ಜನವರಿ 26ಕ್ಕೆ ಗಣರಾಜ್ಯೋತ್ಸವ ಇದೆ ಅನ್ನೋದ್ನೆ ಮರೆತು ಬಿಡಿ, ಥಿಯೇಟರ್ ಗೆ ಬಂದು ಕ್ರಾಂತಿ ಸಿನಿಮಾ ನೋಡಿ ಉತ್ಸವ ಮಾಡಿ ಎಂದು ಹೇಳಿಕೆ ಕೊಟ್ಟು ಇಕ್ಕಟಿಗೆ ಸಿಲುಕಿದ ನಟಿ ರಚಿತಾ ರಾಮ್

 

ಸ್ಟಾರ್ ನಟ ಹಾಗೂ ನಟಿಯರು ಎಂದರೆ ಅವರನ್ನು ದೊಡ್ಡ ಸಂಖ್ಯೆಯಲ್ಲಿ ಫಾಲೋ ಮಾಡುವುದು ಹಾಗೂ ಅವರ ಪ್ರತಿಯೊಂದು ವಿಚಾರಗಳನ್ನು ಕೂಡ ತಿಳಿದು ಕೊಳ್ಳುವುದು ಸಹಜ. ಕೇವಲ ತೆರೆ ಮೇಲಿನ ನಟನೆ ಮತ್ತು ಸೌಂದರ್ಯವನ್ನು ಮೆಚ್ಚಿಕೊಂಡು ಇಷ್ಟಪಡು ವಂತಹ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟ ಹಾಗೂ ನಟಿಯರು ಕೇವಲ ತೆರೆ ಮೇಲೆ ಮಾತ್ರ ಅಲ್ಲ. ತೆರೆ ಹಿಂದೆ ಕೂಡ ಒಳ್ಳೆಯತನವನ್ನು ಹೊಂದಿರಬೇಕು ಯಾವುದೇ ವಿಚಾರದ ಬಗ್ಗೆ ವಿರುದ್ಧವಾಗಿ ಮಾತನಾಡ ಬಾರದು. ಅವರ ಮಾತಿನ ಮೇಲೆ ಪ್ರತಿಯೊಬ್ಬರಿಗೂ ತೆರೆ ಮೇಲೆ ಚೆನ್ನಾಗಿ ನಟನೆ ಮಾಡಿ ತೆರೆ ಹಿಂದೆ ಇಲ್ಲ ಸಲಗ ಮಾತುಗಳನ್ನು ಮಾತನಾಡುತ್ತಾ ಕೆಲವೊಂದು ವಿರುದ್ಧ ಮಾತುಗಳನ್ನು ಆಡಿದರೆ ಯಾರಿಗೂ ಕೂಡ ಅದು ಇಷ್ಟವಾಗುವುದಿಲ್ಲ.

ಜೊತೆಗೆ ಒಳ್ಳೆ ಮಾತುಗಳನ್ನು ಮಾತನಾಡುವುದರ ಮುಖಾಂತರ ಅಭಿಮಾನಿಗಳಿಗೆ ಒಳ್ಳೆಯ ಸ್ಪೂರ್ತಿಯಾಗಿರಬೇಕು ಎಂದು ನಿರೀಕ್ಷೆ ಮಾಡುವವರೇ ಜಾಸ್ತಿ. ಇದರ ಜೊತೆ ನಟ ನಟಿಯರು ಇಂತಹ ವಿಷಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬರುತ್ತಿರುತ್ತಾರೆ. ತಮ್ಮ ಅಭಿಮಾನಿಗಳಿಗೆ ಯಾವುದೇ ವಿಷಯದಲ್ಲಿ ಬೇಸರ ಹುಟ್ಟದ ಹಾಗೆ ನಡೆದುಕೊಳ್ಳುತ್ತಿರುತ್ತಾರೆ ಆದರೆ ಕೆಲವೊಮ್ಮೆ ಅವರು ಕೊಡುವಂತಹ ತಲೆಕೊಟ್ಟ ಹೇಳಿಕೆಗಳು ಅಭಿಮಾನಿಗಳನ್ನು ಮಾತ್ರವಲ್ಲದೆ ಸಾಮಾನ್ಯ ಜನರು ಕೂಡ ಕಿಡಿ ಕಾರುವಂತೆ ಬರುತ್ತದೆ.

