘೋಷ್ಟಿಯನ್ನು ನಡೆಸಿದ್ದಾರೆ. ಅನಿರುಧ್ ಅವರು ಸದಾ ಕಾಲ ಕಿರಿಕ್ ಮಾಡುತ್ತಿದ್ದರು ಅಷ್ಟೇ ಅಲ್ಲದೆ ಅವರನ್ನು ನಿಭಾಯಿಸುವುದು ನಮಗೆ ಬಹಳನೇ ಕಷ್ಟವಾಗುತ್ತಿತ್ತು.

ಇದಕ್ಕಿದ್ದ ಹಾಗೆ ಕೋಪಗೊಳ್ಳುವುದು ಶೂಟಿಂಗ್ ಅನ್ನು ಅರ್ಧಕ್ಕೆ ನಿಲ್ಲಿಸಿ ಹೋಗುವುದು ಇಂತಹ ಕೆಲಸವನ್ನು ಮಾಡುತ್ತಿದ್ದರು ಇವೆಲ್ಲದರಿಂದ ನಮಗೆ ಬಹಳ ಬೇಸರವಾಗಿದೆ. ಅಷ್ಟೇ ಅಲ್ಲದೆ ನಮ್ಮನ್ನು ಮೂರ್ಖರು ಎಂದು ಬೈತಿದ್ದಾರೆ ಹಾಗಾಗಿ ನಾವು ಅನಿರುಧ್ ಅವರನ್ನು ಜೊತೆ ಜೊತೆಯಲಿ ಧಾರಾವಾಹಿ ತಂಡದಿಂದ ಹೊರ ಹಾಕಿದ್ದೇವೆ ಕಿರುತೆರೆಯಿಂದ ಎರಡು ವರ್ಷ ಬ್ಯಾನ್ ಮಾಡಿದ್ದೇವೆ ಎಂಬ ಅಧಿಕೃತ ಮಾಹಿತಿಯನ್ನು ತಿಳಿಸಿದರು. ಇವೆಲ್ಲ ಒಂದು ಕಡೆಯಾದರೆ ಇದೀಗ ಮತ್ತೊಂದು ಕಡೆ ಅಭಿಮಾನಿಗಳಲ್ಲಿ ಆತಂಕ ಮತ್ತು ಅನುಮಾನ ಎರಡು ಕೂಡ ಸೃಷ್ಟಿಯಾಗಿದೆ. ಏಕೆಂದರೆ ಅನಿರುಧ್ ಪಾತ್ರವನ್ನು ಇನ್ನು ಮುಂದೆ ಯಾರು ಮಾಡಲಿದ್ದಾರೆ ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ ಮನೆ ಮಾಡಿದೆ ಆರ್ಯವರ್ಧನ್ ಅವರ ಪಾತ್ರವನ್ನು ಇನ್ನು ಮುಂದೆ ಯಾರು ನಿಭಾಯಿಸಿಕೊಂಡು ಹೋಗುತ್ತಾರೆ ಎಂಬುದೇ ಇದೀಗ ಒಂದು ಮೇಘ ಟ್ವಿಸ್ಟ್ ಆಗಿದೆ.

ಈಗಾಗಲೇ ಅನಿರುಧ್ ಅವರು ಧಾರವಾಹಿ ತಂಡದಿಂದ ಹೊರ ಬಂದಿರುವುದು ಸತ್ಯ ಹಾಗಾಗಿ ಈ ಒಂದು ಜಾಗಕ್ಕೆ ಬೇರೊಬ್ಬ ನಟನನ್ನು ಆಯ್ಕೆ ಮಾಡಬೇಕು ಎಂದು ಜೊತೆ ಜೊತೆಯಲಿ ಧಾರಾವಾಹಿ ತಂಡ ನಿರ್ಧರಿಸಿದ್ದಾರೆ. ಈಗಾಗಲೇ ಸಾಕಷ್ಟು ಹೆಸರನ್ನು ಸೂಚಿಸಿದೆ ಆರ್ಯವರ್ಧನ್ ಪಾತ್ರಕ್ಕೆ ಕೆಲವು ನಟರ ಹೆಸರು ಕೇಳಿ ಬರುತ್ತಿವೆ. ಮೊದಲನೇಯದಾಗಿ ನಟ ವಿಜಯ್ ರಾಘವೇಂದ್ರ ಅವರ ಹೆಸರು ಕೇಳಿ ಬರುತ್ತಿವೆ. ಎರಡನೇಯದಾಗಿ ಇನ್ನು ಅಶ್ವಿನಿ ನಕ್ಷತ್ರ ಸೀರಿಯಲ್​ನಲ್ಲಿ ಜನಪ್ರಿಯರಾಗಿರುವ ಜೆ.ಕೆ ಅಲಿಯಾಸ್​ ಜಯರಾಮ್ ಕಾರ್ತಿಕ್​ ಇತ್ತೀಚಿಗೆ ಹಿಂದಿ ಸೀರಿಯಲ್ ಗಳಲ್ಲಿ ಬ್ಯುಸಿ ಆಗಿದ್ದಾರೆ. ಇವರ ಖಡಕ್ ಲುಕ್, ಆರ್ಯವರ್ಧನ್​ ಪಾತ್ರಕ್ಕೆ ಸೂಕ್ತವಾಗಿರುತ್ತದೆ. ಹೀಗಾಗಿ ಜೆ.ಕೆಯನ್ನು ಆಯ್ಕೆ ಮಾಡಬಹುದು ಎನ್ನಲಾಗುತ್ತಿದೆ.

