ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು 2013ರಲ್ಲಿ ತೆರೆಕಂಡ ಬುಲ್ ಬುಲ್ ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. ಇದಕ್ಕೂ ಮುಂಚೆ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಅರಸು ಎಂಬ ಧಾರಾವಾಹಿಯಲ್ಲಿ ನಟನೆ ಮಾಡುತ್ತಿದ್ದರು. ದರ್ಶನ್ ಅವರ ಬುಲ್ ಬುಲ್ ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಹೀರೋಯಿನ್ ಪಟ್ಟವನ್ನು ಗಿಟ್ಟಿಸಿಕೊಳ್ಳುತ್ತಾರೆ ಈ ಒಂದು ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಸದ್ದು ಮಾಡುತ್ತದೆ. ಅಷ್ಟೇ ಅಲ್ಲದೆ ರಚಿತಾ ರಾಮ್ ಅವರು ಬಹು ಬೇಡಿಕೆಯ ನಟಿಯಾಗಿಯೂ ಕೂಡ ಗುರುತಿಸಿಕೊಳ್ಳುತ್ತಾರೆ. ಇಲ್ಲಿಂದ ಆರಂಭವಾದಂತಹ ಇವರ ಸಿನಿಮಾ ಜರ್ನಿ ಇನ್ನೂ ಕೂಡ ನಿಂತಿಲ್ಲ ಚಿತ್ರ ರಂಗಕ್ಕೆ ಬಂದು ಸುಮಾರು 9 ವರ್ಷಗಳಾಗಿದೆ 9 ವರ್ಷದಿಂದಲೂ ಕೂಡ ಬಿಜಿಯಾಗಿದ್ದಾರೆ ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ.
ದರ್ಶನ್ ಸುದೀಪ್ ದುನಿಯಾ ವಿಜಯ್ ಧನ್ವೀರ್ ಡಾಲಿ ಧನಂಜಯ್ ಹೀಗೆ ಸಾಕಷ್ಟು ನಟರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ ಕೇವಲ ನಟನೆಯಲ್ಲಿ ಮಾತ್ರವಲ್ಲದೆ ಕಿರುತೆರೆಯಲ್ಲೂ ಕೂಡ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಹೌದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಮಜಾ ಭಾರತ ಎಂಬ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಪಾಲ್ಗೊಂಡಿದ್ದರು. ತದನಂತರ ಇದೀಗ ಡ್ರಾಮಾ ಜೂನಿಯರ್ಸ್ ಎಂಬ ವೇದಿಕೆಯಲ್ಲೂ ಕೂಡ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ ಸದಾ ಕಾಲ ಲವಲವಿಕೆಯಿಂದ ಇರುವಂತಹ ರಚಿತಾ ರಾಮ್ ಅವರು ಬೆಳ್ಳಿ ತೆರೆ ಮತ್ತು ಕೆರೆತರೆ ಎರಡರಲ್ಲೂ ಕೂಡ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.
ಇನ್ನು ರಚಿತಾ ರಾಮ್ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಇರುವ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ ಈ ಕಾರಣಕ್ಕಾಗಿ ರಚಿತಾ ರಾಮ್ ಅವರು ಆಗಾಗ ತಮ್ಮ ಸಿನಿಮಾದ ಅಪ್ಡೇಟ್ಸ್ ಗಳನ್ನು ತಮ್ಮ instagram ಖಾತೆಯಲ್ಲಿ ನೀಡುತ್ತಾರೆ. ಇದರ ಜೊತೆಗೆ ತಾವು ಬಿಡುವಿದ್ದಂತಹ ಸಮಯದಲ್ಲಿ ಹಾಡುಗಳಿಗೆ ನೃತ್ಯವನ್ನು ಮಾಡುವ ಮೂಲಕ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡುತ್ತಾರೆ. ಸದ್ಯಕ್ಕೆ ರಚಿತಾ ರಾಮ್ ಅವರು ಮಾಡಿರುವಂತಹ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಹೌದು ನಟಿ ರಚಿತಾ ರಾಮ್ ಅವರು ಅದ್ಭುತ ನೃತ್ಯಗಾತಿ ಎಂಬ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ ಅದರಲ್ಲಿಯೂ ಕೂಡ ಟಪಂಗುಚಿ ಹಾಡುಗೆ ರಚಿತ ರಾಮ್ ಅವರು ಹಾಕುವಂತಹ ಎಲ್ಲರ ಕಣ್ಮನವನ್ನು ಸೆಳೆಯುತ್ತದೆ.
ಈಗಲೂ ಕೂಡ ರಚಿತಾ ರಾಮ್ ಅವರು ಅಂತಹದ್ದೇ ಒಂದು ಡ್ಯಾನ್ಸನ್ನು ಮಾಡಿದರೆ ಈ ವಿಡಿಯೋ ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ನೆಟ್ಟಿಗರಂತು ಹೇಳುವುದೇ ಬೇಡ ಸದಾ ಕಾಲ ರಚಿತಾ ರಾಮ್ ಅವರ ವಿಡಿಯೋಗಾಗಿ ಕಾದು ಕುಳಿತಿರುತ್ತಾರೆ. ಇವರ ವಿಡಿಯೋ ನೋಡಿದಂತಹ ನೆಟ್ಟಿಗರು ಕೂಡ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ ಇದರ ಜೊತೆಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರನ್ನು ಹಾಡಿ ಹೊಗಳಿದ್ದಾರೆ. ಈ ವಿಡಿಯೋವನ್ನು ಒಂದು ಬಾರಿ ನೋಡಿ ನಿಜಕ್ಕೂ ಕೂಡ ನೀವು ಸಂತಸ ಪಡುತ್ತೀರಾ ಅಷ್ಟೇ ಅಲ್ಲದೆ ರಚಿತರಾಮ್ ಅವರ ಈ ಅದ್ಭುತ ಕಲೆಗೆ ಮಾರಿ ಹೋಗುತ್ತಿರ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವಂತಹ ಈ ವಿಡಿಯೋ ಮಿಲಿಯನ್ ಘಟನೆ ವ್ಯೂಸನ್ನು ಪಡೆದುಕೊಂಡಿದೆ. ಈ ನೃತ್ಯವನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