ದೇಶದಲ್ಲಿ ಈಗ ಎಲ್ಲಾ ಕ್ಷೇತ್ರಗಳೂ ಕೂಡ ಡಿಜಿಟಲೀಕರಣಗೊಳ್ಳುತ್ತಿವೆ. ಆದ ಕಾರಣ ಪತ್ರ ವ್ಯವಹಾರದ ಬದಲು ಆನ್ಲೈನಲ್ಲಿಯೇ ಅತಿ ಹೆಚ್ಚು ಪ್ರಕ್ರಿಯೆಗಳು ಪೂರ್ತಿ ಗೊಳ್ಳುತ್ತಿವೆ. ಸರ್ಕಾರದ ಎಲ್ಲಾ ಇಲಾಖೆಗಳ ಸೇವೆಗಳನ್ನು ಕೂಡ ಸಂಬಂಧ ಪಟ್ಟ ಕಚೇರಿಗಳಿಗೆ ನೀಡಿರುವ ವೆಬ್ಸೈಟ್ ಮೂಲಕ ಲಾಗಿನ್ ಆಗಿ ಪಡೆಯಬಹುದು.
ಅರ್ಜಿ ಸಲ್ಲಿಸುವುದು, ಅರ್ಜಿ ಶುಲ್ಕ ಪಾವತಿ ಮಾಡುವುದು, ಅರ್ಜಿಗಳ ಸ್ಟೇಟಸ್ ಚೆಕ್ ಮಾಡುವುದು ಇನ್ನು ಮುಂತಾದ ಅನೇಕ ವಿಚಾರಗಳಿಗೆ ಸೇವಾ ಸಿಂಧು ಪೋರ್ಟಲ್ ಗಳು ಅನುಕೂಲಕ್ಕೆ ಬರುತ್ತಿದ್ದು, ನಾಗರಿಕರಿಗೆ ಕಚೇಯಿಂದ ಕಚೇರಿಗೆ ಅಲೆಯುವುದು ತಪ್ಪುತ್ತಿದೆ ಮತ್ತು ದೇಶವು ಕೂಡ ಈಗಿನ ಕಾಲಮಾನಕ್ಕೆ ತಕ್ಕಂತೆ ಹೊಂದಿಕೊಂಡು ಮುಂದೆ ಹೋಗುತ್ತಿದ್ದೆ ಎನ್ನುವ ಸಮಾಧಾನ ಇದೆ.
ಹಾಗಾಗಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಮೊನ್ನೆ ಶುಕ್ರವಾರ ಬಜೆಟ್ ಮಂಡನೆ ಮಾಡಿದ ಸಂದರ್ಭದಲ್ಲಿ ವಿವಾಹ ನೋಂದಣಿಯನ್ನು ಕೂಡ ಸರಳಗೊಳಿಸುವ ಉದ್ದೇಶದಿಂದ ಆನ್ಲೈನ್ ನಲ್ಲಿ ವಿವಾಹ ನೋಂದಣಿಗೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಘೋಷಿಸಿದ್ದಾರೆ.
ಆದರೆ ಮಾನ್ಯ ಮುಖ್ಯಮಂತ್ರಿಗಳು ಹೇಳಿದ ಈ ವಿಚಾರದ ವಿರುದ್ಧ ಹಿಂದೂ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಆನ್ಲೈನ್ ನಲ್ಲಿ ವಿವಾಹ ನೋಂದಣಿಗೆ ಅವಕಾಶ ಮಾಡಿಕೊಟ್ಟರೆ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತವೆ. ಈಗಾಗಲೇ ಲವ್ ಜಿಹಾದ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸರ್ಕಾರವು ಈ ರೀತಿ ಯೋಜನೆಯನ್ನು ಜಾರಿಗೆ ತಂದರೆ ಸರ್ಕಾರವೇ ಲವ್ ಜಿಹಾದ್ ಗೆ ಕುಮ್ಮಕು ನೀಡಿದಂತಾಗುತ್ತದೆ ಎಂದು ಆರೋಪಿಸಿದ್ದಾರೆ.