ಮೂರನೇಯದಾಗಿ ನಟ ಹರೀಶ್ ರಾಜ್ ಹೆಸರು ಕೇಳಿ ಬರುತ್ತಿದೆ. ಅನೇಕ ಸೀರಿಯಲ್ ​ಗಳನ್ನು​ ಮಾಡಿ, ಬಳಿಕ ಸಿನಿಮಾಗಳಲ್ಲೂ ನಟಿಸಿ ಹರೀಶ್ ರಾಜ್ ಜನಪ್ರಿಯರಾಗಿದ್ದಾರೆ. ಅವರು ಕೂಡ ಈ ಪಾತ್ರಕ್ಕೆ ಆಯ್ಕೆ ಸೂಕ್ತರು ಎನ್ನಲಾಗುತ್ತಿದೆ. ಇನ್ನು ನಾಲ್ಕನೇಯದಾಗಿ ಹಿಟ್ಲರ್ ಕಲ್ಯಾಣದಲ್ಲಿ ನಟಿಸುತ್ತಿರುವ ದಿಲೀಪ್ ರಾಜ್. ಆರ್ಯವರ್ಧನ್ ಖಡಕ ಲುಕ್​ಗೆ ದಿಲೀಪ್​ ರಾಜ್ ಅವರೆ ಎನ್ನುವ ಅಭಿಪ್ರಾಯವು ಕೆಲವರಿಗಿದೆ. ಆದರೆ ಈ ಕುರಿತು ನಿರ್ದೇಶಕ ಆರೂರು ಜಗದೀಶ್​ ಸ್ಪಷ್ಟನೆ ನೀಡಿಲ್ಲ. ಜೊತೆಗೆ ಧಾರಾವಾಹಿ ತಂಡದಿಂದ ಯಾವುದೇ ಮಾಹಿತಿ ಅಧಿಕೃತವಾಗಿ ಹೊರ ಬಿದ್ದಿಲ್ಲ. ನಿಮ್ಮ ಪ್ರಕಾರ ಈ ನಾಲ್ಕು ನಟರಲ್ಲಿ ಯಾರು ಆರ್ಯವರ್ಧನ್ ಪಾತ್ರವನ್ನು ನಿಭಾಯಿಸಬಲ್ಲರು ಎಂಬುದನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ. ಒಂದು ವೇಳೆ ಆರ್ಯವರ್ಧನ್ ಪಾತ್ರದಲ್ಲಿ ಅನಿರುಧ್ ಅವರೆ ಮುಂದುವರೆಯುವುದು ನಿಮ್ಮ ಇಚ್ಛೆ ಆಗಿದ್ದರೆ ಅವರ ಹೆಸರನ್ನು ಕೂಡ ಕಾಮೆಂಟ್ ಮಾಡಬಹುದು.

ಇನ್ನು ಮುಂದೆ ಕನ್ನಡ ಸಿನಿಮಾದಲ್ಲಿ ನಟನೆ ಮಾಡಲ್ಲ ಅಂತ ಖಡಕ್ ಆಗಿ ಹೇಳಿದ ರಶ್ಮಿಕಾ ಮಂದಣ್ಣ, ಈ ನಿರ್ಧಾರ ತೆಗೆದುಕೊಂಡಿರೋದು ಯಾಕೆ ಗೊತ್ತ.?

ರಶ್ಮಿಕ ಮಂದಣ್ಣ ಕನ್ನಡದ ಕೊಡಗಿನ ಚೆಲುವೆ ಆದ ಈಕೆ ಈಗ ನ್ಯಾಷನಲ್ ಕ್ರಶ್ ಆಗಿ ದೇಶದಲ್ಲೇ ಫೇಮಸ್ ಆಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾದ ಪುಷ್ಪ ಸಿನಿಮಾದ ನಂತರ ಈಕೆಗೆ ಇದ್ದ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಈಗ ಬಾಲಿವುಡ್ ಅಲ್ಲು ಬೆಳಕು ಕಾಣಲು ಹೊರಟಿದ್ದಾರೆ ರಶ್ಮಿಕಾ. ರಶ್ಮಿಕ ಮಂದಣ್ಣ ಇದುವರೆಗೆ ಅವರು ಬಂದಿರುವ ಹಾದಿಯನ್ನು ಗಮನಿಸಿದರೆ ಅದು ಅವರ ಪಾಲಿನ ಅದೃಷ್ಟದಿಂದಲೇ ಎಂದು ನೋಡುಗರಿಗೆ ಅನಿಸುತ್ತದೆ. ಆದರೆ ರಶ್ಮಿಕಾ ಮಂದಣ್ಣ ಅವರ ಪ್ರಕಾರ ಅವರು ಇಷ್ಟೊಂದು ಸಾಧನೆ ಮಾಡಿರುವುದು ಅವರ ಸ್ವಂತ ಪ್ರಯತ್ನದಿಂದ ಎಂದು ಹೇಳುತ್ತಿದ್ದಾರೆ. ಯಾಕೆಂದರೆ ಕನ್ನಡದ ಕಿರಿಕ್ ಪಾರ್ಟಿ ಎನ್ನುವ ಸಿನಿಮಾದಲ್ಲಿ ಮೊದಲ ಬಾರಿಗೆ ತೆರೆ ಮೇಲೆ ಕಂಡ ಆ ಸಾನ್ವಿ ಇಂದ ಹಿಡಿದು ಪುಷ್ಪಾ ಸಿನಿಮಾದ ಶ್ರೀ ವಲ್ಲಿಯ ಈ ಪಾತ್ರದವರೆಗೆ ಅವರಿಗೆ ಬಂದಿರುವ ಅವಕಾಶಗಳು ಅದೃಷ್ಟ ಎನಿಸುತ್ತದೆ.

ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಸಿಂಪಲ್ ರಕ್ಷಿತ್ ಶೆಟ್ಟಿ ಹೀಗೆ ಎಲ್ಲಾ ಸ್ಟಾರ್ ನಟರೊಂದಿಗೆ ಅಭಿನಯಿಸಿರುವ ಇವರು ಎಲ್ಲೂ ಕೂಡ ಅವಕಾಶಗಳಿಗಾಗಿ ಒದ್ದಾಡಲಿಲ್ಲ. ಕಿರಿಕ್ ಪಾರ್ಟಿ ಸಿನಿಮಾದ ನಂತರವೇ ಈಕೆಗೆ ಸಾಲು ಸಾಲು ಅವಕಾಶಗಳು ಬರತೊಡಗಿದ್ದವು .ಆದರೆ ಇಂತಹ ಒಂದು ಪ್ರತಿಭೆಯನ್ನು ಗುರುತಿಸಿ ಪಳಗಿಸಿ ತಮ್ಮ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಮಾಡಿ ಕೊಟ್ಟಿದ್ದು ಕಿರಿಕ್ ಪಾರ್ಟಿ ತಂಡದ ದೊಡ್ಡತನ ಎನ್ನಬಹುದು. ಅಲ್ಲಿಯವರೆಗೆ ಅವರಿಗೆ ಸಿಕ್ಕ ಅವಕಾಶಗಳು ಅದೃಷ್ಟ ಎಂದರೆ ನಂತರ ಅವರ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಅವರು ಹಾಕಿದ ಶ್ರಮವನ್ನು ನಿಜಕ್ಕೂ ಅದು ಅವರ ಪ್ರಯತ್ನ ಎಂದು ನಂಬಲೇಬೇಕು.

