ಆಸ್ತಿ ಖರೀದಿ ಹಾಗೂ ಮಾರಾಟದ ವಿಚಾರವಾಗಿ ಅನೇಕರಿಗೆ ಇನ್ನು ಸರಿಯಾದ ಮಾಹಿತಿಯೇ ತಿಳಿದಿಲ್ಲ. ಹಣ ಕೊಟ್ಟು ನಂತರ ಮೋಸ ಹೋಗಿರುವ ಅನೇಕ ಪ್ರಕರಣಗಳನ್ನು ನಾವು ಕೇಳಿದ್ದೇವೆ. ಹಾಗಾಗಿ ಆಸ್ತಿ ಖರೀದಿ ವಿಚಾರದಲ್ಲಿ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ಒಂದು ಆಸ್ತಿಯ ಸಂಪೂರ್ಣ ಹಕ್ಕು ವರ್ಗಾವಣೆ ಖರೀದಿಸಿದಾತನಿಗೆ ಆಗಲು ಏನೆಲ್ಲಾ ದಾಖಲೆಗಳನ್ನು ಬೇಕು, ಅದಕ್ಕಾಗಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಯಾವಾಗ ಸಂಪೂರ್ಣವಾಗಿ ಆಸ್ತಿ ಹಕ್ಕು ಖರೀದಿಸಿದವರ ಹೆಸರಿಗೆ ಬರುತ್ತದೆ ಎನ್ನುವ ಮಾಹಿತಿಯನ್ನು ಸರಿಯಾಗಿ ತಿಳಿದುಕೊಂಡಿರಬೇಕು.
ಇಲ್ಲವಾದಲ್ಲಿ ಭವಿಷ್ಯದಲ್ಲಿ ಅನೇಕ ರೀತಿಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಬಹುತೇಕ ಪ್ರಕರಣಗಳಲ್ಲಿ ಆಸ್ತಿಯನ್ನು ಮಾರಾಟ ಮಾಡುವುದಾಗಿ ಹೇಳಿ ಹಣ ತೆಗೆದುಕೊಂಡ ವ್ಯಕ್ತಿಯೇ ಅಥವಾ ಅವರ ಕುಟುಂಬಸ್ಥರುಗಳೇ ಮತ್ತೆ ಬಂದು ಆಸ್ತಿ ತನ್ನ ಹೆಸರಿನಲ್ಲಿ ಇದೆ ಎಂದು ಕಿರಿಕ್ ಮಾಡುವ ಸಂದರ್ಭಗಳು ಕೂಡ ಇರುತ್ತವೆ.
ಹಾಗಾಗಿ ಯಾವುದೇ ಆಸ್ತಿ ಖರೀದಿಸುವ ಮುನ್ನ ಆ ಆಸ್ತಿ ಮಾರುತ್ತಿರುವ ವ್ಯಕ್ತಿಗೆ ಯಾವ ಮೂಲದಿಂದ ಆಸ್ತಿ ಬಂತು, ಆಸ್ತಿಯ ಕುರಿತಾಗಿ ಇರುವ ದಾಖಲೆಗಳು ಸರಿಯಾಗಿ ಇದೆಯೇ, ಆ ಇಲ್ಲ ದಾಖಲೆಗಳು ಈಗ ಮಾರಾಟ ಮಾಡುತ್ತಿರುವ ವ್ಯಕ್ತಿಯ ಹೆಸರಿನೊಂದಿಗೆ ಇದೆಯೇ ಎನ್ನುವುದನ್ನು ಸರಿಯಾಗಿ ಪರಿಶೀಲಿಸಿ ತಿಳಿದುಕೊಳ್ಳಬೇಕು. ಸೈಟ್ ಅಥವಾ ಜಮೀನಿನ ಸಂಖ್ಯೆ, ವಿಸ್ತೀರ್ಣ ಇತ್ಯಾದಿ ವಿಚಾರಗಳ ಬಗ್ಗೆ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು.
ನೀವು ಹಣ ಕೊಟ್ಟು ಆ ವ್ಯಕ್ತಿಯಿಂದ ಆಸ್ತಿ ಖರೀದಿಸಿದ ಮೇಲೆ ನೋಂದಣಿಗಾಗಿ ಅರ್ಜಿ ಸಲ್ಲಿಸುತ್ತೀರಿ ಮತ್ತು ನಿಮ್ಮ ಹೆಸರಿಗೆ ಆಸ್ತಿಯನ್ನು ವರ್ಗಾವಣೆ ಮಾಡಿಕೊಂಡು ನಿಮ್ಮ ಹೆಸರಿನಲ್ಲಿ ಇದೆ ಎಂದು ಸಮಾಧಾನ ಪಟ್ಟಿಕೊಳ್ಳುತ್ತೀರಿ. ಆದರೆ ಅಲ್ಲಿಗೆ ಆ ಪ್ರಕ್ರಿಯೆ ಮುಗಿಯುವುದಿಲ್ಲ. ಅಷ್ಟಕ್ಕೆ ಸಂಪೂರ್ಣವಾಗಿ ಆಸ್ತಿ ನಿಮ್ಮ ಹೆಸರಿಗೆ ಬಂದಿದೆ ಎಂದು ಅರ್ಥ ಅಲ್ಲ.
