ಇತ್ತೀಚಿನ ದಿನಗಳಲ್ಲಿ ಪೈಲ್ಸ್ ಎಲ್ಲಡೆಯೂ ಕೇಳಿ ಬರುವ ಆರೋಗ್ಯ ಸಮಸ್ಯೆಯಾಗಿದೆ. ಇದು ರೆಕ್ಟಮ್ ಭಾಗಕ್ಕೆ ಸಂಬಂಧಿಸಿದ ಸಮಸ್ಯೆ ಆಗಿದ್ದು ಪೈಲ್ಸ್ ಆದಾಗ ಅವರು ನೆಮ್ಮದಿ ಯಾಕೆ ಕುಳಿತುಕೊಳ್ಳಲು ಆಗುವುದಿಲ್ಲ, ಸರಾಗವಾಗಿ ಮಲ ವಿಸರ್ಜನೆ ಮಾಡಲು ಆಗುವುದಿಲ್ಲ, ವಿಪರೀತವಾದ ನೋವು ಉರಿ ರಕ್ತಸ್ರಾವ ಆಗುತ್ತದೆ.
ಪೈಲ್ಸ್ ಯಾವ ರೀತಿ ಆಗುತ್ತದೆ ಎಂದು ನೋಡುವುದಾದರೆ ಕಾಲಿನ ನರಗಳು ಊದಿಕೊಂಡಾಗ ವೆರಿಕೋಸ್ ಎನ್ನುತ್ತೇವೆ ಅದೇ ರೀತಿ ರೆಕ್ಟಮ್ ಭಾಗದ ನರಗಳು ಊದಿಕೊಳ್ಳುವಿಕೆಯನ್ನು ಪೈಲ್ಸ್ ಎನ್ನಲಾಗುತ್ತದೆ. ಪೈಲ್ಸ್ ಜೊತೆಗೆ ಕೆಲವರಿಗೆ ಪಿಸ್ತೂಲ ಹಾಗೂ ಫಿಶರ್ ಎನ್ನುವ ಸಮಸ್ಯೆಗಳು ಕೂಡ ಬರುತ್ತವೆ.
ಕೆಲವರು ಇದಕ್ಕೆ ಆಪರೇಷನ್ ಮಾಡಿಸಿಕೊಳ್ಳುತ್ತಾರೆ ಆದರೆ ಆಪರೇಷನ್ ಆದರೂ ಬೆಳೆಯುತ್ತಾ ಇರುತ್ತದೆ. ಹಾಗಾಗಿ ಹೆಚ್ಚಿನವರು ಹೋಮಿಯೋಪತಿ ಮೊರೆ ಹೋಗುತ್ತಾರೆ. ಹೋಮಿಯೋಪತಿಯಲ್ಲೇ ಇದಕ್ಕಿರುವ ಚಿಕಿತ್ಸೆ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.
ಮೊದಲಿಗೆ ಪೈಲ್ಸ್ ಬರಲು ಕಾರಣಗಳು ಏನು ಎಂದು ನೋಡುವುದಾದರೆ ಮಲಬದ್ಧತೆಯೇ ಇದಕ್ಕೆ ಮುಖ್ಯ ಕಾರಣ, ನಾವು ಸರಾಗವಾಗಿ ಪ್ರತಿನಿತ್ಯ ನಿತ್ಯ ಕರ್ಮಗಳನ್ನು ಮುಗಿಸಿದರೆ ಈ ಸಮಸ್ಯೆ ಇರುವುದಿಲ್ಲ. ಅತಿ ಹೆಚ್ಚು ಸಮಯ ಅಲ್ಲೇ ಕುಳಿತು ಒದ್ದಾಡಿದರೆ ಪೈಲ್ಸ್ ಬಂದಿದೆ ಎಂದುಕೊಳ್ಳಬಹುದು.
ಇದರ ಜೊತೆ ಒಬೆಸಿಟಿ ಬಂದಾಗ ದೇಹ ತೂಕ ಹೆಚ್ಚಾಗಿ ಪೈಲ್ಸ್ ಆಗುತ್ತದೆ, ಗರ್ಭಿಣಿ ಸ್ತ್ರೀಯರಿಗೆ ಸಹ ಹೊಟ್ಟೆ ಭಾಗದ ತೂಕದಿಂದ ಪೈಲ್ಸ್ ಬರುವ ಸಾಧ್ಯತೆ ಇದೆ, ಯಾವಾಗಲೂ ನಿಂತುಕೊಂಡೇ ಕೆಲಸ ಮಾಡುವವರು ಅಥವಾ ಒಂದೇ ಕಡೆ ಕುಳಿತು ಕೆಲಸ ಮಾಡುವವರು ಒತ್ತಡಗಳಾಗಿ ಮೂಲವ್ರಾಧಿಗೆ ಗುರಿ ಆಗುತ್ತಾರೆ ಮತ್ತು ಅತಿ ಹೆಚ್ಚು ವಾಹನಗಳನ್ನು ಓಡಿಸುವವರು ಆ ಭಾಗದಲ್ಲಾಗುವ ಒತ್ತಡದಿಂದ ಪೈಲ್ಸ್ ಗೆ ಗುರಿಯಾಗುತ್ತಾರೆ.