ಕನ್ನಡದಲ್ಲಿ ಒಂದು ಸಿನಿಮಾದ ನಂತರವೇ ಬೇರೆ ಭಾಷೆಗಳಲ್ಲಿ ಸಾಲು ಸಾಲು ಆಫರ್ ಗಳು ರಶ್ಮಿಕಾ ಮಂದಣ್ಣ ಅವರನ್ನು ಅರಸಿ ಬಂದವು. ನಂತರ ತೆಲುಗಿನಲ್ಲಿ ಈಕೆ ಸ್ಟಾರ್ ಹಿರೋಯಿನ್ ಎಂದೇ ಹೇಳಬಹುದು ಮಹೇಶ್ ಬಾಬು, ಅಲ್ಲು ಅರ್ಜುನ್ ಹೀಗೆ ಅಲ್ಲೂ ಕೂಡ ಬಹುತೇಕ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿರುವ ಇವರು ಕಾಲಿವುಡ್ ಅಲ್ಲೂ ಕೂಡ ಕಮಲ್ ಮಾಡಿದ್ದಾರೆ. ದಳಪತಿ ವಿಜಯ್, ಪಾರ್ಥಿಪನ್ ಹೀಗೆ ಅಲ್ಲೂ ಕೂಡ ಸ್ಟಾರ್ ನಟರೊಂದಿಗೆ ಹಿರೋಯಿನ್ ಆಗಿರುವ ಇವರು ಸಿನಿಮಾದಲ್ಲಿ ಇದ್ದರೆ ಆ ಸಿನಿಮಾ ಗೆಲ್ಲುತ್ತದೆ ಎನ್ನುವವರೆಗೂ ಹೆಸರು ಗಳಿಸಿಕೊಂಡು ಬಿಟ್ಟಿದ್ದಾರೆ. ಈಗ ಸೀತಾರಾಮಂ ಸಿನಿಮಾ ಮೂಲಕ ಮಾಲಿವುಡ್ ಅಲ್ಲೂ ಕೂಡ ಮಿಂಚುತ್ತಿದ್ದಾರೆ. ಇತ್ತೀಚೆಗೆ ಅವರ ಕಾರ್ಯ ಚಟುವಟಿಕೆಗಳನ್ನು ಗಮನಿಸಿದರೆ ಸದ್ಯದಲ್ಲೇ ಅವರು ಬಾಲಿವುಡ್ ಸಿನಿಮಾಗಳನ್ನು ಮಾಡುವುದು ಯಾವುದೇ ಅನುಮಾನವಿಲ್ಲ ಹಾಗೆ ಸಲ್ಮಾನ್ ಖಾನ್ ಅವರ ಮುಂದಿನ ಸಿನಿಮಾದಲ್ಲಿ ಇವರು ಅಭಿನಯಿಸಲಿದ್ದಾರೆ ಎನ್ನುವ ಗಾಳಿ ಸುದ್ದಿ ಕೂಡ ಇದೆ.

ಹೀಗೆ ಎಲ್ಲಾ ಭಾಷೆಗಳನ್ನು ಕೂಡ ಮಿಂಚುತ್ತಿರುವ ರಶ್ಮಿಕ ಮಂದಣ್ಣ ಅವರನ್ನು ಮತ್ತೆ ಕನ್ನಡದ ಸಿನಿಮಾಗಳಲ್ಲಿ ನೋಡುತ್ತೇವೆ ಎನ್ನುವ ಅನುಮಾನ ಮೂಡಿದೆ. ಸಂದರ್ಶನ ಒಂದರಲ್ಲಿ ಮಾತಿಗೆ ಸಿಕ್ಕ ರಶ್ಮಿಕಾ ಮಂದಣ್ಣ ಅವರನ್ನು ನಿಮ್ಮ ಮುಂದಿನ ಕನ್ನಡ ಸಿನಿಮಾವನ್ನು ಯಾವಾಗ ನಿರೀಕ್ಷಿಸಬಹುದು ಎಂದು ಪ್ರಶ್ನಿಸಿದಾಗ ಅದಕ್ಕೆ ಅವರು ಯಾವುದೇ ಉತ್ತರವನ್ನು ಕೊಡದೆ ಸುಮ್ಮನೆ ಮುಗುಳ್ನಕ್ಕು ಸೈಲೆಂಟ್ ಆಗಿಬಿಟ್ಟಿದ್ದಾರೆ. ಇದನ್ನು ಗಮನಿಸಿದರೆ ಅವರಿಗೆ ಕನ್ನಡದಲ್ಲಿ ಬೇಡಿಕೆ ಕಡಿಮೆ ಆಗಿದೆಯೇ ಅಥವಾ ಕನ್ನಡದ ಸಿನಿಮಾಗಳನ್ನು ಅವರೇ ಒಪ್ಪಿಕೊಳ್ಳುತ್ತಿಲ್ಲವೇ ಎನ್ನುವ ಅಭಿಮಾನಿಗಳು ಕೂಡ ವ್ಯಕ್ತವಾಗುತ್ತಿವೆ. ಸಾಮಾನ್ಯವಾಗಿ ಎಲ್ಲರಿಗೂ ಕೂಡ ಭಾಷಾಭಿಮಾನ ಎಂಬುದು ಇರುತ್ತದೆ ಅಷ್ಟೇ ಅಲ್ಲದೆ ತಾನು ಮೊದಲು ನಟನೆ ಮಾಡಿದ್ದು ಕನ್ನಡ ಸಿನಿಮಾದಲ್ಲಿ ಹಾಗೂ ಕನ್ನಡ ಸಿನಿಮಾ ಇಂಡಸ್ಟ್ರಿ ಇಂದಲೇ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದು ಎಂಬ ನಿಯತ್ತು ಮತ್ತು ಋಣ ಎಂಬುದು ಇರುತ್ತದೆ.