ಸ್ಟಾರ್ ನಟರುಗಳು ದೇಶ ಹಾಗೂ ನಾಡಿನ ವಿರುದ್ಧವಾಗಿ ತಮಗೆ ತಿಳಿದೋ ಅಥವಾ ತಿಳಿಯದೆಯೋ ಮಾಡುವಂತಹ ಹೇಳಿಕೆಗಳು ಎಷ್ಟೋ ಜನರ ಜೀವನವನ್ನೇ ಹಾಳು ಮಾಡಿದೆ. ಹೆಚ್ಚಾಗಿ ಬಾಲಿವುಡ್ ಗಳಲ್ಲಿ ಕೇಳಿ ಬರುತ್ತಿದ್ದಂತಹ ಈ ಹೇಳಿಕೆಗಳು ಈಗ ಕನ್ನಡ ಚಿತ್ರರಂಗದಲ್ಲೂ ಕೂಡ ಕಾಲಿಟ್ಟಿದೆ ಕ್ರಾಂತಿ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಚಿತ್ರದ ಬಗ್ಗೆ ಮಾತನಾಡುತ್ತಿದ್ದಂತಹ ನಟಿ ರಚಿತಾ ರಾಮ್ ಎಲ್ಲರೂ ಕೂಡ ಸಿನಿಮಾವನ್ನು ನೋಡಿ ಎಂದು ಪ್ರಚಾರ ಮಾಡುವಂತಹ ಸಮಯದಲ್ಲಿ ಗಣ ರಾಜ್ಯೋತ್ಸವವನ್ನು ಮರೆಯಿರಿ ಎಂಬ ಹೇಳಿಕೆಯನ್ನು ಕೊಟ್ಟು ಈಗ ದೇಶ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ದರ್ಶನ್ ಹಾಗೂ ನಟಿ ರಚಿತಾ ರಾಮ್ ನಟನೆಯ ಕ್ರಾಂತಿ ಸಿನಿಮಾ ಇದೇ ಗಣರಾಜ್ಯೋತ್ಸವದ ದಿನ ಬಿಡುಗಡೆಯಾಗುತ್ತಿದೆ ಈ ದಿನ ರಿಲೀಸ್ ಆಗುತ್ತಿರುವ ಕಾರಣ ಚಿತ್ರದ ಬಿಡುಗಡೆಯ ಬಗ್ಗೆ ಮಾತನಾಡಿದ ರಕ್ಷಿತಾ ರಾಮ್. ಇಷ್ಟು ವರ್ಷ ಜನವರಿ 26 ಎಂದರೆ ಗಣರಾಜ್ಯೋತ್ಸವ ಆದರೆ ಈ ವರ್ಷ ರಾಜ್ಯೋತ್ಸವ ಎನ್ನುವುದನ್ನು ಮರೆತು ಬಿಡಿ ಬರೀ ಕ್ರಾಂತಿ ಉತ್ಸವ ಎನ್ನುವ ಹೇಳಿಕೆಯನ್ನು ಕೊಟ್ಟಿದ್ದಾರೆ. ಹೀಗೆ ರಚಿತಾ ರಾಮ್ ಅವರು ನೀಡಿರುವ ವಿವಾದಾತ್ಮಕ ಹೇಳಿಕೆ ವೈರಲ್ ಆಗುತ್ತಿದ್ದಂತೆ ಟ್ವಿಟರ್ ನಲ್ಲಿ ನೆಟ್ಟಿಗರು ದೊಡ್ಡ ಮಟ್ಟದಲ್ಲಿ ಕಿಡಿ ಕಾರಿದ್ದಾರೆ ನಿಮ್ಮ ಸಿನಿಮಾ ಬರುತ್ತಿದೆ ಎಂಬ ಕಾರಣಕ್ಕೆ.

ಗಣರಾಜ್ಯೋತ್ಸವ ಮರಿಬೇಕಾ ಗಣರಾಜ್ಯೋತ್ಸವ ಕ್ಕಿಂತ ನಿಮ್ಮ ಚಿತ್ರ ದೊಡ್ಡದ ಅನಕ್ಷರಸ್ತೇ ತರ ಮಾತ ನಾಡಬೇಡಿ ಮೊದಲು ದೇಶ ನಂತರ ಸಿನಿಮಾ ಅಂತ ನೆಟ್ಟಿಗರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ಕೇವಲ ಅಂದ ಚಂದ ಇದ್ದರೆ ನಟಿಯಾಗಿ ಬಿಡುವುದಿಲ್ಲ ಸ್ವಲ್ಪ ಬುದ್ಧಿಯೂ ಇರಲಿ ಜನರಿಗೆ ಒಳ್ಳೆಯ ಸಂದೇಶವನ್ನು ಕೊಟ್ಟು ಮಾದರಿಯಾಗ ಬೇಕು ನಿಮ್ಮನ್ನು ಅನೇಕರು ಅನುಸರಿಸುತ್ತಿರುತ್ತಾರೆ ನೋಡಿ ವಿಷಯ ತಿಳಿದುಕೊಂಡು ಮಾತನಾಡಿ ಎಂದು ಛಾಟಿ ಬೀಸಿದ್ದಾರೆ. ಇದೇ ರೀತಿಯ ಹೇಳಿಕೆಗಳನ್ನು ನೀಡಿದ ಮೇಲೆಯೇ ಬಾಲಿವುಡ್ ಮಖಾಡೆ ಮಲಗಿದ್ದು ಅಂತ ನೆಟ್ಟಿಗನೋರ್ವ ಕಿಡಿ ಕಾರಿದ್ದಾನೆ.

ಇನ್ನು ಗಣರಾಜ್ಯೋತ್ಸವ ಅಲ್ಲ ಕೇವಲ ಕ್ರಾಂತಿ ಉತ್ಸವ ಎಂದಿರೋ ರಚಿತರಾಮ್ ಅವರಿಗೆ ಪ್ರತಿಕ್ರಿಯೆ ಕೊಟ್ಟಿರುವ ನೆಟ್ಟಿಗರೊಬ್ಬರು ಗಣರಾಜ್ಯೋತ್ಸವ ಮರೆತು ಕ್ರಾಂತಿ ಸಿನಿಮಾ ನೋಡಬೇಕಾ ನೀವೆಲ್ಲ ನಮ್ಮ ದೇಶದಲ್ಲಿ ಇರುವುದಕ್ಕೆ ಅರ್ಹರಲ್ಲ ಪಾಕಿಸ್ತಾನಕ್ಕೆ ಹೋಗಿ ಅಲ್ಲೇ ಕ್ರಾಂತಿ ಉತ್ಸವ ಮಾಡಿ ಅಂತ ಕಿಡಿ ಕಾರಿದ್ದಾರೆ. ಕ್ರಾಂತಿ ಸಿನಿಮಾ ಪ್ರಚಾರ ಮಾಡಿ ಜನರನ್ನು ತನ್ನತ್ತ ಸೆಳೆಯುವುದರ ಬದಲು ದೇಶಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿರುವುದು ನಿಜಕ್ಕೂ ಕೂಡ ದುಃಸ್ಥಿತಿ ಅಂತಾನೆ ಹೇಳಬಹುದು. ರಚಿತಾ ರಾಮ್ ಮಾತಿನ ಬರದಲ್ಲಿ ಈ ರೀತಿ ಹೇಳಿದರೋ ಏನೋ ತಿಳಿದಿಲ್ಲ ಆದರೂ ಕೂಡ ಇದು ಕ್ರಾಂತಿ ಸಿನಿಮಾಗೆ ಮತ್ತೊಂದು ಹೊಡೆತವನ್ನು ತಂದಂತಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

Leave a Comment

WhatsApp Group Join Now
Telegram Group Join Now