ಆನ್ಲೈನ್ ನಲ್ಲಿ ವಿವಾಹವನ್ನು ನೋಂದಣಿ ಮಾಡುವಾಗ ಅದು ಲವ್ ಜಿಹಾದ್ ಆಗಿದ್ದರೆ ಗೊತ್ತಾಗದಂತೆ ಮುಚ್ಚಿಬಿಡಬಹುದು ಹಾಗಾಗಿ ಸರ್ಕಾರ ಇದಕ್ಕೆ ಅವಕಾಶ ನೀಡಬಾರದು ಎಂದು ಸರ್ಕಾರವನ್ನು ಹಿಂದು ಪರ ಸಂಘಟನೆಗಳು ಟೀಕೆ ಮಾಡಿದ್ದಾರೆ. ಈವರೆಗೆ ವಿವಾಹ ನೊಂದಣಿ ಮಾಡಿಸಲು ವಿವಾಹ ನೋಂದಣಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇತ್ತು.
ಇದನ್ನು ಸರಳಗೊಳಿಸಿ ಜನರಿಗೆ ಆನ್ಲೈನ್ ಸೇವೆಗಳನ್ನು ಇನ್ನಷ್ಟು ಹತ್ತಿರ ತರಲು ಕಾವೇರಿ 2.0 ತಂತ್ರಾಂಶದಲ್ಲಿ ಆನ್ಲೈನ್ ಮೂಲಕ ವಿವಾಹನೊಂದಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ಬಜೆಟ್ ಅಲ್ಲಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದರು. ಇದರೊಂದಿಗೆ ಗ್ರಾಮಪಂಚಾಯಿತಿಯಲ್ಲಿರುವ ಬಾಪೂಜಿ ಸೇವಾ ಕೇಂದ್ರ ಮತ್ತು ಗ್ರಾಮ ಒನ್ ಕೇಂದ್ರಗಳನ್ನು ಕೂಡ ಆಧಾರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದರು.
ಸರ್ಕಾರ ಈ ಘೋಷಣೆ ಮಾಡುತ್ತಿದ್ದಂತೆ ಹಿಂದು ಪರ ಸಂಘಟನೆಗಳು ಮಾತ್ರ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ರಾಮ ಸೇನೆಯ ಮುಖ್ಯಸ್ಥರಾದ ಪ್ರಮೋದ್ ಮುತಾಲಿಕ್ ಕೂಡ ಈ ಪ್ರತಿಕ್ರಿಯಿಸಿ ಈ ಕೂಡಲೇ ಆನ್ಲೈನ್ ಮದುವೆ ನೋಂದಣಿಯನ್ನು ರದ್ದುಪಡಿಸಿ ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ವಿವಾಹ ನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಈ ರೀತಿ ಮದುವೆ ಆಗುವ ಜೋಡಿಗಳ ಫೋಟೋ ವಿಳಾಸ ಮತ್ತಿತರ ವಿವರಗಳನ್ನು ಒಂದು ತಿಂಗಳ ಕಾಲ ನೋಟಿಸ್ ಬೋರ್ಡ್ ಅಲ್ಲಿ ಡಿಸ್ಪ್ಲೇ ಮಾಡುತ್ತಿದ್ದರು. ಇದರಿಂದ ಜನರು ಮೋಸಕ್ಕೊಳಗಾಗುವ ಸಾಧ್ಯತೆ ಕಡಿಮೆ ಇರುತ್ತದೆ ಆದರೆ ಆನ್ಲೈನಲ್ಲಿ ಗುಟ್ಟಾಗಿ ವಿವಾಹ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡದರೆ ಇದೆಲ್ಲಾ ಹೆಚ್ಚಾಗುತ್ತದೆ ಎಂದು ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ.
ಆನ್ಲೈನ್ ನಲ್ಲಿ ವಿವಾಹ ನೊಂದಣಿ ಮಾಡುವ ಈ ಅವಕಾಶವನ್ನು ತಕ್ಷಣವೇ ಸರ್ಕಾರದ ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ರಾಜ್ಯ ಸರ್ಕಾರದ ಈ ನಿರ್ಧಾರದ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.