ಈ ಕಾರಣಕ್ಕಾಗಿಯೂ ಸಂದರ್ಶನಗಾರರು ಕೇಳಿದಂತಹ ಪ್ರಶ್ನೆಗೆ ಅವಕಾಶ ಸಿಕ್ಕರೆ ಮತ್ತೆ ನಟಿಸುತ್ತೇನೆ ಎಂಬ ಉತ್ತರವನ್ನು ನೀಡಬಹುದಿತ್ತು. ಆದರೆ ರಶ್ಮಿಕಾ ಮಂದಣ್ಣ ಅವರು ಮಾತ್ರ ದುರಹಂಕಾರ ತೋರಿಸಿದ್ದಾರೆ ಈ ಕಾರಣಕ್ಕಾಗಿ ಅವರು ಏನು ಮಾತನಾಡದೆ ಸುಮ್ಮನೆ ಮುಗುಳ್ನಕ್ಕಿದ್ದಾರೆ. ಸದ್ಯಕ್ಕೆ ರಶ್ಮಿಕಾ ಮಂದಣ್ಣ ಅವರ ಈ ವಿಡಿಯೋ ನೋಡಿದಂತಹ ಅಭಿಮಾನಿಗಳು ಮತ್ತು ನೆಟ್ಟಿಗರು ಕಿಡಿ ಕಾರಿದ್ದಾರೆ. ಅಷ್ಟೇ ಅಲ್ಲದೆ ಇನ್ನು ಮುಂದೆ ಅವರು ಕನ್ನಡ ಸಿನಿಮಾದಲ್ಲಿ ನಟಿಸುವುದು ಬೇಡ ನಮ್ಮಲ್ಲಿ ಬಹುತೇಕ ಹೀರೋಯಿನ್ಗಳು ಇದ್ದಾರೆ ಅವರೇ ಸಾಕು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ರಶ್ಮಿಕಾ ಮಂದಣ್ಣ ಅವರು ಮುಂದಿನ ದಿನದಲ್ಲಿ ಕನ್ನಡ ಸಿನಿಮಾದಲ್ಲಿ ಅಭಿನಯಿಸಬೇಕಾ ಅಥವಾ ಇಲ್ಲ ಎಂಬುದನ್ನು ನಮಗೆ ಕಾಮೆಂಟ್ ಮಾಡಿ.

ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಮತ್ತೊಂದು ವಿಡಿಯೋ ವೈರಲ್, ಈ ಡ್ಯಾನ್ಸ್ ನೋಡಿ ಫಿದಾ ಆಗುವುದರಲ್ಲಿ ಎರಡು ಮಾತಿಲ್ಲ.

ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು 2013ರಲ್ಲಿ ತೆರೆಕಂಡ ಬುಲ್ ಬುಲ್ ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. ಇದಕ್ಕೂ ಮುಂಚೆ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಅರಸು ಎಂಬ ಧಾರಾವಾಹಿಯಲ್ಲಿ ನಟನೆ ಮಾಡುತ್ತಿದ್ದರು‌. ದರ್ಶನ್ ಅವರ ಬುಲ್ ಬುಲ್ ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಹೀರೋಯಿನ್ ಪಟ್ಟವನ್ನು ಗಿಟ್ಟಿಸಿಕೊಳ್ಳುತ್ತಾರೆ ಈ ಒಂದು ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಸದ್ದು ಮಾಡುತ್ತದೆ. ಅಷ್ಟೇ ಅಲ್ಲದೆ ರಚಿತಾ ರಾಮ್ ಅವರು ಬಹು ಬೇಡಿಕೆಯ ನಟಿಯಾಗಿಯೂ ಕೂಡ ಗುರುತಿಸಿಕೊಳ್ಳುತ್ತಾರೆ. ಇಲ್ಲಿಂದ ಆರಂಭವಾದಂತಹ ಇವರ ಸಿನಿಮಾ ಜರ್ನಿ ಇನ್ನೂ ಕೂಡ ನಿಂತಿಲ್ಲ ಚಿತ್ರ ರಂಗಕ್ಕೆ ಬಂದು ಸುಮಾರು 9 ವರ್ಷಗಳಾಗಿದೆ 9 ವರ್ಷದಿಂದಲೂ ಕೂಡ ಬಿಜಿಯಾಗಿದ್ದಾರೆ ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ.

ದರ್ಶನ್ ಸುದೀಪ್ ದುನಿಯಾ ವಿಜಯ್ ಧನ್ವೀರ್ ಡಾಲಿ ಧನಂಜಯ್ ಹೀಗೆ ಸಾಕಷ್ಟು ನಟರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ ಕೇವಲ ನಟನೆಯಲ್ಲಿ ಮಾತ್ರವಲ್ಲದೆ ಕಿರುತೆರೆಯಲ್ಲೂ ಕೂಡ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಹೌದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಮಜಾ ಭಾರತ ಎಂಬ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಪಾಲ್ಗೊಂಡಿದ್ದರು. ತದನಂತರ ಇದೀಗ ಡ್ರಾಮಾ ಜೂನಿಯರ್ಸ್ ಎಂಬ ವೇದಿಕೆಯಲ್ಲೂ ಕೂಡ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ ಸದಾ ಕಾಲ ಲವಲವಿಕೆಯಿಂದ ಇರುವಂತಹ ರಚಿತಾ ರಾಮ್ ಅವರು ಬೆಳ್ಳಿ ತೆರೆ ಮತ್ತು ಕೆರೆತರೆ ಎರಡರಲ್ಲೂ ಕೂಡ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

ಇನ್ನು ರಚಿತಾ ರಾಮ್ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಇರುವ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ ಈ ಕಾರಣಕ್ಕಾಗಿ ರಚಿತಾ ರಾಮ್ ಅವರು ಆಗಾಗ ತಮ್ಮ ಸಿನಿಮಾದ ಅಪ್ಡೇಟ್ಸ್ ಗಳನ್ನು ತಮ್ಮ instagram ಖಾತೆಯಲ್ಲಿ ನೀಡುತ್ತಾರೆ. ಇದರ ಜೊತೆಗೆ ತಾವು ಬಿಡುವಿದ್ದಂತಹ ಸಮಯದಲ್ಲಿ ಹಾಡುಗಳಿಗೆ ನೃತ್ಯವನ್ನು ಮಾಡುವ ಮೂಲಕ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡುತ್ತಾರೆ‌. ಸದ್ಯಕ್ಕೆ ರಚಿತಾ ರಾಮ್ ಅವರು ಮಾಡಿರುವಂತಹ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಹೌದು ನಟಿ ರಚಿತಾ ರಾಮ್ ಅವರು ಅದ್ಭುತ ನೃತ್ಯಗಾತಿ ಎಂಬ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ ಅದರಲ್ಲಿಯೂ ಕೂಡ ಟಪಂಗುಚಿ ಹಾಡುಗೆ ರಚಿತ ರಾಮ್ ಅವರು ಹಾಕುವಂತಹ ಎಲ್ಲರ ಕಣ್ಮನವನ್ನು ಸೆಳೆಯುತ್ತದೆ.

