Home Entertainment ಸ್ಟೇಜ್ ಮೇಲೆ ರೋಮ್ಯಾಂಟಿಕ್ ಹಾಡಿಗೆ ಮೈಚಳಿ ಬಿಟ್ಟು ಹೆಜ್ಜೆ ಹಾಕಿದ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಪ್ರಿಯಾಂಕಾ ಉಪೇಂದ್ರ.

ಸ್ಟೇಜ್ ಮೇಲೆ ರೋಮ್ಯಾಂಟಿಕ್ ಹಾಡಿಗೆ ಮೈಚಳಿ ಬಿಟ್ಟು ಹೆಜ್ಜೆ ಹಾಕಿದ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಪ್ರಿಯಾಂಕಾ ಉಪೇಂದ್ರ.

0
ಸ್ಟೇಜ್ ಮೇಲೆ ರೋಮ್ಯಾಂಟಿಕ್ ಹಾಡಿಗೆ ಮೈಚಳಿ ಬಿಟ್ಟು ಹೆಜ್ಜೆ ಹಾಕಿದ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಪ್ರಿಯಾಂಕಾ ಉಪೇಂದ್ರ.

ಪ್ರಿಯಾಂಕ ಉಪೇಂದ್ರ ಅವರು ಕನ್ನಡ ಭಾಷೆ ಅಲ್ಲದೆ ತಮಿಳು ತೆಲುಗು ಮಲಯಾಳಂ ಬೆಂಗಾಳಿ ಒರಿಯಾ ಹಾಗೂ ಹಿಂದಿ ಸಿನಿಮಾಗಳಲ್ಲೂ ಕೂಡ ಬಹು ಬೇಡಿಕೆ ಇರುವ ನಟಿ. ಕನ್ನಡದಲ್ಲಿ ಎಚ್ ಟು ಓ ಎನ್ನುವ ಸಿನಿಮಾ ಮೂಲಕ ಚಲನಚಿತ್ರ ರಂಗಕ್ಕೆ ಕಾಲಿಟ್ಟ ಪ್ರಿಯಾಂಕ ಉಪೇಂದ್ರ ಅವರು ಬಹಳ ಕಡಿಮೆ ವಯಸ್ಸಿಗೆ ಎಲ್ಲಾ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಳ್ಳುವ ಅದೃಷ್ಟ ಪಡೆದು ಕೊಂಡರು. ಉಪೇಂದ್ರ ಅವರ ಜೊತೆ ಎಚ್‌ಟುಓ ಮತ್ತು ಶ್ರೀಮತಿ ಎನ್ನುವ ಎರಡು ಸಿನಿಮಾಗಳು ಹಾಗೂ ರವಿಚಂದ್ರನ್ ಅವರ ಜೊತೆಯಲ್ಲಿ ಮಲ್ಲ ಮತ್ತು ಕ್ರೇಜಿಸ್ಟಾರ್ ಎನ್ನುವ ಎರಡು ಸಿನಿಮಾಗಳು ಹಾಗೂ ವಿಷ್ಣು ವರ್ಧನ್ ಅವರ ಜೊತೆಯಲ್ಲಿ ಕೋಟಿಗೊಬ್ಬ ಎನ್ನುವ ಸಿನಿಮಾದಲ್ಲಿ ನಾಯಕಿಯಾಗಿ ಮತ್ತು ಶಿವರಾಜ್ ಕುಮಾರ್ ಅವರ ಜೊತೆಯಲ್ಲಿ ರೌಡಿ ಅಳಿಯ ಎನ್ನುವ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು.

ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಕಳೆದ ಎರಡು ದಶಕಗಳಿಂದ ಇದುವರೆಗೆ ಕನ್ನಡದಲ್ಲಿ ಸುಮಾರು 50ರ ಹತ್ತಿರದ ಸಿನಿಮಾಗಳಲ್ಲಿ ನಟಿಸಿರುವ ಈ ನಟಿ ಪ್ರತಿಯೊಂದು ಸಿನಿಮಾದಲ್ಲೂ ಕೂಡ ಅವರ ಪಾತ್ರಕ್ಕೆ ಹೆಚ್ಚು ಗಮನ ಕೊಟ್ಟು ತಮಗೆ ಪ್ರಾಮುಖ್ಯತೆ ಇರುವ ಪಾತ್ರಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಹೆಚ್ ಟು ಒ ಸಿನಿಮಾದಲ್ಲಿ ಕನ್ನಡದಲ್ಲಿ ಹೊಸ ವಿಭಿನ್ನ ಪ್ರಯತ್ನ ಆಗಿದ್ದರಿಂದ ತಾವು ಕೂಡ ಕನ್ನಡಕ್ಕೆ ಹೊಸಬರು ಎಂದು ಆ ಸಮಯದಲ್ಲಿ ತುಂಬಾ ಭಯಪಟ್ಟಿದ್ದರಂತೆ ಇವರು, ಆದರೆ ಉಪೇಂದ್ರ ಅವರ ಸ್ನೇಹದಿಂದ ಅವರಿಬ್ಬರ ಕಾಂಬಿನೇಷನ್ ಅಷ್ಟು ಚೆನ್ನಾಗಿ ಮೂಡಿಬರಲು ಕಾರಣವಾಯಿತಂತೆ. ಆ ಸಿನಿಮಾದ ಮೂಲಕ ಸ್ನೇಹವಾದ ಇವರಿಬ್ಬರ ಬಾಂಧವ್ಯ ನಂತರ ಪ್ರೀತಿಗೆ ತಿರುಗಿ ಇಬ್ಬರೂ ವಿವಾಹ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಈ ಜೋಡಿ ಆಯುಷ್ ಉಪೇಂದ್ರ ಮತ್ತು ಐಶ್ವರ್ಯ ಉಪೇಂದ್ರ ಎನ್ನುವ ಇಬ್ಬರು ಮಕ್ಕಳನ್ನು ಪಡೆದು ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ.

