ರಾಜ್ ಲೀಲಾ ಸಂಬಂಧ
ಕನ್ನಡ ಚಲನಚಿತ್ರರಂಗದ ಮೇರುನಟ ಡಾಕ್ಟರ್ ರಾಜಕುಮಾರ್ ಅವರು ಕರ್ನಾಟಕ ಕಂಡ ಬಂಗಾರದ ಮನುಷ್ಯ. ಬಹುಷಃ ಬೇರೆ ಯಾವ ಒಬ್ಬ ನಟನು ಸಹ ಈ ರೀತಿ ಪ್ರೇಕ್ಷಕರ ಮನಸ್ಸನ್ನು ಮುಟ್ಟುವ ರೀತಿ ಅವರ ಮನ ಪರಿವರ್ತನೆ ಮಾಡುವ ರೀತಿ ಒಬ್ಬ ಹೀರೋವನ್ನು ಆದರ್ಶವಾಗಿ ತೆಗೆದುಕೊಳ್ಳುವ ರೀತಿ ಬದುಕಲಿಲ್ಲವೇನೋ ಎನಿಸುತ್ತದೆ.
ಅಷ್ಟರ ಮಟ್ಟಿಗೆ ಡಾಕ್ಟರ್ ರಾಜಕುಮಾರ್ ಅವರು ಕನ್ನಡಿಗರ ಮನ ಗೆದ್ದಿದ್ದರು ಹಾಗೂ ರಾಜಕುಮಾರ್ ಅವರನ್ನು ಅನೇಕ ಅಭಿಮಾನಿಗಳು ಹಿಂಬಾಲಿಸುತ್ತಿದ್ದರು. ಆದರೆ ಇಂತಹ ರಾಜಕುಮಾರ ಅವರ ಸುಂದರವಾದ ವ್ಯಕ್ತಿತ್ವದ ಮೇಲೂ ಇಂತಹ ಬಂಗಾರದ ಮನುಷ್ಯನ ಮೇಲೂ ಕೂಡ ಅಪವಾದ ಒಂದು ಇರುವುದು ಇಡೀ ಕರ್ನಾಟಕಕ್ಕೆ ಗೊತ್ತಿರುವ ವಿಷಯ.
ವಿನೋದ್ ರಾಜಕುಮಾರ್ ಅವರು ರಾಜಕುಮಾರ್ ಅವರ ಮಗನೇ ಅಲ್ಲವೇ ಎನ್ನುವುದು ಇಡೀ ಕರ್ನಾಟಕಕ್ಕೆ ಬಿಡಿಸಲಾಗದ ಒಗಟಾಗಿದೆ ಈ ಬಗ್ಗೆ ಸ್ಪಷ್ಟಣೆ ಕೊಟ್ಟು ವಿವಾದ ಮುಗಿಸಬೇಕಾದವರಲ್ಲಿ ರಾಜಕುಮಾರ್ ಅವರು ಇಂದು ನಮ್ಮೊಂದಿಗೆ ಇಲ್ಲ, ಆದರೆ ಲೀಲಾವತಿ ಅವರು ಯಾವುದಕ್ಕೂ ಸ್ಪಷ್ಟನೆ ನೀಡದೆ ಇರುವ ವಿವಾದವನ್ನೇ ನಿಜ ಮಾಡಲು ಹೊರಟಿದ್ದು ಅದಕ್ಕೆ ಕಥೆ ಕಟ್ಟುತ್ತಿದ್ದಾರೆ ಆದರೆ ಕರ್ನಾಟಕದ ಜನತೆ ಅದನ್ನು ನಂಬಲು ಪೂರ್ತಿ ಮನಸ್ಸಿಂದ ಸಿದ್ಧರಿಲ್ಲ.
ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ರವಿ ಬೆಳಗೆರೆ ಅವರು ರಾಜ್ ಲಿಲಾ ವಿನೋದ ಪುಸ್ತಕ ಬರೆದಿದ್ದರು, ಹಾಯ್ ಬೆಂಗಳೂರು ಪತ್ರಿಕೆಯಲ್ಲೂ ಕೂಡ ಇದರ ಕುರಿತು ಹಲವು ದಿನಗಳವರೆಗೆ ಸುದ್ದಿ ಆಗಿತ್ತು. ಈ ಬಗ್ಗೆ ರಾಜಕುಮಾರ್ ಅವರ ಆಪ್ತ ಬಳಗದಲ್ಲೇ ಆಗಲಿ ಕುಟುಂಬದವರು ಆಗಲಿ ಸ್ಪಷ್ಟ ನೀಡದೇ ಇದ್ದರೂ ಪ್ರಕಾಶ್ ರಾಜ್ ಮೆಹು ಎನ್ನುವ ಬರಹಗಾರರೊಬ್ಬರು ರಾಜಕುಮಾರ್ ಅವರಿಗೆ ಬಹಳ ಆತ್ಮೀಯರಾಗಿದ್ದು, ಸ್ನೇಹಿತನಂತೆ ಅವರೊಂದಿಗೆ ಇದ್ದವರು.
ಅವರು ಸಹ ಸ್ವತಃ ಬರಕಾರ ಬರಹಗಾರರೇ ಆಗಿದ್ದು ಅಂತರಂಗದಲ್ಲಿ ಅಣ್ಣ ಎನ್ನುವ ಪುಸ್ತಕ ಒಂದನ್ನು ಬರೆದಿದ್ದಾರೆ. ಈ ಪುಸ್ತಕದ ಸಂದರ್ಶನ ಒಂದರಲ್ಲಿ ವಿಷಯಗಳನ್ನು ವಿವರಿಸುವಾಗ ಡಾಕ್ಟರ್ ರಾಜಕುಮಾರ್ ಅವರು ಹೊರಗೆ ಹೇಗೆ ಒಬ್ಬ ನಾಯಕ ನಟನಾಗಿ ಸಿನಿಮಾ ಮೇಲೆ ಆದರ್ಶಮಯವಾಗಿ ಕಾಣಿಸಿಕೊಳ್ಳುತ್ತಿದ್ದರು ಅಷ್ಟು ಮಾತ್ರ ಅಲ್ಲದೆ ಅಂತರಂಗದಿಂದಲೂ ಕೂಡ ಅಂದರೆ ನಿಜ ಜೀವನದಲ್ಲೂ ಕೂಡ ಅವರ ವ್ಯಕ್ತಿತ್ವ ಹಾಗೂ ಗುಣ ನಡತೆ ಮಾತುಕತೆ ಹೀಗಿತ್ತು ಎನ್ನುವುದನ್ನು ಹತ್ತಿರದ ಕಂಡು ಬರೆದಿದ್ದಾರೆ.
ನುಡಿದಂತೆ ನಡೆದ ಹೇಳಿದಂತಹ ಬದುಕಿದ ವಿಶೇಷ ವ್ಯಕ್ತಿದವರ ಡಾಕ್ಟರ್ ರಾಜಕುಮಾರ್ ಅವರು. ಅವರ ವ್ಯಕ್ತಿತ್ವಕ್ಕೆ ಅವರೇ ಸಾಟಿ ಈ ಬಗ್ಗೆ ಅನೇಕರಿಗೆ ತಿಳಿದಿದೆ. ಪ್ರಕಾಶ್ ರಾಜ್ ಮೇಹು ಅವರು ಸಹ ಅಣ್ಣಾವ್ರ ಜೊತೆ ಅತಿ ಸಲಿಗೆ ಹೊಂದಿದ್ದು ಸಂದರ್ಭ ಒಂದು ಸಿಕ್ಕಾಗ ಈ ಪ್ರಶ್ನೆಯನ್ನು ಕೇಳಯೇ ಬಿಟ್ಟರಂತೆ. ಲೀಲಾವತಿಯವರು ಎಲ್ಲಾ ಕಡೆ ನಿಮ್ಮ ಮಗ ವಿನೋದ್ ಎಂದು ಹೇಳಿಕೊಂಡು ಬರುತ್ತಿದ್ದಾರೆ ಇದು ನಿಜವೇ ಎಂದದಕ್ಕೆ ಅಣ್ಣಾವ್ರು ಕೊಟ್ಟ ಉತ್ತರ ಕೇಳಿ ಅಂದು ಅವರು ಶಾ-ಕ್ ಆಗಿದ್ದರು