ಈಗಲೂ ಕೂಡ ರಚಿತಾ ರಾಮ್ ಅವರು ಅಂತಹದ್ದೇ ಒಂದು ಡ್ಯಾನ್ಸನ್ನು ಮಾಡಿದರೆ ಈ ವಿಡಿಯೋ ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ನೆಟ್ಟಿಗರಂತು ಹೇಳುವುದೇ ಬೇಡ ಸದಾ ಕಾಲ ರಚಿತಾ ರಾಮ್ ಅವರ ವಿಡಿಯೋಗಾಗಿ ಕಾದು ಕುಳಿತಿರುತ್ತಾರೆ. ಇವರ ವಿಡಿಯೋ ನೋಡಿದಂತಹ ನೆಟ್ಟಿಗರು ಕೂಡ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ ಇದರ ಜೊತೆಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರನ್ನು ಹಾಡಿ ಹೊಗಳಿದ್ದಾರೆ. ಈ ವಿಡಿಯೋವನ್ನು ಒಂದು ಬಾರಿ ನೋಡಿ ನಿಜಕ್ಕೂ ಕೂಡ ನೀವು ಸಂತಸ ಪಡುತ್ತೀರಾ ಅಷ್ಟೇ ಅಲ್ಲದೆ ರಚಿತರಾಮ್ ಅವರ ಈ ಅದ್ಭುತ ಕಲೆಗೆ ಮಾರಿ ಹೋಗುತ್ತಿರ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವಂತಹ ಈ ವಿಡಿಯೋ ಮಿಲಿಯನ್ ಘಟನೆ ವ್ಯೂಸನ್ನು ಪಡೆದುಕೊಂಡಿದೆ. ಈ ನೃತ್ಯವನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ

ದೊಡ್ಮನೆ ಸೊಸೆಯ ದೊಡ್ಡ ಗುಣ, ಅಭಿಮಾನಿ ಮಗುವನ್ನು ಎತ್ತಿ ಆಡಿಸಿ ವಿಶೇಷ ಉಡುಗೊರೆ ಕೊಟ್ಟ ಅಪ್ಪು ಪತ್ನಿ ಅಶ್ವಿನಿ. ಈ ವಿಡಿಯೋ ನೋಡಿ.

ಗಂಡನ ಹಾದಿಯನ್ನು ಅನುಸರಿಸಿದ ಹೆಂಡತಿ ಪುನೀತ್ ಅಭಿಮಾನಿ ಮಗುವನ್ನು ಮನೆಗೆ ಕರೆಸಿ ಗಿಫ್ಟ್ ಕೊಟ್ಟ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕದಲ್ಲಿ ಎಷ್ಟು ದೊಡ್ಡ ಅಭಿಮಾನಿ ಬಳಗ ಇದೆ ಎನ್ನುವುದು ವಿವರಿಸುವ ಅಗತ್ಯವೇ ಇಲ್ಲ, ಇಡೀ ಕರ್ನಾಟಕ ಪುನೀತ್ ಆಸ್ತಿ ಎನ್ನುವಂತೆ ಎಲ್ಲರ ಹೃದಯಗಳನ್ನು ಪುನೀತ್ ಆವರಿಸಿ ಕೊಂಡಿದ್ದಾರೆ. ಅಲ್ಲದೆ ಈಗಂತೂ ಪುನೀತ್ ವ್ಯಕ್ತಿತ್ವ ಜಗಜ್ಜಾಹಿರಾದ ಮೇಲೆ ಎಲ್ಲರೂ ಅವರ ಭಕ್ತರೇ ಆಗಿದ್ದಾರೆ ಎನ್ನಬಹುದು. ಅಭಿಮಾನಿಗಳನ್ನು ದೇವರಂತೆ ಕಂಡ ಕುಟುಂಬ ರಾಜವಂಶ ಮೊದಲಿನಿಂದಲೂ ಅಣ್ಣಾವ್ರು ಹಾಗೂ ಅಣ್ಣಾವ್ರ ಮಕ್ಕಳು ಅಭಿಮಾನಿಗಳನ್ನೇ ದೇವರು ಎಂದು ಮಾತಿನಲ್ಲಿ ಹೇಳುವುದು ಮಾತ್ರವಲ್ಲದೆ ಕೃತಿಯಲ್ಲೂ ಕೂಡ ಹಾಗೆ ನಡೆದುಕೊಂಡವರು. ಸೆಲೆಬ್ರಿಟಿ ಮನೆಗಳಿಗೆ ಅಭಿಮಾನಿಗಳು ಭೇಟಿ ನೀಡುವುದು ಹೊಸ ವಿಷಯವೇನಲ್ಲ. ನೆಚ್ಚಿನ ನಟನ ಬರ್ತಡೆ ಸೆಲೆಬ್ರೇಟ್ ಮಾಡಲು ಹಾಗೂ ತಮ್ಮ ಮನಮೆಚ್ಚಿದ ನಾಯಕನ ಹೊಸ ಫಿಲಂ ರಿಲೀಸ್ ಆದಾಗ ಅದನ್ನು ಆಚರಿಸಲು ಆಗಾಗ ಭೇಟಿ ಕೊಡುತ್ತಲೇ ಇರುತ್ತಾರೆ.

ಆ ವಿಷಯದಲ್ಲಿ ಪುನೀತ್ ರಾಜಕುಮಾರ್ ಅವರನ್ನು ಭೇಟಿ ಮಾಡುತ್ತಿದ್ದ ಅಭಿಮಾನಿಗಳ ಸಂಖ್ಯೆಗೆ ಲೆಕ್ಕವೇ ಇಲ್ಲ ಅವರನ್ನು ವಿಶೇಷ ದಿನಗಳು ಮಾತ್ರವಲ್ಲದೆ ಪ್ರತಿದಿನ ಕೂಡ ಪುನೀತ್ ಅವರ ಮನೆಯ ಮುಂದೆ ನೂರಾರು ಅಭಿಮಾನಿಗಳು ಇದ್ದೇ ಇರುತ್ತಿದ್ದರು. ಸಾಧ್ಯವಾದಷ್ಟು ಪುನೀತ್ ಅವರು ಎಲ್ಲರನ್ನೂ ಸಹ ಪ್ರೀತಿಯಿಂದ ಮಾತನಾಡಿಸಿ ವಿಚಾರಿಸುತ್ತಿದ್ದರು. ಅಲ್ಲದೆ ಹೀಗೆ ಬರುವ ಅಭಿಮಾನಿಗಳು ಪುನೀತ್ ಅವರಿಗೆ ಸಾಕಷ್ಟು ವಿಶೇಷ ರೀತಿಯ ಗಿಫ್ಟ್ ನೀಡಿದ್ದಾರೆ. ಮತ್ತು ಪುನೀತ್ ರಾಜಕುಮಾರ್ ಅವರು ಸಹ ಅಭಿಮಾನಿಗಳಿಗೆ ಯಾವ ರೀತಿಯಲ್ಲಿ ಸಹಾಯ ಮಾಡುತ್ತಿದ್ದರು ಎನ್ನುವುದು ಕೂಡ ಎಲ್ಲರಿಗೂ ತಿಳಿದಿದೆ. ಪುನೀತ್ ರಾಜಕುಮಾರ್ ಅವರನ್ನು ಭೇಟಿಯಾಗಿ ಯಾರೇ ಅವರ ಮನೆಯ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರೂ ಸಹ ಪತ್ನಿ ಜೊತೆ ತೆರಳಿ, ಬಂಗಾರದ ಉಡುಗೊರೆಗಳನ್ನು ಕೊಡುತ್ತಿದ್ದರು ದೊಡ್ಮನೆ ರಾಜಕುಮಾರ. ಪುನೀತ್ ಅವರಂತೆ ಈಗ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು.

