ಒಳ್ಳೆ ಹುಡುಗ ಎಂದು ತನ್ನನ್ನು ತಾನು ಕಳೆದುಕೊಂಡಿರುವ ಬಿಗ್ ಬಾಸ್ ಸೀಸನ್ 4ರ ವಿನ್ನರ್ ಪ್ರಥಮ್ ಕರ್ನಾಟಕದಾದ್ಯಂತ ವರ್ಡ್ ಫೇಮಸ್. ಸಿನಿಮಾಗಳಿಗೆ ಸಂಬಂಧಪಟ್ಟ ವಿಚಾರವಾಗಿ ಆಗಾಗ ಸುದ್ದಿಯಲ್ಲಿರುವ ಪ್ರಥಮ್ ಅವರು ಈಗ ವೈಯಕ್ತಿಕ ಜೀವನದ ಮುಖ್ಯವಾದ ವಿಷಯವನ್ನು ಕನ್ನಡ ಜನತೆಯೊಂದಿಗೆ ಹಂಚಿಕೊಂಡಿದ್ದಾರೆ. ಮಾತಿನ ಮಲ್ಲ ಎಂದೇ ಬಿರುದು ಪಡೆದಿರುವ ಪ್ರಥಮ್ ಸಿನಿಮಾ ರಂಗದಲ್ಲಿ ಅನೇಕರಿಗೆ ಆತ್ಮೀಯರು.
ಕನ್ನಡ ಚಿತ್ರರಂಗಕ್ಕೆ ಸಂಬಂಧಪಟ್ಟ ಪ್ರತಿ ಘಟನೆಯಲ್ಲೂ ಮೊದಲಿಗೆ ಮಾತಿಗೆ ಇಳಿಯುವ ಇವರು ಸಿನಿಮಾ ರಂಗದ ವಿಚಾರವಾಗಿ ಹೆಚ್ಚು ಪರಿಚಿತರು. ಬಿಗ್ ಬಾಸ್ ಸೀಸನ್ ನಾಲ್ಕರಲ್ಲಿ ಮನೆ ಮಂದಿಗೆಲ್ಲ ಟಫ್ ಕಾಂಪಿಟೇಟರ್ ಆಗಿದ್ದ ಇವರು ಕರ್ನಾಟಕದ ಜನತೆಗೆ ಮಸ್ತ್ ಎಂಟರ್ಟೈನ್ಮೆಂಟ್ ಕೊಟ್ಟಿದ್ದ ಲಾರ್ಡ್ ಗವರ್ನರ್.
ಇದಾದ ಬಳಿಕ ಪದೇಪದೇ ಫೇಸ್ಬುಕ್ ಲೈವ್ ಗಳನ್ನು ಮಾಡುವ ಮೂಲಕ ಸ್ನೇಹಿತರು ಮತ್ತು ಕುಟುಂಬದವರ ಜೊತೆಗಿನ ಜಗಳದ ವಿಚಾರವಾಗಿ ಸುದ್ದಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಪ್ರಥಮ್ ಅವರು ಹಲವು ಸಿನಿಮಾಗಳಲ್ಲಿ ಕೂಡ ನಾಯಕನಟನಾಗಿ ಅಭಿನಯಿಸಿದ್ದರು. ದೇವರಂತ ಮನುಷ್ಯ, MLA ಮುಂತಾದ ಚಿತ್ರಗಳಲ್ಲಿ ನಾಯಕನಟನಾಗಿ ಕಾಣಿಸಿಕೊಂಡಿದ್ದ ಇವರು ಕೆಲವು ತಿಂಗಳುಗಳ ಹಿಂದೆ ಬಿಡುಗಡೆ ಆದ ನಟ ಭಯಂಕರ ಸಿನಿಮಾದಲ್ಲಿಯೂ ಹೀರೋ ಆಗಿದ್ದರು.
ಇವರು ಅಭಿನಯಿಸಿದ ಸಿನಿಮಾಗಳು ಕೈ ಹಿಡಿಯದೆ ಹೋದರು ಕೂಡ ಸಿನಿಮಾ ರಂಗದ ಕುರಿತಾಗಿ ಪ್ರಥಮ್ ಆಡುವ ಮಾತುಗಳು ಮತ್ತು ಸಿನಿಮಾ ರಂಗದ ಜೊತೆ ಅವರ ಹೊಂದಿರುವ ನಂಟಿನ ಕಾರಣದಿಂದಾಗಿ ಸದಾ ಮೀಡಿಯ ಹಾಗೂ ಸೋಶಿಯಲ್ ಮೀಡಿಯಾ ಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಕಿರುತೆರೆಯಲ್ಲೂ ಕೂಡ ಹಲವು ರಿಯಾಲಿಟಿ ಶೋ ಗಳಲ್ಲಿ ಅತಿಥಿಯಾಗಿ ಪ್ರಥಮ್ ಕಾಣಿಸಿಕೊಂಡು ಕರ್ನಾಟಕದ ಮನೆಮನೆಗೂ ಕೂಡ ಹತ್ತಿರವಾಗಿದ್ದಾರೆ.
