ರಾಗಿಣಿ ಪ್ರಜ್ವಲ್ ದಂಪತಿ
ಕನ್ನಡ ಚಿತ್ರರಂಗದ ಡೈನಾಮಿಕ್ ಹೀರೋ ಎಂದು ಪ್ರಖ್ಯಾತಿಯಾಗಿರುವ ದೇವರಾಜ್ ಅವರು ಕನ್ನಡ ಚಿತ್ರರಂಗದಲ್ಲಿ ಅವರದೇ ಆದ ಉತ್ತಮವಾದ ಕೊಡುಗೆಯನ್ನು ನೀಡಿದ್ದಾರೆ ಸುಮಾರು ಎರಡು ದಶಕಗಳಿಂದನೂ ಕೂಡ ಕನ್ನಡದಲ್ಲಿ ಎಲ್ಲಾ ತರಹದ ಪಾತ್ರಗಳನ್ನು ಮಾಡುತ್ತಾ ಇದ್ದಾರೆ. ಇನ್ನು ಅವರ ಮಗ ಡೈನಮಿಕ್ ಪ್ರಿನ್ಸ್ ಎಂದೇ ಹೆಸರು ಪಡೆದಿರುವ ಪ್ರಜ್ವಲ್ ದೇವರಾಜ್ ಅವರು ಕೂಡ ಉತ್ತಮವಾದ ನಾಯಕ ನಟ ಎಂದು ಈಗಾಗಲೇ ಸಾಬೀತು ಪಡಿಸಿದ್ದಾರೆ.
ಇನ್ನು ಇವರ ಪತ್ನಿಯಾದ ರಾಗಿಣಿ ಪ್ರಜ್ವಲ್ ಅವರು ಕೂಡ ಒಬ್ಬ ಉತ್ತಮವಾದ ನಟಿ ಹಾಗೂ ಮಾಡಲ್ ಎಂದು ಕನ್ನಡಿಗರಿಗೆ ತಿಳಿದಿರುವ ವಿಷಯ. ರಾಗಿಣಿ ಪ್ರಜ್ವಲ್ ದೇವರಾಜ್ ಹಾಗು ಪ್ರಜ್ವಲ್ ದೇವರಾಜ್ ಇಬ್ಬರೂ ಕೂಡ ಕನ್ನಡ ಚಿತ್ರರಂಗದ ಸುಂದರವಾದ ದಂಪತಿಗಳು ಎಂದು ಹೇಳಬಹುದು. ಚಿಕ್ಕ ವಯಸ್ಸಿನಿಂದ ಜೊತೆಯಲ್ಲಿ ಬೆಳೆದು ಸ್ನೇಹಿತರಾಗಿದ್ದರು. ನಂತರ ಸ್ನೇಹವು ಪ್ರೀತಿಗೆ ತಿರುಗಿ ಇವರಿಬ್ಬರ ಮಧ್ಯ ಪ್ರೀತಿ ಶುರುವಾಯಿತು.
ಬಹಳ ದಿನದಿಂದ ಒಬ್ಬರು ಇನ್ನೊಬ್ಬರನ್ನು ತಿಳಿದಿರುವ ಕಾರಣ ಇವರೊಬ್ಬರ ಮಧ್ಯೆ ಯಾವುದೇ ತರಹದ ವೈ ಮನಸು ಬಂದಿಲ್ಲ, ಇನ್ನು ಒಬ್ಬರು ಇನ್ನೊಬ್ಬರಿಗೆ ಎಲ್ಲಾ ಕ್ಷೇತ್ರದಲ್ಲೂ ಎಲ್ಲಾ ಸಮಯದಲ್ಲೂ ಪ್ರೋತ್ಸಾಹ ನೀಡಿ ಬೆನ್ನೆಲುಬಾಗಿ ನಿಲ್ಲುತ್ತಾರೆ ಈ ಕಾರಣ ಈ ಸಿನಿ ತಾರೆಯರ ಜೋಡಿಯು ಎಷ್ಟೋ ಜೋಡಿಗಳಿಗೆ ಮಾದರಿಯಾಗಿದೆ
ಪ್ರಜ್ವಲ್ ದೇವರಾಜ್ ಅವರು ಮದುವೆಯಾಗಿ ಏಳು ವರ್ಷಗಳಾಗಿವೆ. ಇವರಿಬ್ಬರು 2015 ರಲ್ಲಿ ವಿವಾಹವಾದರು, ರಾಗಿಣಿಯವರು ಪ್ರಜ್ವಲ್ ದೇವರಾಜ್ ಅವರಿಗೆ ಉತ್ತಮವಾದ ಸಂಗಾತಿ ಎಂದು ಹೇಳಿದರೆ ತಪ್ಪಾಗುವುದಿಲ್ಲ, ಹೌದು ಸ್ನೇಹಿತರೆ ರಾಗಿಣಿ ಪ್ರಜ್ವಲ್ ದೇವರಾಜ್ ಅವರು ಒಬ್ಬ ಮೋಡಲ್ ಹಾಗೂ ಖಾಸಗಿ ಜಾಹೀರಾತುಗಳಲ್ಲಿ ಅಭಿನಯಿಸುತ್ತಾರೆ.
