ಮನೆಯ ಮುಖ್ಯ ದ್ವಾರದ ಬಳಿ ಅಂದರೆ ಬಾಗಿಲಿನ ಮೇಲೆ ಈ ಚಿಹ್ನೆಯನ್ನು ಹಾಕಿದರೆ ಅದೃಷ್ಟವೇ ಬಾಗಿಲು ಬಡಿಯುತ್ತದೆ ಎಂದು ನಮ್ಮ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹಾಗಾಗಿ ಮನೆಯ ಮುಖ್ಯ ಬಾಗಿಲಿನಲ್ಲಿ ಈ ಚಿನ್ಹೆಯನ್ನು ಹಾಕುವುದು ಅದೃಷ್ಟದ ಸಂಕೇತ ವಾಗಿದೆ. ದೈವಿಕ ಶಕ್ತಿಯ ಆಗಮನದ ಸೂಚನೆಯಾಗಿರುತ್ತದೆ. ಹಾಗಾಗಿ ಯಾವ ಒಂದು ಕಾರಣಕ್ಕಾಗಿ ಇಂತಹ ಚಿಹ್ನೆಗಳನ್ನು ನಮ್ಮ ಮನೆಯ ಮುಖ್ಯ ದ್ವಾರದ ಮೇಲೆ ಹಾಕಬೇಕು ಎನ್ನುವುದರ ಸಂಪೂರ್ಣವಾದ ಮಾಹಿತಿ ಯನ್ನು ಈ ದಿನ ತಿಳಿದುಕೊಳ್ಳೋಣ.
ನಮಗೆಲ್ಲರಿಗೂ ತಿಳಿದಿರುವ ಹಾಗೆ ನಾವು ಯಾವುದೇ ರೀತಿಯ ಪೂಜೆಯನ್ನು ಮಾಡಬೇಕು ಎಂದರೆ. ನಮ್ಮ ಹಿಂದಿನವರು ಅಂದರೆ ನಮ್ಮ ಪೂರ್ವಜರು ಹೇಳಿಕೊಟ್ಟಂತಹ ಹಾದಿಯಲ್ಲಿಯೇ ನಡೆಯುತ್ತೇವೆ. ಹೌದು ಅವರು ಹೇಳಿಕೊಟ್ಟಂತಹ ಹಾದಿಯನ್ನು ನಾವು ನಮ್ಮ ತಲೆಮಾರಿನ ತನಕ ಅನುಸರಿಸುತ್ತೇವೆ ಹಾಗೂ ನಮ್ಮ ಮುಂದಿನ ಪೀಳಿಗೆಯವರಿಗೂ ಸಹ ನೀವು ಇದೇ ರೀತಿ ಯಾದಂತಹ ಪದ್ಧತಿಯನ್ನು ಮಾಡಬೇಕು ಎಂದು ಹೇಳಿಕೊಡುತ್ತೇವೆ.
ಈ ನಾಲ್ಕು ರಾಶಿಯ ಹೆಣ್ಣು ಮಕ್ಕಳು ಹೆದರುವುದಿಲ್ಲ ಹಾಗೂ ಇವರ ಮುಂದೆ ಗೆಲ್ಲುವುದು ಅಸಾಧ್ಯ.!
ಇವೆಲ್ಲವೂ ಕೂಡ ನಮ್ಮ ಪೂರ್ವಜರು ನಮ್ಮ ಶಾಸ್ತ್ರಪುರಾಣಗಳು ಹಾಗೂ ಋಷಿಮುನಿಗಳು ಹೇಳಿಕೊಟ್ಟಂತಹ ವಿಧಾನಗಳಾಗಿದ್ದು ಈ ಒಂದು ವಿಧಾನದಲ್ಲಿಯೇ ನಾವು ಈ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡುವುದರಿಂದ ಅದರಲ್ಲಿ ಯಶಸ್ಸನ್ನು ಪಡೆಯಬಹುದು ಎನ್ನುವ ನಂಬಿಕೆ ಅವರದಾಗಿತ್ತು. ಆದ ಕಾರಣ ಪ್ರತಿಯೊಬ್ಬರೂ ಕೂಡ ಇಂತಹ ಹಲವಾರು ವಿಧಾನಗಳನ್ನು ಅವರ ದಿನನಿತ್ಯದ ಕೆಲಸ ಕಾರ್ಯಗಳಾಗಿರ ಬಹುದು ಅಥವಾ ಯಾವುದೇ ಹಬ್ಬ ಹರಿದಿನಗಳಲ್ಲಾಗಿರಬಹುದು ಪ್ರತಿಯೊಂದರಲ್ಲಿಯೂ ನೀತಿ ನಿಯಮಗಳನ್ನು ಅನುಸರಿಸುವುದು ಸರ್ವೇಸಾಮಾನ್ಯ.
ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಮನೆಯ ಮುಖ್ಯದ್ವಾರದ ಮೇಲೆ ಈ ಒಂದು ಚಿನ್ಹೆಯನ್ನು ಹಾಕಿದರೆ ನಿಮ್ಮ ಮನೆಯ ಬಾಗಿಲಿಗೆ ಅದೃಷ್ಟ ಎನ್ನುವುದು ಹುಡುಕಿಕೊಂಡು ಬರುತ್ತದೆ ಎನ್ನುವಂತಹ ಮಾಹಿತಿಗಳ ಬಗ್ಗೆ ಈ ದಿನ ತಿಳಿದು ಕೊಳ್ಳೋಣ. ಹಾಗೆಯೇ ನಾವು ನಮ್ಮ ಮನೆಯ ಮುಖ್ಯದ್ವಾರದ ಬಳಿ ಯಾವ ರೀತಿಯ ಕೆಲವು ಚಿಹ್ನೆಗಳನ್ನು ಹಾಕಿದರೆ ಅದರಿಂದ ಯಾವ ಕೆಲವು ಲಾಭಗಳನ್ನು ಪಡೆದುಕೊಳ್ಳುತ್ತೇವೆ ಎನ್ನುವಂತಹ ಮಾಹಿತಿಯನ್ನು ಸಹ ತಿಳಿಯೋಣ.
ನಿಮ್ಮ ನಕ್ಷತ್ರ ಹೇಳುತ್ತೆ ನಿಮ್ಮ ಮದುವೆ ಜೀವನದ ಗುಟ್ಟು.! ನಕ್ಷತ್ರ ಫಲ.!
* ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಸಂತೋಷ ನೆಲೆಸಬೇಕು ಎಂದರೆ ಕೆಲವೊಂದು ವಿಚಾರಗಳನ್ನು ಗಮನಿಸಬೇಕು. ಶಾಸ್ತ್ರದಲ್ಲಿ ಹೇಳಿರುವುದು ಕೂಡ ಇಂಥದ್ದೇ ಮಾಹಿತಿಗಳು ಅಂದರೆ ಒಬ್ಬರ ಮನೆಯಲ್ಲಿ ಸಂತೋಷ ಶಾಂತಿ ನೆಲೆಸಬೇಕು ಎಂದರೆ ಕೆಲವೊಂದು ಧಾರ್ಮಿಕ ನಂಬಿಕೆಗಳನ್ನು ಕಟ್ಟುಪಾಡುಗಳನ್ನು ಅನುಸರಿಸಬೇಕು ಎಂದು ಹೇಳಲಾಗಿದೆ.
* ಮನೆಯ ಮುಖ್ಯದ್ವಾರದ ಮೇಲೆ ತಾಯಿ ಲಕ್ಷ್ಮಿ ದೇವಿ ಹಾಗೂ ಗಣಪತಿಗೆ ಪ್ರಿಯವಾಗಿರುವಂತಹ ಸ್ವಸ್ತಿಕ ಚಿಹ್ನೆಯನ್ನು ಹಾಕಬೇಕು. ಈ ರೀತಿ ಮುಖ್ಯ ದ್ವಾರದ ಮೇಲೆ ಸ್ವಸ್ತಿಕ ಚಿನ್ಹೆಯನ್ನು ಹಾಕುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ಸದಾ ಕಾಲ ತುಂಬಿರುತ್ತದೆ ಎಂದು ಹೇಳಲಾಗಿದೆ.
ಈ ಕಾರ್ಡ್ ಮಾಡಿಸುವುದರಿಂದ ಎಷ್ಟೆಲ್ಲಾ ಉಪಯೋಗಗಳಿವೆ ನೋಡಿ.!
* ಅದೇ ರೀತಿ ಮನೆಯ ಮುಖ್ಯ ದ್ವಾರದ ಮೇಲೆ ಓಂ ಅನ್ನುವಂತಹ ಚಿನ್ಹೆಯನ್ನು ಸಹ ಹಾಕುವುದರಿಂದ ಆ ಮನೆಯಲ್ಲಿ ಯಾವುದೇ ಕಾರಣಕ್ಕೂ ಸುಖ ಸಂತೋಷ ನೆಮ್ಮದಿಯ ಕೊರತೆ ಉಂಟಾಗುವುದಿಲ್ಲ ಅವರ ಮನೆಯಲ್ಲಿ ಸದಾ ಕಾಲ ಪ್ರತಿಯೊಬ್ಬರು ಖುಷಿಯಾಗಿ ನೆಮ್ಮದಿಯ ಜೀವನವನ್ನು ನಡೆಸುತ್ತಾರೆ ಎನ್ನುವಂತಹ ನಂಬಿಕೆ ಇದೆ.
* ಓಂ ಎನ್ನುವಂತಹ ಚಿನ್ಹೆಯನ್ನು ಹಾಕುವುದರಿಂದ ತಾಯಿ ಲಕ್ಷ್ಮಿ ದೇವಿಯ ಆಗಮನ ಆಗುತ್ತದೆ ಎನ್ನುವ ನಂಬಿಕೆ ಕೂಡ ಇದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.