ರೈತರಿಗಾಗಿ ಒಂದು ಸಿಹಿ ಸುದ್ದಿ.! ಸಾಲ ಪಡೆಯಲು ಪಟ್ಟಣಕ್ಕೆ ಹೋಗುತ್ತಿದ್ದೀರಾ? ಅಂಚೆ ಕಚೇರಿಯಲ್ಲೂ ಕೂಡ ಸಾಲ ಪಡೆಯಬಹುದು ..ಹೇಗೆ ಗೊತ್ತಾ?? ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದ ಜನರು ಸಾಲವನ್ನು ಪಡೆಯಲು ಪಟ್ಟಣಕ್ಕೆ ಹೋಗಬೇಕಾದ ಕಾಲವೊಂದಿತ್ತು. ಆದರೆ ರೈತ ಬಾಂಧವರಿಗಾಗಿ ಸಿಹಿ ಸುದ್ದಿ ಒಂದಿದೆ. ಇನ್ನು ಮುಂದೆ ಅಂಚೆ ಕಚೇರಿಯ ಮೂಲಕ ಸಾಲವನ್ನು ಪಡೆಯಬಹುದು ಹಾಗೂ ಅಲ್ಲಿಯೇ ಸಾಲದ ಕಂತುಗಳನ್ನು ಅಥವಾ ಮರುಪಾವತಿಯನ್ನು ಕೂಡ ಮಾಡಬಹುದು. ಹೇಗೆ ಎಂಬುದನ್ನು ಸಂಪೂರ್ಣ ಬರಹವನ್ನು ಓದುವ ಮೂಲಕ ತಿಳಿದುಕೊಳ್ಳಿ.
ರೈತರು ಹಗಲು ರಾತ್ರಿ ಎನ್ನದೆ ವ್ಯವಸಾಯ ಭೂಮಿಯಲ್ಲಿ ಕೆಲಸವನ್ನು ಮಾಡುತ್ತಿರುತ್ತಾರೆ. ಮಳೆಯನ್ನು ನಂಬಿ ಮುಂದೆ ಸಾಗುತ್ತಾ ಇರುತ್ತಾರೆ. ಒಂದು ವರ್ಷ ಬೆಳೆ ಚೆನ್ನಾಗಿ ಬಂದರೆ ಇನ್ನೊಂದು ವರ್ಷ ಅತಿವೃಷ್ಟಿ ಅನಾವೃಷ್ಟಿಯಿಂದಾಗಿ ಬೆಳೆ ಕೈ ಕೊಡಬಹುದು. ಅಂತಹ ಸಂದರ್ಭದಲ್ಲಿ ಜೀವನ ಸಾಗಿಸಲು ಅಥವಾ ಹೊಸ ಬೆಳೆಯನ್ನು ಬೆಳೆಯಲು, ಯಂತ್ರೋಪಕರಣಗಳನ್ನು ಖರೀದಿಸಲು ಹಣದ ಅವಶ್ಯಕತೆ ಇರುತ್ತದೆ. ಸಾಲವನ್ನು ಪಡೆಯಲು ಪಟ್ಟಣಕ್ಕೆ ಹೋಗಬೇಕಾದ ಪರಿಸ್ಥಿತಿ ಇತ್ತು. ಗ್ರಾಮೀಣ ಭಾಗದಲ್ಲಿ ವಾಹನಗಳ ಸೌಲಭ್ಯವು ಕೂಡ ಅಷ್ಟಾಗಿ ಇಲ್ಲ. ಇದಕ್ಕಾಗಿಯೇ ಪದೇ ಪದೇ ಪಟ್ಟಣಕ್ಕೆ ಬರುವುದು ರೈತರಿಗೆ ಕಷ್ಟಕರ.
ರೈತ ಬಾಂಧವರ ಸಮಸ್ಯೆಗಳನ್ನು ಅರಿತ ಅಂಚೆ ಇಲಾಖೆಯು ಹೊಸದೊಂದು ಕಾರ್ಯವನ್ನು ಕೈಗೆತ್ತಿಕೊಂಡಿದೆ. ಭಾರತೀಯ ಅಂಚೆ ಇಲಾಖೆಯು ದೇಶದ ಮೂಲೆ ಮೂಲೆಯಲ್ಲಿರುವ ಪ್ರತಿ ಗ್ರಾಮವನ್ನು ತಲುಪುವ ಒಂದು ಇಲಾಖೆ. ಹಲವು ವರ್ಷಗಳಿಂದ ತನ್ನ ಕಾರ್ಯವನ್ನು ಮಾಡುತ್ತಾ ಬಂದಿದ್ದು, ದೇಶದಾದ್ಯಂತ ಎಲ್ಲರಿಗೂ ಪರಿಚಿತ ಇಲಾಖೆಯಾಗಿದೆ. ಗ್ರಾಮೀಣ ಮಟ್ಟದಲ್ಲಿ ಉತ್ತಮ ಸಂಪರ್ಕವನ್ನು ಏರ್ಪಡಿಸಿರುವಂತಹ ಇಲಾಖೆ. ಇಂದಿಗೂ ಇದರ ಹೆಚ್ಚಿನ ಉಪಯೋಗ ಪಡೆಯುತ್ತಿರುವವರು ಗ್ರಾಮೀಣ ಭಾಗದವರೇ.
