Thursday, April 24, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಸಾನ್ಯಾ ಅಯ್ಯರ್ ಅವರ ಈ ವಿಡಿಯೋ ನೋಡಿದರೆ ನಿಜಕ್ಕೂ ನಿಬ್ಬೆರಗಾಗಿ ಹೋಗುತ್ತೀರಾ.

ಸಾನ್ಯಾ ಅಯ್ಯರ್ ಅವರ ಈ ವಿಡಿಯೋ ನೋಡಿದರೆ ನಿಜಕ್ಕೂ ನಿಬ್ಬೆರಗಾಗಿ ಹೋಗುತ್ತೀರಾ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಪುಟ್ಟಗೌರಿ ಎಂಬ ಧಾರಾವಾಹಿಯಲ್ಲಿ ಬಾಲ ನಟಿಯಾಗಿ ಅಭಿನಯಿಸಿದಂತಹ ನಟಿ ಸಾನಿಯಾ ಅಯ್ಯರ್ ಅವರು ಸದ್ಯಕ್ಕೆ ಓಟಿಟಿಯಲ್ಲಿ ಪ್ರಾರಂಭವಾಗಿರುವ ಮಿನಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕಂಟೆಸ್ಟೆಂಟ್ ಆಗಿ ಕಾಲಿಟ್ಟಿರುವ ವಿಚಾರ ನಿಮ್ಮೆಲ್ಲರಿಗೂ ಕೂಡ ತಿಳಿದೇ ಇದೆ. ಬಿಗ್ ಬಾಸ್ ನಲ್ಲಿ ಸ್ಪರ್ಧಿಸುತ್ತಿರುವ ಸಾನ್ಯಾ ಅವರನ್ನು ನೋಡಿದರೆ ನಿಜಕ್ಕೂ ಕೂಡ ನಮಗೆ ಆಶ್ಚರ್ಯ ಎನಿಸುತ್ತದೆ. ಏಕೆಂದರೆ ಕಳೆದ ನಾಲ್ಕೈದು ವರ್ಷಗಳ ಹಿಂದೆ ಪುಟ್ಟಗೌರಿ ಧಾರವಾಹಿಯಲ್ಲಿ ಪುಟ್ಟ ಪುಟ್ಟ ಮಾತುಗಳನ್ನ ಆಡುತ್ತಾಳೆ ಜನ ಮನ್ನಣೆ ಗಳಿಸಿದಂತಹ ಹುಡುಗಿ ಇದು ಇಷ್ಟು ಬೇಗ ದೊಡ್ಡ ಹುಡುಗಿಯಾಗಿ ಬೆಳೆದಳ ಎಂಬ ಅನುಮಾನ ನಮ್ಮಲ್ಲಿ ಮೂಡುವುದು ಸಹಜ.

ಇನ್ನು ಪುಟ್ಟಗೌರಿ ಪಾತ್ರದಿಂದ ಹೊರಬಂದಂತಹ ಸಾನ್ಯಾ ಅಯ್ಯರ್ ಅವರು ಸಂಪೂರ್ಣವಾಗಿ ಕಿರುತೆರೆಯಿಂದ ದೂರ ಉಳಿದು ತಮ್ಮ ವಿದ್ಯಾಭ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಆದರೂ ಕೂಡ ನೃತ್ಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಕಾರಣ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರುತ್ತಿದ್ದಂತಹ ಡ್ಯಾನ್ಸಿಂಗ್ ಕಾರ್ಯಕ್ರಮ ಒಂದರಲ್ಲೂ ಕೂಡ ಭಾಗವಹಿಸಿದ್ದರು. ಇನ್ನು ಸಾನ್ಯಾ ಅವರ ತಾಯಿ ದೀಪಾ ಅವರೂ ಕೂಡ ಮೂತಲಹಃ ರಂಗಭೂಮಿ ಅವರು ಅಷ್ಟೇ ಅಲ್ಲದೆ ಹಲವಾರು ಸೀರಿಯಲ್ ನಲ್ಲೂ ಕೂಡ ನಟನೆ ಮಾಡಿದ್ದಾರೆ ಹಾಗಾಗಿ ಕಿರುತೆರೆ ನಂಟನ್ನು ಹೊಂದಿರುವಂತಹ ದೀಪಾ ಅವರಿಗೆ ತಮ್ಮ ಮಗಳನ್ನು ಕೂಡ ಕಿರುತೆರೆಯಲ್ಲಿ ನಾಯಕ ನಟಿಯನ್ನಾಗಿ ಮಾಡಬೇಕು ಎಂಬ ಆಸೆ ಇದೆ ಈ ಕಾರಣಕ್ಕಾಗಿಯೇ ಬಿಗ್ ಬಾಸ್ ಮನೆಗೆ ಈ ಬಾರಿ ಕಳುಹಿಸಿದ್ದಾರೆ.