ನೋಡಿದ ತಕ್ಷಣ ಪಕ್ಕದ ಮನೆಯ ಹುಡುಗ, ಪರಿಚಯಸ್ಥ ಎನಿಸುವಂಥಿರುವ ಪ್ರಥಮ್ ಅವರು ಮೂಲತಃ ಕೊಳ್ಳೇಗಾಲದವರು. ಕರ್ನಾಟಕವೇ ತನ್ನ ಕುಟುಂಬ, ಇಲ್ಲಿರುವ ಎಲ್ಲರೂ ಕೂಡ ತನಗೆ ಆತ್ಮೀಯರು ಸಂಬಂಧಿಕರು ಎಂದು ಪ್ರತಿ ಬಾರಿ ಕೂಡ ಪ್ರೀತಿ ತೋರುವ ಪ್ರಥಮ್ ಅವರು ಈಗ ಅಧಿಕೃತವಾಗಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ.
ಇತ್ತೀಚೆಗಷ್ಟೇ ಯಾರಿಗೂ ತಿಳಿಸದೆ ಗುಟ್ಟಾಗಿ ಎಂಗೇಜ್ಮೆಂಟ್ ಮಾಡಿಕೊಂಡಿರುವ ಅವರು ಇದೀಗ ತಮ್ಮ ಎಂಗೇಜ್ಮೆಂಟ್ ಫೋಟೋಗಳ ಸಮೇತ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಎಂಗೇಜ್ಮೆಂಟ್ ಮತ್ತು ಮದುವೆಯ ಬಗ್ಗೆ ಕೆಲ ಬರಹವನ್ನು ಕೂಡ ಬರೆದಿದ್ದಾರೆ. ಪ್ರತಿಯೊಂದು ವಿಷಯವನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದ ಇವರು ಯಾರಿಗೂ ತಿಳಿಸದೆ ಎಂಗೇಜ್ಮೆಂಟ್ ಆಗಿರುವ ವಿಷಯ ಅನೇಕರಿಗೆ ಬೇಸರವನ್ನುಂಟು ಮಾಡಿದೆ ಮತ್ತು ಆಶ್ಚರ್ಯವನ್ನು ತಂದಿದೆ.
ಆದರೆ ಇದಕ್ಕೆ ಬಹಳ ಸರಳವಾಗಿ ಎಂಗೇಜ್ಮೆಂಟ್ ಮುಗಿಯಿತು ಮದುವೆಯನ್ನೂ ಕೂಡ ಹೀಗೆ ಸರಳವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ಆಗಲು ನಿರ್ಧರಿಸಿರುವುದರಿಂದ ವಿಷಯ ಹಂಚಿಕೊಳ್ಳಲು ಬಯಸಲಿಲ್ಲ ಎಂದು ಸಬೂಬು ಕೊಡುವ ಇವರು ಮದುವೆ ಎಷ್ಟು ಗ್ರಾಂಡ್ ಆಗುತ್ತೇವೆ ಎನ್ನುವುದು ಮುಖ್ಯವಲ್ಲ ಬದುಕು ಹೀಗೆ ಕಟ್ಟಿಕೊಳ್ಳುತ್ತೇವೆ ಎನ್ನುವುದು ಮುಖ್ಯ, ನನ್ನ ಹಿತ ಬಯಸುವವರು ಎಲ್ಲಿದ್ದರೂ ಕೂಡ ಅಲ್ಲಿಂದಲೇ ನಮಗೆ ಹಾರೈಸಿ ಎಂದು ಕೋರಿಕೊಂಡಿದ್ದಾರೆ.
ಕುಟುಂಬದವರು ನೋಡಿ ಮೆಚ್ಚಿಕೊಂಡಿರುವ ಮಂಡ್ಯ ಮೂಲದ ಹಳ್ಳಿಯದ ಹುಡುಗಿಯನ್ನು ಪ್ರಥಮ್ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಡಿಗ್ರಿ ಕಂಪ್ಲೀಟ್ ಮಾಡಿರುವ ಈಕೆ ಮಾಸ್ಟರ್ ಡಿಗ್ರಿ ಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಈ ನಡುವೆ ಪ್ರಥಮ್ ಅವರನ್ನು ಒಪ್ಪಿಕೊಂಡು ಅವರು ಒಟ್ಟಿಗೆ ಜೀವನ ಸಾಗಿಸುವುದಕ್ಕೆ ಮುಂದಾಗಿದ್ದಾರೆ. ಒಳ್ಳೆ ಹುಡುಗ ಪ್ರಥಮ್ ಅವರು ಈಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವುದು ಕನ್ನಡಿಗರಿಗೆಲ್ಲ ಖುಷಿಯ ವಿಚಾರವೇ ಹಾಗಾಗಿ ನಾವು ಕೂಡ ಅವರಿಗೆ ಶುಭ ಹಾರೈಸೋಣ.