Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಬೀಚ್ ಮಧ್ಯ ನಿಂತು ರೊಮ್ಯಾಂಟಿಕ್ ಮೂಡ್ ನಲ್ಲಿ ಕಾಲ ಕಳೆಯುತ್ತಿರುವ ಪ್ರಜ್ವಲ್ & ರಾಗಿಣಿ ದಂಪತಿ...

ಬೀಚ್ ಮಧ್ಯ ನಿಂತು ರೊಮ್ಯಾಂಟಿಕ್ ಮೂಡ್ ನಲ್ಲಿ ಕಾಲ ಕಳೆಯುತ್ತಿರುವ ಪ್ರಜ್ವಲ್ & ರಾಗಿಣಿ ದಂಪತಿ ಈ ವೈರಲ್ ವಿಡಿಯೋ ನೋಡಿ.

ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಜೋಡಿ 2016ರಲ್ಲಿ ಪ್ರೀತಿಸಿ ಮದುವೆಯಾದ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ ಇವರಿಬ್ಬರೂ ಕೂಡ ಬಾಲ್ಯ ಸ್ನೇಹಿತರು ಅಷ್ಟೇ ಅಲ್ಲದೆ ಅಕ್ಕಪಕ್ಕದ ನಿವಾಸಿ. ಚಿಕ್ಕ ವಯಸ್ಸಿನಿಂದಲೂ ಕೂಡ ಪ್ರಜ್ವಲ್ ಅವರು ರಾಗಿಣಿ ಅವರು ಆತ್ಮೀಯ ಸ್ನೇಹಿತರಾಗಿದ್ದ ಕಾರಣ ಇವರಿಬ್ಬರ ನಡುವೆ ಪ್ರೀತಿ ಮೂಡಿ ಇದೀಗ ಸಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಜ್ವಲ್ ದೇವರಾಜ್ ತಮ್ಮ ಹೆಂಡತಿಯನ್ನು ತುಂಬಾನೇ ಪ್ರೀತಿ ಮಾಡುತ್ತಾರೆ ಈ ಕಾರಣಕ್ಕಾಗಿಯೇ ರಾಗಿಣಿ ಅವರು ಕೂಡ ಎಲ್ಲಾ ಕಡೆ ತಮ್ಮ ಪತಿಯ ಬಗ್ಗೆ ಭಾವನಾತ್ಮಕ ಮಾತುಗಳನ್ನು ಹೇಳಿಕೊಳ್ಳುತ್ತಾರೆ ಇವರಿಬ್ಬರ ನಡುವೆ ಇರುವಂತಹ ಹೊಂದಾಣಿಕೆಯನ್ನು ನೋಡುತ್ತಿದ್ದರೆ ನಿಜಕ್ಕೂ ಸಂತಸವಾಗುತ್ತದೆ.

ಇನ್ನು ಪ್ರಜ್ವಲ್ ದೇವರಾಜ್ ಅವರು ಗೆಳೆಯ ಎಂಬ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯ ಮಾಡುವುದರ ಮೂಲಕ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು ಈ ಸಿನಿಮಾದಲ್ಲಿ ದೊಡ್ಡ ಯಶಸ್ಸು ಸಿಕ್ಕಿತು ಈ ಸಿನಿಮಾದ ನಂತರ ಸವಾರಿ, ಗಂಗೆ ಬಾರೆ ತುಂಗೆ ಬಾರೆ, ಕೆಂಚ, ಈ ಹೃದಯ ನಿನಗಾಗಿ, ಇನ್ಸ್ಪೆಕ್ಟರ್ ವಿಕ್ರಾಮ್, ಭದ್ರಾ, ಮುರುಳಿ ಮೀಟ್ಸ್ ಮೀರಾ, ಹೀಗೆ ಕನ್ನಡದ ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಇವರು ಎಷ್ಟೇ ಒಳ್ಳೆಯ ನಟನಾಗಿದ್ದರು ಕೂಡ ಇವರ ಸಿನಿಮಾಗಳು ಹೆಚ್ಚು ಹಿಟ್ಟಾಗುತ್ತಿಲ್ಲ ಇದು ನಿಜಕ್ಕೂ ಕೂಡ ವಿ.ಷಾ.ದ.ವಾಕರವಾದ ವಿಚಾರ ಆದರೂ ಕೂಡ ಪ್ರಜ್ವಲ್ ದೇವರಾಜ್ ಒಬ್ಬ ಅದ್ಭುತ ನಟ ಎಂಬುದನ್ನು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ.

