ನಟಿ ಮೇಘನಾ ರಾಜ್ ಸದ್ಯಕ್ಕೆ ಕಿರುತರೆ ಮತ್ತು ಬೆಳಿತರೆ ಎರಡರಲ್ಲೂ ಕೂಡ ಸಕ್ರಿಯರಾಗಿದ್ದಾರೆ ತಮ್ಮ ಜೀವನದಲ್ಲಿ ನಡೆದಂತಹ ಎಲ್ಲಾ ಕಹಿ ಘಟನೆಗಳನ್ನು ಮರೆತು ಇದೀಗ ತಮ್ಮ ಮಗನಿಗಾಗಿ ಮತ್ತು ತಮ್ಮ ಮಗನ ಭವಿಷ್ಯಕ್ಕಾಗಿ ಎಲ್ಲಾ ಕೆಲಸಗಳಿಗೂ ಹಿಂದಿರುಗಿದ್ದಾರೆ. ಬೆಳ್ಳಿತರೆ ಹಾಗೂ ಕಿರುತೆರೆಯ ರಿಯಾಲಿಟಿ ಶೋ ಜಾಹೀರಾತು ಮಾಡೆಲಿಂಗ್ ಹೀಗೆ ಸಿನಿಮಾರಂಗಕ್ಕೆ ಹಾಗೂ ಕಲಾಕ್ಷೇತ್ರಕ್ಕೆ ಸಂಬಂಧಪಟ್ಟಂತಹ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಗೆ ತಮ್ಮ ಮಗನ ಲಾಲನೆ ಪಾಲನೆ ಪೋಷಣೆ ಹಾಗೂ ಆತನ ಭವಿಷ್ಯಕ್ಕೆ ಬೇಕಾದಂತಹ ಎಲ್ಲಾ ಸೌಕರ್ಯಗಳನ್ನು ಒದಗಿಸಿ ಕೊಡುತ್ತಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಸಿಂಗಲ್ ಪೇರೆಂಟ್ ಆಗಿದ್ದುಕೊಂಡು ರಾಯನ್ ರಾಜ್ ಸರ್ಜಾಗೆ ಯಾವುದೇ ರೀತಿಯಾದಂತಹ ಕೊರತೆ ಉಂಟಾಗದಂತೆ ನೋಡಿಕೊಳ್ಳುತ್ತಿದ್ದಾರೆ.
ಇನ್ನು ಮನೆಯಷ್ಟೇ ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಅವರು ಹೆಣ್ಣು ಮಗು ಒಂದಕ್ಕೆ ಜನ್ಮವನ್ನು ನೀಡಿದ್ದಾರೆ ತಮ್ಮ ಮೈದುನನ ಮಗನನ್ನು ನೋಡುವುದಕ್ಕೆ ರಾಯನ್ ರಾಜ್ ಹಾಗೂ ಮೇಘರಾ ರಾಜ್ ಅವರು ಆಸ್ಪತ್ರೆಗೆ ಆಗಮಿಸಿದ್ದಾರೆ. ಮಗುವನ್ನು ಎತ್ತಾಡಿಸಿ ಮುದ್ದಾಡಿದ್ದಾರೆ ಅಷ್ಟೇ ಅಲ್ಲದೆ ಈ ಮಗು ನನಗೆ ತುಂಬಾನೇ ಸ್ಪೆಷಲ್ ಅಂತ ಹೇಳಿದರೆ ಏಕೆಂದರೆ ನಮ್ಮ ಮನೆಯಲ್ಲಿ ಈಗಾಗಲೇ ರಾಯನ್ ಗಂಡು ಮಗ ಇದ್ದಾನೆ. ನಾಗನಗೂ ಹಾಗೂ ಚಿರುಗು ಹೆಣ್ಣು ಮಗುವಿನ ಬಗ್ಗೆ ಹೆಚ್ಚಿನ ಒಲವು ಇತ್ತು ಹಾಗಾಗಿ ಈಗ ಹೆಣ್ಣು ಮಗು ಜನಿಸಿರುವುದು ನಿಜಕ್ಕೂ ಸಂತಸ ತಂದಿದೆ. ಈ ಮುದ್ದಾದ ಹೆಣ್ಣು ಮಗುವಿನಿಂದ ನಮ್ಮ ಮನೆಗೆ ಮಹಾಲಕ್ಷ್ಮಿಯ ಬಂದಂತಾಗಿದೆ ನವರಾತ್ರಿ ಉತ್ಸವ ಪ್ರಾರಂಭವಾಗಿದ ನಂತರ ಮಗು ಹುಟ್ಟಿರುವುದು ನಿಜಕ್ಕೂ ಎಲ್ಲರ ಮುಖದಲ್ಲಿಯೂ ಕೂಡ ಮಂದಹಾಸ ಮೂಡಿಸಿದೆ ಎಂದು ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ್ದಾರೆ.
ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಮಾಧ್ಯಮದವರು ಚಿತ್ರರಂಗಕ್ಕೆ ನಿಮ್ಮ ಮಗನನ್ನು ಯಾವಾಗ ಕರೆದರು ಇದಕ್ಕೆ ಯಾವ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೀರ ಎಂಬ ಪ್ರಶ್ನೆ ಎಂದು ಕೇಳುತ್ತಾರೆ. ಈ ಪ್ರಶ್ನೆಗೆ ಉತ್ತರಿಸಿದಂತಹ ಮೇಘನಾ ರಾಜ್ ಅವರು ನನ್ನ ಮಗ ಚಿತ್ರರಂಗಕ್ಕೆ ಬರುವುದು ಖಚಿತ ಏಕೆಂದರೆ ರಾಜ್ ಕುಟುಂಬ ಹಾಗೂ ಸರ್ಜಾ ಕುಟುಂಬ ಎರಡು ಕೂಡ ಚಿತ್ರರಂಗಕ್ಕೆ ಸೇರಿದಂತಹ ವ್ಯಕ್ತಿಗಳಾಗಿದ್ದೇವೆ. ಕಲೆ ಎಂಬುದು ನಮ್ಮ ರಕ್ತದಲ್ಲಿಯೇ ಕರಗತವಾಗಿದೆ ಹಾಗಾಗಿ ನಮ್ಮ ಮಗನಿಗೂ ಕೂಡ ನಮ್ಮಲ್ಲಿ ಇರುವಂತಹ ಕಲೆಯೇ ಬಳುವಳಿಯಾಗಿ ಬಂದಿರುತ್ತದೆ ಎಂದು ನಾನು ನಂಬಿದ್ದೇನೆ. ಚಿತ್ರರಂಗಕ್ಕೆ ಭವಿಷ್ಯದಲ್ಲಿ ಬರುತ್ತಾನೆ ಆದರೆ ಇಂತಹದೇ ಸಮಯಕ್ಕೆ ಬರುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ ಅಂದಿದ್ದಾರೆ ಅಷ್ಟೇ ಅಲ್ಲದೆ.
ನಾನು ಸದ್ಯಕ್ಕೆ ರಾಯನ್ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಮನವನ್ನು ನೀಡುತ್ತೇನೆ ಮುಂದಿನ ದಿನದಲ್ಲಿ ಆತ ಯಾವ ಕ್ಷೇತ್ರ ಬೇಕಾದರೂ ಆಯ್ಕೆ ಮಾಡಿಕೊಳ್ಳಿ. ಆದರೆ ಆತನಿಗೆ ಸಿಗಬೇಕಾದಂತಹ ಮೌಲ್ಯಯುತ ಶಿಕ್ಷಣ ಮೊದಲು ದೊರೆಯಬೇಕು ಹಾಗಾಗಿ ಆತನ ಪದವಿ ಮುಗಿಯುವವರೆಗೂ ಯಾವುದೇ ಕಾರಣಕ್ಕೂ ನಟನ ಕ್ಷೇತ್ರಕ್ಕೆ ಕಾಲಿಡುವುದಕ್ಕೆ ನಾನು ಬಿಡುವುದಿಲ್ಲ. ಆತ ಸಂಪೂರ್ಣವಾಗಿ ವಿದ್ಯಾಭ್ಯಾಸ ಮುಗಿಸಬೇಕು ತದನಂತರ ಆತನೇ ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳುವಂತಹ ಶಕ್ತಿಯನ್ನು ಹೊಂದಿರಬೇಕು ತದನಂತರ ವಾಕ್ಯ ಆತ ಸಿನಿಮಾ ರಂಗಕ್ಕೆ ಬರುತ್ತಾನೆ ಎಂಬ ಹೇಳಿಕೆಯನ್ನು ನೀಡಿದ್ದಾರೆ.
ಈ ಹೇಳಿಕೆ ಹೊರ ಬರುತ್ತಿದ್ದ ಹಾಗೆ ಎಲ್ಲರೂ ಕೂಡ ಮೆಚ್ಚಿಗೆ ವ್ಯಕ್ತ ಪಡಿಸಿದ್ದಾರೆ ಏಕೆಂದರೆ ನಟ ನಟಿಯರ ಮಕ್ಕಳು ವಿದ್ಯಾಭ್ಯಾಸ ಮಾಡದೆ ಇದ್ದರೂ ಪರವಾಗಿಲ್ಲ ಅವರನ್ನು ಚಿತ್ರರಂಗಕ್ಕೆ ಕರೆತರಬೇಕು ಸ್ಟಾರ್ ನಟರಾಗಿ ಮೆರೆಸಬೇಕು ಎಂಬ ಕಲ್ಪನೆಯನ್ನು ಹೊಂದಿರುತ್ತಾರೆ. ಆದರೆ ನಟಿ ಮೇಘಾನಾ ರಾಜ್ ಅವರು ಮಾತ್ರ ವಿಭಿನ್ನವಾಗಿ ಯೋಚಿಸಿ ತಮ್ಮ ಮಗನ ಭವಿಷ್ಯದ ಬಗ್ಗೆ ಸೂಕ್ತವಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.