ಕಾದಂಬರಿ ಆಧಾರಿತ ಚಿತ್ರಕ್ಕೆ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ರಾಗಿಣಿ ಪ್ರಜ್ವಲ್ ಡೈನಾಮಿಕ್ ಹೀರೋ ದೇವರಾಜ್ ಅವರ ಪುತ್ರ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರನ್ನು ರಂಜಿಸಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ಇವರ ಇನ್ಸ್ಪೆಕ್ಟರ್ ವಿಕ್ರಂ ಚಿತ್ರವು ಉತ್ತಮ ಪ್ರದರ್ಶನ ಕಂಡು ಮೆಚ್ಚುಗೆ ಗಳಿಸಿತ್ತು ಹಾಗೆಯೇ ಡ್ರಗ್ಸ್ ವಿರುದ್ದ ಹೋರಾಡುವ ಇವರ ಜೆಂಟಲ್ ಮ್ಯಾನ್ ಚಿತ್ರ ಮತ್ತು ಅರ್ಜುನ್ ಗೌಡ ಚಿತ್ರ ಕೂಡ ಉತ್ತಮ ಪ್ರದರ್ಶನ ಕಂಡಿದೆ.
ಇದೀಗ ಇವರ ಪತ್ನಿ ರಾಗಿಣಿ ಪ್ರಜ್ವಲ್ ಅವರೂ ಸಹ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದು ಸಿನಿಮಾ ಒಂದರಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಒಂದು ಕಾದಂಬರಿಯ ಆಧಾರಿತ ಚಿತ್ರವಾಗಿದ್ದು ಈ ಚಿತ್ರವನ್ನು ಹಿರಿಯ ನಿರ್ದೇಶಕ ಕೂಡ್ಲು ರಾಮಕೃಷ್ಣ ಆಕ್ಷನ್ ಕಟ್ ಹೇಳಲಿದ್ದು ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಚಿತ್ರ ರಾಗಿಣಿ ಅವರ ಎರಡನೇ ಚಿತ್ರ ಆಗಿದ್ದು ಮೊದಲನೇ ಚಿತ್ರ ಲಾ 2020 ರಲ್ಲಿ ಪುನೀತ್ ರಾಜ್ ಕುಮಾರ್ ಅವರ ಪಿ ಆರ್ ಕೆ ಬ್ಯಾನರ್ ಅಡಿಯಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ನಿರ್ಮಾಣದಲ್ಲಿ ತೆರೆ ಕಂಡಿತ್ತು.
ರಾಗಿಣಿ ಅವರು ಕೇವಲ ಸಿನಿಮಾ ಕ್ಷೇತ್ರ ಒಂದನ್ನೇ ಆಯ್ದುಕೊಳ್ಳದೆ ಫಿಟ್ನೆಸ್ ತರಬೇತಿ ಸೆಂಟರ್ ಕೂಡ ನಡೆಸುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ತನ್ನ ಪತಿ ಜೊತೆಗೆ ವರ್ಕ್ ಔಟ್ ವಿಡಿಯೋಗಳನ್ನು ಹಂಚಿಕೊಂಡು ಆಕ್ಟಿವ್ ಆಗಿದ್ದಾರೆ. ಹೋಟೆಲ್ ಉದ್ಯಮವನ್ನೂ ಸಹ ನಡೆಸುತ್ತಿರುವ ರಾಗಿಣಿ ಅವರು ಅನೇಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಿನಿಮಾ ಕ್ಷೇತ್ರದಲ್ಲಿಯೂ ಸಹ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ.
ಸದ್ಯಕ್ಕೆ ಇವರು ನಟಿಸಲು ಒಪ್ಪಿಗೆ ಸೂಚಿಸಿರುವ ಎರಡನೇ ಚಿತ್ರ ಭಾಗ್ಯ ಕೃಷ್ಣ ಮೂರ್ತಿ ಅವರ ಕಾದಂಬರಿಯ ಆಧರಿಸಿ ಶಾನುಭೋಗರ ಮಗಳು ಎಂಬ ಸಿನಿಮಾವನ್ನ ಕೂಡ್ಲು ರಾಮಕೃಷ್ಣ ಅವರು ನಿರ್ದೇಶನ ಮಾಡುತ್ತಿದ್ದು ಈ ಚಿತ್ರಕ್ಕೆ ಶಾನುಭೋಗರ ಮಗಳಾಗಿ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಪ್ರಜ್ವಲ್ ಅವರನ್ನು ಅರಿಸಿಕೊಂಡಿದ್ದಾರೆ. ರಾಗಿಣಿ ಅವರು ಪ್ರಜ್ವಲ್ ದೇವರಾಜ್ ಅವರ ಬಾಲ್ಯದ ಗೆಳತಿ ಆಗಿದ್ದು ಗೆಳೆತನ ಪ್ರೇಮವಾಗಿ 2014 ರಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಪತಿ ಪತ್ನಿಯರಿಬ್ಬರೂ ಸೇರಿ ಡ್ಯಾನ್ಸ್, ವರ್ಕ್ ಔಟ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯರಾಗಿ ಇವರ ಜೋಡಿಯ ಹೆಸರಿನಲ್ಲಿ ಅನೇಕ ಫ್ಯಾನ್ಸ್ ಪೇಜ್ ಹುಟ್ಟಿಕೊಳ್ಳಲು ಕಾರಣರಾಗಿದ್ದಾರೆ. ರಾಗಿಣಿ ಅವರು ಮಾಡೆಲಿಂಗ್ ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು ಅತ್ಯುತ್ತಮ ನೃತ್ಯಗಾರ್ತಿ ಕೂಡ ಆಗಿದ್ದಾರೆ ಇದಿಷ್ಟೇ ಅಲ್ಲದೇ ತಂಗಂ ಜ್ಯುವೆಲರ್ಸ್, ಕೃಷ್ಣ ತುಳಸಿ ಸೋಪ್, ಬ್ರು ಇಂಸ್ಟಂಟ್ ಕಾಫೀ ಮುಂತಾದ ಅನೇಕ ಜಾಹಿರಾತುಗಳಲ್ಲಿಯೂ ಸಹ ಕಾಣಿಸಿಕೊಂಡು ಅನೇಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದಾರೆ.
2020 ರಲ್ಲಿ ತೆರೆಕಂಡ ಇವರ ಲಾ ಚಿತ್ರ ಕಾನೂನಾತ್ಮಕ ಹೋರಾಟದ ಚಿತ್ರವಾಗಿದೆ ಇವರ ಮೊದಲನೇ ಕಿರುಚಿತ್ರ ಎಂದರೆ ರಿಷಭಪ್ರಿಯಾ ಇದರಲ್ಲಿ ಪ್ರಿಯ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ಸ್ಪೆಕ್ಟರ್ ವಿಕ್ರಂ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಾಗಿಣಿ ಅವರ ತಂದೆ ಚಂದ್ರನ್ ಅವರೂ ಸಹ ಉರಿತ್ಮಿಕ್ ಡ್ಯಾನ್ಸ್ ಸ್ಟುಡಿಯೋ ದ ಸಹ ಸಂಸ್ಥಾಪಕರಾಗಿದ್ದಾರೆ. ಹೀಗೆ ರಾಗಿಣಿ ಪ್ರಜ್ವಲ್ ಅವರು ಕೇವಲ ಪ್ರಜ್ವಲ್ ಅವರ ಹೆಂಡತಿಯಾಗಿ ಮಾತ್ರವಲ್ಲದೆ ತಮ್ಮ ಜೀವನವನ್ನು ಸಾಕಷ್ಟು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಯುವ ಪೀಳಿಗೆಗೆ ಮಾದರಿ ಆಗಿದ್ದಾರೆ.