ಎಲ್ಲರ ಮನೆಯಲ್ಲಿಯೂ ಹೆಣ್ಣು ಮಕ್ಕಳು ಹುಟ್ಟುವುದಿಲ್ಲ ಯಾಕೆ ಗೊತ್ತ.? ಹೆಣ್ಣು ಮಕ್ಕಳು ಯಾರ ಮನೆಯಲ್ಲಿ ಹುಟ್ಟುತ್ತದೆ ಗೊತ್ತ.?

 

ಕಾಲ ಈಗ ಇಷ್ಟೊಂದು ಬದಲಾಗಿದೆ. ನಾವು 21ನೇ ಶತಮಾನದಲ್ಲಿ ಇದ್ದೇವೆ. ಈಗ ಪುರುಷರಂತೆ ಮಹಿಳೆಯು ಕೂಡ ಎಲ್ಲ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾಳೆ. ವೈದ್ಯಕೀಯ, ಚಿತ್ರರಂಗ, ಕಲೆ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ ಹೀಗೆ ಪ್ರತಿಯೊಂದರಲ್ಲೂ ಪುರುಷರಂತೆ ಶಕ್ತಿ ಸಾಮರ್ಥ್ಯ ಬಲ ತೋರಿ ಮಾಡುವ ಕೆಲಸಗಳು ಮಾತ್ರವಲ್ಲದೆ ಜ್ಞಾನದಲ್ಲೂ ಕೂಡ ಅವರಿಗಿಂತ ಯಾವುದರಲ್ಲೂ ಕಡಿಮೆ ಇಲ್ಲದೆ ಬೆಳೆದಿದ್ದಾರೆ.

ಅಡುಗೆ ಮನೆಯಲ್ಲಿ ನಾಲ್ಕು ಗೋಡೆಗಳ ಮಧ್ಯೆ ಬಂಧಿಸಿಟ್ಟಿದ್ದ ಹೆಣ್ಣು ಇಂದು ಸಮಾಜಕ್ಕೆ ಮಾದರಿಯಾಗುವ ರೀತಿ ಕುಟುಂಬ ಉದ್ಯೋಗ ಎಲ್ಲವನ್ನು ಸರಿದೂಗಿಸಿಕೊಂಡು ಬದುಕುತ್ತಿದ್ದಾಳೆ. ಇಷ್ಟಿದ್ದರೂ ಕೂಡ ಹೆಣ್ಣೆಂದರೆ ಕೀಳೆನ್ನುವ ಮನೋಭಾವನೆ ಸಂಪೂರ್ಣವಾಗಿ ಹೋಗಿಲ್ಲ, ಈಗಲೂ ಕೂಡ ತಮಗೆ ಹೆಣ್ಣಾಯಿತು ಎಂದು ದುಃ’ಖಿಸುವ ಜನರು ಇದ್ದಾರೆ.

ರೈಲ್ವೆ ರಕ್ಷಣಾ ಪಡೆಯ 9700 ಹುದ್ದೆಗಳ ನೇಮಕಾತಿ ಆರಂಭ ಆಸಕ್ತರು ಅರ್ಜಿ ಸಲ್ಲಿಸಿ

ಆದರೆ ಇವರನ್ನು ಶತ ಮೂರ್ಖರು ಎಂದು ಹೇಳಬೇಕು. ಯಾಕೆಂದರೆ ಎಲ್ಲರಿಗೂ ಕೂಡ ಹೆಣ್ಣು ಮಕ್ಕಳನ್ನು ಹೇರುವ ಹಾಗೂ ಹೆಣ್ಣು ಮಕ್ಕಳನ್ನು ಸಾಕಿ, ಪೋಷಿಸಿ, ಕನ್ಯಾದಾನ ಮಾಡಿ ಪುಣ್ಯ ಕಟ್ಟಿಕೊಳ್ಳುವ ಭಾಗ್ಯ ಸಿಗುವುದಿಲ್ಲ. ಯಾರ ಹಣೆಯಲ್ಲಿ ಅದೃಷ್ಟ ಇರುತ್ತದೆ ಯಾರು ಪೂರ್ವ ಜನ್ಮಗಳಲ್ಲಿ ಪುಣ್ಯ ಕಾರ್ಯಗಳನ್ನು ಹೆಚ್ಚಾಗಿ ಮಾಡಿರುತ್ತಾರೆ ಅವರು ಮಾತ್ರ ಹೆಣ್ಣು ಮಕ್ಕಳನ್ನು ಪಡೆಯಲು ಸಾಧ್ಯ.