ರೈತರಿಗೆ ಸಹಾಯವಾಗುವಂತಹ ಕಾರ್ಯಕ್ರಮ ಒಂದನ್ನು ತಾವು ಜಾರಿಗೆ ತರಬೇಕು ಎಂದು ನಿರ್ಧರಿಸಿ, ಭಾರತೀಯ ಅಂಚೆ ಇಲಾಖೆಯು ವಿವಿಧ ರೀತಿಯ ಸಾಲಗಳನ್ನು ಅಂಚೆ ಕಚೇರಿಯಲ್ಲಿ ರೈತರಿಗೆ ನೀಡುವ ತೀರ್ಮಾನವನ್ನು ಮಾಡಿದೆ. ಅಷ್ಟೇ ಅಲ್ಲದೆ ಸಾಲದ ಇಎಮ್ಐ ಕಂತುಗಳನ್ನು ಅಥವಾ ಸಾಲದ ಮರು ಪಾವತಿಯನ್ನು ಸ್ಥಳಿಯ ಅಂಚೆ ಕಚೇರಿಯಲ್ಲಿ ಮಾಡಬಹುದಾಗಿದೆ. ಇದರಿಂದ ಪಟ್ಟಣಕ್ಕೆ ಓಡಾಡುವ ಖರ್ಚು ಉಳಿಯುವುದು ಅಷ್ಟೇ ಅಲ್ಲದೆ ಸಮಯವು ಉಳಿಯಲಿದೆ.
ಅಂಚೆ ಇಲಾಖೆಯು ಇಂತಹ ಒಂದು ದೊಡ್ಡ ಮಟ್ಟದ ಕಾರ್ಯಕ್ರಮವನ್ನು ತಾನೇ ಹಮ್ಮಿ ಕೊಂಡಿತೇ? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡಬಹುದು. ಆದರೆ ಅದಕ್ಕೆ ಉತ್ತರ ಎಂದರೆ, ಅಂಚೆ ಇಲಾಖೆಯು ಇಂತದ್ದೊಂದು ಉದ್ದೇಶವನ್ನು ಹೊತ್ತು ಜಾರಿಗೆ ತರಲು ಮುಂದಾಗಿದೆ ಎಂಬ ಸುದ್ದಿಯು ತಿಳಿಯುತ್ತಿದ್ದಂತೆ ಹೆಚ್ ಡಿ ಎಫ್ ಸಿ ಬ್ಯಾಂಕ್ ಇದರ ಸಹಾಯಕ್ಕಾಗಿ ಕೈಜೋಡಿಸಿದೆ.
ಹೌದು. ಇನ್ನು ಮುಂದೆ ಬ್ಯಾಂಕ್ ಸಾಲವನ್ನು ಪಡೆಯಲು ಅಥವಾ ಸಾಲವನ್ನು ಮರುಪಾವತಿಸಲು ಟೌನ್ ಏರಿಯಾಗಳಿಗೆ ಹೋಗಿ ಒದ್ದಾಡಬೇಕಾದ ಅವಶ್ಯಕತೆ ಇಲ್ಲ. ರೈತರು ಹೆಚ್ ಡಿ ಎಫ್ ಸಿ ಬ್ಯಾಂಕ್ ನ ಸಾಲದ ಸೌಲಭ್ಯವನ್ನು ತಮ್ಮ ಊರಿನ ಅಂಚೆ ಕಚೇರಿಯಲ್ಲಿಯೇ ಪಡೆಯಬಹುದಾಗಿದೆ. ಈ ಯೋಜನೆಯ ಇನ್ನೊಂದು ವಿಶೇಷವೆಂದರೆ ಮೊಟ್ಟ ಮೊದಲ ಬಾರಿಗೆ ಇದು ರೂಪಿತಗೊಂಡಿದ್ದು ಕರ್ನಾಟಕದಲ್ಲಿ.
ಈ ಹೊಸ ಪ್ರಯತ್ನವು ರೈತ ಬಾಂಧವರ ಜೊತೆಯಲ್ಲಿ ಯಶಸ್ವಿ ಆಗಲಿದೆ ಎಂಬ ಭರವಸೆ ಅಂಚೆ ಇಲಾಖೆಗೆ ಮತ್ತು ಹೆಚ್ ಡಿ ಎಫ್ ಸಿ ಬ್ಯಾಂಕ್ ಎರಡಕ್ಕೂ ಇದೆಯಂತೆ. ಶೀಘ್ರದಲ್ಲಿಯೇ ಈ ಯೋಜನೆಯ ರೂಪರೇಷೆಗಳು ಹೊರಬೀಳಲಿದ್ದು, ಅಂಚೆ ಕಚೇರಿಯಲ್ಲಿ ರೈತರಿಗೆ ಸಾಲವು ಲಭ್ಯವಾಗಲಿದೆ. ಇದಕ್ಕಾಗಿ ಹೊಂದಿರಬೇಕಾದ ದಾಖಲೆ ಪತ್ರಗಳು ಮತ್ತು ಇನ್ನಿತರ ಮಾಹಿತಿಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದೆ.