Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ತುಪ್ಪದ ಬೆಡಗಿ ರಾಗಿಣಿ ಮಾಡಿದ ಈ ಡಾನ್ಸ್ ನೋಡಿದ್ರೆ ಬಾಯಲ್ಲಿ ಲೀಟರ್ ಗಟ್ಟಲೇ ನೀರು ಬರುತ್ತೆ. ಈ ವೈರಲ್ ವಿಡಿಯೋ ನೋಡಿ.

Posted on September 9, 2022 By Kannada Trend News No Comments on ತುಪ್ಪದ ಬೆಡಗಿ ರಾಗಿಣಿ ಮಾಡಿದ ಈ ಡಾನ್ಸ್ ನೋಡಿದ್ರೆ ಬಾಯಲ್ಲಿ ಲೀಟರ್ ಗಟ್ಟಲೇ ನೀರು ಬರುತ್ತೆ. ಈ ವೈರಲ್ ವಿಡಿಯೋ ನೋಡಿ.

ನಟಿ ರಾಗಿಣಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕೆಂಪೇಗೌಡ ಸಿನಿಮಾದಲ್ಲಿ ಇವರು ಮಾಡಿದಂತಹ ನಟನೆಯನ್ನು ಯಾರಿಂದಲೂ ಕೂಡ ಮರೆಯುವುದಕ್ಕೆ ಸಾಧ್ಯವಿಲ್ಲ. ಕಿಚ್ಚ ಸುದೀಪ್ ಕೆಂಪೇಗೌಡ ಮಾತ್ರವಲ್ಲದೆ ವೀರಮದಕರಿ ಎಂಬ ಸಿನಿಮಾದಲ್ಲಿಯೂ ಕೂಡ ನಟನೆ ಮಾಡಿದ್ದಾರೆ. ಈ ಎರಡು ಸಿನಿಮಾ ರಾಗಿಣಿ ಅವರ ಸಿನಿ ಜರ್ನಿಯನ್ನೇ ಬದಲಾಯಿಸಿದಂತಹ ಸಿನಿಮಾ ಅಂತಾನೆ ಹೇಳಬಹುದು ಹೌದು ಈ ಎರಡು ಸಿನಿಮಾದಲ್ಲಿ ನಟನೆ ಮಾಡಿದ ನಂತರ ರಾಗಿಣಿಯವರಿಗೆ ಹೆಚ್ಚು ಯಶಸ್ಸು ಕೀರ್ತಿ ಪ್ರಶಂಸೆ ಎಂಬುದು ದೊರೆಯುತ್ತದೆ.

ಈ ಸಿನಿಮಾದಲ್ಲಿ ನಟನೆ ಮಾಡಿದ ನಂತರ ಸಾಕಷ್ಟು ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಅವಕಾಶವನ್ನು ಕೂಡ ಗಿಟ್ಟಿಸಿಕೊಳ್ಳುತ್ತಾರೆ. ಇನ್ನು ರವಿಚಂದ್ರನ್ ಮತ್ತು ರಮೇಶ್ ಅರವಿಂದ್ ನಟಿಸಿದಂತಹ ಕಳ್ಳ ಮಳ್ಳ ಸುಳ್ಳ ಎಂಬ ಸಿನಿಮಾದಲ್ಲಿ ತುಪ್ಪ ಬೇಕಾ ತುಪ್ಪ ಎಂಬ ಹಾಡಿಗೆ ಹೆಜ್ಜೆ ಹಾಕುವುದರ ಮೂಲಕ ತುಪ್ಪದ ಬೆಡಗಿ ಎಂಬ ಹೆಸರಿಗೆ ಪ್ರಖ್ಯಾತಿಯಾಗಿದ್ದಾರೆ. ಕೇವಲ ಸಿನಿಮಾದಲ್ಲಿ ಮಾಟವಲ್ಲದೆ ಐಟಂ ಸಾಂಗ್ ಗಳಲ್ಲಿಯೂ ಕೂಡ ಡ್ಯಾನ್ಸ್ ಮಾಡುವುದರ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ‌. ರಾಗಿಣಿ ಐಪಿಎಸ್, ಪರಪಂಚ, ಗಂಡೆದೆ, ಗೋಲಿ ಸೋಡಾ, ಅಧ್ಯಕ್ಷ ಇನ್ ಅಮೆರಿಕ, ನಮಸ್ತೆ ಮೇಡಂ, ಶಿವಂ, ವಿಕ್ಟರಿ, ಹೀಗೆ ಕನ್ನಡದ ಬಹುತೇಕ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ.

ರಾಗಿಣಿ ಕೇವಲ ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಮಲಯಾಳಂ ಹಿಂದಿ ಸಿನಿಮಾದಲ್ಲಿಯೂ ಕೂಡ ನಟನೆ ಮಾಡಿದ್ದಾರೆ ದಕ್ಷಿಣ ಭಾರತದ ತುಂಬೆಲ್ಲ ರಾಗಿಣಿ ಅವರು ತಮ್ಮ ಚಾಪನ್ನು ಮೂಡಿಸಿದರೆ. ಕೇವಲ ಸಿನಿಮಾ ಕ್ಷೇತ್ರದಲ್ಲಿ ಮಾತ್ರ ಗುರುತಿಸಿಕೊಳ್ಳದೆ ಮಾಡಲಿಂಗ್ ಕ್ಷೇತ್ರದಲ್ಲಿಯೂ ಕೂಡ ಅತೀವ ಆಸಕ್ತಿಯನ್ನು ಒಳಗೊಂಡಿದ್ದಾರೆ. ಆಗಾಗ ಹೊಸ ಫೋಟೋ ಶೂಟ್ ಗಳನ್ನು ಮಾಡಿಸುವುದರ ಮೂಲಕ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದಾರೆ. ಇನ್ನು ರಾಗಿಣಿಯವರು ಸಿನಿಮಾ ಕ್ಷೇತ್ರವನ್ನು ಹೊರತು ಪಡಿಸಿ ಸಾಮಾಜಿಕ ಕಳಕಳಿಯನ್ನು ಕೂಡ ಒಳಗೊಂಡಿದ್ದಾರೆ.

ಕಳೆದ ಎರಡು ಮೂರು ವರ್ಷಗಳ ಹಿಂದೆ ಕರೋನ ಹಾವಳಿ ಹೆಚ್ಚಾಗಿದ್ದಂತಹ ಸಮಯದಲ್ಲಿ ತಾವೇ ಸ್ವತಃ ಸ್ವಯಂ ಸೇವಕರಾಗಿ ಸಮಾಜದ ಸೇವೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಎಷ್ಟೋ ಬಡ ಜನರಿಗೆ ರೇಷನ್ ಕಿಟ್ ಒದಗಿಸಿದ್ದಾರೆ ವಸತಿ ಸೌಲಭ್ಯವನ್ನು ಒದಗಿಸಿ ಕೊಟ್ಟಿದ್ದಾರೆ ತಮ್ಮ ಸ್ವಂತ ಹಣದ ಮೂಲಕ ಔಷಧಿಗಳನ್ನು ಕೂಡ ಕೊಡಿಸಿದ್ದಾರೆ. ಇವೆಲ್ಲವನ್ನು ನೋಡುತ್ತಿದ್ದರೆ ರಾಗಿಣಿ ಅವರು ಸಾಮಾಜಿಕ ಕಳಕಳಿಯನ್ನು ಹೊಂದಿರುವಂತಹ ವ್ಯಕ್ತಿ ಅಂತಾನೆ ಹೇಳಬಹುದು. ಆದರೆ ಒಬ್ಬ ಮನುಷ್ಯ ನೂರಕ್ಕೆ ನೂರರಷ್ಟು ಕೂಡ ಒಳ್ಳೆಯವನಾಗಿ ಇರುವುದಕ್ಕೆ ಸಾಧ್ಯವಿಲ್ಲ ಎಂಬುದು ರಾಗಿಣಿ ಅವರ ಬದುಕಿನಲ್ಲಿಯೂ ಕೂಡ ಸಾಬೀತು ಆಗಿತು.

ಹೌದು ಕಳೆದ ವರ್ಷ ಇವರು ಡ್ರ-ಗ್ಸ್ ಪ್ರ-ಕ-ರ-ಣದಲ್ಲಿ ಸಿಲುಕಿಕೊಂಡಿದ್ದರು ಅಷ್ಟೇ ಅಲ್ಲದೆ ಪರಪ್ಪನ ಅಗ್ರಹಾರದಲ್ಲಿ ಜೈಲುವಾಸವನ್ನು ಕೂಡ ಅನುಭವಿಸಬೇಕಾಯಿತು. ಸದ್ಯಕ್ಕೆ ಬೇಲಿನ ಮೇರೆಗೆ ಹೊರಗೆ ಬಂದಿದ್ದಾರೆ ಇಲ್ಲಿಂದ ಹೊರಬಂದ ನಂತರ ಯಾವುದೇ ಸಿನಿಮಾ ಕ್ಷೇತ್ರದಲ್ಲಿಯೂ ಕೂಡ ಕಾಣಿಸಿಕೊಂಡಿಲ್ಲ ಆದರೆ ಮಾಡಲಿ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ರಾಗಿಣಿ ಅವರ ಬದುಕಿನಲ್ಲಿ ಈ ಡ್ರ-ಗ್ಸ್ ಕೇಸ್ ಎಂಬುದು ಒಂದು ಕಪ್ಪು ಚುಕ್ಕೆಯಾಗಿದೆ ಆದಷ್ಟು ಬೇಗ ಈ ಒಂದು ಸಮಸ್ಯೆಯಿಂದ ಹೊರಬರಲಿ ಎಂದು ಅವರ ಅಭಿಮಾನಿಗಳು ಆಶಯ ಪಟ್ಟಿದ್ದಾರೆ. ಸದ್ಯಕ್ಕೆ ರಾಗಿಣಿ ಅವರು ಆಗಾಗ ತಮ್ಮ instagram ಖಾತೆಯಲ್ಲಿ ಹೊಸ ವಿಡಿಯೋಗಳನ್ನು ಅಪ್ಲೋಡ್ ಮಾಡುವುದರ ಮೂಲಕ ಮನರಂಜನೆಯನ್ನು ನೀಡುತ್ತಾರೆ. ರಾಗಿಣಿಯವರ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

View this post on Instagram

A post shared by Ragini Dwivedi (@rraginidwivedi)

Entertainment Tags:Raghini, Raghini dwivedhi
WhatsApp Group Join Now
Telegram Group Join Now

Post navigation

Previous Post: ಧ್ರುವ ಸರ್ಜಾ ಪತ್ನಿ ಪ್ರೇರಣ ಸೀಮಂತಕ್ಕೆ ಮೇಘನಾ ರಾಜ್ ಯಾಕೆ ಬಂದಿಲ್ಲ ಗೊತ್ತಾ ರಾಜ್ ಕುಟುಂಬ ಮತ್ತು ಸರ್ಜಾ ಕುಟುಂಬದಲ್ಲಿ ಮೂಡಿತ ಬಿರುಕು.?
Next Post: ವೈರಲ್ ಆಯ್ತು ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದ್ರ ಹನಿಮೂನ್ ಫೋಟೋಸ್

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore