ದೇಶದಲ್ಲಿರುವ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ, ಭಾರತದ ರೈಲ್ವೆ ರಕ್ಷಣಾ ಇಲಾಖೆಯಲ್ಲಿ (RPF Recruitments 2023) ಉದ್ಯೋಗ ಮಾಡಬೇಕು ಎಂದು ಬಯಸುತ್ತಿರುವವರಿಗೆ ಅಥವಾ ಈಗಾಗಲೇ ಹುದ್ದೆಯಲ್ಲಿದ್ದು ಸರ್ಕಾರಿ ಹುದ್ದೆಗೆ ಹೊಂದಬೇಕು ಎನ್ನುವ ಕನಸು ಹೊಂದಿರುವವರಿಗೆ, ನಿರುದ್ಯೋಗಿಗಳಿಗೆ ಎಲ್ಲರಿಗೂ ಕೂಡ ಕೇಂದ್ರ ಸರ್ಕಾರದ ವತಿಯಿಂದ ಸಿಹಿ ಸುದ್ದಿ ಇದೆ.
ಅದೇನೆಂದರೆ, ಕೇಂದ್ರ ಸರ್ಕಾರದಡಿಯಲ್ಲಿ ಬರುವ ಭಾರತೀಯ ರೈಲ್ವೆ ರಕ್ಷಣಾ ಇಲಾಖೆಯಲ್ಲಿ ಖಾಲಿ ಇರುವ 9,700ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತದೆ. ಇದಕ್ಕಾಗಿ ಅಧಿಸೂಚನೆ ಕೂಡ ಹೊರಡಿಸಲಾಗಿತ್ತು ಅಧಿಸೂಚನೆಯಲ್ಲಿ ಈ ಹುದ್ದೆಗಳ ಕುರಿತಂತೆ ಪೂರ್ತಿ ವಿವರವನ್ನು ತಿಳಿಸಲಾಗಿದೆ. ಆಸಕ್ತರು ಭಾರತೀಯ ರೈಲ್ವೆ ರಕ್ಷಣಾ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಈ ಹುದ್ದೆಗಳ ಕುರಿತ ಪೂರ್ತಿ ಮಾಹಿತಿಗಳನ್ನು ತಿಳಿದುಕೊಳ್ಳಬಹುದು.
ಸಂಸ್ಥೆ ಹೆಸರು:- ಭಾರತೀಯ ರಕ್ಷಣಾ ಪಡೆ
ಒಟ್ಟು ಹುದ್ದೆಗಳ ಸಂಖ್ಯೆ:- 9739
ಉದ್ಯೋಗ ಸ್ಥಳ:- ಭಾರತದೆಲ್ಲೆಡೆ…
ಪೋಸ್ಟ್ ಹೆಸರು:-
● ಕಾನ್ಸ್ಟೇಬಲ್
● ಸಬ್ ಇನ್ಸ್ಪೆಕ್ಟರ್
ವೇತನ ಶ್ರೇಣಿ:- ಕೇಂದ್ರ ಸರ್ಕಾರದ ಹುದ್ದೆಗಳಿಗೆ ನೀಡಲಾಗುವ ವೇತನದಷ್ಟೇ ಆಕರ್ಷಣೀಯ ವೇತನ ಇರುತ್ತದೆ.
ಶೈಕ್ಷಣಿಕ ವಿದ್ಯಾರ್ಹತೆ:- ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ, 12ನೇ ತರಗತಿ ಮತ್ತು ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಯೋಮಿತಿ:-
● ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
● ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 25 ವರ್ಷಗಳು.
ವಯೋಮಿತಿ ಸಡಿಲಿಕೆ:-
● SC/ST ಅಭ್ಯರ್ಥಿಗಳಿಗೆ 05 ವರ್ಷಗಳು
● OBC ಅಭ್ಯರ್ಥಿಗಳಿಗೆ 03 ವರ್ಷಗಳು.
ಅರ್ಜಿ ಶುಲ್ಕ:-
● ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ 500ರೂ.