ಈಗಾಗಲೇ ಅಪ್ಪು ಅವರ ಎಲ್ಲ ಜವಾಬ್ದಾರಿಗಳನ್ನು ತಮ್ಮ ಹೆಗಲ ಮೇಲೆ ಹೇರಿಸಿಕೊಂಡು ಜವಾಬ್ದಾರಿಯುತವಾಗಿ ನಡೆಸಿಕೊಂಡು ಹೋಗುತ್ತಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅಪ್ಪು ಅವರ ಅಭಿಮಾನಿಗಳನ್ನು ಕೂಡ ಅಪ್ಪು ಅವರಂತೆ ಕಾಣುತ್ತಿದ್ದಾರೆ ಎನ್ನುವುದು ತುಂಬಾ ಸಂತೋಷದ ವಿಷಯ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ ಅದರಲ್ಲಿ ರಾಮನಗರ ಮೂಲದ ಲೋಕೇಶ್ ಅನ್ನುವವರು ಪುನೀತ್ ರಾಜಕುಮಾರ್ ಅವರ ಮನೆಗೆ ಹೋಗಿ ಅಪ್ಪು ಅವರ ಪತ್ನಿ ಅಶ್ವಿನಿ ಅವರನ್ನು ಭೇಟಿ ಆಗಿದ್ದಾರೆ. ಪತ್ನಿ ಹಾಗೂ ಮಗಳೊಂದಿಗೆ ಲೋಕೇಶ್ ಅವರು ಅಶ್ವಿನಿ ಅವರನ್ನು ಭೇಟಿ ಆಗಿದ್ದಾರೆ. ಬಿಡದಿ ತಟ್ಟೆ ಇಡ್ಲಿ ಹೋಟೆಲ್ ಇಟ್ಟಿರುವ ಇವರು ಪುನೀತ್ ಅವರಿಗೆ ಅಪ್ಪಟ ಅಭಿಮಾನಿ ಅಲ್ಲದೆ ಪುನೀತ್ ಅವರೇ ಇವರಿಗೆ ಹೋಟೆಲ್ ಸ್ಥಾಪಿಸಲು ಸಹಾಯ ಮಾಡಿದ್ದರು. ಈಗ ತಮ್ಮ ಮುದ್ದಿನ ಮಗಳ ನಾಮಕರಣಕ್ಕೆ ಆಹ್ವಾನಿಸಲು ಅಪ್ಪು ಅವರ ಮನೆಗೆ ಹೋಗಿದ್ದಾರೆ.

ಈ ಸಮಯದಲ್ಲಿ ಅಶ್ವಿನಿ ಅವರು ಮಗುವ ಕ್ಷೇಮ ಸಮಾಚಾರ ವಿಚಾರಿಸಿ ಕುಟುಂಬಸ್ಥರನ್ನು ಪ್ರೀತಿಯಿಂದ ಮಾತನಾಡಿಸಿ ವಿಶೇಷವಾದ ಹುಡುಗರೆ ಕೊಟ್ಟು ಕಳುಹಿಸಿದ್ದಾರೆ. ಆ ಸಮಯದಲ್ಲಿ ಅವರು ತೆಗೆಸಿಕೊಂಡಿದ್ದ ಫೋಟೋಗಳು ಈಗ ಕೆಳಗಡೆ ವೈರಲ್ ಕೂಡ ಆಗಿದೆ. ಮಗುವನ್ನು ತುಂಬಾ ಪ್ರೀತಿಯಿಂದ ಮಾತನಾಡಿಸುತ್ತಿದ್ದ ಅಶ್ವಿನಿ ಅವರು ಕೋಲ್ಡ್ ಆಗಿರುವ ಕಾರಣ ಮಗುವನ್ನು ಎತ್ತಿಕೊಳ್ಳಲು ಭಯಪಡುತ್ತಿದ್ದೇನೆ ಎಂದು ಕೂಡ ಹೇಳಿದ್ದಾರೆ ಇದರಲ್ಲಿ ಗೊತ್ತಾಗುತ್ತದೆ ಅವರು ಪ್ರತಿಯೊಬ್ಬರನ್ನು ಕೂಡ ತಮ್ಮ ಕುಟುಂಬದ ಸದಸ್ಯರಂತೆ ಕಾಣುತ್ತಾರೆ ಎಂದು. ಅಶ್ವಿನಿ ಅವರ ಈ ಕಾರ್ಯದ ಬಗ್ಗೆ ನಿಮ್ಮ ಅಭಿಪ್ರಾಯವೇನು ? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.

ವಿಷ್ಣುವರ್ಧನ್ ಕೈಯಲ್ಲಿ ಇದ್ದಂತಹ ಬೆಳ್ಳಿ ಕಡಗ ಈಗ ಯಾರ ಬಳಿ ಇದೆ ಗೊತ್ತ.?

ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಅಭಿಮಾನಿಗಳ ಆರಾಧ್ಯ ದೈವ ಅಷ್ಟೇ ಅಲ್ಲದೆ ಬಹಳನೇ ಸರಳ ಮತ್ತು ಸಹಜ ವ್ಯಕ್ತಿತ್ವಕ್ಕೆ ಹೆಸರುವಾಸಿಯಾದವರು ಆದರೆ ವಿಷ್ಣುವರ್ಧನ್ ಅವರು ನಮ್ಮೆಲ್ಲರನ್ನು ಬಿಟ್ಟು ಅ.ಗ.ಲಿ 12 ವರ್ಷಗಳೆ ಕಳೆದು ಹೋಗಿದೆ. 2009 ಡಿಸೆಂಬರ್ 30 ರಂದು ವಿಷ್ಣುವರ್ಧನ್ ಅವರು ನಮ್ಮೆಲ್ಲರನ್ನು ಬಿಟ್ಟು ವಿ.ಧಿ.ವ.ಶ.ರಾದರು ಹೃ.ದ.ಯ.ಘಾ.ತ.ದಿಂದ ಸಾ.ವ.ನ.ಪ್ಪಿ.ದಂ.ತ.ಹ ವಿಷ್ಣುವರ್ಧನ್ ಅವರ ಅಗಲಿಕೆ ಕೇವಲ ಚಿತ್ರರಂಗಕ್ಕೆ ಮಾತ್ರವಲ್ಲದೆ ಇಡೀ ಕರುನಾಡಿಗೆ ತುಂಬಲಾರದ ನ.ಷ್ಟ ಅಂತಾನೆ ಹೇಳಬಹುದು. ಇನ್ನು ಅಭಿನಯ ಚಕ್ರವರ್ತಿ ಅಭಿನಯ ಭಾರ್ಗವ ಸಿಂಹಾದ್ರಿಯ ಸಿಂಹ ಯಜಮಾನ ವಿಷ್ಣು ದಾದಾ ಹೀಗೆ ನಾನಾ ಹೆಸರುಗಳಿಂದ ಕರಿಯಲ್ಪಡುವಂತಹ ವಿಷ್ಣು ದಾದಾ ಅವರು ಕನ್ನಡ ಸಿನಿ ರಸಿಕರ ಆರಾಧ್ಯ ದೈವ.

ನಾಗರಹಾವು ಎಂಬ ಸಿನಿಮಾದಲ್ಲಿ ಮೊಟ್ಟ ಮೊದಲ ಬಾರಿಗೆ ನಟನೆ ಮಾಡುವುದರ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು ವಿಷ್ಣು ದಾದಾ ಅವರ ಮೂಲ ಹೆಸರು ಸಂಪತ್ ಕುಮಾರ್ ಮೂಲತಃ ಮೈಸೂರಿನವರೇ. ಆದರೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಂತರ ಇವರಿಗೆ ವಿಷ್ಣುವರ್ಧನ್ ಎಂಬ ಹೆಸರನ್ನು ಪುಟ್ಟಣ್ಣ ಕಣಗಾಲ್ ಅವರು ನಾಮಕರಣ ಮಾಡುತ್ತಾರೆ. ಇಲ್ಲಿಂದ ಆರಂಭವಾದಂತಹ ಇವರ ಸಿನಿಮಾ ಜರ್ನಿ ಆಪ್ತರಕ್ಷಕ ಸಿನಿಮಾದವರೆಗೂ ಕೂಡ ಮುಂದುವರೆದು ಹೋಗುತ್ತದೆ. ಸುಮಾರು 150ಕ್ಕೂ ಅಧಿಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ ವಿಷ್ಣುವರ್ಧನ್ ಅವರು ನಟಿಸಿದಂತಹ ಸಿನಿಮಾ ಸೋತ ಉದಾಹರಣೆಗೆ ಇಲ್ಲ ಅಂದಿನ ಕಾಲದಲ್ಲಿ ವಿಷ್ಣುವರ್ಧನ್ ಸಿನಿಮಾ ಅಂದರೆ ಸಾಕು ಜನ ಮುಗಿಬಿದ್ದು ನೋಡುತ್ತಿದ್ದರು.

ಕೌಟುಂಬಿಕ ಹಿನ್ನೆಲೆ ಸಾಂಸಾರಿಕ ಸಾಹಸ ಪ್ರೀತಿ ಪ್ರೇಮ ಯಾವುದೇ ಪ್ರೇಮ ಯಾವುದೇ ವಿಚಾರವನ್ನು ಒಳಗೊಂಡಂತಹ ಕಥೆಯಾದರೂ ಸರಿ ಅದಕ್ಕೆ ಅದ್ಭುತವಾಗಿ ನಟನೆ ಮಾಡುತ್ತಿದ್ದರು. ಈ ಒಂದು ಕಾರಣಕ್ಕಾಗಿಯೇ ವಿಷ್ಣುವರ್ಧನ್ ಅವರನ್ನು ಎಲ್ಲರೂ ಕೂಡ ಬಹಳ ಪ್ರೀತಿಯಿಂದ ಕಾಣುತ್ತಿದ್ದರು. ವಿಷ್ಣುವರ್ಧನ್ ಅವರಿಗೆ ಕರ್ನಾಟಕದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಇರುವ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ. ವಿಷ್ಣುವರ್ಧನ್ ಅಂದರೆ ಅವರದ್ದೆ ಆದಂತಹ ಸಿಗ್ನೇಚರ್ ಸ್ಟೆಪ್ ಇದೆ ಜೊತೆಗೆ ಇವರ ವೇಷಭೂಷಣವು ಕೂಡ ವಿಭಿನ್ನವಾಗಿತ್ತು ವಿಷ್ಣು ದಾದಾ ಅವರ ಸ್ಟೈಲನ್ನು ಎಲ್ಲರೂ ಕೂಡ ತುಂಬಾನೇ ಇಷ್ಟಪಡುತ್ತಿದ್ದರು. ವಿಶೇಷ ಏನೆಂದರೆ ವಿಷ್ಣುವರ್ಧನ್ ಅವರು ತಮ್ಮ ಕೈಗೆ ಒಂದು ಬೆಳ್ಳಿ ಕಡಗವನ್ನು ಹಾಕಿಕೊಂಡಿದ್ದರು. ವಿಷ್ಣುವರ್ಧನ್ ಅಂದ್ರೆ ನೆನಪಾಗೋದೆ ಅವರ ಕೈನಲ್ಲಿ ಇದ್ದ ಕಡಗ. ತಮ್ಮ ಜೀವಿತಾವಧಿಯಲ್ಲಿ ವಿಷ್ಣು ದಾದಾ ಒಂದೇ ಒಂದು ದಿನವೂ ಈ ಕಡಗವನ್ನು ಕಳಚಿದ್ದಿಲ್ಲ.

