ಮಾರ್ಚ್ 25ರಂದು ಶಕ್ತಿಶಾಲಿ ಹೋಳಿ ಹುಣ್ಣಿಮೆ, ನಿಮ್ಮೆಲ್ಲರ ಕಷ್ಟ, ದಾರಿದ್ರ್ಯ, ಬಡತನ ಕಳೆಯಲು ಈ ದಿನ ಶಿವ, ವಿಷ್ಣು, ಲಕ್ಷ್ಮೀ ಮುಂದೆ ಈ ವಸ್ತು ಇಟ್ಟು ಪ್ರಾರ್ಥಿಸಿ.!

 

ಮಾರ್ಚ್ 25 ಹೋಳಿ ಹುಣ್ಣಿಮೆ ದಿನ. ಪಾಲ್ಗುಣ ಮಾಸದ ಹುಣ್ಣಿಮೆ ದಿನವನ್ನು ಹೋಳಿ ದಿನವಾಗಿ ಆಚರಿಸಲಾಗುತ್ತದೆ. ಶಿವ, ರಾಧಾ ಕೃಷ್ಣ, ಮಹಾವಿಷ್ಣು, ಲಕ್ಷ್ಮಿ ದೇವಿ, ಅಯ್ಯಪ್ಪ ಇವರೆಲ್ಲರನ್ನು ಆರಾಧಿಸುವುದಕ್ಕೆ ಈ ದಿನ ಅತ್ಯಂತ ಶುಭ ಕಾರಕ ದಿನವಾಗಿದೆ.

ಈ ವರ್ಷ ಇದೇ ದಿನ ಚಂದ್ರ ಗ್ರಹಣವು ಕೂಡ ಬಂದಿರುವುದರಿಂದ ಪೂಜೆ ಮಾಡಬಹುದೇ? ಮಾಡಬಾರದೇ? ಗ್ರಹಣದ ಆಚರಣೆ ಮಾಡಬೇಕೇ? ಈ ದಿನದಂದು ಯಾವ ದೇವಸ್ಥಾನಕ್ಕೆ ಹೋಗಬೇಕು? ದೇವರಿಗೆ ಯಾವ ವಸ್ತುಗಳನ್ನು ಅರ್ಪಿಸಿ ಪೂಜೆ ಮಾಡಬೇಕು? ಮತ್ತು ಈ ದಿನದ ವಿಶೇಷತೆ ಏನೇನು? ಎನ್ನುವುದೆಲ್ಲದರ ಬಗ್ಗೆ ಈ ಅಂಕಣದಲ್ಲಿ ಕೆಲ ಪ್ರಮುಖ ಮಾಹಿತಿಯನ್ನು ತಿಳಿಸಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ.

ಶಿವನು ತನ್ನ ಮೂರನೇ ಕಣ್ಣನ್ನು ತೆರೆದು ಕಾಮದೇವನನ್ನು ದಂಡಿಸಿದ್ದು ಇದೇ ದಿನ, ಹಾಗಾಗಿ ಶಿವನಿಗೂ ಇದು ಪ್ರಿಯವಾದ ದಿನ. ಈ ದಿನದಂದು ತುಂಬೆ ಪತ್ರೆಗಳನ್ನು ಶಿವನಿಗೆ ಅರ್ಪಿಸಿ, ಎಳ್ಳು ಉಂಡೆಗಳನ್ನು ಶಿವನಿಗೆ ನೈವೇದ್ಯ ಮಾಡಿ ಪೂಜೆ ಮಾಡಿದರೆ ಮತ್ತು ಯಾವುದೇ ಶಿವಾಲಯದಲ್ಲಿ ಅಥವಾ ಪುಣ್ಯ ಸ್ಥಳಗಳಲ್ಲಿ ಹೋಗಿ.

ಈ ಸುದ್ದಿ ಓದಿ:- ಎಂತಹದೇ ಆರೋಗ್ಯ ಸಮಸ್ಯೆ ಇರಲಿ ಈ ಸ್ತೋತ್ರ ನಿತ್ಯ ಒಂದು ತಿಂಗಳು ಕೇಳಿ ನೋಡಿ, ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.!

ಶಿವ ಪುರಾಣ ಅಥವಾ ಶಿವನ ಸ್ತೋತ್ರವಿರುವ ಮತ್ತು ಶಿವನ ಮಹಾತ್ಮೆ ಸಾರುವ ಪುಸ್ತಕಗಳನ್ನು ದಾನ ಮಾಡುವುದರಿಂದ, ವಿಭೂತಿ ಉಂಡೆಗಳನ್ನು ದಾನ ಮಾಡುವುದರಿಂದ ಶಿವನು ಪ್ರಸನ್ನರಾಗುತ್ತಾರೆ ಎಂದು ಹೇಳಲಾಗಿದೆ. ಶಿವನ ಆಶೀರ್ವಾದದಿಂದ ನಿಮ್ಮ ಜೀವನದ ಕಷ್ಟಗಳು ಕೂಡ ಕಳೆಯುತ್ತವೆ ಹಾಗಾಗಿ ತಪ್ಪದೇ ಇಂದು ಈ ಪುಣ್ಯ ಕಾರ್ಯಗಳನ್ನು ಮಾಡಿ.