ಯಾಕೆಂದರೆ ನೀವೇ ಯೋಚಿಸಿ ನೋಡಿ. ಹೆಣ್ಣನ್ನು ಪ್ರಕೃತಿಗೆ ಹೋಲಿಸುತ್ತಾರೆ, ಹೆಣ್ಣು ಮಕ್ಕಳು ಎಂದರೆ ದೇವತೆ ಎಂದು ಹೇಳುತ್ತಾರೆ, ಅದು ಅಕ್ಷರಶಃ ಸತ್ಯ. ಯಾಕೆಂದರೆ ಯಾವ ಮನೆಯಲ್ಲಿ ಹೆಣ್ಣು ಮಕ್ಕಳು ಇರುವುದಿಲ್ಲ ಆ ಮನೆಗೆ ಲಕ್ಷಣವೇ ಇರುವುದಿಲ್ಲ. ಹೆಣ್ಣು ಮಕ್ಕಳಿರುವ ಮನೆಯ ಸಂತೋಷವೇ ಬೇರೆ ರೀತಿ ಇರುತ್ತದೆ. ಆ ಮನೆಯ ವಾತಾವರಣವು ಸಕಾರಾತ್ಮಕವಾಗಿ ಇರುತ್ತದೆ.

ಕಳಸ ಸ್ಥಾಪನೆಯಿಂದ ಕೆಂಪಾರತಿವರೆಗೆ ವರಮಹಾಲಕ್ಷ್ಮಿ ಪೂಜೆ ಸಂಪೂರ್ಣ ಪೂಜಾ ವಿಧಾನ.! ನಾಳೆಯ ವರಮಹಾಲಕ್ಷ್ಮಿ ಹಬ್ಬವನ್ನು ಈ ರೀತಿ ಆಚಾರಿಸಿ.!

ಹೆಣ್ಣು ಮಕ್ಕಳಿಗೆ ಕರುಣೆ ಪ್ರೀತಿ ವಾತ್ಸಲ್ಯ ಮಮತೆ ಈ ಎಲ್ಲ ಭಾವನೆಗಳು ಹೆಚ್ಚು. ಬಹಳ ಸೂಕ್ಷ್ಮವಾಗಿರುವ ಇವರು ಭಾವ ಜೀವಿಗಳು. ಎಲ್ಲರಿಗೂ ದಯೆ ತೋರುತ್ತಾ, ಪ್ರೀತಿಯಿಂದ ನಗು ನಗುತ್ತಾ ಇದ್ದುಕೊಂಡು ಮನೆಯನ್ನು ನಂದನವನ ಮಾಡುತ್ತಾರೆ. ಹಾಗಾಗಿ ಭಗವಾನ್ ಶ್ರೀ ಕೃಷ್ಣ ಕೂಡ ಒಮ್ಮೆ ಅರ್ಜುನನು ಎಲ್ಲರೂ ಯಾಕೆ ಹೆಣ್ಣು ಮಕ್ಕಳನ್ನು ಪಡೆಯುವುದಿಲ್ಲ ಎನ್ನುವ ಪ್ರಶ್ನೆಗೆ ಇದೇ ರೀತಿ ಉತ್ತರ ಕೊಟ್ಟಿದ್ದಾರೆ.