● SC / ST ಅಭ್ಯರ್ಥಿಗಳಿಗೆ 250ರೂ.
ಮನೆ ಬಾಗಿಲಿಗೆ ಯಾವುದೇ ಕಾರಣಕ್ಕೂ ಈ ರೀತಿ ಮ್ಯಾಟ್ ಗಳನ್ನು ಹಾಕಬಾರದು, ಕ’ಷ್ಟಗಳು ತಪ್ಪೋದಿಲ್ಲ ಸಾಲ ತೀರಲ್ಲ.!
ಆಯ್ಕೆ ವಿಧಾನ:-
● ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸುತ್ತಾರೆ.
● ಇದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ ನಡೆಯುತ್ತದೆ.
● ಅದರಲ್ಲಿ ಸೆಲೆಕ್ಟ್ ಆಗುವ ಅಭ್ಯರ್ಥಿಗಳ ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು:-
● ಇತ್ತೀಚಿನ ಭಾವಚಿತ್ರ ಮತ್ತು ಸಹಿ
● ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
● ಆಧಾರ್ ಕಾರ್ಡ್
● ನಿವಾಸ ದೃಢೀಕರಣ ಪತ್ರ
● ಶೈಕ್ಷಣಿಕ ಅಂಕಪಟ್ಟಿಗಳು ಮತ್ತು ಪ್ರಮಾಣ ಪತ್ರಗಳು
● ಜಾತಿ ಮತ್ತು ಆದಾಯ ಪ್ರಮಾಣ ಪತ್ರ
● ಅರ್ಜಿ ಶುಲ್ಕ ಪಾವತಿ ಮಾಡಿರುವ ಇ-ರಶೀದಿ
● ಇನ್ನಿತರ ಪ್ರಮುಖ ದಾಖಲೆಗಳು
ಪ್ರಮುಖ ದಿನಾಂಕಗಳು:-
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಶೀಘ್ರವೇ ಅಧಿಸೂಚನೆ ಹೊರಬೀಳಲಿದೆ. ಸರ್ಕಾರವು ಈ ಕುರಿತು ಮುನ್ಸೂಚನೆಯನ್ನು ಕೂಡ ನೀಡಿದೆ. ಇನ್ನು ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಅರ್ಜಿ ಸಲ್ಲಿಸುವ ವಿಧಾನ ಮತ್ತು ಅರ್ಜಿ ಸಲ್ಲಿಸುವ ದಿನಾಂಕದ ಬಗ್ಗೆ, ಆನ್ಲೈನ್ ಅಥವಾ ಆಪ್ಷನ್ ಯಾವ ರೀತಿಯಲ್ಲಿ ಅರ್ಜಿ ಸಲ್ಲಿಸಬೇಕು ಎನ್ನುವುದನ್ನು ತಿಳಿಸಲಿದೆ.
ಆ ನಂತರ ಆಸಕ್ತರು ಅರ್ಜಿ ಸಲ್ಲಿಸಬಹುದು. ಆದರೆ ಅದಕ್ಕೂ ಮುನ್ನ ಅರ್ಜಿ ಸಲ್ಲಿಸಲು ಬೇಕಾಗುವ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಪರೀಕ್ಷೆಗೆ ತಯಾರಿ ನಡೆಸಿಕೊಂಡರೆ ಅಭ್ಯರ್ಥಿಗಳಿಗೆ ಅನುಕೂಲವಾಗಬಹುದು ಎನ್ನುವ ಕಾರಣಕ್ಕಾಗಿ ಅಧಿಸೂಚನೆ ಹೊರಬಿದ್ದ ತಕ್ಷಣವೇ ಮಾಹಿತಿಯನ್ನು ಹಂಚಿಕೊಂಡಿದ್ದೇವೆ. ಈ ಉಪಯುಕ್ತ ಉದ್ಯೋಗ ಮಾಹಿತಿಯ ಬಗ್ಗೆ ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಮಾಹಿತಿ ಹಂಚಿಕೊಳ್ಳಿ.