ಇನ್ನು ರಾಗಿಣಿ ಪ್ರಜ್ವಲ್ ದೇವರಾಜ್ ಅವರು ಆರೋಗ್ಯಕ್ಕಾಗಿ ಎಷ್ಟು ಬೇಕೋ ಅಷ್ಟು ಆಹಾರ ಹಾಗೂ ವ್ಯಾಯಾಮಗಳ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸುತ್ತಾರೆ. ಪುನೀತ್ ರಾಜ್‌ಕುಮಾರ್ ಬ್ಯಾನರ್‌ನ ‘ಲಾ’ ಚಿತ್ರದ ಮೂಲಕ ಕನ್ನಡ ಸಿನಿಮಾ ಪ್ರವೇಶಿಸಿದ ಚೆಲುವೆ ರಾಗಿಣಿ ಚಂದ್ರನ್. ಮಾಡೆಲ್, ಡ್ಯಾನ್ಸರ್, ಟ್ರೈನರ್ ಆಗಿಯೂ ಗುರುತಿಸಿಕೊಂಡವರು.
ಡ್ಯಾನ್ಸ್, ಯೋಗ, ಫಿಟ್‌ನೆಸ್ ಎಲ್ಲಾ ವಯಸ್ಸಿಗರಿಗೂ ಹೇಳಿ ಕೊಡುತ್ತಾರೆ. ಇನ್ನು ಇಷ್ಟು ವರ್ಷವಾದರೂ ಈ ಜೋಡಿಗೆ ಮಗುವಿನ ಜನನವು ಯಾವಾಗ ಎಂಬುದು ನೆಟ್ಟಿಗರ ಪ್ರಶ್ನೆಯಾಗಿದೆ. ಇನ್ನು ರಾಗಿಣಿ ಪ್ರಜ್ವಲ್ ರವರಿಗೆ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಗಳಲ್ಲಿ ಫ್ಯಾನ್ ಫಾಲೋವರ್ಸ್ ತುಂಬಾ ಹೆಚ್ಚಾಗಿದ್ದು, ಅವರ ಅಭಿಮಾನಿಗಳು ಕೂಡ ಹೆಚ್ಚು ಇದ್ದಾರೆ. ಹಾಗಾಗಿ ರಾಗಿಣಿಯವರು ಸೋಶಿಯಲ್ ಮೀಡಿಯಾಗಳಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ.
ಇನ್ನು ಇತ್ತೀಚೆಗೆ ಸಂದರ್ಶನ ಒಂದರಲ್ಲಿ ರಾಗಿಣಿಯವರು ಜೂನಿಯರ್ ಪ್ರಜ್ವಲ್ ರವರ ಬಗ್ಗೆ ಮಾತನಾಡಿದ್ದಾರೆ ಹೌದು. ಪನ್ನಗ ನಾಗಾಭರಣ, ಹಾಗೂ ಚಿರಂಜೀವಿ ಸರ್ಜಾ, ಮೇಘನಾ ರಾಜ್, ಪ್ರಜ್ವಲ್ ರಾಗಿಣಿ ಇವರೆಲ್ಲರೂ ಉತ್ತಮವಾದ ಸ್ನೇಹಿತರು ಈಗಾಗಲೇ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಅವರಿಗೂ ಮಗು ಜನಿಸಿದ್ದು ಜೊತೆಯಲ್ಲಿ ಪನ್ನಗ ನಾಗಭರಣ ಅವರಿಗೂ ಒಂದು ಮಗುವಿದೆ ಹಾಗಾಗಿ ಪ್ರಜ್ವಲ್ ಹಾಗೂ ರಾಗಿಣಿ ದಂಪತಿಗಳಿಗೆ ಮಗುವನ್ನು ನೋಡಿಕೊಳ್ಳುವುದು ಅಭ್ಯಾಸವಾಗಿದೆಯಂತೆ.
ಹಾಗಾಗಿ ಇವರು ನೀಡಿರುವ ಉತ್ತರ ಜೂನಿಯರ್ ಪ್ರಜ್ವಲ್ ಅಂದರೆ ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಪ್ರಜ್ವಲ್ ಅವರ ಮಗುವನ್ನು ಆದಷ್ಟು ಬೇಗ ಅಪೇಕ್ಷಿಸಬಹುದು ಎಂದು ಹೇಳಿದ್ದಾರೆ ಅವರಿಗೂ ಕೂಡ ತಮ್ಮ ಮಗುವನ್ನು ಬೇಗ ನೋಡುವ ತವಕ ಇದೆಯಂತೆ ಹೀಗೆಂದು ಸಂದರ್ಶನ ಒಂದರಲ್ಲಿ ಉತ್ತರಿಸಿ. ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದ್ದಾರೆ ಅಲ್ಲದೆ ಈ ವಿಡಿಯೋ ವೈರಲ್ ಆಗಿರುವುದು ನಿಜ.