ನಟಿ ರಾಗಿಣಿ ದ್ವಿವೇದಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಮದಕರಿ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಜೊತೆ ನಟನೆ ಮಾಡುವುದರ ಮೂಲಕ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು. ಈ ಸಿನಿಮಾ ರಾಗಿಣಿ ದ್ವಿವೇದಿ ಅವರಿಗೆ ದೊಡ್ಡ ಯಶಸ್ಸನ್ನು ತಂದುಕೊಟ್ಟ ಸಿನಿಮಾ ಅಂತಾನೆ ಹೇಳಬಹುದು ಈ ಸಿನಿಮಾದಲ್ಲಿ ನಟನೆ ಮಾಡಿದ ನಂತರ ಮತ್ತೊಮ್ಮೆ ಕೆಂಪೇಗೌಡ ಎಂಬ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರ ಜೊತೆಯಲ್ಲಿಯೇ ಇನ್ನೊಂದು ಬಾರಿ ಹೀರೋಯಿನ್ ಆಗಿ ನಟನೆ ಮಾಡುವುದಕ್ಕೆ ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತಾರೆ.
ತದನಂತರ ಕಳ್ಳ ಮಳ್ಳ ಸುಳ್ಳ, ರಾಗಿಣಿ ಐಪಿಎಸ್, ಆರಕ್ಷಕ, ನಮಸ್ತೆ ಮೇಡಂ, ಕಿಚ್ಚು, ಅಮ್ಮ ನಾ ಫೇಲ್ ಆದೆ ಅಮೆರಿಕಾ ಪಾಲಾದೆ, ಪರಪಂಚ, ಶಿವಾ ಹೀಗೆ ಕನ್ನಡದಲ್ಲಿ ಸುಮಾರು 30ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ್ದಾರೆ, ವಿಶೇಷ ಏನೆಂದರೆ ರಾಗಿಣಿ ಅವರು ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಮಲಯಾಳಂ ನಲ್ಲವೂ ಕೂಡ ನಟಿಸಿದ್ದಾರೆ. ಕಿಚ್ಚ ಸುದೀಪ್, ಡಾಕ್ಟರ್ ಶಿವರಾಜಕುಮಾರ್, ದಿಗಂತ್, ರವಿಚಂದ್ರನ್, ರಮೇಶ್ ಅರವಿಂದ್, ಚಿರಂಜೀವಿ ಸರ್ಜಾ, ದುನಿಯಾ ವಿಜಯ್, ಶರಣ್ ಹೀಗೆ ಸ್ಯಾಂಡಲ್ ವುಡ್ ನ ಹಲವು ದಿಗ್ಗಜ ನಟರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ.
ಇನ್ನು ನಟಿ ರಾಗಿಣಿಯವರು ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ಮಾಡಲಿಂಗ್ ಕ್ಷೇತ್ರದಲ್ಲಿಯೂ ಕೂಡ ಅತಿವವಾದ ಆಸಕ್ತಿಯನ್ನು ಒಳಗೊಂಡಿದ್ದಾರೆ. ಹಾಗಾಗಿ ಕೆಲವೊಮ್ಮೆ ಹೊಸ ಹೊಸ ಫೋಟೋಶೂಟ್ಗಳನ್ನು ಮಾಡಿಸುವುದರ ಮೂಲಕ ಮಾಡಲಿಂಗ್ ಕ್ಷೇತ್ರದಲ್ಲಿಯೂ ಕೂಡ ತಮ್ಮದೇ ಆದ ಚಾಪನ್ನು ಮೂಡಿಸಿದ್ದಾರೆ. ಇನ್ನು ಕಳ್ಳ ಮಳ್ಳ ಸಿನಿಮಾದಲ್ಲಿ ತುಪ್ಪ ಬೇಕಾ ತುಪ್ಪ ಎಂಬ ಹಾಡಿಗೆ ಹಾಟ್ ಆಗಿ ಹೆಜ್ಜೆಯನ್ನು ಹಾಕಿರುವಂತಹ ವಿಡಿಯೋ ನೋಡಿದರೆ ಯಾರಿಗೆ ತಾನೇ ಇಷ್ಟ ಆಗುವುದಿಲ್ಲ ಹೇಳಿ ಅಂದಿನ ಕಾಲದಲ್ಲಿ ಪಡ್ಡೆ ಹುಡುಗರ ಹಾಟ್ ಫೇವರೆಟ್ ಹಾಡು ಅಂದರೆ ಇದು ಅಂತಾನೆ ಹೇಳಬಹುದು.
