ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಕೂಡ ತನ್ನ ಮುಟ್ಟಿನ ಸಮಯದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹೌದು ಅವಳ ಹಾರ್ಮೋನ್ ನಲ್ಲಿ ಏನಾದರೂ ವ್ಯತ್ಯಾಸ ಉಂಟಾಗಿದ್ದರೆ ಪಿ ಸಿ ಓ ಡಿ, ಪಿ ಸಿ ಓ ಎಸ್, ಹೀಗೆ ಹಲವಾರು ರೀತಿಯ ಕಾರಣಗಳಿಂದ ಅವಳ ಮುಟ್ಟಿನ ಸಮಯದಲ್ಲಿ ಹಲವಾರು ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತದೆ.
ಇನ್ನು ಕೆಲವೊಂದಷ್ಟು ಜನರಿಗೆ ಗರ್ಭಕೋಶದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಉಂಟಾಗಿ ಗರ್ಭಕೋಶದಲ್ಲಿ ಊತ ಕಾಣಿಸಿಕೊಳ್ಳುವುದು, ಹಾಗೂ ಗರ್ಭಕೋಶ ತನ್ನ ಸ್ಥಳದಿಂದ ಸ್ವಲ್ಪ ಜರುಗುವುದು. ಹೀಗೆ ಈ ಎಲ್ಲಾ ಕಾರಣಗಳಿಂದ ಹೆಣ್ಣು ತನ್ನ ಮುಟ್ಟಿನ ಸಮಯದಲ್ಲಿ ಹಲವಾರು ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಾಳೆ.
ಹೀಗೆ ಒಂದಲ್ಲ ಒಂದು ಕಾರಣದಿಂದ ಹಲವಾರು ರೀತಿಯ ಸಮಸ್ಯೆ ಗಳನ್ನು ಎದುರಿಸುವ ಪರಿಸ್ಥಿತಿ ಅವರಲ್ಲಿ ಇರುತ್ತದೆ. ಹಾಗಾದರೆ ಈ ದಿನ ಹೆಣ್ಣು ಮಕ್ಕಳ ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವಂತಹ ಸಮಸ್ಯೆ ಗಳನ್ನು ನಾವು ಹೇಗೆ ದೂರ ಮಾಡಿಕೊಳ್ಳಬಹುದು. ಹಾಗೂ ಯಾವ ಒಂದು ಕಾರಣಕ್ಕಾಗಿ ಈ ರೀತಿಯ ಸಮಸ್ಯೆಗಳು ಹೆಚ್ಚಾಗುತ್ತಿದೆ.
ಅತಿಯಾದ ರಕ್ತಸ್ರಾವ ಆಗುವುದಕ್ಕೆ ಕಾರಣ ಏನು ಹಾಗೂ ರಕ್ತಸ್ರಾವ ಕಡಿಮೆಯಾಗಲು ಕಾರಣಗಳು ಏನು, ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿಯೋಣ.
* ಮೇಲೆ ಹೇಳಿದಂತೆ ತಿಂಗಳಿನ ಮುಟ್ಟಿನ ಸಮಯದಲ್ಲಿ ಈ ರೀತಿ ಕಾಣಿಸಿಕೊಳ್ಳುವಂತಹ ಸಮಸ್ಯೆಯಿಂದ ಆ ಹೆಣ್ಣು ಆ ಸಮಯದಲ್ಲಿ ಪ್ರಜ್ಞೆ ತಪ್ಪಿ ಬೀಳುವಂತಹ ಪರಿಸ್ಥಿತಿಗಳು ಕೂಡ ಬರುತ್ತದೆ.
ಅದೇ ರೀತಿಯಾಗಿ ತಿಂಗಳಿನ ಮುಟ್ಟಿನ ಸಮಯದಲ್ಲಿ ಹೆಣ್ಣು ಮಕ್ಕಳು ಯಾವುದೇ ವಿಚಾರದ ಬಗ್ಗೆ ಹೆಚ್ಚು ಆಲೋಚನೆ ಮಾಡದೆ ಇರುವುದು. ಅಂದರೆ ಯಾವುದರಲ್ಲಿಯೂ ಆಸಕ್ತಿ ಇಲ್ಲದೆ ಇರುವುದು, ಸುಮ್ಮನೆ ಬೇಸರದಿಂದ ಕುಳಿತುಕೊಳ್ಳುತ್ತಾರೆ ಹಾಗೂ ಆ ಸಮಯದಲ್ಲಿ ಅವಳಿಗೆ ಆ ಒಂದು ಸ್ಥಳದಲ್ಲಿ ಅತಿಯಾದ ನೋವು ಕಾಣಿಸಿಕೊಳ್ಳುವುದು ಹಾಗೂ ಅವಳ ರಕ್ತಸ್ರಾವದಲ್ಲಿ ಬಣ್ಣದಲ್ಲಿ ವ್ಯತ್ಯಾಸ ಉಂಟಾಗುವುದು.
ಅತಿಯಾದ ಹೊಟ್ಟೆ ನೋವು ಮೈಕೈ ನೋವು ಕೈಕಾಲುಗಳಲ್ಲಿ ಸೆಳೆತ ಹೀಗೆ ಹಲವಾರು ರೀತಿಯ ಕಾರಣಗಳಿಂದ ಅವರು ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ. ಹಾಗಾದರೆ ಈ ದಿನ ಇದೆಲ್ಲದಕ್ಕೂ ಕೂಡ ಯಾವ ಒಂದು ಉಪಾಯವನ್ನು ಮಾಡುವುದರಿಂದ ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು ಎಂದು ನೋಡುವುದಾದರೆ.
ಅದಕ್ಕೂ ಮೊದಲು ಪ್ರತಿಯೊಬ್ಬರೂ ಕೂಡ ಈ ಸಮಯದಲ್ಲಿ ಯಾವ ರೀತಿಯ ಕೆಲವು ಉತ್ತಮವಾದ ವಿಧಾನಗಳನ್ನು ಅನುಸರಿಸಬೇಕು ಎಂದು ನೋಡುವುದಾದರೆ.
* ಒಳ್ಳೆಯ ಆಹಾರ ಪದ್ಧತಿಯನ್ನು ಒಳ್ಳೆಯ ಜೀವನ ಶೈಲಿಯನ್ನು ಅನುಸರಿಸುವುದು.
* ಮುಟ್ಟಿನ ಸಮಯದಲ್ಲಿ ಯಾವುದೇ ರೀತಿಯ ಉಷ್ಣ ಪದಾರ್ಥಗಳು ಖಾರ ಇರುವಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡಬಾರದು. ಇದರಿಂದ ಪಿತ್ತವಿಕಾರಗಳು ಹೆಚ್ಚಾಗಿ ಇದರಿಂದ ಹಲವಾರು ರೀತಿಯ ಸಮಸ್ಯೆಗಳು ಉಂಟಾಗುತ್ತದೆ.
* ಹಾಗೂ ತಡವಾಗಿ ಮಲಗುವುದು ತಡವಾಗಿ ಏಳುವುದರಿಂದಲೂ ಹಲವಾರು ತೊಂದರೆಗಳು ಎದುರಾಗುತ್ತದೆ. ಹಾಗಾದರೆ ಈ ಎಲ್ಲಾ ಸಮಸ್ಯೆಗಳನ್ನು ಹೇಗೆ ದೂರ ಮಾಡಿಕೊಳ್ಳಬೇಕು ಎಂದು ನೋಡುವುದಾ ದರೆ ಮೇಲೆ ಹೇಳಿದ ಎಲ್ಲ ತಪ್ಪುಗಳನ್ನು ಮೊದಲು ಸರಿ ಮಾಡಿಕೊಳ್ಳ ಬೇಕು. ಆನಂತರ ಪ್ರತಿನಿತ್ಯ ಪವನಮುಕ್ತಾಸನ, ಸೂಕ್ತ ವಜ್ರಾಸನ, ಭುಜಂಗಾಸನ, ಶಾಲಾ ಭಾಸನ ಹೀಗೆ ಇಂತಹ ಕೆಲವೊಂದಷ್ಟು ಯೋಗಾಭ್ಯಾಸವನ್ನು ಮಾಡುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.