https://youtu.be/-WrWMizrB20

ಮದುವೆಯಾದ ಬಳಿಕ ಮಕ್ಕಳ ಸಲುವಾಗಿ ಸಿನಿಮಾದಿಂದ ಸ್ವಲ್ಪ ಬ್ರೇಕ್ ಪಡೆದುಕೊಂಡ ನಟಿ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಇದುವರೆಗೆ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದ ಈ ನಟಿ ಮದುವೆ ನಂತರ ಪೋಷಕ ಪಾತ್ರಗಳಿಗೆ ಮಾತ್ರ ಸೀಮಿತವಾಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಮತ್ತೆ ಸಿನಿಮಾವನ್ನು ಮಾಡಿದರು ಕೂಡ ಸಿನಿಮಾ ನಾಯಕಿ ಆಗಿ ಅಥವಾ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತೇನೆ ಎಂದು ನಿರ್ಧಾರ ಮಾಡಿರುವ ಈ ನಟಿ ಮದುವೆ ನಂತರ ಮಾಡಿರುವ ಎಲ್ಲಾ ಸಿನಿಮಾಗಳು ಕೂಡ ಈ ರೀತಿಯ ಪಾತ್ರೆಗಳೇ ಎನ್ನುವುದು ತುಂಬಾ ವಿಶೇಷ. ಸಿನೆಮಾದಲ್ಲಿ ಸಕ್ಸಸ್ ಕಂಡಿರುವ ಪ್ರಿಯಾಂಕಾ ಉಪೇಂದ್ರ ಅವರು ಕೆಲವೊಮ್ಮೆ ವಿವಾದವನ್ನು ಕೂಡ ಮಾಡಿಕೊಂಡಿದ್ದಾರೆ. ಮಲ್ಲ ಸಿನಿಮಾದ ಕೆಲವು ಸನ್ನಿವೇಶಗಳ ವಿಚಾರದಿಂದ ಆಗೊಮ್ಮೆ ದೊಡ್ಡ ವಿವಾದ ಒಂದು ಉಂಟಾಗಿತ್ತು. ಆ ವಿಚಾರದಿಂದ ಉಪೇಂದ್ರ ಹಾಗೂ ಪಿಯಾಂಕ ನಡುವೆ ಬಿರುಕು ಕೂಡ ಏರ್ಪಟ್ಟಿದ್ದೆ ಎಂದು ಮಾತುಗಳು ಎದ್ದಿದ್ದವು.

ಆದರೆ ಕಾಲವೇ ಅದಕ್ಕೆಲ್ಲ ಉತ್ತರ ಕೊಟ್ಟಿದೆ ಮತ್ತೊಂದು ವಿಶೇಷತೆ ಏನೆಂದರೆ ಅವರು ಕಂಬ್ಯಾಕ್ ಮಾಡುತ್ತಿರುವ ಸಿನಿಮಾ ಕೂಡ ಕ್ರೇಜಿಸ್ಟಾರ್ ಅವರ ಜೊತೆಗೆ. ಇದಕ್ಕೆ ಉಪೇಂದ್ರ ಅವರ ಒಪ್ಪಿಗೆ ಕೂಡ ಇದೆಯಂತೆ. ಕ್ರೇಜಿಸ್ಟಾರ್ ಇನ್ನು ಸಿನಿಮಾದ ಮೂಲಕ ಮತ್ತೆ ಈ ಜೋಡಿ ಮೋಡಿ ಮಾಡಲಿದೆಯಂತೆ. ಈಗ ಆ ಸಿನಿಮಾ ಕೂಡ ತೆರೆಕಂಡಿದ್ದು ಆಯ್ತು. ಇದಾದ ಬಳಿಕ ಇತ್ತೀಚಿಗೆ ಡ್ರಾಮಾ ಜೂನಿಯರ್ಸ್ ಎನ್ನುವ ಕಿರುತೆರೆ ಕಾರ್ಯಕ್ರಮದ ವೇದಿಕೆಯಲ್ಲೂ ಕೂಡ ಪ್ರಿಯಾಂಕ ಉಪೇಂದ್ರ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಒಟ್ಟಿಗೆ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಇದಕ್ಕೆ ಸಂಬಂಧಪಟ್ಟ ಪ್ರೋಮೋಗಳು ಓಡಾಡುತ್ತಿದ್ದು ಯಾವ ಕಾರಣಕ್ಕಾಗಿ ಇವರಿಬ್ಬರು ಮತ್ತೆ ಒಟ್ಟಿಗೆ ಸೇರಿದ್ದಾರೆ ಎನ್ನುವುದು ಮಾತ್ರ ಇನ್ನು ತಿಳಿದಿಲ್ಲ ಅದಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಡ್ಯಾನ್ಸ್ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

LEAVE A REPLY

Please enter your comment!
Please enter your name here