ಒಳ್ಳೆ ಹುಡುಗ (Olle hudga) ಎಂದು ಹೆಸರು ತೆಗೆದುಕೊಂಡು ಈಗ ಕರ್ನಾಟಕದ ಅಳಿಯ (Karnatakada Aliya) ಆಗಲು ಹೊರಟಿರುವ ಪ್ರಥಮ್ ಅವರು ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹಳ ಆಕ್ಟಿವ್ ಆಗಿ ಇದ್ದಾರೆ. ಸಿನಿಮಾ ಇಂಡಸ್ಟ್ರಿ ಬಗ್ಗೆ ವಿಪರೀತ ಆಸಕ್ತಿ ಹೊಂದಿರುವ ಇವರು ಇಲ್ಲಿನ ಎಲ್ಲಾ ನಟರುಗಳ ವಿಚಾರಗಳನ್ನು ಕೂಡ ತಿಳಿದುಕೊಂಡಿರುತ್ತಾರೆ. ಹಾಗಾಗಿ ಯಾವುದಾದರೂ ವಿವಾದ ಆದ ತಕ್ಷಣ ಅದರ ಬಗ್ಗೆ ಮಾತಿಗೆ ಇಳಿಯುತ್ತಾರೆ.
ಆದರೆ ಈಗ ದರ್ಶನ್ ಅವರ ಮೇಲೆ ಆದ ಚಪ್ಪಲಿ ಎಸೆತದ ವಿಷಯದ ಕುರಿತು ಅವರು ಯಾವುದೇ ಪೋಸ್ಟ್ ಹಾಕಿಲ್ಲ. ಎಲ್ಲಾ ಸೆಲೆಬ್ರಿಟಿಗಳು ಕೂಡ ಐ ಸ್ಟಾಂಡ್ ವಿತ್ ದರ್ಶನ್ ( I stand with Darshan) ಎಂದು ತಮ್ಮ ನಿಲುವನ್ನು ತಿಳಿಸುತ್ತಿದ್ದರೂ ಪ್ರಥಮ ಅವರ ಕಡೆಯಿಂದ ಒಂದೇ ಒಂದು ಮಾತು ಕೂಡ ಬಂದಿಲ್ಲ. ಅದರ ಬಗ್ಗೆ ನಟಭಯಕರ (Nata Bhayankara) ಸಿನಿಮಾದ ಸಂದರ್ಶನದಲ್ಲಿ ಪ್ರಥಮ್ ಅವರನ್ನು ಪ್ರಶ್ನಿಸಲಾಗಿದೆ.
ಈ ಪ್ರಶ್ನೆಗೆ ಪ್ರಥಮ್ ಕೊಟ್ಟ ಸ್ಪಷ್ಟನೆ ಈ ರೀತಿ ಇತ್ತು ಐ ಸ್ಟಾಂಡ್ ವಿತ್ ದರ್ಶನ್ ಎಂದು ನಾನು ಯಾಕೆ ಹಾಕಿಲ್ಲ ಎಂದರೆ ಅದನ್ನು ತಮಾಷೆಯಾಗಿ ಹೇಳಬಹುದು. ನಾನು ನಿಲ್ಲಲು ಇಷ್ಟಪಡುವುದಿಲ್ಲ ಯಾಕೆಂದರೆ ಓಡಾಡಿ ಸುಸ್ತಾಗಿದೆ ಕಾಲು ನೋವು ಬರುತ್ತದೆ. ಅದಕ್ಕಾಗಿ ಐಸ್ ಸಿಟ್ ವಿತ್ ದರ್ಶನ್ ಅಷ್ಟೇ. ಆದರೆ ಸೀರಿಯಸ್ ಆಗಿ ಹೇಳುವುದಾದರೆ ಅಂದು ಆದ ಇನ್ಸಿಡೆಂಟ್ ಬಗ್ಗೆ ನಾನು ಕೂಡ ಕಡಾ ಖಂಡಿತವಾಗಿ ಖಂಡಿಸುತ್ತೇನೆ.
ಯಾವೊಬ್ಬ ಕಲಾವಿದನಿಗೂ ಕೂಡ ಈ ರೀತಿ ಮಾಡಬಾರದು. ದರ್ಶನ್ ಅವರ ಕುಟುಂಬವೇ ಕಳೆದ 50 ವರ್ಷಗಳಿಂದ ಕನ್ನಡಿಗನನ್ನು ಸಂತೋಷಪಡಿಸುವುದಕ್ಕಾಗಿ ಸಿನಿಮಾ ರಂಗದಲ್ಲಿ ಇದೆ. ಈ ರೀತಿ ಚಪ್ಪಲಿ ಎಸೆಯುವುದು ಜನಗಳಿಗೆ ಮೋಸ ಮಾಡುವವರು, ಕೊಲೆ ಮಾಡುವವರು, ಹೆಣ್ಣುಮಕ್ಕಳಿಗೆ ತೊಂದರೆ ಕೊಡುವವರು ಇಂಥವರಿಗೆ ಮಾತ್ರ. ಅಂಥ ತಪ್ಪೇನು ದರ್ಶನ್ ಅವರು ಮಾಡಿಲ್ಲವಲ್ಲ.