ಬಿಗ್ ಬಾಸ್ ನಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಪೈಕಿ ಸಾನ್ಯಾ ರವರು ಕೂಡ ಒಬ್ಬರು ಏಕೆಂದರೆ 22 ವರ್ಷದ ಸಾನ್ಯಾ ತನ್ನ ವಯಸ್ಸಿಗೂ ಮೀರಿದ ವರ್ತನೆಯನ್ನು ಬಿಗ್ ಬಾಸ್ ಮನೆಯಲ್ಲಿ ತೋರಿಸುತ್ತಿದ್ದಾರೆ. ಏಕೆಂದರೆ ಆರ್ಯವರ್ಧನ್ ಗುರೂಜಿ ಅವರಿಗೆ ಐ ಲವ್ ಯು ಗುರೂಜಿ ಅವರೇ ನೀವು ನೋಡಲು ಬಹಳ ಮುದ್ದಾಗಿದ್ದೀರಾ ನನ್ನ ಜೀವನಕ್ಕೆ ಬರುತ್ತೀರಾ ಎಂದು ಕಾಲೆಳಿದಿದ್ದಾರೆ. ಅಷ್ಟೇ ಅಲ್ಲದೆ ನನ್ನನ್ನು ಮದುವೆಯಾಗಲು ನಿಮಗೆ ಒಪ್ಪಿಗೆ ಇದೆ ಎಂದು ಹೇಳಿದರೆ ಈ ಮಾತನ್ನು ಕೇಳಿ ಕಕ್ಕಾಬಿಕ್ಕಿ ಆದಂತಹ ಆರ್ಯವರ್ಧನ್ ಗುರೂಜಿ ಅವರು ನನಗೆ ಎರಡು ದಿನದ ಸಮಯ ಅವಕಾಶ ಕೊಡು ಅಂತ ಹೇಳಿ ಆ ವಿಚಾರದಿಂದ ತಪ್ಪಿಸಿಕೊಂಡು ಹೋಗುತ್ತಾರೆ ಇವೆಲ್ಲವನ್ನು ನೋಡಿದಂತಹ ಪ್ರಕ್ಷಕರಿಗೆ ನಿಜಕ್ಕೂ ಆಶ್ಚರ್ಯವಾಗುತ್ತದೆ.

ಏಕೆಂದರೆ ಬಿಗ್ ಬಾಸ್ ನಲ್ಲಿ ಫೇಮಸ್ ಆಗುವುದಕ್ಕಾಗಿ ಇಷ್ಟೆಲ್ಲ ಮಾತನಾಡಬೇಕಾ ಇಷ್ಟೆಲ್ಲಾ ಡ್ರಾಮಾ ಮಾಡಬೇಕಾ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರೆ‌. ಇದೆಲ್ಲ ಒಂದು ಕಡೆಯಾದರೆ ಸೋಶಿಯಲ್ ಮೀಡಿಯಾದಲ್ಲೂ ಕೂಡ ಸಿಕ್ಕಾಪಟ್ಟೆ ಆಕ್ಟಿವ್ ಇರುವಂತಹ ಸಾನ್ಯಾ ಆಗಾಗ ವಿಡಿಯೋ ಮಾಡುವುದರ ಮೂಲಕ ಅದನ್ನು ಅಪ್ಲೋಡ್ ಮಾಡುತ್ತಾರೆ‌‌‌. ಇದನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಇನ್ನು ಫ್ಯಾನ್ ಫಾಲ್ಲೋರ್ಸ್ ವಿಚಾರದಲ್ಲೂ ಕೂಡ ಸಾನ್ಯಾ ಅಯ್ಯರ್ ಯಾವ ನಟಿಗಿಂತ ಏನು ಕಡಿಮೆ ಇಲ್ಲ ಹೌದು ಲಕ್ಷಗಟ್ಟಲೆ ಫಾಲೋವರ್ಸ್ ಸಾನ್ಯಾ ಅವರನ್ನು ಫಾಲೋ ಮಾಡುತ್ತಿದ್ದಾರೆ. ಕಳೆದ ಬಾರಿ ಅಷ್ಟೇ ಸಾನ್ಯಾ ಅಯ್ಯರ್ ಅವರು ಅಪ್ಲೋಡ್ ಮಾಡಿದಂತಹ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಟ್ರೆಂಡ್ ಅನ್ನು ಸೃಷ್ಟಿ ಮಾಡಿದೆ ಅಂತಾನೆ ಹೇಳಬಹುದು. ಈ ವಿಡಿಯೋ ನೋಡಿದರೆ ನಿಜಕ್ಕೂ ಫಿದಾ ಆಗದವರೇ ಇಲ್ಲ ಅಂತ ಅನಿಸುತ್ತದೆ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.