ಕರ್ನಾಟಕದಲ್ಲಿ ಒಳ್ಳೆ ಹುಡುಗ ಪ್ರಥಮ್ (Olle huduga Pratham) ಎಂದು ಅವರೇ ಟೈಟಲ್ ಇಟ್ಟುಕೊಂಡಿರುವ ನಟ ಪ್ರಥಮ್ ಅವರು ಬಿಗ್ ಬಾಸ್ (Bigboss) ಕಾರ್ಯಕ್ರಮದ ಮೂಲಕ ಕನ್ನಡಿಗರಿಗೆ ಪರಿಚಿತವಾದರು. ಬಿಗ್ ಬಾಸ್ ಸೀಸನ್ 4ರ ಕಾಮನ್ ಮ್ಯಾನ್ ಕಂಟೆಸ್ಟೆಂಟ್ ಆಗಿ ಮನೆ ಒಳಗೆ ಹೋಗಿದ್ದ ಬಿಗ್ ಬಾಸ್ ಅದುವರೆಗಿನ ಸೀಸನ್ ಗಳ ಮೊದಮೊದಲ ಕಾಮನ್ ಮ್ಯಾನ್ ಆಗಿದ್ದರು ಮತ್ತು ಆ ಬಾರಿಯ ವಿನ್ನರ್ ಕೂಡ ಆದರು. ಕಾಮನ್ ಮ್ಯಾನ್ ಆಗಿ ಎಂಟ್ರಿ ಕೊಟ್ಟಿದ್ದ ಪ್ರಥಮ್ ಈಗ ಫೇಮಸ್ ಸೆಲೆಬ್ರಿಟಿ ಆಗಿಬಿಟ್ಟಿದ್ದಾರೆ.
ಬಿಗ್ ಬಾಸ್ ಇಂದ ಹೊರಬಂದ ಮೇಲೆ 2018 ರಲ್ಲಿ ಎಂಎಲ್ಎ (MLA) ಅನ್ನುವ ಸಿನಿಮಾ ಮೂಲಕ ನಾಯಕನಾಗಿ (Hero) ಕಾಣಿಸಿಕೊಂಡ ಇವರು ಅದೇ ವರ್ಷ ಬಂದ ದೇವರಂತ ಮನುಷ್ಯ ಎನ್ನುವ ಸಿನಿಮಾದಲ್ಲೂ ಕೂಡ ಹೀರೋ ಆಗಿ ಅಭಿನಯಿಸಿದರು. ನಂತರ ಬಂದ ರಾಜು ಕನ್ನಡ ಮೀಡಿಯಂ ಎನ್ನುವ ಸಿನಿಮಾದಲ್ಲಿ ಮುಖ್ಯಪಾತ್ರ ಒಂದನ್ನು ನಿರ್ವಹಿಸಿದ ಇವರು ಬಹಳ ಬ್ರೇಕ್ ತೆಗೆದುಕೊಂಡು ಈಗ ನಟಭಯಂಕರ (Nata Bhayankara) ಸಿನಿಮಾ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.
ಸದ್ಯಕ್ಕೀಗ ಮೀಡಿಯ ಹಾಗೂ ಸೋಶಿಯಲ್ ಮೀಡಿಯಾ ಮೂಲಕ ತನ್ನ ನಟಭಯಂಕರ ಸಿನಿಮಾದ ಪ್ರಚಾರ ಮಾಡುತ್ತಿರುವ ಪ್ರಥಮ್ ಅವರು ಸಿನಿಮಾ ರಿಲೀಸ್ ಆಗುವ ಮುನ್ನ ಕೃಷಿ ಮೇಳ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕನ್ನಡ ಸಿನಿಮಾ ಇಂಡಸ್ಟ್ರಿ ಕುರಿತು ಅಪಾರ ಮಾಹಿತಿ ಸಂಗ್ರಹ ಮಾಡಿ ಇಟ್ಟುಕೊಂಡಿರುವ ಪ್ರಥಮ್ ಅವರು ಪ್ರತಿಯೊಬ್ಬ ನಟನ ಪ್ರತಿಯೊಂದು ಸಿನಿಮಾ ವಿಚಾರವನ್ನು ಕೂಡ ಅದು ರಿಲೀಸ್ ಆದ ದಿನದಿಂದ ಹಿಡಿದು ಅದಕ್ಕೆ ಆ ದಿನ ಇದ್ದ ಟಿಕೆಟ್ ದರದ ಸಮೇತವಾಗಿ ಹೇಳುವಷ್ಟು ಆ ವಿಚಾರಗಳಲ್ಲಿ ಆಸಕ್ತಿ ಹೊಂದಿದ್ದಾರೆ.