ಅವರ ಸಿನಿಮಾಗಳಲ್ಲಿ ಕೈ ಕಡಗವನ್ನು ತಿರುಗಿಸುವ ಸ್ಟೈಲ್ ಮೂಲಕವೇ ಫೇಮಸ್ ಆಗಿದ್ದರು. ಅಂದಹಾಗೆ ಈ ಕೈಗಡಗವನ್ನು ವಿಷ್ಣು ವರ್ಧನ್ ಅವರಿಗೆ ಯಾರು ಕೊಟ್ಟಿದ್ದರು ಗೊತ್ತಾ? ಹೌದು ವಿಷ್ಣು ಸರ್ ಜೊತೆಯಲ್ಲಿಯೇ ಸದಾ ಕಾಲ ಇರುತ್ತಿದ್ದ ಈ ಕೈಗಡಗವನ್ನ ಒಬ್ಬರು ಗಿಫ್ಟ್ ಆಗಿ ವಿಷ್ಣುವರ್ಧನ್ ಅವರಿಗೆ ಕೊಟ್ತಿದ್ದರು. ಇದರ ಹಿನ್ನೆಲೆಯನ್ನು ನೋಡುವುದಾದರೆ, ಸಿನಿಮಾ ಚಿತ್ರೀಕರಣವೊಂದರಲ್ಲಿ ಸಿಖ್ ಗುರು ಒಬ್ಬರು ವಿಷ್ಣುವರ್ಧನ್ ಅವರ ಕೈಗೆ ಆಶೀರ್ವಾದ ಪೂರಕವಾಗಿ ಕೈಗಡಗವನ್ನು ತೊಟ್ಟಿದ್ದರು. ಅದಾದ ಬಳಿಕ ವಿಷ್ಣುವರ್ಧನ್ ಅವರು ತಮ್ಮ ದೇಹದ ಒಂದು ಭಾಗ ಎನ್ನುವಂತೆ ಈ ಕಡಗವನ್ನು ಸದಾ ಜೊತೆಯಲ್ಲಿಯೇ ಇಟ್ಟುಕೊಳ್ಳುತ್ತಿದ್ದರು.

ಅವರ ಸಿನಿಮಾಗಳಲ್ಲಿ ಕೈ ಕಡಗವನ್ನು ತಿರುಗಿಸುವ ಸ್ಟೈಲ್ ಮೂಲಕವೇ ಫೇಮಸ್ ಆಗಿದ್ದರು. ಅಂದಹಾಗೆ ಈ ಕೈಗಡಗವನ್ನು ವಿಷ್ಣು ವರ್ಧನ್ ಅವರಿಗೆ ಯಾರು ಕೊಟ್ಟಿದ್ದರು ಗೊತ್ತಾ? ಹೌದು ವಿಷ್ಣು ಸರ್ ಜೊತೆಯಲ್ಲಿಯೇ ಸದಾ ಕಾಲ ಇರುತ್ತಿದ್ದ ಈ ಕೈಗಡಗವನ್ನ ಒಬ್ಬರು ಗಿಫ್ಟ್ ಆಗಿ ವಿಷ್ಣುವರ್ಧನ್ ಅವರಿಗೆ ಕೊಟ್ತಿದ್ದರು. ಇದರ ಹಿನ್ನೆಲೆಯನ್ನು ನೋಡುವುದಾದರೆ, ಸಿನಿಮಾ ಚಿತ್ರೀಕರಣವೊಂದರಲ್ಲಿ ಸಿಖ್ ಗುರು ಒಬ್ಬರು ವಿಷ್ಣುವರ್ಧನ್ ಅವರ ಕೈಗೆ ಆಶೀರ್ವಾದ ಪೂರಕವಾಗಿ ಕೈಗಡಗವನ್ನು ತೊಟ್ಟಿದ್ದರು. ಅದಾದ ಬಳಿಕ ವಿಷ್ಣುವರ್ಧನ್ ಅವರು ತಮ್ಮ ದೇಹದ ಒಂದು ಭಾಗ ಎನ್ನುವಂತೆ ಈ ಕಡಗವನ್ನು ಸದಾ ಜೊತೆಯಲ್ಲಿಯೇ ಇಟ್ಟುಕೊಳ್ಳುತ್ತಿದ್ದರು.

ಅವರ ನೆನಪಿನಾರ್ಥ ವಿಷ್ಣು ಸರ್ ಕೈಗಡಗ ಭಾರತಿ ವಿಷ್ಣುವರ್ಧನ್ ಬಳಿಯೇ ಇದೆಯಂತೆ. ಉಳಿದ ನಟರು ವಿಷ್ಣುವರ್ಧನ್ ಅವರ ಮೇಲಿನ ಪ್ರೀತಿಗೆ, ನೆನಪಿಗೆ ಅವರಂತೆ ಕೈಗಡ ಹಾಕುತ್ತಾರೆ! ಅಷ್ಟೇ ಅಲ್ಲ, ಸ್ನೇಹಿತರೆ, ವಿಷ್ಣುವರ್ಧನ್ ಅವರ ಅಭಿಮಾನಿಗಳೂ ಕೂಡ ಅವರ ನೆನಪಿಗಾಗಿ, ಅವರ ಮೇಲಿನ ಅಭಿಮಾನಕ್ಕಾಗಿ ವಿಷ್ಣು ದಾದಾ ಅವರಂತೆ ಕೈಗಡಗವನ್ನ ಧರಿಸುತ್ತಾರೆ. ನೀವು ಸಾಕಷ್ಟು ಸಿನಿಮಾದಲ್ಲಿ ನೋಡಿರಬಹುದು ಕಿಚ್ಚ ಸುದೀಪ್ ದರ್ಶನ್ ಗಣೇಶ್ ಹೀಗೆ ಕನ್ನಡದ ಸಾಕಷ್ಟು ನಟರು ವಿಷ್ಣುವರ್ಧನ್ ಅವರ ಮಾದರಿಯಲ್ಲ ಕೈಗೆ ಬೆಳ್ಳಿ ಕಡಗವನ್ನು ಧರಿಸುತ್ತಾರೆ. ವಿಷ್ಣುವರ್ಧನ್ ಅವರ ಪ್ರೀತಿಯ ಸಂಕೇತವಾಗಿ ಹಾಗೂ ಅವರ ಮೇಲೆ ಇಟ್ಟಿರುವಂತಹ ಅಭಿಮಾನದ ಸಂಕೇತವಾಗಿ ಈ ಒಂದು ಬೆಳ್ಳಿ ಕಡಗವನ್ನು ಧರಿಸುತ್ತಾರೆ. ನಿಮ್ಮ ಪ್ರಕಾರ ಯಾವ ನಟನ ಕೈನಲ್ಲಿ ವಿಷ್ಣುವರ್ಧನ್ ಅವರ ಕೈಗಡಗ ಇತರೆ ಉತ್ತಮ ಎಂಬುದನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