Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeCinema Updatesಪ್ರಭಾಸ್ ಅಭಿನಯದ ಸಲಾರ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು ನೋಡಿ...

ಪ್ರಭಾಸ್ ಅಭಿನಯದ ಸಲಾರ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು ನೋಡಿ ತಬ್ಬಿಬ್ಬಾಗಿ ಹೋಗ್ತಿರಾ.!

ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ ಟು ಸಿನಿಮಾದ ನಂತರ ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ತಮ್ಮ ಕ್ರೇಝನ್ನು ಸೃಷ್ಟಿಸಿಕೊಂಡಿದ್ದಾರೆ. ಕೆಜಿಎಫ್ ಸಿನಿಮಾದ ಅದ್ಭುತ ಗೆಲುವು ರಾಕಿಂಗ್ ಸ್ಟಾರ್ ಯಶ್ ಅವರನ್ನು ಇಡೀ ಪ್ರಪಂಚಕ್ಕೆ ರಾಖಿ ಭಾಯ್ ಎಂದು ಪರಿಚಯ ಮಾಡಿ ಕೊಟ್ಟಿದೆ. ಕೆಜಿಎಫ್ ಟು ಸಿನಿಮಾ ಕೂಡ ಸಿನಿಮಾ ರಸಿಕರಿಗೆ ನಿರೀಕ್ಷೆಗಿಂತ ಹೆಚ್ಚಿನ ಮನರಂಜನೆಯನ್ನು ನೀಡಿದ್ದು ಸಿನಿಮಾ ಅಂತ್ಯದಲ್ಲಿ ಕೊಟ್ಟ ಓಪನ್ ಎಂಡಿಂಗ್ ಕೆಜಿಎಫ್ ತ್ರೀ ಬಗ್ಗೆ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಕೆಜಿಎಫ್ 3 ಸಿನಿಮಾದ ಬಗ್ಗೆ ಈಗಾಗಲೇ ಎಲ್ಲರೂ ಬಹಳ ಕುತೂಹಲಭರಿತರಾಗಿದ್ದು ಸಿನಿಮಾ ಯಾವಾಗ ತೆರೆ ಮೇಲೆ ಬರುತ್ತದೆ ಮುಂದಿನ ಕಥೆ ಏನಾಗುತ್ತದೆ ಎಂದು ಎಲ್ಲರೂ ಕಾಯುತ್ತಿದ್ದಾರೆ. ಇದರ ನಡುವೆ ಯಶ್ ಅವರಿಂದ ಮತ್ತೊಂದು ಹೊಸ ಸುದ್ದಿ ಇದೆ.

ಅದೇನೆಂದರೆ ಪ್ಯಾನ್ ಇಂಡಿಯಾ ಸಿನಿಮಾವಾಗಿ ರಿಲೀಸ್ ಆದ ಕೆಜಿಎಫ್ ಟು ಸಿನಿಮಾ ಭಾರತದ ಎಲ್ಲಾ ಪ್ರಮುಖ ಭಾಷೆಗಳಲ್ಲೂ ಕೂಡ ತೆರೆ ಕಂಡು ಭರ್ಜರಿ ಯಶಸ್ಸು ಗಳಿಸಿದ್ದು ಎಲ್ಲರಿಗೂ ತಿಳಿದೇ ಇದೆ. ಈ ಸಿನಿಮಾದ ಖ್ಯಾತಿಯಿಂದ ಭಾರತದ ಎಲ್ಲಾ ಇಂಡಸ್ಟ್ರಿಯಲ್ಲೂ ಕೂಡ ರಾಕಿಂಗ್ ಸ್ಟಾರ್ ಅವರಿಗೆ ಬೇಡಿಕೆ ಇದೆ ಹಾಗೂ ರಾಖಿ ಬಾಯ್ ಅವರಿಗೆ ಎಲ್ಲಾ ಭಾಷೆಗಳನ್ನು ಕೂಡ ಅಭಿಮಾನಿಗಳು ಹುಟ್ಟು ಕೊಂಡಿದ್ದಾರೆ. ಹೀಗಾಗಿ ಅವರವರ ಭಾಷೆ ಸಿನಿಮಾಗಳಲ್ಲಿ ಯಶ್ ಅವರನ್ನು ಮತ್ತೊಮ್ಮೆ ಕಾಣಲು ಎಲ್ಲಾ ಅಭಿಮಾನಿಗಳು ಕೂಡ ಇಷ್ಟಪಡುತ್ತಿದ್ದಾರೆ. ತೆಲುಗು ಅಭಿಮಾನಿಗಳ ಪಾಲಿಕೆ ಈ ಅದೃಷ್ಟ ಸಿಗಲಿದೆ. ನಮ್ಮ ರಾಖಿ ಭಾಯ್ ಅವರು ತೆಲುಗಿನ ಬಹುನಿರೀಕ್ಷಿತ ಸಿನಿಮಾ ಸಲಾರ್ ಅಲ್ಲಿ ಅಭಿನಯಿಸಲಿದ್ದಾರಂತೆ. ಪ್ರಶಾಂತ್ ನೀಲ್ ಅವರ ನಿರ್ದೇಶನದ ಪ್ರಭಾಸ್ ಅವರ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಸಲಾರ್.