ದರ್ಶನ್ ಅವರ ತಪ್ಪು ಏನು ಎಂದರೆ ಅವರು ಇದ್ದದ್ದನ್ನು ಇದ್ದ ಹಾಗೆ ನೇರವಾಗಿ ಹೇಳಿಬಿಡುತ್ತಾರೆ. ಅವರಿಗೆ ಇಷ್ಟವಾಗದ ವಿಷಯವನ್ನು ನೇರವಾಗಿ ಹೇಳುತ್ತಾರೆ. ಅದು ಒಳ್ಳೆಯದೇ ಅಲ್ವಾ ಮನಸ್ಸಿನಲ್ಲಿ ಇಟ್ಟುಕೊಂಡು ಮೇಲ್ಗಡೆ ಒಳ್ಳೆಯವರಾಗಿ ತೋರಿಸಿಕೊಳ್ಳುವವರ ನಡುವೆ ದರ್ಶನ್ ಬೇರೆ ರೀತಿ ಅನಿಸುತ್ತಿರಬಹುದು. ಅದು ಬಿಟ್ಟರೆ ದರ್ಶನ್ ಅವರಲ್ಲಿ ಒಂದೇ ಒಂದು ಕೆಟ್ಟ ಗುಣ ಕೂಡ ಇಲ್ಲ.
ಮತ್ತೊಂದು ವಿಷಯವೇನೆಂದರೆ ಎಲ್ಲರೂ ದರ್ಶನ್ ಪರವಾಗಿ ನಿಲ್ಲುತ್ತೇನೆ ಎಂದು ಹೇಳುತ್ತಿದ್ದಾರಲ್ಲ ಹಾಗಾದರೆ ಪುನೀತ್ (Puneeth) ಅವರ ತಪ್ಪು ಈ ವಿಷಯದಲ್ಲಿ ಏನಿದೆ. ಸುಖಾ ಸುಮ್ಮನೆ ಎಲ್ಲರೂ ಅಣ್ಣಾವ್ರ ಕುಟುಂಬದ ಹೆಸರು ಹಾಗೂ ಪುನೀತ್ ಅವರ ಹೆಸರನ್ನು ತೆಗೆಯುತ್ತಿದ್ದಾರೆ. ಆ ಮನುಷ್ಯ ಸತ್ತು ಒಂದು ಕಾಲು ವರ್ಷ ಆಗಿದೆ ಒಂದು ಕಾಲು ವರ್ಷದಿಂದ ಅವರೇನಾದರೂ ಬಂದು ಈ ರೀತಿ ಮಾಡಿ ಎಂದು ಹೇಳಿ ಹೋಗಿದ್ದರಾ.?
ನಾವೇನು ಮಾಡುತ್ತೇವೆ ಅಂದರೆ ಯಾವ ವಿಷಯಕ್ಕೆ ಪ್ರಚಾರ ಹೆಚ್ಚಿಸಿ ಸಿಗುತ್ತದೆ ಅದರ ಹಿಂದೆ ಹೋಗುತ್ತಿದ್ದೇವೆ ಹೊರತು ಅದರ ಕುರಿತು ಯೋಚಿಸುತ್ತಿಲ್ಲ. ಕಳೆದ ಒಂದು ಕಾಲು ವರ್ಷದಿಂದ ಅಣ್ಣಾವ್ರ ಕುಟುಂಬಕ್ಕೆ ಎಷ್ಟು ನೋವಿದೆ ಎಷ್ಟು ಅವಮಾನಗಳನ್ನು ಅವರು ಪಟ್ಟಿದ್ದಾರೆ. ಯಾರ ಫ್ಯಾನ್ ಆದರೂ ಆಗಿ ಆದರೆ ಇನ್ನೊಬ್ಬರ ಫ್ಯಾನ್ ಅನ್ನು ಕೂಡ ಗೌರವಿಸಿ. ನಿಮ್ಮ ಸ್ಟಾರ್ ಅನ್ನು ಎಷ್ಟಾದರೂ ಮೆರೆಯಿಸಿ ಆದರೆ ಮತ್ತೊಬ್ಬ ಸ್ಟಾರ್ ಪಕ್ಕದಲ್ಲಿದ್ದರೆ ಅವರಿಗೂ ಪ್ರೀತಿ ಕೊಡುವುದನ್ನು ಕಲಿಯಿರಿ, ಇಷ್ಟಾದರೆ ಸಾಕು.
ವ್ಯಕ್ತಿ ಇಲ್ಲ ಅಂದ ಮಾತ್ರಕ್ಕೆ ಅವರ ಸಾಧನೆ ಇಲ್ಲ ಎಂದು ಅಲ್ಲ ಅವರು ಮಾಡಿದ್ದು ಎಲ್ಲ ಮರೆತು ಹೋಗುವುದಿಲ್ಲ. ನಮ್ಮಲ್ಲಿ ಈ ರೀತಿ ಬೆಳವಣಿಗೆ ಆಗುತ್ತಿರುವುದು ನಿಜಕ್ಕೂ ಬಹಳ ಬೇಸರ ತರುತ್ತಿದೆ ಎಂದಿದ್ದಾರೆ. ಪ್ರಥಮ್ ಅವರ ಈ ಸ್ಟೆಟ್ಮೆಂಟ್ ಗೆ ನಿಮ್ಮ ಪ್ರತಿಕ್ರಿಯೆ ಏನು ? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.