ಸ್ಯಾಂಡಲ್ ವುಡ್ ನ ಮೋಸ್ಟ ಬ್ಯೂಟಿಫುಲ್ ಮತ್ತು ಕ್ಯೂಟ್ ಜೋಡಿಗಳಲ್ಲಿ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಜೋಡಿಯು ಕೂಡ ಒಂದು. ಇವರಿಬ್ಬರೂ ಕೂಡ ಪ್ರೀತಿಸಿ ಮದುವೆಯಾದ ವಿಚಾರ ನಿಮ್ಮೆಲ್ಲರಿಗೂ ತಿಳಿದಿದೆ ಪ್ರಜ್ವಲ್ ಅವರು ರಾಗಿಣಿಯವರನ್ನು ಬಾಲ್ಯದಿಂದಲೂ ಕೂಡ ಇಷ್ಟ ಪಡುತ್ತಿದ್ದರು ಇವರಿಬ್ಬರೂ ಕೂಡ ಆತ್ಮೀಯ ಸ್ನೇಹಿತರಾಗಿದ್ದರು. ತದನಂತರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಇಬ್ಬರು ಪ್ರೀತಿ ಎಂಬ ಬಿಸಿಗೆಯಲ್ಲಿ ಬೆಳೆದು ತದನಂತರ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇನ್ನು ನಟ ಪ್ರಜ್ವಲ್ ಅವರು ಗೆಳೆಯ ಎಂಬ ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಮೊಟ್ಟಮೊದಲ ಬಾರಿಗೆ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು.
ಈ ಸಿನಿಮಾ ಇವರಿಗೆ ದೊಡ್ಡ ಯಶಸ್ಸನ್ನು ತಂದುಕೊಟ್ಟಿತು ಅಷ್ಟೇ ಅಲ್ಲದೆ ಈ ಸಿನಿಮಾದ ಮೂಲಕ ಹೀರೋ ಎಂಬ ಪಟ್ಟವನ್ನು ಕೂಡ ಗಿಟ್ಟಿಸಿಕೊಂಡರು. ಗೆಳೆಯ ಸಿನಿಮಾದ ನಂತರ ಕೆಂಚ, ಮನಸಾರೆ, ಜೀವ, ಇತ್ತೀಚಿಗಷ್ಟೇ ಎಚ್ಚರ ಕಂಡಂತಹ ಜೆಂಟಲ್ ಮ್ಯಾನ್ ವಿಕ್ರಂ ಇನ್ಸ್ಪೆಕ್ಟರ್ ಸಾಕಷ್ಟು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಸುಮಾರು 20ಕ್ಕೂ ಅಧಿಕ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಿರುವಂತಹ ಪ್ರಜ್ವಲ್ ಅವರು ಒಳ್ಳೆಯ ಕಥೆಯನ್ನು ಉಳ್ಳಂತಹ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದರು ಕೂಡ ಯಾಕೋ ಇವರ ಅದೃಷ್ಟ ಎಂಬುದು ಕೈ ಹಿಡಿಯುತ್ತಿಲ್ಲ. ಎಷ್ಟೇ ಒಳ್ಳೆಯ ನಾಯಕ ನಟನ ಪಾತ್ರದಲ್ಲಿ ಕಾಣಿಸಿಕೊಂಡರು ಕೂಡ ಯಶಸ್ಸು ಎಂಬುದು ಇವರಿಗೆ ದೊರೆಯುತ್ತಿಲ್ಲ ಆದರೂ ಕೂಡ ಉತ್ತಮ ಸಿನಿಮಾವನ್ನು ಪ್ರೇಕ್ಷಕರಿಗೆ ನೀಡಬೇಕು ಎಂಬ ಆಶಯವನ್ನು ಹೊಂದಿದ್ದಾರೆ.
ಇನ್ನು ಪ್ರಜ್ವಲ್ ಅವರ ತಂದೆ ಡೈನಮಿಕ್ ದೇವರಾಜ್ ಅವರು ಸುಮಾರು ನಾಲ್ಕು ದೇಶಗಳಿಂದಲೂ ಕೂಡ ಸಿನಿಮಾರಂಗದಲ್ಲಿ ಗುರುತಿಸಿಕೊಂಡತಹ ವ್ಯಕ್ತಿ ಒಂದು ಕಾಲದಲ್ಲಿ ಖಳ ನಾಯಕನಾಗಿ ಖ್ಯಾತಿ ಪಡೆದವರು ತದನಂತರ ನಾಯಕ ನಟನಾಗಿ ಪೋಷಕ ನಾಟಕನಾಗಿ ಹಾಸ್ಯ ಪ್ರಧಾನ ಪಾತ್ರದಲ್ಲಿಯೂ ಕೂಡ ನಟನೆ ಮಾಡಿದರೆ ಒಟ್ಟಾರೆಯಾಗಿ ಹೇಳುವುದಾದರೆ ಸಿನಿಮಾ ಕುಟುಂಬದಿಂದ ಬಂದಂತಹ ವ್ಯಕ್ತಿ ಇವರಾಗಿದ್ದಾರೆ. ಪ್ರಜ್ವಲ್ ದೇವರಾಜ್ ಅವರ ಹೆಂಡತಿ ರಾಗಿಣಿ ಅವರು ಕೂಡ ಕಳೆದ ವರ್ಷವಷ್ಟೇ ತೆರೆಕಂಡಂತಹ ಲಾ ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ಇದೇ ಮೊಟ್ಟಮೊದಲ ಬಾರಿಗೆ ರಾಗಿಣಿ ಅವರು ಈ ಒಂದು ಸಿನಿಮಾದಲ್ಲಿ ನಟನೆ ಮಾಡಿರುವುದು. ಈ ಸಿನಿಮಾ ಬಿಡುಗಡೆಯಾದ ನಂತರ ಉತ್ತಮ ಪ್ರದರ್ಶನವನ್ನು ಕಂಡಿತು.
ಇನ್ನು ರಾಗಿಣಿ ಅವರು ಕ್ಲಾಸಿಕಲ್ ಡ್ಯಾನ್ಸರ್ ನೃತ್ಯದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ ತಮ್ಮ ಬಿಡುವಿನ ಸಮಯದಲ್ಲಿ ನೃತ್ಯವನ್ನು ಮಾಡುತ್ತಾರೆ ಅಷ್ಟೇ ಅಲ್ಲದೆ ತಮ್ಮದೇ ಆದ ಡ್ಯಾನ್ಸಿಂಗ್ ಕ್ಲಾಸ್ ಒಂದನ್ನು ಕೂಡ ಒಳಗೊಂಡಿದ್ದಾರೆ. ಸದ್ಯಕ್ಕೆ ರಾಗಿಣಿ ಪ್ರಜ್ವಲ್ ಅವರು ಮಾಡಿದಂತಹ ಡ್ಯಾನ್ಸೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ನೋಡಿದಂತಹ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಇವರ ಅದ್ಭುತ ಡ್ಯಾನ್ಸಿಂಗ್ ಸ್ಕಿಲ್ ನೋಡಿದಂತಹ ಅಭಿಮಾನಿಗಳು ಫಿದಾ ಆಗಿದ್ದಾರೆ. ಇಲ್ಲಿಯವರೆಗೂ ಕೂಡ ಪ್ರಜ್ವಲ್ ಅವರ ಹೆಂಡತಿ ಡ್ಯಾನ್ಸರ್ ಎಂಬ ವಿಚಾರ ಸಾಕಷ್ಟು ಜನರಿಗೆ ತಿಳಿದೇ ಇರಲಿಲ್ಲ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವಂತಹ ಈ ವಿಡಿಯೋ ನೋಡಿ ಈ ಅದ್ಭುತ ಕಲೆಗೆ ನಿಮ್ಮ ಮೆಚ್ಚುಗೆಯನ್ನು ನೀಡಿ ಈ ವಿಡಿಯೋ ನೋಡಿದ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ರಾಗಿಣಿ ಅವರು ಎಷ್ಟು ಸೊಗಸಾಗಿ ನೃತ್ಯ ಮಾಡುತ್ತಿದ್ದಾರೆ ನೋಡಿ