ಇಂದು ಇದನ್ನು ಓದುತ್ತಿರುವ ನಮಗೂ ಸಹ ಹಾಗೆ ಆಗುತ್ತದೆ ಅಣ್ಣಾವ್ರು ಅಂದು ಹೇಳಿದ ಮಾತು ಏನೆಂದರೆ ಮನುಷ್ಯನಾದ ಎಲ್ಲರೂ ಕೂಡ ತಪ್ಪು ಮಾಡುತ್ತಾರೆ ಆದರೆ ವಿನೋದ್ ರಾಜಕುಮಾರ್ ಅವರು ಹುಟ್ಟುವ 3-4 ವರ್ಷಗಳ ಹಿಂದೆ ನಮ್ಮ ಸಂಬಂಧ ಕಡಿದು ಹೋಗಿತ್ತು ನನ್ನ ಹೆಸರು ಹೇಳಿಕೊಂಡು ಹೋಗುವುದರಿಂದ ಆಕೆಗೂ ಆ ಮಗುವಿಗೂ ಒಳ್ಳೆಯದಾಗುತ್ತದೆ ಎಂದರೆ ಆಗಲಿ ಬಿಡು ಎಂದಿದ್ದರಂತೆ.
ಮತ್ತು ಅಣ್ಣಾವ್ರ ಕಾಲದ ಆ ದಿನಗಳ ಅನೇಕ ಕಲಾವಿದರು ಹೇಳುತ್ತಾರೆ ವಿನೋದ್ ರಾಜಕುಮಾರ್ ಅವರು ಮಹಾಲಿಂಗ ಭಾಗವತ್ ಅವರ ಮಗ ಎಂದು ಸ್ವತಃ ಭಕ್ತ ಕುಂಬಾರ ಸಿನಿಮಾದ ಶೂಟಿಂಗ್ ವೇಳೆಗೆ ಆ ಪುಟ್ಟ ಮಗುವನ್ನು ಭಾಗವತರ್ ಅವರು ಶೂಟಿಂಗ್ ಸೆಟ್ಟಿಗೆ ಹೊತ್ತುಕೊಂಡು ಬರುತ್ತಿದ್ದರಂತೆ ಈ ಬಗ್ಗೆ ಬಾಲಕೃಷ್ಣ ಅವರ ಸೇರಿದಂತೆ ಅನೇಕರಿಗೆ ಗೊತ್ತಿತ್ತು. ಡ್ಯಾನ್ಸ್ ರಾಜ ಡ್ಯಾನ್ಸ್ ಸಿನಿಮಾ ರಿಲೀಸ್ ಆಗುವವರೆಗೆ ಎಲ್ಲೂ ಸಹ ಈ ಬಗ್ಗೆ ವಿವಾದವೇ ಇರಲಿಲ್ಲ.
ಆ ಸಿನಿಮಾಗೆ ಸಂಬಂಧಪಟ್ಟವರು ಸಿನಿಮಾದ ಪ್ರಚಾರ ಮಾಡುವ ಸಲುವಾಗಿ ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದರು ಎಂದು ಆನೇಕರು ಮಾತನಾಡುತ್ತಿದ್ದಾರೆ. ಅಲ್ಲದೆ ಲೀಲಾವತಿ ಅವರು ಕೊಡುತ್ತಿರುವ ಮಾಹಿತಿಗಳ ಪ್ರಕಾರ ಅವರು ಹೇಳಿದ ವರ್ಷಗಳಿಗೂ ವಿನೋದ್ ರಾಜಕುಮಾರ್ ಅವರು ಹುಟ್ಟಿದ ವರ್ಷಗಳಿಗೂ ತಾಳೆ ಆಗದೇ ಇರುವುದರಿಂದ ಇದೊಂದು ಕಟ್ಟುಕಥೆ ಎಂದು ಅಣ್ಣಾವ್ರ ಅಭಿಮಾನಿಗಳು ಭಾವಿಸಿದ್ದಾರೆ.