ಯಾರು ಅತಿ ಹೆಚ್ಚಾಗಿ ಪುಣ್ಯ ಮಾಡಿರುತ್ತಾರೆ ಅವರ ಮಾತ್ರ ಹೆಣ್ಣು ಮಕ್ಕಳನ್ನು ಪಡೆಯುತ್ತಾರೆ ಎಂದು. ಯಾಕೆಂದರೆ ಎಲ್ಲರಿಗೂ ಕೂಡ ಹೆಣ್ಣು ಮಕ್ಕಳನ್ನು ಸಾಕುವ ಶಕ್ತಿ ಇರುವುದಿಲ್ಲ ಹಾಗಾಗಿ ಭಗವಂತ ಯಾರಿಗೆ ಈ ಯೋಗ್ಯತೆ ಇರುತ್ತದೆ ಅವರಿಗೆ ಹೆಣ್ಣು ಸಂತಾನ ಕೊಡುತ್ತಾರೆ. ಹಾಗೆ ಶ್ರೀಕೃಷ್ಣನು ಹೆಣ್ಣು ಸಂತತಿ ನಾಶವಾದರೆ ಏನಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.

ಪುರುಷರು ಹಾಗೂ ಮಹಿಳೆಯರು ಈ ದಿನಗಳಂದು ತಲೆಸ್ನಾನ ಮಾಡಿದ್ರೆ ಕಷ್ಟಗಳು ಮುಗಿಯುವುದಿಲ್ಲ, ಸಾಲ ತೀರುವುದಿಲ್ಲ.! ತಲೆ ಸ್ನಾನ‌ ಮಾಡುವಾಗ ಎಚ್ಚರ

ಯಾವ ದಿನ ಸೃಷ್ಟಿಯಲ್ಲಿ ಹೆಣ್ಣಿನ ಸಂತತಿ ಕೊನೆ ಆಗುತ್ತದೆ ಅದು ವಿನಾಶದ ಹಾದಿ ಎಂದೇ ಅರ್ಥ ಎಂದು ಶ್ರೀ ಕೃಷ್ಣ ಹೇಳಿದ್ದಾರೆ. ಹೆಣ್ಣು ಮಕ್ಕಳು ಇಲ್ಲ ಎಂದರೆ ವಂಶ ಬೆಳೆಯುವುದೇ ಇಲ್ಲ. ಹೆಣ್ಣು ಹೆತ್ತರೆ ಬಳಗ ಹೆಚ್ಚು ಎನ್ನುವ ಗಾದೆ ಇದೆ. ಯಾಕೆಂದರೆ ಹೆಣ್ಣು ಮಕ್ಕಳು ಹುಟ್ಟಿದ ಮನೆ ಹಾಗೂ ಮೆಟ್ಟಿದ ಮನೆಯ ಬಳಗವನ್ನು ಹೆಚ್ಚಿಸಿ ಆ ಮನೆಗೆ ವಂಶೋದ್ಧಾರಕರಾಗಿ ತಮ್ಮ ಮಕ್ಕಳ ಮೂಲಕವೂ ಕೂಡ ಸಂಬಂಧಗಳನ್ನು ಹೆಚ್ಚಿಸುತ್ತಾರೆ. ಹೀಗಾಗಿ ಹೆಣ್ಣು ಮಕ್ಕಳು ಸೃಷ್ಟಿಯಲ್ಲಿ ಶ್ರೇಷ್ಠ, ಹೆಣ್ಣು ಮಕ್ಕಳನ್ನು ಪಡೆಯಬೇಕು ಎಂದರೆ ಏಳು ಜನ್ಮದ ಪುಣ್ಯ ಮಾಡಿರಲೇಬೇಕು. ಈ ಬಗ್ಗೆ ನೀವೇನು ಹೇಳುತ್ತೀರಿ ಕಮೆಂಟ್ ಮಾಡಿ ತಿಳಿಸಿ.

Leave a Comment