ರಾಧಾ ಮತ್ತು ಕೃಷ್ಣ ಒಬ್ಬರ ಮೇಲೆ ಒಬ್ಬರು ಬಣ್ಣದ ಓಕುಳಿಯನ್ನು ಚೆಲ್ಲಿದ ದಿನವಾಗಿದೆ. ಸುಖ ಸಂತೋಷಕ್ಕಾಗಿ ನಾವೆಲ್ಲರೂ ಸಹ ಈ ದಿನ ಬಣ್ಣ ಬೆರೆಸಿರುವ ನೀರನ್ನು ಮೈಮೇಲೆ ಚೆಲ್ಲಿಕೊಂಡು ಕೃಷ್ಣ ರಾಧೆ ಹೆಸರನ್ನು ಹೇಳಿ ಹೋಳಿ ಆಚರಿಸಬೇಕು. ಶ್ರೀ ಕೃಷ್ಣ ಪರಮಾತ್ಮನು ಮೊಟ್ಟ ಮೊದಲ ಬಾರಿಗೆ ಉಯ್ಯಾಲೆ ಮೇಲೆ ಕುಳಿತಿದ್ದು ಕೂಡ ಇದೇ ದಿನವಾಗಿದೆ.

ಆದಕಾರಣ ನಿಮ್ಮ ಮನೆಯಲ್ಲಿ ಏನಾದರೂ ಉಯ್ಯಾಲೆ ಇದ್ದರೆ ಈ ದಿನ ಅದರಲ್ಲಿ ಶ್ರೀ ಕೃಷ್ಣನ ವಿಗ್ರಹ ಅಥವಾ ಫೋಟೋವನ್ನು ಇಟ್ಟು ತೂಗಿರಿ. ದೇವಸ್ಥಾನಗಳಲ್ಲಿ ಏನಾದರೂ ಶ್ರೀಕೃಷ್ಣನ ಲೋಲೋತ್ಸವ ಮಾಡುತ್ತಿದ್ದರೆ ದರ್ಶನ ಮಾಡಿ ಪ್ರಾರ್ಥಿಸಿ ಮತ್ತು ಕೃಷ್ಣನ ಫೋಟೋ ಮುಂದೆ ತುಪ್ಪದ ದೀಪ ಹಚ್ಚಿ ಹಾಲು ಮೊಸರು ಬೆಣ್ಣೆ ತುಪ್ಪ ಇತ್ಯಾದಿಗಳನ್ನು ನೈವೇದ್ಯ ಇಡಬೇಕು.

ಈ ಸುದ್ದಿ ಓದಿ:- ಆಂಜನೇಯನ ಬಳಿ ಈ ವಸ್ತು ಇಡಿ, ಎಷ್ಟೇ ಸಾಲ ಇದ್ದರು ಖಂಡಿತ ತೀರುತ್ತೆ.!

ಈ ದಿನ ಅಯ್ಯಪ್ಪ ಸ್ವಾಮಿಯ ದರ್ಶನವನ್ನು ಕೂಡ ಮಾಡಬೇಕು. ಯಾಕೆಂದರೆ, ಇದೇ ಹೋಳಿ ದಿನದಂದು ಸಾಕ್ಷಾತ್ ಅಯ್ಯಪ್ಪಸ್ವಾಮಿಯು ಪಂಬಳ ರಾಜನಿಗೆ ದರ್ಶನ ಕೊಟ್ಟಿದ್ದು. ಹಾಗಾಗಿ ಮರೆಯದೇ ಈ ದಿನ ಅಯ್ಯಪ್ಪ ಸ್ವಾಮಿಯ ದೇಗುಲಕ್ಕೆ ಹೋಗಿ ದರ್ಶನ ಮಾಡುವುದು ಅತ್ಯಂತ ಶುಭ.

ಈ ದಿನ ಅಯ್ಯಪ್ಪನ ದೀಪದಲ್ಲಿ ದೀಪಗಳನ್ನು ಬೆಳಕಿದ್ದರೆ ಶನಿ ದೇವರ ಆಶೀರ್ವಾದ ಕೂಡ ಸಿಕ್ಕಿ ಕಷ್ಟಕಾರ್ಪಣ್ಯಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ಮತ್ತು ತಾಯಿ ಮಹಾಲಕ್ಷ್ಮಿಯನ್ನು ಆರಾಧಿಸುವುದಕ್ಕೆ ಕೂಡ ಈ ದಿನ ಅತ್ಯಂತ ಶುಭಕರವಾಗಿದೆ ಮತ್ತೊಂದು ವಿಚಾರವೇನೆಂದರೆ, ಇದೇ ದಿನ ಚಂದ್ರಗ್ರಹಣ ಕೂಡ ಇದೆ ಆದರೆ ಭಾರತದಲ್ಲಿ ಗೋಚಾರ ಇಲ್ಲದ ಕಾರಣ ಯಾವುದೇ ದೋಷ ಇರುವುದಿಲ್ಲ.

Leave a Comment

WhatsApp Group Join Now
Telegram Group Join Now