ಒಟ್ಟಾರಿಯಾಗಿ ಹೇಳುವುದಿದ್ದರೆ ನಟನ ಕ್ಷೇತ್ರದಲ್ಲಿ ಉನ್ನತ ಶಿಖರದಲ್ಲಿ ಇದ್ದರು ಕೇವಲ ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೆ ಹಲವಾರು ಸಾಮಾಜಿಕ ಕಳಕಳಿಯ ಕ್ಷೇತ್ರದಲ್ಲಿಯೂ ಕೂಡ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಹೌದು ಕಳೆದ ಮೂರು ವರ್ಷಗಳಿಂದಲೂ ಕೂಡ ಕೋವಿಡ್ ನಿಂದ ಸಾಕಷ್ಟು ಜನ ಸಂ.ಕ.ಷ್ಟ.ದಲ್ಲಿ ಇದ್ದಾಗ ಸ್ವತಃ ರಾಗಿಣಿ ಅವರ ಮುಂದೆ ಬಂದು ಸ್ವಯಂ ಸೇವಕರಾಗಿ ಕೆಲಸ ಮಾಡಿದರು. ಅಷ್ಟೇ ಅಲ್ಲದೆ ತಮ್ಮ ಸ್ವಂತ ದುಡ್ಡಿನಲ್ಲಿ ಹಲವಾರು ಬಡ ಜನರಿಗೆ ರೇಷನ್ ಕಿಟ್ಟನ್ನು ನೀಡಿದರು ಔಷಧಿಯನ್ನು ಒದಗಿಸಿದ್ದರು ಇವೆಲ್ಲವನ್ನು ನೋಡುವುದಾದರೆ ಒಬ್ಬ ನಟಿಗೆ ಇರಬೇಕಾದಂತಹ ಎಲ್ಲಾ ಗುಣವೂ ಕೂಡ ನಟಿ ರಾಗಿಣಿಯವರಿಗೆ ಇತ್ತು ಆದರೆ ಅವರ ಬದುಕಿನಲ್ಲಿ ಒಂದೇ ಒಂದು ತಪ್ಪು ಕೆಲಸ ಮಾಡಿಕೊಂಡರು.
ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ಎರಡು ವರ್ಷಗಳ ಹಿಂದೆ ನಟಿ ರಾಗಿಣಿ ಅವರು ಡ್ರ.ಗ್ಸ್ ಗೆ ಸಂಬಂಧಪಟ್ಟಂತಹ ವಿಚಾರದಲ್ಲಿ ಜೈ.ಲಿ.ಗೆ ಹೋಗಿದ್ದು ನಿಮಗೆ ತಿಳಿದೇ ಇದೆ. ಪರಪ್ಪರನ ಅಗ್ರಹಾರದಲ್ಲಿ ಒಂದು ತಿಂಗಳು ಕಾಲ ಜೈ.ಲು ವನವಾಸವನ್ನು ಅನುಭವಿಸಿದರು ತದನಂತರ ಹೊರ ಬಂದರು. ಕೆಲವು ತಿಂಗಳುಗಳ ಕಾಲ ಇದೇ ಡಿಪ್ರೆಶನ್ ನಲ್ಲಿ ಇದ್ದರು ಆದರೆ ಇದೀಗ ಎಲ್ಲಾ ನೋವು ಮರೆತು ಮತ್ತೆ ತಮ್ಮ ನಟನ ಕ್ಷೇತ್ರದಲ್ಲಿ ಮುಂದುವರಿಯಲು ಸಿದ್ದರಾಗಿದ್ದಾರೆ.
ಇನ್ನು ರಾಗಿಣಿಯವರ ನಿಜವಾದ ವಯಸ್ಸಿನ ಎಂಬುದನ್ನು ನೋಡುವುದಾದರೆ ಮೂವತ್ತು ವರ್ಷ ದಾಟಿದೆ. ಇನ್ನು 30 ವರ್ಷವಾದರೂ ಇಷ್ಟು ಯಂಗಾಗಿ ಇರುವುದಕ್ಕೆ ಕಾರಣವೇನು ಎಂಬುದನ್ನು ನೋಡುವುದಾದರೆ ರಾಗಿಣಿ ಅವರು ತಮ್ಮ ಫಿಟ್ನೆಸ್ ಗೆ ಹೆಚ್ಚಿನ ಒತ್ತನ್ನು ನೀಡುತ್ತಾರೆ. ಪ್ರತಿನಿತ್ಯವೂ ಕೂಡ ಯೋಗಭ್ಯಾಸ ಮಾಡುತ್ತಾರೆ, ಜೀವನದಲ್ಲಿ ಕಸರತ್ತು ಮಾಡುತ್ತಾರೆ ಈ ಕಾರಣದಿಂದರೇ 30 ವರ್ಷವಾದರೂ ಕೂಡ ಇಷ್ಟು ಸುಂದರವಾಗಿ ಕಾಣುತ್ತಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.