ವೀರಮದಕರಿ ಎನ್ನುವ ಸಿನಿಮಾದ ಮೂಲಕ ಕನ್ನಡದ ಸಿನಿಮಾ ಪ್ರಪಂಚವನ್ನು ಪ್ರವೇಶಿಸಿದ ನಟಿ ರಾಗಿಣಿ ದಿಗ್ವೇದಿ ಅವರು ಮೂಲತಃ ಉತ್ತರ ಭಾರತದವರೇ ಆದರೂ ನಮ್ಮ ಕರ್ನಾಟಕದಲ್ಲಿ ಬಂದು ನೆಲೆಸಿ ಇಲ್ಲಿನ ಭಾಷೆ ಕಲಿತು, ಇಲ್ಲೇ ನೆಲೆಯನ್ನು ಕಂಡುಕೊಂಡಿದ್ದಾರೆ. ಕಳೆದ ಒಂದು ದಶಕಕ್ಕಿಂತ ಹೆಚ್ಚಿನ ಕಾಲದಿಂದ ಕರ್ನಾಟಕದಲ್ಲಿ ನೆಲೆ ನಿಂತಿರುವ ಈ ನಟಿ ಕನ್ನಡದ ಆಚಾರ ವಿಚಾರವನ್ನು ಮಾತ್ರ ಕಲಿತಿಲ್ಲ ಎನ್ನುವುದು ಕನ್ನಡಿಗರ ಕೋಪಕ್ಕೆ ಗುರಿಯಾಗಿದೆ. ನಟಿಯಾಗಿ ಸ್ಯಾಂಡಲ್ ವುಡ್ ನಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ಮಿಂಚುತ್ತಿದ್ದ ನಟಿ ರಾಗಿಣಿ ಅವರು ತುಪ್ಪದ ಹುಡುಗಿ ಎಂದೇ ಕರ್ನಾಟಕದಾದ್ಯಂತ ಫೇಮಸ್ ಆಗಿದ್ದಾರೆ. ವೀರಮದಕರಿ, ಕೆಂಪೇಗೌಡ, ಬ್ಲಾಕ್ ಕೋಬ್ರಾ, ಗಂಡೆದೆ, ಡಾರ್ಲಿಂಗ್, ಕಳ್ಳ ಮಳ್ಳ ಸುಳ್ಳ ಇನ್ನು ಮುಂತಾದ ಅನೇಕ ಸಿನಿಮಾಗಳಲ್ಲಿ ನಾಯಕಿಯಾಗಿ ಇವರು ಕಾಣಿಸಿ ಕೊಂಡಿದ್ದರು.
ನಾಯಕ ನಟಿಯಾಗಿ ಮಿಂಚುತ್ತಿದ್ದ ನಟಿಗೆ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾದ ಕೂಡಲೇ ಅತಿಥಿ ಪಾತ್ರದಲ್ಲಿ ಹಾಗೂ ಸಿನಿಮಾದಲ್ಲಿ ಐಟಂ ಹಾಡುಗಳಿಗೆ ಕೂಡ ಸ್ಟೆಪ್ ಹಾಕಲು ರಾಗಿಣಿ ಅವರು ಶುರು ಮಾಡಿದರು. ಕಳ್ಳ ಮಳ್ಳ ಸುಳ್ಳ ಸಿನಿಮಾದ ತುಪ್ಪ ಬೇಕಾ ತುಪ್ಪ ಹಾಗೂ ವಿಕ್ಟರಿ ಸಿನಿಮಾದ ಅಕ್ಕ ನಿನ್ನ ಮಗಳು ನಂಗೆ ಚಿಕ್ಕವಳಾಗಲ್ವ ಈ ಹಾಡುಗಳಲ್ಲಿ ಮೈ ಚಳಿ ಬಿಟ್ಟು ಕುಣಿದಿದ್ದ ಇವರು ಸಾಮಾಜಿಕ ಜಾಲತಾಣದಲ್ಲೂ ಕೂಡ ತುಂಬಾ ಆಕ್ಟಿವ್ ಆಗಿರುತ್ತಾರೆ. ಈ ನಟಿ ಯಾವಾಗಲೂ ಹೊಸದಾಗಿ ಫೋಟೋಶೂಟ್ ಮಾಡಿಸಿಕೊಂಡು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಅವುಗಳನ್ನು ಶೇರ್ ಮಾಡುತ್ತಿರುತ್ತಾರೆ. ಆದರೆ ಹೆಚ್ಚಾಗಿ ಯಾವಾಗಲೂ ತುಂಬಾ ಮಾಡ್ರನ್ ಆಗಿ ಕಾಣಿಸಿಕೊಂಡು, ತುಂಡುಡುಗೆ ತೊಟ್ಟು ಹಾಟ್ ಆಗಿ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾರೆ ಇವರು.