ಇತ್ತೀಚೆಗೆ ಅವರು ಶಿವಣ್ಣನ (Actor Shivanna) ಕುರಿತು ವೇದಿಕೆ ಮೇಲೆ ಮಾತನಾಡಿರುವ ಆ ವಿಡಿಯೋ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅವರ ಮಾತಿನಲ್ಲಿ ಶಿವಣ್ಣನವರ ಎರಡು ದಾಖಲೆಗಳ (two records) ಕುರಿತು ಮಾತನಾಡಿದ್ದಾರೆ. ವೇದಿಕೆ ಮೇಲೆ ಶಿವರಾಜ್ ಕುಮಾರ್ ಅವರನ್ನು ನೆನೆದ ಮಾತಿನ ಮಲ್ಲ ಪ್ರಥಮ್ ಅವರು ಇನ್ನು ಮುಂದೆ ಆದರೂ ಸರಿ ಇನ್ನೆಷ್ಟು ವರ್ಷಗಳಾದರೂ ಸರಿ ಶಿವಣ್ಣನ ಈ ಎರಡು ದಾಖಲೆಗಳನ್ನು ಯಾರಿಂದಲೂ ಸಹ ಮುರಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಪ್ರಥಮ್ ಅವರು ಹೇಳಿರುವ ಆ ಎರಡು ದಾಖಲೆಗಳು ಯಾವುದು ಎಂದರೆ ಶಿವಣ್ಣ ಅವರು ಒಬ್ಬ ಸ್ಟಾರ್ ನಟನ ಪುತ್ರನಾಗಿ ಬರೋಬ್ಬರಿ 151 ಸಿನಿಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಇದಕ್ಕೆ ಬಾಲಿವುಡ್ ನ ಅಮಿತಾ ಬಚ್ಚನ್ ಅವರ ಪುತ್ರ ಅಭಿಷೇಕ್ ಬಚ್ಚನ್ ಮತ್ತು ಮಲಯಾಳಂ ಮುಮ್ಮುಟ್ಟಿ ಪುತ್ರ ದುಲ್ಕರ್ ಸಲ್ಮಾನ್ ಅವರನ್ನು ಉದಾಹರಣೆಯಾಗಿ ಕೊಟ್ಟ ಪ್ರಥಮ್ ಅವರು ಶಿವಣ್ಣ ಒಬ್ಬರೇ ಮೆರುನಟನ ಮಗನಾಗಿ ಈ ರೀತಿ ಇಷ್ಟು ಸಿನಿಮಾಗಳ ಅವಕಾಶ ಪಡೆದಿರುವುದು ಎಂದಿದ್ದಾರೆ.
ಜೊತೆಗೆ ಶಿವಣ್ಣನ ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಏನೆಂದರೆ ಅವರ ತಂದೆ ಡಾಕ್ಟರ್ ರಾಜಕುಮಾರ್ ಕಾಲದಲ್ಲಿ ವಿಷ್ಣುವರ್ಧನ್, ಅಂಬರೀಶ್ ಅವರ ಕಾಲದಲ್ಲಿ ರವಿಚಂದ್ರನ್ ಅವರ ಕಾಲದಲ್ಲಿ ಉಪೇಂದ್ರ, ಸುದೀಪ್, ದರ್ಶನ್ ಮತ್ತು ವಿಜಯ ರಾಘವೇಂದ್ರ ರಂತಹ ಯುವ ನಟರ ಕಾಲದಲ್ಲಿ ಮತ್ತು ಯಶ್ ಹೀರೋ ಆಗಿ ಮಿಂಚುತ್ತಿರುವ ಈ ಕಾಲದಲ್ಲಿ ಕೂಡ ಹೀರೋ ಆಗಿಯೇ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಈ ಒಂದು ದಾಖಲೆಯನ್ನು ಯಾರಿಂದಲೂ ಸಹ ಮುರಿಯಲು ಸಾಧ್ಯವಿಲ್ಲ ಎಂದು ಹೇಳಿ ಶಿವಣ್ಣನ ಬಗ್ಗೆ ಹಾಡಿ ಹೊಗಳಿದ್ದಾರೆ.