ಪ್ರಶಾಂತ್ ನೀಲ್ ಅವರಿಗೂ ಸಹ ಕೆಜಿಎಫ್ ಟು ಗೆಲುವಿನ ನಂತರ ಅವರ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಾಗಿರುವುದರಿಂದ ಅವರಿಗೆ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ ಎನ್ನಬಹುದು. ಈಗ ಸಲಾರ್ ಸಿನಿಮಾದಲ್ಲಿ ಮತ್ತೊಮ್ಮೆ ಅವರ ಟ್ಯಾಲೆಂಟ್ ಅನ್ನು ಪ್ರದರ್ಶಿಸಲು ಪ್ರಶಾಂತ್ ನೀಲ್ ಅವರು ತಯಾರಾಗಿದ್ದಾರೆ. ಪ್ರಭಾಸ್ ಅವರು ಕೂಡ ತೆಲುಗಿದ ಸ್ಟಾರ್ ನಟ ಆಗಿರುವುದರಿಂದ ಇವರಿಬ್ಬರ ಕಾಂಬಿನೇಷನ್ ವರ್ಕ್ ಆಗಿ ಈ ಸಿನಿಮಾ ಕೂಡ ದಾಖಲೆ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳುತ್ತಿದ್ದಾರೆ ಸಿನಿ ವಿಮರ್ಶಕರು. ಸಿನಿಮಾ ಸಂಬಂಧಿತ ಮತ್ತೊಂದು ಹೊಸ ವಿಷಯ ಏನೆಂದರೆ ಈ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈಗಾಗಲೇ ಪ್ರಭಾಸ್ ಅವರೊಂದಿಗೆ ಯಶ್ ಅವರು ತೆಗೆಸಿಕೊಂಡಿರುವ ಹಲವಾರು ಫೋಟೋಗಳು ವೈರಲ್ ಆಗಿದ್ದು ಸಿನಿಮಾದಲ್ಲಿ ರಾಕಿ ಬಾಯ್ ಇರುವುದು ಖಚಿತವಾಗಿದೆ. ಮತ್ತು ಯಶ್ ಅವರು ಇರೋದ್ರಿಂದ ಇನ್ನಷ್ಟು ಸಿನಿಮಾ ಮೇಲೆ ನಿರೀಕ್ಷೆ ದುಪಟ್ಟಾಗಿದೆ ಎನ್ನಬಹುದು.

ಮತ್ತು ಸದ್ಯಕ್ಕೆ ರಾಕಿಂಗ್ ಸ್ಟಾರ್ ಯಶ್ ಅವರು ಒಂದು ಸಿನಿಮಾಗೆ 25 ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಹಾಗಾದರೆ ಸಲಾರ್ ಸಿನಿಮಾದ ಅತಿಥಿ ಪಾತ್ರಕ್ಕಾಗಿ ತೆಗೆದುಕೊಂಡಿರುವ ಸಂಭಾವನೆ ಎಷ್ಟು ಎನ್ನುವ ಕುತೂಹಲ ಎಲ್ಲರಿಗೂ ಇರುತ್ತದೆ. ಈ ಸಿನಿಮಾದ ಅಭಿನಯಕ್ಕಾಗಿ ಯಶ್ ಅವರು ಬರೋಬ್ಬರಿ 15 ಕೋಟಿ ರೂಗಳನ್ನು ತೆಗೆದುಕೊಂಡಿದ್ದಾರಂತೆ ಎಂದು ಕೆಲವು ಬಲ್ಲಮೂಲಗಳಿಂದ ತಿಳಿದು ಬಂದಿದೆ ಸದ್ಯಕ್ಕೆ ನ್ಯಾಷನಲ್ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಇಷ್ಟು ಪ್ರಮಾಣದ ಸಂಭಾವನೆ ಪಡೆದಿರುವುದರಲ್ಲಿ ಅನುಮಾನವೇ ಇಲ್ಲ ಬಿಡಿ. ಯಶ್ ಅವರ ಸಂಭಾವನೆ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮುಖಾಂತರ ತಿಳಿಸಿ.