ಸಿನಿಮಾಗಳಲ್ಲಿ ನಟಿಯರು ಈ ರೀತಿ ಕಾಣಿಸಿಕೊಳ್ಳುವುದು ಅವರ ಪಾತ್ರಗಳಿಗೆ ಅನಿವಾರ್ಯ ಆಗಿರುತ್ತದೆ ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಫೋಟೋಗಳಲ್ಲಿ ಹಾಗೂ ಸಾರ್ವಜನಿಕವಾಗಿ ಭಾಗಿಯಾಗುವ ಕಾರ್ಯಕ್ರಮಗಳಲ್ಲೂ ಕೂಡ ಈ ರೀತಿ ಇವರು ಕಾಣಿಸಿಕೊಳ್ಳುವುದರಿಂದ ಇವರ ಮೇಲಿದ್ದ ಅಭಿಮಾನ ಕನ್ನಡದ ಜನತೆಗೆ ಕಡಿಮೆಯಾಗುತ್ತಿದೆ ಎನ್ನಬಹುದು. ಇತ್ತೀಚೆಗೆ ಕನ್ನಡ ಚಲನಚಿತ್ರ ರಂಗದ ಎಲ್ಲರೂ ಸೇರಿ ಕ್ರಿಕೆಟ್ ಟೂರ್ನಿ ಒಂದನ್ನು ಮಾಡುವ ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಅದರಲ್ಲೂ ಕೂಡ ಅರೆಬರೆ ಬಟ್ಟೆ ತೊಟ್ಟು ವೇದಿಕೆ ಮೇಲೆ ಕಾಣಿಸಿಕೊಂಡ ಇವರ ಅವತಾರ ಕಂಡು ಕನ್ನಡಿಗರು ಬೇಸರಿಸಿಕೊಂಡರು. ಮತ್ತು ಕರ್ನಾಟಕದಲ್ಲಿ ಸಂಚಲನ ಮೂಡಿಸಿದ್ದ ಸ್ಯಾಂಡಲ್ವುಡ್ ನ ಡ್ರ-ಗ್ ವಿಚಾರವಾಗಿ ಜೈ-ಲಿಗೆ ಕೂಡ ಹೋಗಿ ಬಂದಿರುವ ನಟಿ ರಾಗಿಣಿ ಅವರ ಮೇಲೆ ಕನ್ನಡಿಗರಿಗೆ ಮೊದಲಿದ್ದ ಪ್ರೀತಿ ಈಗ ಸಂಪೂರ್ಣವಾಗಿ ಕರಗಿ ಹೋಗಿದೆ ಎನ್ನಬಹುದು.
ಡ್ರ’ಗ್ಸ್ ವಿವಾದದಲ್ಲಿ ಆರೋಪಿಯಾಗಿದ್ದ ನಟಿ ರಾಗಿಣಿ ಅವರು ಜೈಲಿಗೆ ಹೋದ ದಿನದಿಂದಲೂ ಒಂದಲ್ಲ ಒಂದು ವಿಷಯಕ್ಕೆ ರ-ಗ-ಳೆ ಮಾಡಿಕೊಂಡು ದಿನವೂ ಮಾಧ್ಯಮಗಳಲ್ಲಿ ಸುದ್ದಿ ಆಗುತ್ತಿದ್ದರು. ಈಗ ಜೈ-ಲಿಂದ ಹೊರಬಂದ ಬಳಿಕ ಎಲ್ಲವನ್ನು ಮರೆತಂತೆ ಕಾಣುತ್ತಿರುವ ರಾಗಿಣಿ ಅವರು ಹಾಯಾಗಿ ತಮ್ಮ ಜೀವನವನ್ನು ಕಳೆಯುತ್ತಿದ್ದಾರೆ. ಮತ್ತು ಇತ್ತೀಚೆಗೆ ಸ್ವಿಮ್ಮಿಂಗ್ ಪೂಲ್ ಒಂದರ ಬಳಿ ಕುಳಿತಿಕೊಂಡು ಫೋಟೋಶೂಟ್ ಮಾಡಿಸಿಕೊಂಡಿರುವ ನಟಿ ಅದನ್ನು ಕೂಡ ಹಂಚಿಕೊಂಡಿದ್ದಾರೆ. ಫೋಟೋವನ್ನು ನೋಡಿದ ನೆಟ್ಟಿಗರು ಮಾತ್ರ ನಟಿಯ ಈ ವರ್ತನೆಗಳನ್ನು ಮೆಚ್ಚಿದೆ ತಮ್ಮ ಅಭಿಪ್ರಾಯಗಳನ್ನು ನೇರ ನೇರವಾಗಿ ಕಮೆಂಟ್ ನಲ್ಲಿ ತಿಳಿಸುತ್ತಿದ್ದಾರೆ. ರಾಗಿಣಿ ಅವರ ಈ ಪೋಟೋ ಶೂಟ್ ನೋಡಿದರೆ ನೆಮಗೇನು ಅನಿಸುತ್ತೆ.? ತಪ್ಪದೆ ಕಾಮೆಂಟ್ ಮಾಡಿ. ಈ ಮಾಹಿತಿಯನ್ನು ಶೇರ್ & ಲೈಕ್ ಮಾಡಿ.