ಇನ್ನು ಪ್ರಜ್ವಲ್ ದೇವರಾಜ್ ಅವರ ಧರ್ಮಪತ್ನಿ ರಾಗಿಣಿಯವರು ಕೂಡ ಕಳೆದ ವರ್ಷವಷ್ಟೇ ಬಿಡುಗಡೆಯಾದಂತಹ “ಲಾ” ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ನಾಯಕ ಯಾರು ನಟಿಯ ಪಾತ್ರದಲ್ಲಿ ಗುರುತಿಸಿಕೊಂಡಿರುವುದು ಇದಕ್ಕಿಂತ ಮೊದಲು ಯಾವ ಸಿನಿಮಾದಲ್ಲಿಯೂ ಕೂಡ ನಟನೆ ಮಾಡಿಲ್ಲ ನಟನೆ ಮಾಡಿದ್ದು ಕೇವಲ ಒಂದೇ ಒಂದು ಸಿನಿಮಾ ಆದರೂ ಕೂಡ ಯಾರಿಂದಲೂ ಕೂಡ ಇವರನ್ನು ಹೊಸ ಪ್ರತಿಭೆ ಅಥವಾ ಹೊಸ ನಟಿ ಎಂಬುದನ್ನು ಗುರುತಿಸುವುದಕ್ಕೆ ಸಾಧ್ಯವಾಗುವುದಿಲ್ಲ ಅಷ್ಟು ಅಮೋಘವಾಗಿ ಈ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ.

ವಿಶೇಷ ಏನೆಂದರೆ ಈ ಒಂದು ಸಿನಿಮಾಗೆ ಬಂಡವಾಳ ಹೂಡಿಕೆ ಮಾಡಿದ್ದು ನಮ್ಮ ನಿಮ್ಮೆಲ್ಲರ ಪ್ರೀತಿಯ ಅಪ್ಪು ಹೌದು ಪಿ.ಆರ್.ಕೆ ಪ್ರೊಡಕ್ಷನ್ ಮುಖಾಂತರ ಈ ಒಂದು ಸಿನಿಮಾವನ್ನು ಬಿಡುಗಡೆ ಮಾಡಲಾಗಿತ್ತು. ಈ ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಂಡಿದೆ ಅಷ್ಟೇ ಅಲ್ಲದೆ ಓ ಟಿ ಟಿ ಲೋಕದಲ್ಲಿ ಅತಿ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಂತಹ ಹೆಗ್ಗಳಿಕೆಗೆ ಪಾತ್ರವಾಗಿದೆ‌. ಇನ್ನೂ ರಾಗಿಣಿ ಅವರು ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ ಅಷ್ಟೇ ಅಲ್ಲದೆ ನೃತ್ಯದಲ್ಲಿ ಹೆಚ್ಚಿನ ಪ್ರಾವೀಣ್ಯತೆಯನ್ನು ಹೊಂದಿದ್ದಾರೆ. ರಾಗಿಣಿಯವರು ಕ್ಲಾಸಿಕಲ್ ಡ್ಯಾನ್ಸರ್ ತಮ್ಮ ಬಿಡುವಿನ ಸಮಯದಲ್ಲಿ ನೃತ್ಯ ಮಾಡುವುದರ ಮೂಲಕ ಹೆಚ್ಚಿನ ಕಾಲ ಕಳೆಯುತ್ತಾರೆ.

ತಮ್ಮದೇ ಆದಂತಹ ಡ್ಯಾನ್ಸಿಂಗ್ ಕ್ಲಾಸ್ ಒಂದನ್ನು ಕೂಡ ಒಳಗೊಂಡಿದ್ದಾರೆ ಆಗಾಗ ತಮ್ಮ instagram ಖಾತೆಯಲ್ಲಿ ಡ್ಯಾನ್ಸಿಂಗ್ ವಿಡಿಯೋ ಹಾಕುವುದರ ಮೂಲಕ ತಮ್ಮ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡುತ್ತಾರೆ. ಸದ್ಯಕ್ಕೆ ಪ್ರಜ್ವಲ್ ಮತ್ತು ರಾಗಿಣಿ ದಂಪತಿಯವರು ತಮ್ಮ ಹಾಲಿಡೇಸ್ ಟ್ರಪ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ. ಸಾಗರದ ದಡದಲ್ಲಿ ನಿಂತು ರೋಮ್ಯಾಂಟಿಕ್ ಆಗಿ ಕಾಲ ಕಳೆಯುತ್ತಿದ್ದಾರೆ ಸದ್ಯಕ್ಕೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.