ಆಸ್ತಿ ಮಾರುವಾತನ ದಾಖಲೆಗಳ ಜೊತೆಗೆ ಅದಕ್ಕೆ ಸಂಬಂಧಪಟ್ಟ ವಾರಸುದಾರರುಗಳ ಸಮ್ಮುಖದಲ್ಲಿ ಮತ್ತು ಅವರುಗಳ ಸಾಕ್ಷಿಯ ಎದುರು ರಿಜಿಸ್ಟರ್ ಆಫೀಸ್ ಅಲ್ಲಿ ನಿಮ್ಮ ಹೆಸರಿಗೆ ಆಸ್ತಿ ರಿಜಿಸ್ಟರ್ ಆಗಬೇಕು ನಂತರವೂ ಕೂಡ ನಿಮ್ಮಹೆಸರಿಗೆ ಆಸ್ತಿ ರಿಜಿಸ್ಟರ್ ಆಗಿದೆಯೇ ಎನ್ನುವುದನ್ನು ಪರಿಶೀಲಿಸಿಕೊಳ್ಳಬೇಕು. ಈ ರೀತಿ ಆಸ್ತಿ ನಿಮ್ಮ ಹೆಸರಿಗೆ ವರ್ಗಾವಣೆ ಆಗುವ ಪ್ರಕ್ರಿಯೆ ಜೊತೆಗೆ ಮಾರುವ ವ್ಯಕ್ತಿ ಕಡೆಯಿಂದ ಸೇಲ್ ಡೀಡ್ ಕೂಡ ಮಾಡಿಸಿಕೊಳ್ಳಬೇಕು.
ಈ ರೀತಿ ಆದಾಗ ಮಾತ್ರ ಆಸ್ತಿ ನ್ಯಾಯ ಬದ್ಧವಾಗಿ, ಕಾನೂನು ರೀತಿಯಾಗಿ ನಿಮ್ಮ ಹೆಸರಿಗೆ ಬಂದಿದೆ ಎಂದು ಅರ್ಥ. ಈ ರೀತಿ ಮಾಡಲು ನಿಮ್ಮ ಆಸ್ತಿಗೆ ಸಂಬಂಧಪಟ್ಟ ದಾಖಲೆಗಳನ್ನು ತೆಗೆದುಕೊಂಡು ನೀವು ತಹಶಿಲ್ದಾರ್ ಕಛೇರಿ, ನೋಂದಣಾಧಿಕಾರಿ ಕಛೇರಿ ಇವುಗಳಿಗೆ ಭೇಟಿ ಕೊಟ್ಟು ಸರಿಯಾಗಿ ದಾಖಲೆ ಪತ್ರಗಳನ್ನು ಮಾಡಿಸಬೇಕು.
ಈ ರೀತಿ ಸರಿಯಾದ ಕ್ರಮದಲ್ಲಿ ಆಸ್ತಿಯನ್ನು ಖರೀದಿಸಿದಾಗ ಮಾತ್ರ ಭವಿಷ್ಯದಲ್ಲಿ ನಿಮಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಕೇವಲ ಪತ್ರದಲ್ಲಿ ನಿಮ್ಮ ಹೆಸರು ಇದೆ ಎನ್ನುವ ಮಾತ್ರಕ್ಕೆ ಯಾವುದೇ ಕಾರಣಕ್ಕೂ ಆಸ್ತಿ ನಿಮ್ಮ ಹೆಸರಿನಲ್ಲಿ ಇದೆ ಎಂದು ಭಾವಿಸಬೇಡಿ. ನಂತರದ ರಿಜಿಸ್ಟರ್ ಪ್ರಕ್ರಿಯೆಯನ್ನು ತಪ್ಪದೆ ಮಾಡಿಸಿ ಮತ್ತು ಮುಂದಿನ ಪ್ರಕ್ರಿಯೆಗಳನ್ನು ಕೂಡ ತಪ್ಪದೇ ಪಾಲಿಸಿ. ಯಾವುದೇ ಗೊಂದಲಗಳು ಇದ್ದರೂ ಕೂಡ ಅನುಭವಸ್ಥರ ಬಳಿ ಕೇಳಿ ಸಲಹೆ ಪಡೆಯಿರಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರ ಜೊತೆಗೂ ಕೂಡ ಹಂಚಿಕೊಳ್ಳಿ.