ಪ್ಯಾನ್ ಕಾರ್ಡ್ ಎನ್ನುವುದು ಈಗ ಒಂದು ಅವಶ್ಯಕ ದಾಖಲೆ ಆಗಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಆಗಲಿ ಅಥವಾ ಖಾಸಗಿ ವಲಯದ ಹಣಕಾಸು ಸಂಸ್ಥೆಗಳಲ್ಲಿ ಆಗಲಿ ಆರ್ಥಿಕ ಚಟುವಟಿಕೆ ನಡೆಸಬೇಕು ಎಂದರೆ ಈ ಪಾನ್ ಕಾರ್ಡ್ ಇರಲೇಬೇಕು. ಆದರೆ ತೆರಿಗೆ ಇಲಾಖೆ ನೀಡುವ ಪ್ಯಾನ್ ಕಾರ್ಡ್ ಅನ್ನು ಭಾರತೀಯರಾದ ಪ್ರತಿಯೊಬ್ಬರು ಕೂಡ ಪಡೆದಿರಬೇಕು. ಪಾನ್ ಕಾರ್ಡ್ ಎಂದರೆ ಪರ್ಮನೆಂಟ್ ಅಕೌಂಟ್ ನಂಬರ್ ಎಂದರ್ಥ ಇದರಲ್ಲಿ 10 ಅಂಕೆಗಳ ಒಂದು ಯೂನಿಕ್ ನಂಬರನ್ನು ಒಬ್ಬ ವ್ಯಕ್ತಿಯೇ ಕೊಡಲಾಗುತ್ತದೆ.
ಒಬ್ಬ ವ್ಯಕ್ತಿ ಒಂದು ಬಾರಿ ಮಾತ್ರ ಈ ನಂಬರನ್ನು ಪಡೆದುಕೊಳ್ಳಲು ಸಾಧ್ಯ. ಇದರ ಮೂಲಕ ಆತನ ಆರ್ಥಿಕ ಚಟುವಟಿಕೆಗಳ ಲೆಕ್ಕಾಚಾರ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಇಂಥದೊಂದು ದಾಖಲೆಯನ್ನು ಆದಾಯ ತೆರಿಗೆ ಇಲಾಖೆಯು ಜಾರಿಗೆ ತಂದಿದೆ. ಸರ್ಕಾರದ ಪ್ರಮುಖ ದಾಖಲೆ ಆಗಿರುವ ಇದನ್ನು ಪಡೆಯಲು CSC ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬೇಕು.
ಈ ರೀತಿ ಹೊರಗೆ ಇಂಟರ್ನೆಟ್ ಸೆಂಟರ್ ಗಳಿಗೆ ಹೋಗಿ ಅರ್ಜಿ ಸಲ್ಲಿಸಿ ಪ್ಯಾನ್ ಕಾರ್ಡ್ ಪಡೆಯಬೇಕು ಎಂದರೆ ಕನಿಷ್ಠ 300 ರೂಪಾಯಿ ಆದರೂ ಖರ್ಚು ಹಾಗೆ ಆಗುತ್ತದೆ. ಹಳ್ಳಿಗಾಡಿನಲ್ಲಿ ಇರುವವರಿಗೆ ಅವರು ಇರುವ ಸ್ಥಳದಲ್ಲಿಯೇ ಈ ರೀತಿ ಪಾನ್ ಕಾರ್ಡ್ ಪಡೆಯಲು ಅವಕಾಶ ಸಿಗದೇ ಇದ್ದರೆ, ಅವರು ಪಕ್ಕದ ಪಟ್ಟಣ ಪ್ರದೇಶಗಳಿಗೆ ಬಂದು ಈ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಬೇಕು, ಅದಕ್ಕೆ ಇನ್ನು ಹೆಚ್ಚಿನ ಖರ್ಚು ಬೀಳುತ್ತಿದೆ.
ಇದೆಲ್ಲಾ ಸಮಸ್ಯೆ ಇಲ್ಲದೆ ನೀವು ಇರುವಲ್ಲಿಯೇ ನಿಮ್ಮ ಕೈಲಿರುವ ಮೊಬೈಲ್ ಮೂಲಕವೇ ಪ್ಯಾನ್ ಕಾರ್ಡ್ ಪಡೆಯಬಹುದು. ಅದಕ್ಕಾಗಿ ಇರುವ ಸುಲಭ ವಿಧಾನಗಳನ್ನು ನಾವು ಈ ಅಂಕಣದ ಮೂಲಕ ಹೇಳಿ ಕೊಡುತ್ತಿದ್ದೇವೆ. ಮೊದಲಿಗೆ ಪ್ಯಾನ್ ಕಾರ್ಡ್ ಪಡೆಯಲು ಏನೆಲ್ಲ ಅರ್ಹತೆಗಳು ಇರಬೇಕು ಎಂದು ನೋಡುವುದಾದರೆ 18 ವರ್ಷ ತುಂಬಿದವರಿಗೆ ಮಾತ್ರ ಈ ರೀತಿ ಪ್ಯಾನ್ ಕಾರ್ಡ್ ಮಾಡಿಸಲು ಅವಕಾಶ ಇರುತ್ತದೆ.
ಜೊತೆಗೆ ಅವರು ಆಧಾರ್ ಕಾರ್ಡನ್ನು ಕಡ್ಡಾಯ ದಾಖಲೆ ಆಗಿ ಹೊಂದಿರಬೇಕು. ಆಧಾರ್ ಕಾರ್ಡ್ ಅಲ್ಲಿರುವ ಅವರ ಹೆಸರು ವಿಳಾಸ ಮತ್ತು ಹುಟ್ಟಿದ ದಿನಾಂಕ ಸೇರಿದಂತೆ ಎಲ್ಲಾ ಮಾಹಿತಿಗಳು ಕೂಡ ಸರಿಯಾಗಿರಬೇಕು. ಮೊಬೈಲ್ ನಂಬರ್ ಕೂಡ ನಿಮ್ಮದೇ ಆಗಿರಬೇಕು. ಆಧಾರ್ ಕಾರ್ಡ್ ಅಲ್ಲಿ ಇರುವ ಮೊಬೈಲ್ ನಂಬರ್ ಇಂದ ಮಾತ್ರ ಪಾನ್ ಕಾರ್ಡ್ ಅರ್ಜಿ ಸಲ್ಲಿಸಲು ಸಾಧ್ಯ ಜೊತೆಗೆ ಹುಟ್ಟಿದ ದಿನಾಂಕ ತಿಂಗಳು ಇಸವಿ ಮೂರು ಸಹ ಸ್ಪಷ್ಟವಾಗಿ ಇರಬೇಕು.
ಕೆಲವೊಂದು ಆಧಾರ್ ಕಾರ್ಡ್ ಅಲ್ಲಿ ಹುಟ್ಟಿದ ವರ್ಷ ಮಾತ್ರ ಇರುತ್ತದೆ. ಆ ರೀತಿ ಆಧಾರ್ ಕಾರ್ಡ್ ಇರುವವರಿಗೆ ಪಾನ್ ಕಾರ್ಡ್ ಮಾಡಿಸಲು ಸಾಧ್ಯವಾಗುವುದಿಲ್ಲ. ಆಧಾರ್ ಕಾರ್ಡ್ ಅಲ್ಲಿರುವ ಮಾಹಿತಿಯ ಅನುಸಾರ ಪಾನ್ ಕಾರ್ಡ್ ನ್ನು ಸಹ ಅದೇ ವಿಳಾಸಕ್ಕೆ ಅದೇ ಹೆಸರಿಗೆ ಮಾಡಲಾಗುತ್ತದೆ. ಇಷ್ಟೆಲ್ಲಾ ಇದ್ದರೆ ನಿಮ್ಮ ಕೈಯಲ್ಲಿರುವ ಮೊಬೈಲ್ ಉಪಯೋಗಿಸಿಕೊಂಡರೆ ನೀವು ಆಧಾರ್ ತೆರಿಗೆ ಇಲಾಖೆಯ ವೆಬ್ಸೈಟ್ಗೆ ಭೇಟಿ ಕೊಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಮೊದಲಿಗೆ ನಿಮ್ಮ ಆಂಡ್ರಾಯ್ಡ್ ಫೋನ್ ನಲ್ಲಿ ಯಾವುದಾದರೂ ಬ್ರೌಸರ್ ತೆಗೆದುಕೊಳ್ಳಿ ,ಕ್ರೋಮ್ ಅಥವಾ ಗೂಗಲ್ ಬಳಸಿ ಇನ್ಸ್ಟಾಂಟ್ ಇ-ಪ್ಯಾನ್ ಎಂದು ಟೈಪ್ ಮಾಡಿ ನಂತರ ಹಲವು ವೆಬ್ ಸೈಟ್ ಲಿಂಕ್ಗಳು ಕಾಣಿಸುತ್ತವೆ. ಅದರಲ್ಲಿ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ಹೋಮ್ ಎನ್ನುವ ಮೇಲೆ ಕ್ಲಿಕ್ ಮಾಡಿ. ಆಗ ಇನ್ಕಮ್ ಟ್ಯಾಕ್ಸ್ ಅಧಿಕೃತ ವೆಬ್ಸೈಟ್ ಓಪನ್ ಆಗುತ್ತದೆ. ನಂತರದ ಪ್ರಕ್ರಿಯೆ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋ ಪೂರ್ತಿಯಾಗಿ ನೋಡಿ.