ಪೈಲ್ಸ್ ನಲ್ಲಿ ಎರಡು ವಿಧ ಇಂಟರ್ನಲ್ ಪೈಲ್ಸ್ ಹಾಗೂ ಎಕ್ಸ್ಟರ್ನಲ್ ಪೈಲ್ಸ್. ಇಂಟರ್ನಲ್ ಪೈಲ್ಸ್ ನಲ್ಲಿ ಕೂಡ ನಾಲ್ಕು ಗ್ರೇಡ್ ಗಳಿದೆ, ಮೊದಲನೇ ಗ್ರೇಟ್ ನಲ್ಲಿ ಅದು ಒಳಮುಖವಾಗಿ ಮಾತ್ರ ಇರುತ್ತದೆ ಆಗಾಗ ನೋವು ಕಾಣಿಸಿಕೊಳ್ಳುತ್ತದೆ, ಎರಡನೇ ಗ್ರೇಡ್ಶನಲ್ಲಿ ಇದು ಒಳಮುಖವಾಗಿದ್ದರು ಆಗಾಗ ಹೊರಗೆ ಬರುತ್ತದೆ ತನ್ನಿಂದ ತಾನೆ ಸರಿ ಹೋಗಿ ಒಳಗೆ ಹೋಗುತ್ತದೆ, 3 ನೇ ಗ್ರೇಡ್ ನಲ್ಲಿ ನಾವೇ ಹೊರಗಿನಿಂದ ಪ್ರೆಸರ್ ಹಾಕಿ ತಳ್ಳಬೇಕಾಗುತ್ತದೆ.
ನಾಲ್ಕನೇ ಭಾಗದಲ್ಲಿ ಅದು ಹೊರಬಂದ ಮೇಲೆ ಮತ್ತೆ ಒಳ ಹೋಗುವುದಿಲ್ಲ. ಆಗ ಚಿಕಿತ್ಸೆ ಮೊರೆ ಹೋಗಲೇಬೇಕು. ಈ ನಾಲ್ಕನೇ ಸ್ಟೇಜ್ ಆಗಿಬಿಟ್ಟರೆ ಬಹಳ ಕ’ಷ್ಟ ಪಡಬೇಕು. ಒಂದು ವಾರಕ್ಕಿಂತ ಹೆಚ್ಚು ಈ ಮೇಲೆ ತಿಳಿಸಿದ ಲಕ್ಷಣಗಳು ಕಾಣಿಸಿಕೊಂಡಾಗ ಸೂಕ್ತ ವೈದ್ಯರನ್ನು ಭೇಟಿಯಾಗಬೇಕು. ಅವರು ಆ ಭಾಗವನ್ನು ಪರೀಕ್ಷಿಸಿ ನಿಮಗೆ ಸೂಕ್ತ ಚಿಕಿತ್ಸೆಯನ್ನು ನೀಡುತ್ತಾರೆ.
ಹೋಮಿಯೋಪತಿಯಲ್ಲಿ ರೋಗಿಯ ಪರಿಸ್ಥಿತಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಸಿರಂಜ್ ರೀತಿ ರಕ್ತ ಹೋಗುತ್ತಿದ್ದರೆ ಇಲೋಫೋಲಿಯಂ, ಕಪ್ಪು ಬಣ್ಣದಲ್ಲಿ ರಕ್ತ ಹೋಗುತ್ತಿದೆ ತೊಟ್ಟಿಕ್ಕುತ್ತಿದೆ ಎನ್ನುವುದಾದರೆ ಹೇಮಮಿಲಿಸ್ ಎನ್ನುವ ಮೆಡಿಸನ್ ಕೊಡಲಾಗುತ್ತದೆ, ಶೌಚಕ್ಕೆ ಹೋಗಿ ಬಂದ ಮೇಲೆ ಗಂಟೆಗಟ್ಟಲೆ ಉರಿಯುತಿದೆ ಎಂದರೆ ಮ್ಯೂನಿಯಾ ಮೆಡಿಸನ್ ನೀಡಲಾಗುತ್ತದೆ.
ಆದರೆ ರೆಕ್ಟಮ್ ನಲ್ಲಿ ಇನ್ಫೆಕ್ಷನ್ ಆಗಿ ಗ್ಯಾಂಗ್ರಿನ್ ರೀತಿ ಆಗಿದೆ ಎಂದರೆ ಕ್ಯಾನ್ಸರ್ ಆಗಿರಬಹುದು, ಆಗ ಬಯಾಪ್ಸಿ ಚಿಕಿತ್ಸೆಗೆ ಒಳಗಾಗಲೇ ಬೇಕಾಗುತ್ತದೆ. ಪೈಲ್ಸ್ ಇರುವವರಿಗೆ ಮಲಬದ್ಧತೆ ಆಗಬಾರದು, ಮೈದಾ ಹಿಟ್ಟು ಹಾಗೂ ಅತಿಯಾದ ಮಸಾಲೆ ಪದಾರ್ಥ ಎಣ್ಣೆಯಿಂದ ಕರಿದ ಪದಾರ್ಥಗಳು ಇವುಗಳಿಂದ ದೂರ ಇದ್ದರೆ ಮಲಬದ್ಧತೆ ಆಗುವುದಿಲ್ಲ, ಪೈಲ್ಸ್ ಕೂಡ ಬರುವುದಿಲ್ಲ. ಅತಿ ಹೆಚ್ಚು ನೀರು ಕುಡಿಯುವುದು ಹಸಿ ಸೊಪ್ಪು, ನಾರಿನಾಂಶ ಇರುವ ಹಣ್ಣು ತರಕಾರಿಗಳನ್ನು ತಿನ್ನುವುದು ಪೈಲ್ಸ್ ನಿಂದ ಬಳಲುತ್ತಿರುವವರಿಗೆ ಔಷಧಿ.